- Home
- Business
- ಪ್ರತಿ ತಿಂಗಳು ₹50,000 ಬಡ್ಡಿ ಬೇಕಾ? ಹಾಗಿದ್ರೆ ಬ್ಯಾಂಕ್‌ನಲ್ಲಿ ಎಷ್ಟು ಹಣ ಡೆಫಾಸಿಟ್ ಮಾಡಬೇಕು ಗೊತ್ತಾ?
ಪ್ರತಿ ತಿಂಗಳು ₹50,000 ಬಡ್ಡಿ ಬೇಕಾ? ಹಾಗಿದ್ರೆ ಬ್ಯಾಂಕ್‌ನಲ್ಲಿ ಎಷ್ಟು ಹಣ ಡೆಫಾಸಿಟ್ ಮಾಡಬೇಕು ಗೊತ್ತಾ?
ಬೆಂಗಳೂರು: ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟು ಪ್ರತಿ ತಿಂಗಳು ಆದಾಯ ಗಳಿಸಬಹುದು. ಆದರೆ, ತಿಂಗಳಿಗೆ ಇಂತಿಷ್ಟು ಬಡ್ಡಿ ಹಣ ಬರಲು ಎಷ್ಟು ಠೇವಣಿ ಇಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ತಿಂಗಳಿಗೆ ₹50,000 ಬಡ್ಡಿ ರೂಪದಲ್ಲಿ ಪಡೆಯಲು ಎಷ್ಟು ಹಣ ಡೆಪಾಸಿಟ್ ಮಾಡಬೇಕು? ಇಲ್ಲಿದೆ ಮಾಹಿತಿ.

ಬ್ಯಾಂಕ್‌ನಲ್ಲಿ ಫಿಕ್ಸ್ಡ್ ಡೆಪಾಸಿಟ್ ಮಾಡಿದ್ರೆ ಏನೆಲ್ಲಾ ಲಾಭ?
ಇಂದಿನ ದಿನಗಳಲ್ಲಿ ಖರ್ಚುಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಬಯಸುತ್ತಾರೆ. ಅದರಲ್ಲೂ ನಿವೃತ್ತರಾದವರು ಮಾಸಿಕ ಆದಾಯಕ್ಕಾಗಿ ಹುಡುಕುತ್ತಾರೆ. ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ, ತಿಂಗಳಿಗೆ ಬಡ್ಡಿ ರೂಪದಲ್ಲಿ ಹಣ ಪಡೆಯಬಹುದು.
ತಿಂಗಳಿಗೆ 50 ಸಾವಿರ ರುಪಾಯಿ ಬಡ್ಡಿ ಬೇಕಿದ್ರೆ?
ಆದರೆ ತಿಂಗಳಿಗೆ 50 ಸಾವಿರ ರೂಪಾಯಿ ಬಡ್ಡಿ ಬರಬೇಕಾದರೆ ಬ್ಯಾಂಕ್‌ನಲ್ಲಿ ಎಷ್ಟು ಹಣ ಠೇವಣಿ ಇಡಬೇಕು? ಈ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇದು ಬ್ಯಾಂಕ್ ನೀಡುವ ಬಡ್ಡಿ ದರವನ್ನು ಅವಲಂಬಿಸಿರುತ್ತದೆ.
ಪ್ರತಿ ತಿಂಗಳು 50 ಸಾವಿರ ರುಪಾಯಿ ಬಡ್ಡಿ ಬೇಕಿದ್ದರೇ?
ಉದಾಹರಣೆಗೆ, ನಿಮಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ಬಡ್ಡಿ ಆದಾಯ ಬೇಕು ಎಂದುಕೊಳ್ಳಿ. ಅಂದರೆ, ವರ್ಷಕ್ಕೆ ಆರು ಲಕ್ಷ ರೂಪಾಯಿ. ಬ್ಯಾಂಕ್ ಬಡ್ಡಿ ದರ ಶೇ. 6ರಷ್ಟಿದ್ದರೆ, ನೀವು ಒಂದು ಕೋಟಿ ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಒಂದು ಕೋಟಿ ರೂಪಾಯಿಗೆ ಶೇ. 6ರ ಬಡ್ಡಿಯಂತೆ ವರ್ಷಕ್ಕೆ ಆರು ಲಕ್ಷ ರೂಪಾಯಿ ಬರುತ್ತದೆ. ಅದೇ ಬ್ಯಾಂಕ್ ಶೇ. 7ರಷ್ಟು ಬಡ್ಡಿ ನೀಡಿದರೆ, 85 ಲಕ್ಷಕ್ಕೂ ಹೆಚ್ಚು ಠೇವಣಿ ಇಡಬೇಕು. ಬ್ಯಾಂಕ್ ಬಡ್ಡಿ ದರ ಶೇ. 8ರಷ್ಟಿದ್ದರೆ, 75 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ, ಬಡ್ಡಿ ದರ ಹೆಚ್ಚಾದಂತೆ ನೀವು ಹೂಡಿಕೆ ಮಾಡಬೇಕಾದ ಮೊತ್ತ ಕಡಿಮೆಯಾಗುತ್ತದೆ.
ಬ್ಯಾಂಕ್‌ಗಳ ಬಡ್ಡಿ ಹೇಗಿದೆ?
ಸದ್ಯ ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಶೇ. 6ರಿಂದ 8ರ ನಡುವೆ ಇವೆ. ಹಿರಿಯ ನಾಗರಿಕರಿಗೆ ಸ್ವಲ್ಪ ಹೆಚ್ಚಿನ ಬಡ್ಡಿ ಸಿಗುವ ಸಾಧ್ಯತೆ ಇದೆ. ನೀವು ಪ್ರತಿ ತಿಂಗಳು ಬಡ್ಡಿ ಹಣ ಪಡೆಯಲು ಬಯಸಿದರೆ, 'ಮಾಸಿಕ ಬಡ್ಡಿ ಪಾವತಿ ಎಫ್‌ಡಿ' (Monthly Interest Payout FD) ಆಯ್ಕೆಯನ್ನು ಆರಿಸಿಕೊಳ್ಳಬೇಕು. ಇದನ್ನು ಆಯ್ಕೆ ಮಾಡಿದರೆ, ಪ್ರತಿ ತಿಂಗಳು ನಿಮ್ಮ ಖಾತೆಗೆ ಬಡ್ಡಿ ಜಮೆಯಾಗುತ್ತದೆ. ಆದರೆ, ಈ ಬಡ್ಡಿಯ ಮೇಲೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ.
75 ಲಕ್ಷದಿಂದ ಒಂದು ಕೋಟಿ ಠೇವಣಿ ಅಗತ್ಯ
ತಿಂಗಳಿಗೆ 50 ಸಾವಿರ ರೂಪಾಯಿ ಬಡ್ಡಿ ಪಡೆಯಲು, ನೀವು 75 ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೆ ಠೇವಣಿ ಇಡಬೇಕಾಗುತ್ತದೆ ಎಂಬುದು ಸ್ಪಷ್ಟ. ನಿಮಗೆ ಸಿಗುವ ಮಾಸಿಕ ಆದಾಯವು ಬ್ಯಾಂಕ್ ನೀಡುವ ಬಡ್ಡಿ ದರಗಳನ್ನು ಅವಲಂಬಿಸಿರುತ್ತದೆ.
ಹೂಡಿಕೆಗೂ ಮುನ್ನ ಬ್ಯಾಂಕ್‌ಗೆ ಭೇಟಿ ಕೊಡಿ
ಆದ್ದರಿಂದ, ಎಲ್ಲಿಯಾದರೂ ಹೂಡಿಕೆ ಮಾಡುವ ಮೊದಲು, ಬ್ಯಾಂಕ್‌ಗೆ ಭೇಟಿ ನೀಡಿ ಬಡ್ಡಿ ದರಗಳು, ನಿಯಮಗಳು ಮತ್ತು ತೆರಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಸರಿಯಾದ ಪೂರ್ವ ಯೋಜನೆ ಮಾಡಿದರೆ, ಭವಿಷ್ಯದಲ್ಲಿ ಸ್ಥಿರವಾದ ಮಾಸಿಕ ಆದಾಯವನ್ನು ಪಡೆಯಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

