ಐಪಿಎಲ್ 2025: ಗಗನಕ್ಕೇರಿದ ಜಾಹೀರಾತು ದರ: 10 ಸೆಕೆಂಡ್‌ನ ಜಾಹೀರಾತು ಇಷ್ಟೊಂದು ದುಬಾರಿಯಾ?
ಈ ಬಾರಿ ಐಪಿಎಲ್ 2025 ಸೀಸನ್ ಮಾರ್ಚ್‌ನಲ್ಲಿ ಶುರುವಾಗಲಿದ್ದು, 10 ಸೆಕೆಂಡ್ ಜಾಹೀರಾತಿನ ದರಗಳು ಭಾರಿ ಏರಿಕೆ ಕಂಡಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಐಪಿಎಲ್ ಕ್ರಿಕೆಟ್ ಟೂರ್ನಿ ಪ್ರತಿ ವರ್ಷ ನಡೆಯುತ್ತೆ. ಪ್ರತಿ ಮ್ಯಾಚ್‌ನಲ್ಲೂ ಸಿಕ್ಸರ್‌ಗಳ ಸುರಿಮಳೆ, ವಿಕೆಟ್‌ಗಳು ಉರುಳೋದ್ರಿಂದ ಈ ಲೀಗನ್ನು ಲಕ್ಷಾಂತರ ಜನ ಟಿವಿಯಲ್ಲಿ ನೋಡ್ತಾರೆ. ಐಪಿಎಲ್ ಸುಮ್ನೆ ಟೈಂಪಾಸ್ ಅಲ್ಲ, ಇದರಲ್ಲಿ ಹಣದ ಹೊಳೆ ಹರಿಯುತ್ತೆ. ಪ್ರತಿ ಮ್ಯಾಚ್ ನೋಡೋಕೆ ಸಾವಿರಾರು ಜನ ಸ್ಟೇಡಿಯಂಗೆ ಬರ್ತಾರೆ, ಇದರಿಂದ ನೂರಾರು ಕೋಟಿ ದುಡ್ಡು ಬರುತ್ತೆ. ಅದರ ಜೊತೆ ಮನೆಯಲ್ಲಿ ಟಿವಿಯಲ್ಲಿ ನೋಡುವವರ ಸಂಖ್ಯೆ ಬೇರೆಯೇ ಇದೆ.
ಐಪಿಎಲ್ ಮ್ಯಾಚ್‌ಗಳನ್ನ ಲೈವ್ ತೋರಿಸೋ ಟಿವಿ ಮತ್ತು ಒಟಿಟಿಗಳಲ್ಲಿ ಓವರ್‌ಗಳ ನಡುವೆ, ವಿಕೆಟ್ ಬಿದ್ದಾಗ, ಡ್ರಿಂಕ್ಸ್ ಬ್ರೇಕ್‌ನಲ್ಲಿ ಕಂಪನಿಗಳ ಜಾಹೀರಾತುಗಳನ್ನು ತೋರಿಸ್ತಾರೆ. ಕೆಲವು ಸೆಕೆಂಡ್‌ಗಳಷ್ಟೇ ಬರುವ ಈ ಜಾಹೀರಾತಿಗೆ ಎಷ್ಟು ಹಣವಿರಬಹುದು ಎಂಬ ಊಹೆ ನಿಮಗೇನಾದರೂ ಇದೆಯೇ. ಕೇವಲ 10 ಸೆಕೆಂಡ್‌ಗಳ ಜಾಹೀರಾತಿಗೆ ಲಕ್ಷಗಟ್ಟಲೆ ದುಡ್ಡು ತೆಗೆದುಕೊಳ್ಳಲಾಗುತ್ತದೆ.
ಈ ಬಾರಿ ಈ ಹಣವನ್ನು ಮತ್ತಷ್ಟು ಏರಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. 2025ರ ಐಪಿಎಲ್ ಮಾರ್ಚ್‌ನಲ್ಲಿ ಶುರುವಾಗಲಿದ್ದು, 10 ಸೆಕೆಂಡ್ ಟಿವಿ ಜಾಹೀರಾತಿನ ದರ ಶೇ.9 ರಿಂದ 15ರಷ್ಟು ಏರಿದೆ ಅಂತ ತಜ್ಞರು ಹೇಳ್ತಾರೆ. ಕಳೆದ ವರ್ಷ 10 ಸೆಕೆಂಡ್ ಜಾಹೀರಾತಿಗೆ 16.4ಲಕ್ಷ ರೂಪಾಯಿ ಇತ್ತು, ಈ ವರ್ಷ 18 ರಿಂದ 19 ಲಕ್ಷ ರೂಪಾಯಿ ಆಗಿದೆ.
ಜಾಹೀರಾತು ಕಂಪನಿಗಳು 10 ಸೆಕೆಂಡ್‌ಗಳ ಟಿವಿ ಅಥವಾ ಒಟಿಟಿ ಜಾಹೀರಾತಿಗೆ 19 ಲಕ್ಷ ರೂ. ಕೊಡಬೇಕು. ಜಿಯೋ ಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈಗ 'ಜಿಯೋ-ಸ್ಟಾರ್' ಆಗಿ ಒಂದಾಗಿದೆ. 2025ರ ಐಪಿಎಲ್‌ನ ಲೈವ್ ಪ್ರಸಾರ ಜಿಯೋ-ಸ್ಟಾರ್‌ನಲ್ಲಿದೆ. ಜಿಯೋ-ಸ್ಟಾರ್ ಬಂದ್ಮೇಲೆ ಜಾಹೀರಾತಿನ ದರ ಏರಿದೆ ಅಂತ ತಜ್ಞರು ಹೇಳ್ತಾರೆ.
Rajasthan Royals
ಮಾರ್ಕೆಟರ್ ಲಾಯ್ಡ್ ಮಥಿಯಾಸ್ ಹೇಳ್ತಿರೋ ಪ್ರಕಾರ, ಐಪಿಎಲ್ ಶುರುವಾದಾಗಿನಿಂದ ಟಿವಿ ಮತ್ತು ಡಿಜಿಟಲ್‌ನಲ್ಲಿ ಜಾಹೀರಾತುದಾರರನ್ನ ಸೆಳೆಯೋ ಪೈಪೋಟಿ ಇತ್ತು.
ಈಗ ಜಿಯೋ-ಸ್ಟಾರ್ ಬಂದ್ಮೇಲೆ ಪೈಪೋಟಿ ಇಲ್ಲ, ಅದಕ್ಕೆ ದರ ಏರಿದೆ. 2024ರರ ಐಪಿಎಲ್ ,ಚುನಾವಣೆಗೂ ಮುಂಚೆ ಬಂದಿದ್ರಿಂದ ಜಾಹೀರಾತಿಗೆ ಹೆಚ್ಚು ದುಡ್ಡು ಬರಲಿಲ್ಲ. ಆದ್ರೆ ಈ ವರ್ಷ ಐಪಿಎಲ್‌ಗೆ ಭಾರಿ ನಿರೀಕ್ಷೆ ಇರೋದ್ರಿಂದ ಜಾಹೀರಾತಿನ ದರ ಏರಿದೆ ಅಂತ ಅವರು ಹೇಳಿದ್ದಾರೆ.