ನೋಡುತ್ತ ನಿಂತೋರನ್ನ ಹಿಂದಿಕ್ಕಿದ ಭಾರತ: ಬಾಲ ಸುಟ್ಟ ಬೆಕ್ಕಿನಂತಾದ ಡ್ರ್ಯಾಗನ್ ಚೀನಾ!
India Vs China: ಭಾರತದ ವಿರುದ್ಧ ದ್ವೇಷ ಸಾಧಿಸುವ ಚೀನಾವನ್ನು ಹಿಂದಿಕ್ಕಿದೆ. ಭಾರತದ ಸಾಧನೆ ಬಗ್ಗೆ ಓಮ್ಡಿಯಾ ವರದಿ ಮಾಡಿದೆ. ಭಾರತದ ಸಾಧನೆ ಕಂಡು ಚೀನಾ ಬಾಲ ಸುಟ್ಟ ಬೆಕ್ಕಿನಂತಾಗಿರೋದು ಮಾತ್ರ ಸತ್ಯ.

ನವದೆಹಲಿ: ನೋಡುತ್ತಾ ನಿಂತವರನ್ನು ಹಿಂದಿಕ್ಕಿ ಭಾರತ ಮುಂದಾಗಿದೆ. ಭಾರತದ ಸಾಧನೆ ಕಂಡ ಡ್ರ್ಯಾಗನ್ ರಾಷ್ಟ್ರ ಚೀನಾ ಬಾಲ ಸುಟ್ಟ ಬೆಂಕಿನಂತಾಗಿದೆ. ಸಂಶೋಧನಾ ಸಂಸ್ಥೆ ಓಮ್ಡಿಯಾ ಈ ಕುರಿತು ವರದಿಯೊಂದನ್ನು ಪ್ರಕಟಿಸಿದೆ. ಅಮೆರಿಕಾಗೆ ಐಫೋನ್ ರಫ್ತು ಮಾಡುವಲ್ಲಿ ಭಾರತ ಪ್ರಮುಖ ಮೈಲಿಗಲ್ಲು ಸಾಧಿಸಿದೆ ಎಂದು ಓಮ್ಡಿಯಾ ವರದಿ ಮಾಡಿದೆ.
ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಭಾರತದಿಂದ ಅಮೆರಿಕಕ್ಕೆ ಐಫೋನ್ ರಫ್ತು ಶೇ. 76 ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಸರಿಸುಮಾರು 3 ಮಿಲಿಯನ್ ಯೂನಿಟ್‌ಗಳನ್ನು ರವಾನಿಸಲಾಗಿದೆ. ಈ ವರದಿ ಪ್ರಕಾರ, ಏಪ್ರಿಲ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ 30 ಲಕ್ಷ ಐಫೋನ್‌ಗಳನ್ನು ಕಳುಹಿಸಲಾಗಿದೆ. ಆದ್ರೆ ಚೀನಾದಿಂದ ಅಮೆರಿಕಾಗೆ ಐಫೋನ್ ಸಾಗಣೆ ಪ್ರಮಾಣ ಶೇ.76ರಷ್ಟು ಕುಸಿದಿದ್ದು, 9,00,000 ಯುನಿಟ್‌ಗಳಿಗೆ ತಲುಪಿದೆ.
ಇದೇ ಮೊದಲ ಬಾರಿಗೆ ಚೀನಾಕ್ಕಿಂತ ಭಾರತವೇ ಅತಿ ಹೆಚ್ಚು ಐಫೋನ್ ಯುನಿಟ್‌ಗಳನ್ನು ಪೂರೈಸಿದೆ. ಇದು ಆಪಲ್‌ನ ಜಾಗತಿಕ ಉತ್ಪಾದನಾ ಕಾರ್ಯತಂತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸುತ್ತಿರೋದನ್ನು ತೋರಿಸುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದಲ್ಲಿ ತಯಾರಾಗುವ ಐಫೋನ್ ರಫ್ತಿನ ಮೇಲೆ ಶೇ.30ರಷ್ಟು ಸುಂಕವನ್ನು ವಿಧಿಸಿದ್ದಾರೆ. ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ತಯಾರಾಗುವ ಐಫೋನ್ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ್ದಾರೆ. ಭಾರತಕ್ಕಿಂತ ಚೀನಾ ಮೇಲೆ ಶೇ.20ರಷ್ಟು ತೆರಿಗೆ ಅಧಿಕವಾ
ನಮ್ಮ ದೇಶದಲ್ಲಿ, ಟಾಟಾ ಎಲೆಕ್ಟ್ರಾನಿಕ್ಸ್, ಫಾಕ್ಸ್‌ಕಾನ್ ಮತ್ತು ಪೆಗಾಟ್ರಾನ್ ಐಫೋನ್‌ಗಳನ್ನು ತಯಾರಿಸುತ್ತವೆ. ಸಮರ್ಥವಾದ ಪೂರೈಕೆ ಸಾಮರ್ಥ್ಯ, ಕಡಿಮೆ ಕಾರ್ಮಿಕ ವೆಚ್ಚ, ಸರ್ಕಾರಿ ಯೋಜನೆಗಳಂತಹ ಹಲವು ವಿಷಯಗಳ ಆಧಾರದ ಮೇಲೆ ಐಫೋನ್ ಕಂಪನಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುವುದು ಹೆಚ್ಚು ಆರ್ಥಿಕವಾಗಿ ಲಾಭ ಎಂದು ಕಂಡುಕೊಂಡಿದೆ.
ಆಪಲ್ ಸಿಇಒ ಟಿಮ್ ಕುಕ್ ಕೂಡ ಜೂನ್ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದರು. ಭಾರತದ ಉತ್ಪಾದನಾ ಸಾಮರ್ಥ್ಯವು ವೇಗವಾಗಿ ಬೆಳೆಯುತ್ತಿದೆ ಎಂದು ತಜ್ಞರು ನಂಬುತ್ತಾರೆ. 2026 ರ ಮೊದಲು ಅಮೆರಿಕದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಸುಮಾರು 20 ಮಿಲಿಯನ್ ಐಫೋನ್‌ಗಳ ಬೇಡಿಕೆಯನ್ನು ಭಾರತ ಪೂರೈಸಲು ಸಾಧ್ಯವಾಗುವುದು ಅಸಂಭವ ಎಂಬ ಮಾತುಗಳು ಕಂಡು ಬರುತ್ತಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.