MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Business
  • RCB, RR ದಾಖಲೆಯ ಮಾರಾಟದಿಂದ ಬಂಪರ್‌ ಆದಾಯ ಗಳಿಸಲಿರುವ BCCI

RCB, RR ದಾಖಲೆಯ ಮಾರಾಟದಿಂದ ಬಂಪರ್‌ ಆದಾಯ ಗಳಿಸಲಿರುವ BCCI

ಐಪಿಎಲ್ ಫ್ರಾಂಚೈಸಿಗಳಾದ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಸುಮಾರು 31,000 ಕೋಟಿ ರೂ.ಗೆ ಮಾರಾಟವಾಗಿವೆ. 2026ರ ಐಪಿಎಲ್ ಸೀಸನ್ ನಂತರ ಹೊಸ ಮಾಲೀಕತ್ವ ಜಾರಿಗೆ ಬರಲಿದ್ದು, ಈ ಒಪ್ಪಂದದಿಂದ ಬಿಸಿಸಿಐಗೆ ಶೇ. 5ರಷ್ಟು ವರ್ಗಾವಣೆ ಶುಲ್ಕದಿಂದಾಗಿ ಭಾರಿ ಲಾಭವಾಗಲಿದೆ.

2 Min read
Author : Santosh Naik
Published : Mar 27 2026, 03:49 PM IST
Share this Photo Gallery
  • FB
  • TW
  • Linkdin
  • Whatsapp
16
ಆರ್‌ಸಿಬಿ, ಆರ್‌ಆರ್‌ ಮಾರಾಟ
Image Credit : X

ಆರ್‌ಸಿಬಿ, ಆರ್‌ಆರ್‌ ಮಾರಾಟ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎರಡು ಫ್ರಾಂಚೈಸಿಗಳಾದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರಾಟದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರೀ ಮೊತ್ತದ ಆದಾಯ ಗಳಿಸುವ ನಿರೀಕ್ಷೆ ಇದೆ. ಈ ವಾರದ ಆರಂಭದಲ್ಲಿ ಎರಡೂ ತಂಡಗಳನ್ನು ಮಾರಾಟ ಮಾಡಲಾಗಿದ್ದು, ಐಪಿಎಲ್ 2026 ರ ಸೀಸನ್ ಮುಗಿದ ನಂತರ ಮಾಲೀಕತ್ವ ಜಾರಿಗೆ ಬರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತಂಡಗಳನ್ನು ಖರೀದಿಸಿದವರು ಯಾರು?
Image Credit : Getty

ತಂಡಗಳನ್ನು ಖರೀದಿಸಿದವರು ಯಾರು?

ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಉದ್ಯಮಿ ಕಲ್ ಸೋಮಾನಿ ಖರೀದಿಸಿದರೆ, ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್, ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಬ್ಲಾಕ್‌ಸ್ಟೋನ್ ಇರುವಂಥ ಒಕ್ಕೂಟ ಖರೀದಿಸಿದೆ.

Related Articles

Related image1
ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?
Related image2
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?
36
ಒಟ್ಟಾರೆ 31 ಸಾವಿರ ಕೋಟಿ ರೂಪಾಯಿಗೆ 2 ತಂಡ ಮಾರಾಟ
Image Credit : Getty

ಒಟ್ಟಾರೆ 31 ಸಾವಿರ ಕೋಟಿ ರೂಪಾಯಿಗೆ 2 ತಂಡ ಮಾರಾಟ

ಆರ್‌ಸಿಬಿಯನ್ನು 1.78 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದರೆ, ಆರ್‌ಆರ್ ಅನ್ನು 1.63 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲಾಯಿತು. ಎರಡೂ ತಂಡಗಳ ಒಟ್ಟು ಮೌಲ್ಯ 3.4 ಬಿಲಿಯನ್ ಡಾಲರ್ (ಸುಮಾರು 31,000 ಕೋಟಿ ರೂ.) ಆಗಿದೆ. ಎರಡೂ ಒಪ್ಪಂದಗಳಲ್ಲಿ ಶೇ. 5 ರಷ್ಟು ವರ್ಗಾವಣೆ ಶುಲ್ಕದಿಂದಾಗಿ ಬಿಸಿಸಿಐ ಮಾರಾಟದಿಂದ 1,550 ಕೋಟಿ ರೂ.ಗಳಿಂದ 1,583 ಕೋಟಿ ರೂ.ಗಳವರೆಗೆ ಗಳಿಸಲಿದೆ.

46
ರಾಜಸ್ಥಾನ ರಾಯಲ್ಸ್‌ ಮಾರಾಟದಲ್ಲಿ ಗೊಂದಲ
Image Credit : ANI

ರಾಜಸ್ಥಾನ ರಾಯಲ್ಸ್‌ ಮಾರಾಟದಲ್ಲಿ ಗೊಂದಲ

ರಾಜಸ್ಥಾನ್ ರಾಯಲ್ಸ್ ಮಾರಾಟದ ನಿಖರವಾದ ಮೊತ್ತವು ಸಂಪೂರ್ಣವಾಗಿ ಬಹಿರಂಗವಾಗಿಲ್ಲ. ಏಕೆಂದರೆ ಪಾರ್ಲ್ ರಾಯಲ್ಸ್ ಮತ್ತು ಬಾರ್ಬಡೋಸ್ ರಾಯಲ್ಸ್ ಕೂಡ ಈ ಒಪ್ಪಂದದಲ್ಲಿ ಸೇರಿರಬಹುದು ಎನ್ನುವ ಮಾತುಗಳಿವೆ. ಆರ್‌ಆರ್ ಈ ಹಿಂದೆ ಬ್ರಿಟಿಷ್-ಭಾರತೀಯ ಉದ್ಯಮಿ ಮನೋಜ್ ಬಡಾಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ಒಡೆತನದಲ್ಲಿತ್ತು. ಮತ್ತೊಂದೆಡೆ, ಒಟ್ಟು ನಾಲ್ಕು ಗುಂಪುಗಳು ಸೇರಿ ಆರ್‌ಸಿಬಿಯಲ್ಲಿ 100 ಪ್ರತಿಶತ ಪಾಲನ್ನು ಪಡೆದುಕೊಂಡಿವೆ.

56
ಶೇ. 5 ರಷ್ಟು ವರ್ಗಾವಣೆ ಷರತ್ತಿನ ಶುಲ್ಕ
Image Credit : Getty

ಶೇ. 5 ರಷ್ಟು ವರ್ಗಾವಣೆ ಷರತ್ತಿನ ಶುಲ್ಕ

ಹತ್ತು ಫ್ರಾಂಚೈಸಿ ಒಪ್ಪಂದಗಳಲ್ಲಿ ಶೇ. 5 ರಷ್ಟು ವರ್ಗಾವಣೆ ಷರತ್ತು ಮಾನ್ಯವಾಗಿದ್ದು, ಪ್ರತಿಯೊಂದು ಮಾಲೀಕತ್ವದ ಒಪ್ಪಂದದಿಂದ ಭಾರತೀಯ ಕ್ರಿಕೆಟ್ ಮಂಡಳಿಯು ಆರ್ಥಿಕವಾಗಿ ಲಾಭ ಪಡೆಯುವುದು ಖಚಿತವಾಗಿದೆ.

66
ಶನಿವಾರದಿಂದ ಐಪಿಎಲ್‌ ಆರಂಭ
Image Credit : ANI

ಶನಿವಾರದಿಂದ ಐಪಿಎಲ್‌ ಆರಂಭ

ಐಪಿಎಲ್ 2026 ರ ಸೀಸನ್‌ಗೆ ವೇದಿಕೆ ಸಜ್ಜಾಗಿದ್ದು, ಇದು ಶನಿವಾರ (ಮಾರ್ಚ್ 28) ರಂದು ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಮುಂದಿನ ಎರಡು ತಿಂಗಳುಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಮೇ 31 ರಂದು ನಡೆಯಲಿದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳು ಇನ್ನೂ ಘೋಷಣೆ ಮಾಡಿಲ್ಲ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಆರ್‌ಸಿಬಿ
ರಾಜಸ್ಥಾನ್ ರಾಯಲ್ಸ್
ಕ್ರಿಕೆಟ್
ಕ್ರೀಡೆಗಳು
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
ಸೈಕಲ್ ಬಿಡಿಭಾಗಗಳಿಂದ ವಿಶ್ವದ ನಂ.1 ಬ್ರ್ಯಾಂಡ್: ‘ಹೀರೋ’ ಹೆಸರಿನ ಹಿಂದಿದೆ ಅದ್ಭುತ ದೇಶ ವಿಭಜನೆಯ ಇತಿಹಾಸ!
Recommended image2
ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ
Recommended image3
FDI ದೇಶದ ನೆರೆ ರಾಷ್ಟ್ರಗಳಿಗೆ ಬಿಗ್ ಆಫರ್, ಭಾರತಕ್ಕೆ ಹರಿದುಬಂತು ₹4,895 ಕೋಟಿ ವಿದೇಶಿ ಹಣ!
Related Stories
Recommended image1
ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?
Recommended image2
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved