MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ನಗದು ವ್ಯವಹಾರಕ್ಕೆ ಹೊಸ ನಿಯಮ: ಕೈಸಾಲಕ್ಕೂ ಇನ್ನು ಕಂಡೀಷನ್‌; ಒಂದು ತಪ್ಪು, 100% ದಂಡ

ನಗದು ವ್ಯವಹಾರಕ್ಕೆ ಹೊಸ ನಿಯಮ: ಕೈಸಾಲಕ್ಕೂ ಇನ್ನು ಕಂಡೀಷನ್‌; ಒಂದು ತಪ್ಪು, 100% ದಂಡ

ಆದಾಯ ತೆರಿಗೆ ಇಲಾಖೆಯು ನಗದು ವ್ಯವಹಾರಗಳ ಮೇಲೆ ಕಠಿಣ ಮಿತಿಗಳನ್ನು ವಿಧಿಸಿದೆ. ದಿನನಿತ್ಯದ ವ್ಯವಹಾರ, ಆಸ್ತಿ ಖರೀದಿ, ಕೈಸಾಲ, ಮತ್ತು ಬಾಡಿಗೆ ಅಡ್ವಾನ್ಸ್ ಸೇರಿದಂತೆ ಹಲವು ವಹಿವಾಟುಗಳಿಗೆ ಮಿತಿ ನಿಗದಿಪಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 100% ದಂಡ ತೆರಬೇಕಾಗುತ್ತದೆ.

1 Min read
Author : Santosh Naik
Published : Mar 31 2026, 01:10 PM IST
Share this Photo Gallery
  • FB
  • TW
  • Linkdin
  • Whatsapp
18
 ನಗದು ವ್ಯವಹಾರಕ್ಕೆ ಭಾರೀ ಕಂಡೀಷನ್‌
Image Credit : our own

ನಗದು ವ್ಯವಹಾರಕ್ಕೆ ಭಾರೀ ಕಂಡೀಷನ್‌

ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ ಹೊಸ ಮಿತಿಗಳನ್ನು ಜಾರಿಗೆ ತರಲಾಗಿದೆ. ನಿಯಮ ಮೀರಿದರೆ ನೀವು ವ್ಯವಹಾರ ಮಾಡಿದ ಮೊತ್ತಕ್ಕೆ ಸಮನಾದ (100%) ದಂಡ ತೆರಬೇಕಾಗುತ್ತದೆ.

28
ದೈನಂದಿನ ನಗದು ಮಿತಿ
Image Credit : our own

ದೈನಂದಿನ ನಗದು ಮಿತಿ

ಯಾವುದೇ ವ್ಯಾಪಾರಸ್ಥರು ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಸ್ವೀಕರಿಸುವಂತಿಲ್ಲ. ಒಂದು ವೇಳೆ ಮಿತಿ ಮೀರಿದರೆ, ಆದಾಯ ತೆರಿಗೆ ಕಾಯ್ದೆಯಡಿ ಸ್ವೀಕರಿಸಿದ ಮೊತ್ತಕ್ಕೆ ಸಮನಾದ (100%) ದಂಡ ವಿಧಿಸಲಾಗುತ್ತದೆ.

Related Articles

Related image1
ವಿದೇಶಿ ಆಸ್ತಿ ಬಚ್ಚಿಟ್ಟ ಉದ್ಯಮಿಗಳಿಗೆ ಐಟಿ ಶಾಕ್: ದೊಡ್ಡ ಕುಳಗಳ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆ!
Related image2
ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್​: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...
38
ಆಸ್ತಿ ಖರೀದಿ ಮತ್ತು ಮಾರಾಟ
Image Credit : our own

ಆಸ್ತಿ ಖರೀದಿ ಮತ್ತು ಮಾರಾಟ

ಪ್ರಾಪರ್ಟಿ ಡೀಲ್ ಮಾಡುವಾಗ 20,000 ರೂಪಾಯಿಗಿಂತ ಹೆಚ್ಚು ನಗದನ್ನು ಮುಂಗಡವಾಗಲಿ ಅಥವಾ ಪೂರ್ಣ ಹಣವಾಗಲಿ ನೀಡುವಂತಿಲ್ಲ. ಈ ಮಿತಿ ಮೀರಿದ ವ್ಯವಹಾರಕ್ಕೆ ಪೂರ್ಣ ಮೊತ್ತದಷ್ಟು ದಂಡ ಬೀಳಲಿದೆ.

48
ಕ್ಯಾನ್ಸಲ್ ಆದ ಡೀಲ್‌ಗಳಿಗೂ ದಂಡ
Image Credit : our own

ಕ್ಯಾನ್ಸಲ್ ಆದ ಡೀಲ್‌ಗಳಿಗೂ ದಂಡ

ಒಂದು ವೇಳೆ ಆಸ್ತಿ ಖರೀದಿ ಒಪ್ಪಂದ (Property Deal) ರದ್ದಾದಲ್ಲಿ, ವಾಪಸ್ ನೀಡುವ ಹಣವು 20,000 ರೂ. ಮೀರಿದ್ದರೆ ಅದನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ನೀಡಿದಲ್ಲಿ ಅಷ್ಟೇ ಮೊತ್ತದ ಪೆನಾಲ್ಟಿ ಅನ್ವಯವಾಗುತ್ತದೆ.

58
ಕೈಸಾಲ ಮತ್ತು ಮರುಪಾವತಿ
Image Credit : our own

ಕೈಸಾಲ ಮತ್ತು ಮರುಪಾವತಿ

ವೈಯಕ್ತಿಕವಾಗಿ ನೀಡುವ ಅಥವಾ ತೆಗೆದುಕೊಳ್ಳುವ ಕೈಸಾಲದ ಮಿತಿ ಕೂಡ 20,000 ರೂ. ಮಾತ್ರ. ಈ ಮಿತಿಗಿಂತ ಹೆಚ್ಚು ನಗದು ರೂಪದಲ್ಲಿ ಸಾಲ ಪಡೆದರೂ ಅಥವಾ ಮರುಪಾವತಿ ಮಾಡಿದರೂ 100% ದಂಡ ಪಾವತಿಸಬೇಕಾಗುತ್ತದೆ.

68
ಮನೆ ಅಥವಾ ಕಚೇರಿ ಅಡ್ವಾನ್ಸ್
Image Credit : Asianet News

ಮನೆ ಅಥವಾ ಕಚೇರಿ ಅಡ್ವಾನ್ಸ್

ಬಾಡಿಗೆಗೆ ಮನೆ ಅಥವಾ ಕಚೇರಿ ಪಡೆಯುವಾಗ ನೀಡುವ ಸೆಕ್ಯುರಿಟಿ ಡಿಪಾಸಿಟ್ (Security Deposit) 20,000 ರೂ.ಗಿಂತ ಹೆಚ್ಚಿದ್ದರೆ ಅದನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ನೀಡಿದಲ್ಲಿ ಅಷ್ಟೇ ಮೊತ್ತದ ದಂಡ ವಿಧಿಸಲು ಅವಕಾಶವಿದೆ.

78
ಡಿಪಾಸಿಟ್ ಮರುಪಾವತಿ ನಿಯಮ
Image Credit : our own

ಡಿಪಾಸಿಟ್ ಮರುಪಾವತಿ ನಿಯಮ

ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಮಾಲೀಕರು ಅಡ್ವಾನ್ಸ್ ಹಣವನ್ನು ಹಿಂತಿರುಗಿಸುವಾಗಲೂ ಎಚ್ಚರಿಕೆ ವಹಿಸಬೇಕು. 20,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವಾಪಸ್ ನೀಡಿದರೂ ಕಠಿಣ ದಂಡ ಅನ್ವಯವಾಗುತ್ತದೆ.

88
ವ್ಯಾಪಾರಸ್ಥರ ಪೇಮೆಂಟ್ ಮಿತಿ
Image Credit : our own

ವ್ಯಾಪಾರಸ್ಥರ ಪೇಮೆಂಟ್ ಮಿತಿ

ಒಬ್ಬ ವ್ಯಾಪಾರಸ್ಥರು ತಮ್ಮ ವ್ಯವಹಾರದ ಉದ್ದೇಶಕ್ಕಾಗಿ ಒಬ್ಬ ವ್ಯಕ್ತಿಗೆ ಒಂದೇ ದಿನದಲ್ಲಿ 10,000 ರೂ.ಗಿಂತ ಹೆಚ್ಚು ನಗದು ಪಾವತಿ ಮಾಡಿದರೆ, ಅಂತಹ ಪಾವತಿಯನ್ನು ಆದಾಯ ತೆರಿಗೆ ಲೆಕ್ಕಾಚಾರದಲ್ಲಿ 'ಖರ್ಚು' (Expense) ಎಂದು ಪರಿಗಣಿಸಲಾಗುವುದಿಲ್ಲ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಆದಾಯ ತೆರಿಗೆ
ತೆರಿಗೆ
ವ್ಯವಹಾರ
ವ್ಯಾಪಾರ ಸುದ್ದಿ
ಹಣ (Hana)
ವೈಯಕ್ತಿಕ ಹಣಕಾಸು

Latest Videos
Recommended Stories
Recommended image1
ಇರಾನ್ ಯುದ್ಧ: ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆ: 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು?
Recommended image2
ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ
Recommended image3
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, 28 ದಿನ ಬದಲು 30 ದಿನ ರೀಚಾರ್ಜ್ ಪ್ಲಾನ್‌ಗೆ ಸೂಚನೆ
Related Stories
Recommended image1
ವಿದೇಶಿ ಆಸ್ತಿ ಬಚ್ಚಿಟ್ಟ ಉದ್ಯಮಿಗಳಿಗೆ ಐಟಿ ಶಾಕ್: ದೊಡ್ಡ ಕುಳಗಳ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆ!
Recommended image2
ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್​: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved