ಎರಡು ದಿನದ ಬಳಿಕ ಮತ್ತೆ ಕುಸಿತವಾಯ್ತು ಚಿನ್ನದ ಬೆಲೆ; ಯುಗಾದಿ, ರಂಜಾನ್‌ಗೆ ಖರೀದಿಸಿ ಬಂಗಾರ
ಜಾಗತಿಕ ಮಾರುಕಟ್ಟೆಯ ಅನಿರೀಕ್ಷಿತ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದು 22 ಮತ್ತು 24 ಕ್ಯಾರಟ್ ಬಂಗಾರದ ದರಗಳು ಕುಸಿದಿದ್ದು, ಹಬ್ಬಕ್ಕೆ ಉಡುಗೊರೆ ನೀಡಲು ಚಿನ್ನ ಖರೀದಿಸಲು ಇದು ಉತ್ತಮ ಸಮಯವಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆ ಕಂಡುಬಂದಿದೆ.

ಚಿನ್ನವನ್ನೇ ಖರೀದಿಸಿ
ಹಬ್ಬಕ್ಕೆ ಆಪ್ತರಿಗೆ ಉಡುಗೊರೆ ನೀಡಲು ಪ್ಲಾನ್ ಮಾಡಿಕೊಂಡಿದ್ರೆ ಚಿನ್ನವನ್ನೇ ಖರೀದಿಸಿ. ಜಾಗತೀಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದು ಸಹ ಬಂಗಾರದ ಬೆಲೆ ಕಡಿಮೆಯಾಗಿದೆ. ಹಾಗಾಗಿ ಸಂಬಳದ ಹಣ ಉಳಿತಾಯವಾಗಿದ್ರೆ ಬಂಗಾರವನ್ನು ಖರೀದಿ ಮಾಡಿ. ಇಂದಿನ ದರಗಳು ಈ ರೀತಿಯಾಗಿವೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,820 ರೂಪಾಯಿ
8 ಗ್ರಾಂ: 1,18,560 ರೂಪಾಯಿ
10 ಗ್ರಾಂ: 1,48,200 ರೂಪಾಯಿ
100 ಗ್ರಾಂ: 14,82,000 ರೂಪಾಯಿ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,800 ರೂ.ಗಳಷ್ಟು ಕುಸಿತವಾಗಿದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 16,168 ರೂಪಾಯಿ
8 ಗ್ರಾಂ: 1,29,344 ರೂಪಾಯಿ
10 ಗ್ರಾಂ: 1,61,680 ರೂಪಾಯಿ
100 ಗ್ರಾಂ: 16,16,800 ರೂಪಾಯಿ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,960 ರೂ.ಗಳಷ್ಟು ಕುಸಿತವಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,49,500 ರೂಪಾಯಿ, ಮುಂಬೈ: 1,48,200 ರೂಪಾಯಿ, ಬೆಂಗಳೂರು: 1,48,200 ರೂಪಾಯಿ, ಅಹಮದಾಬಾದ್: 1,48,250 ರೂಪಾಯಿ, ಪುಣೆ: 1,48,200 ರೂಪಾಯಿ, ಹೈದರಾಬಾದ್: 1,48,200 ರೂಪಾಯಿ
ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲೀಗ ಜಲಯುದ್ಧ: ಇಸ್ರೇಲ್‌ಗೆ 20000 ಅಮೆರಿಕ ಬಾಂಬ್: ಸೌದಿಯಲ್ಲಿ ಇರಾನ್ ದಾಳಿಗೆ ಭಾರತೀಯ ಬಲಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಕಳೆದ ಕೆಲವು ದಿನಗಳಿಂದ ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿಳಿತ ಕಾಣುತ್ತಿದೆ. ಇಂದು 1 ಕೆಜಿ ಬೆಳ್ಳಿ ದರದಲ್ಲಿ 5 ಸಾವಿರ ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ದರಗಳು ಈ ರೀತಿಯಾಗಿವೆ.
10 ಗ್ರಾಂ: 2,800 ರೂಪಾಯಿ
100 ಗ್ರಾಂ: 28,000 ರೂಪಾಯಿ
1000 ಗ್ರಾಂ: 2,80,000 ರೂಪಾಯಿ
ಇದನ್ನೂ ಓದಿ: ವರ್ಷದ 365 ದಿನದಲ್ಲಿ 8 ದಿನ ಬಿಟ್ಟು ಉಳಿದೆಲ್ಲಾ ದಿನ ಸಾಲ ಮಾಡಿದ ಆಂಧ್ರ ಪ್ರದೇಶ ಸರ್ಕಾರ: CAG ವರದಿಯಲ್ಲಿ ಬಹಿರಂಗ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

