MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • Lemon Farming: ಇದು ಬರೀ ಹಣ್ಣಲ್ಲ, ಎಟಿಎಂ! ಒಮ್ಮೆ ಬೆಳೆದರೆ ಲಕ್ಷ ಲಕ್ಷ ಸಂಪಾದಿಸಬಹುದು

Lemon Farming: ಇದು ಬರೀ ಹಣ್ಣಲ್ಲ, ಎಟಿಎಂ! ಒಮ್ಮೆ ಬೆಳೆದರೆ ಲಕ್ಷ ಲಕ್ಷ ಸಂಪಾದಿಸಬಹುದು

Lemon Farming: ನಿಂಬೆ ಕೃಷಿಯು ನಿಮ್ಮ ಮನೆಯಿಂದ ಹೊರಗೆ ಕಾಲಿಡದೆ ಲಕ್ಷ ಲಕ್ಷ ಗಳಿಸುವ ಒಂದು ಉತ್ತಮ ಮಾರ್ಗವಾಗಿದೆ. ಅದು ಹೇಗೆ ವರ್ಕ್ ಆಗುತ್ತದೆ ಎಂದು ತಿಳಿಯಲು ಸಿದ್ಧರಿದ್ದೀರಾ?, ಇಲ್ಲಿದೆ ನೋಡಿ ಮಾಹಿತಿ. 

2 Min read
Ashwini HR
Published : May 22 2025, 01:32 PM IST| Updated : May 22 2025, 02:27 PM IST
Share this Photo Gallery
  • FB
  • TW
  • Linkdin
  • Whatsapp
16

ಅದು ಬೇಸಿಗೆ ಕಾಲವಿರಲಿ, ಚಳಿಗಾಲವಾಗಲಿ, ಮಳೆ ಬರಲಿ ನಿಮ್ಮ ದೇಹವನ್ನು ಚೈತನ್ಯಗೊಳಿಸುವ ಯಾವುದಾದರೂ  ಹಣ್ಣಿನ ಹೆಸರನ್ನು ಹೇಳುವಂತೆ ಕೇಳಿದರೆ ಮೊದಲು ಬರುವ ಹೆಸರು ನಿಂಬೆ. ಹೌದು, ಇದು ಪ್ರತಿ ಋತುವಿನಲ್ಲಿಯೂ ಬೇಡಿಕೆ ಇರುವ ಹಣ್ಣಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ನಿಂಬೆ ಕೃಷಿಯು ನಿಮಗೆ ಬಹಳಷ್ಟು ಹಣವನ್ನು ಗಳಿಸಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ದೇಶದ ಹಲವು ರಾಜ್ಯಗಳ ರೈತರು ನಿಂಬೆಯನ್ನು ನಗದು ಬೆಳೆಯಾಗಿ ಬಳಸುತ್ತಾರೆ. ನೀವು ಬಯಸಿದರೆ, ಒಮ್ಮೆ ಅದರ ಬೆಳೆಯನ್ನು ಬೆಳೆದು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಇದರರ್ಥ ನಿಂಬೆಹಣ್ಣು ರೈತ ಸಹೋದರರಿಗೆ ಎಟಿಎಂ ಆಗಿ ಕೆಲಸ ಮಾಡುತ್ತದೆ. 

26

ಮನೆಯಲ್ಲಿಯೇ ಕುಳಿತು ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವುದನ್ನು ಊಹಿಸಿಕೊಳ್ಳಿ. ಇದೆಲ್ಲಾ ಕನಸಿನ ಮಾತೇ ಸರಿ ಅಂತೀರಾ, ಆದರೆ 2025 ರಲ್ಲಿ, ನಿಂಬೆ ಕೃಷಿ ನಿಮ್ಮ ಹಿತ್ತಲಿನಿಂದಲೇ ನೀವು ಪ್ರಾರಂಭಿಸಬಹುದಾದ ಸುಲಭ ಮತ್ತು ಲಾಭದಾಯಕ ವ್ಯವಹಾರಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿದೆ. ಹೌದು, ನೀವು ಹಳ್ಳಿಯಲ್ಲಾಗಲಿ ಅಥವಾ ನಗರದಲ್ಲಿ ವಾಸಿಸುತ್ತಿರಲಿ ಈ ನಗದು ಬೆಳೆ ನಿಮಗಾಗಿ ಕಾಯುತ್ತಿರುವ ಚಿನ್ನದ ಗಣಿಯಾಗಿದೆ.

Related Articles

Related image1
Home Loan Guide: ಗೃಹ ಸಾಲದ ಬಡ್ಡಿದರದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಒಂದಷ್ಟು ವಿಷಯಗಳಿವು...
Related image2
ಜುಕರ್‌ಬರ್ಗ್‌ To ಜೆಕೆ ರೋಲಿಂಗ್‌...40 ವರ್ಷಕ್ಕೂ ಮುಂಚೆ ಕೋಟ್ಯಧಿಪತಿಗಳಾದ ವ್ಯಕ್ತಿಗಳಿವರು!
36

ಉತ್ತಮ ಸಂಬಳದ ಉದ್ಯೋಗಗಳನ್ನು ತ್ಯಜಿಸುವ ವಿದ್ಯಾವಂತ ಜನರಿಂದ ಹಿಡಿದು ಹೆಚ್ಚುವರಿ ಆದಾಯವನ್ನು ಹುಡುಕುವ ರೈತರವರೆಗೆ, ಎಲ್ಲರೂ ನಿಂಬೆ ಬೆಳೆಯಲು ಹಾತೊರೆಯುತ್ತಿದ್ದಾರೆ. ಏಕೆಂದರೆ ನಿಂಬೆಹಣ್ಣುಗಳು ಅಡುಗೆಮನೆ, ಜ್ಯೂಸ್ ಅಂಗಡಿಗಳು, ಮಾರುಕಟ್ಟೆಗಳು ಹೀಗೆ ಎಲ್ಲೆಡೆ ಬೇಡಿಕೆಯಲ್ಲಿವೆ. ಏಕೆಂದರೆ ಅವು ಕಡಿಮೆ ಶ್ರಮದಿಂದ ಬಂಪರ್ ಗಳಿಕೆಯನ್ನು ತರುತ್ತವೆ. ನಿಂಬೆಹಣ್ಣು ವಿಟಮಿನ್ ಸಿ ಯ ನಿಧಿಯಾಗಿದೆ. ಇದಲ್ಲದೆ, ಇದು ವಿಟಮಿನ್ ಎ ಮತ್ತು ವಿಟಮಿನ್ ಬಿ-1 ಅಗತ್ಯವನ್ನು ಸಹ ಪೂರೈಸುತ್ತದೆ.

46

ಭಾರತವು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚು ನಿಂಬೆಹಣ್ಣುಗಳನ್ನು ಬೆಳೆಯುತ್ತದೆ ಮತ್ತು ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ದೇಶದಲ್ಲಿ ನಿಂಬೆಹಣ್ಣು ಉತ್ಪಾದಿಸುವ ರಾಜ್ಯಗಳಲ್ಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಇತ್ಯಾದಿಗಳ ಹೆಸರುಗಳು ಮೊದಲು ಬರುತ್ತಿದ್ದು, ರೈತರು ಈ  ಹಣ್ಣಿನ ಲಾಭ ಮಾಡಿಕೊಳ್ಳುತ್ತಿದ್ದಾರೆ. 

56

ನೀವು ಒಮ್ಮೆ ನಿಂಬೆ ಮರವನ್ನು ನೆಟ್ಟರೆ, ಅದು ನಿಮಗೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಹಣ್ಣುಗಳನ್ನು ನೀಡುತ್ತಲೇ ಇರುತ್ತದೆ. ಜೊತೆಗೆ, ಇದಕ್ಕೆ ದುಬಾರಿ ಯಂತ್ರಗಳ ಅಗತ್ಯವಿಲ್ಲ. ಸ್ವಲ್ಪ ಭೂಮಿ, ಸ್ವಲ್ಪ ಕಾಳಜಿವಹಿಸಿದರೆ ಸಾಕು. ಹಾಗಾಗಿ ನಿಂಬೆ ಕೃಷಿಯು ನಿಮ್ಮ ಮನೆಯಿಂದ ಹೊರಗೆ ಕಾಲಿಡದೆ ಲಕ್ಷ ಗಳಿಸುವ ಒಂದು ಉತ್ತಮ ಮಾರ್ಗವಾಗಿದೆ.

66

ಒಂದು ಎಕರೆಯಲ್ಲಿ ನೀವು 200-250 ಮರಗಳನ್ನು ಬೆಳೆಸಬಹುದು. ಪ್ರತಿಯೊಂದೂ 30-40 ಕೆಜಿ ನೀಡಿದರೆ, ಅದು 6,000-10,000 ಕೆಜಿ ನಿಂಬೆಹಣ್ಣು. ಪ್ರತಿ ಕೆಜಿಗೆ ರೂ. 50 ರಂತೆ, ನೀವು ವರ್ಷಕ್ಕೆ ರೂ. 3-5 ಲಕ್ಷ ಗಳಿಸುವಿರಿ (ನೀರು ಮತ್ತು ಆರೈಕೆಗಾಗಿ ಕೆಲವು ಸಣ್ಣ ವೆಚ್ಚಗಳನ್ನು ಹೊರತುಪಡಿಸಿ) ಮನೆಯಲ್ಲಿ 5-10 ಮರಗಳೊಂದಿಗೆ ಸಣ್ಣದಾಗಿ ಪ್ರಾರಂಭಿಸಿದರೂ ನೀವು ಮಾಸಿಕ ರೂ. 10,000-20,000 ಜೇಬಿಗಿಳಿಸಬಹುದು. 

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ವ್ಯಾಪಾರ ಕಲ್ಪನೆ
ವ್ಯವಹಾರ
ವ್ಯಾಪಾರ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved