ಬ್ಯಾಂಕ್ ಲಾಕರಲ್ಲಿ ಚಿನ್ನ ಇಡಲು ಎಷ್ಟು ಶುಲ್ಕ ಕೊಡ್ಬೇಕು?
ನಿಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್‌ಗಳು ಬಳಕೆಯಾಗುತ್ತವೆ. ಆದರೆ, ಲಾಕರ್ ಶುಲ್ಕಗಳು ಬ್ಯಾಂಕ್‌ಗಳಿಂದ ಬ್ಯಾಂಕ್‌ಗೆ ಬದಲಾಗುತ್ತವೆ. ಪ್ರಮುಖ ಬ್ಯಾಂಕ್‌ಗಳ ಲಾಕರ್ ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
ಬ್ಯಾಂಕ್ ಲಾಕರ್ ಶುಲ್ಕಗಳು
ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮತ್ತು ಹಾನಿಯಿಂದ ರಕ್ಷಿಸಲು ಬ್ಯಾಂಕ್ ಲಾಕರ್‌ಗಳು ಉತ್ತಮ ಆಯ್ಕೆ. ಆದರೆ, ಲಾಕರ್ ಶುಲ್ಕಗಳು ಬ್ಯಾಂಕ್‌ಗಳಿಂದ ಬ್ಯಾಂಕ್‌ಗೆ ಬದಲಾಗುತ್ತವೆ.
ಬ್ಯಾಂಕ್ ಲಾಕರ್‌ಗಳು
ಎಸ್‌ಬಿಐ ಲಾಕರ್ ಗಾತ್ರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುತ್ತದೆ. ಚಿಕ್ಕ ಲಾಕರ್‌ಗೆ ₹2,000 + GST, ದೊಡ್ಡ ಲಾಕರ್‌ಗಳಿಗೆ ₹12,000 + GST ಇರುತ್ತದೆ.
ಬ್ಯಾಂಕ್‌ಗಳು
ಪಂಜಾಬ್ ನ್ಯಾಷನಲ್ ಬ್ಯಾಂಕ್ ಲಾಕರ್ ಶುಲ್ಕಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ₹1,250 ರಿಂದ ನಗರ ಪ್ರದೇಶಗಳಲ್ಲಿ ₹2,000 ವರೆಗೆ ಇರುತ್ತದೆ. ಕೆನರಾ ಬ್ಯಾಂಕ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ₹1,000 ಮತ್ತು ನಗರ ಪ್ರದೇಶಗಳಲ್ಲಿ ₹2,000 + GST ಇರುತ್ತದೆ.
HDFC ಬ್ಯಾಂಕ್
ಹಾಗೆಯೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ₹550 + GST ಮತ್ತು ನಗರ ಪ್ರದೇಶಗಳಲ್ಲಿ ₹1,350 + GST ವಿಧಿಸುತ್ತದೆ.
ICICI ಬ್ಯಾಂಕ್
ICICI ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ಲಾಕರ್‌ಗೆ ₹1,200 ಶುಲ್ಕ ವಿಧಿಸುತ್ತದೆ. ಹಾಗೂ ನಗರ ಪ್ರದೇಶಗಳಲ್ಲಿ ₹3,500 ವರೆಗೆ ವಿಧಿಸುತ್ತದೆ.