MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Business
  • Business Idea: ಮೊಬೈಲ್ ಫೋನ್ ಬಳಸಿ ಹಣ ಸಂಪಾದನೆ ಮಾಡುವ ಆರು ಸೂಪರ್ ಐಡಿಯಾ ಇಲ್ಲಿವೆ

Business Idea: ಮೊಬೈಲ್ ಫೋನ್ ಬಳಸಿ ಹಣ ಸಂಪಾದನೆ ಮಾಡುವ ಆರು ಸೂಪರ್ ಐಡಿಯಾ ಇಲ್ಲಿವೆ

ಮೊಬೈಲ್ ಫೋನ್ ಬಳಸಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ. ಉದ್ಯೋಗಿಗಳೂ ಬಿಡುವಿನ ವೇಳೆ ಸಣ್ಣಪುಟ್ಟ ಕೆಲಸ ಮಾಡಿದರೆ ಸಣ್ಣಪುಟ್ಟ ಖರ್ಚಿಗಾಗುವಷ್ಟು ಹಣ ಬರುತ್ತದೆ. ಈ ಕುರಿತ ಆರು ಐಡಿಯಾಗಳು ಇಲ್ಲಿವೆ.

2 Min read
Author : Kannadaprabha News
Published : Jul 14 2026, 05:39 AM IST
Share this Photo Gallery
  • FB
  • TW
  • Linkdin
  • Whatsapp
17
ಮೊಬೈಲ್‌ನಿಂದ ಉತ್ತಮ ಆದಾಯ
Image Credit : AI

ಮೊಬೈಲ್‌ನಿಂದ ಉತ್ತಮ ಆದಾಯ

ಸ್ವಲ್ಪ ತಲೆ ಓಡಿಸಿದರೆ ಮೊಬೈಲ್‌ನಿಂದ ಉತ್ತಮ ಆದಾಯ ಗಳಿಸಬಹುದು. ಈ ಮೂಲಕ ಕುಟುಂಬದ ಜವಾಬ್ದಾರಿಗಳನ್ನೂ ನಿಭಾಯಿಸಬಹುದು. ಉದ್ಯೋಗಿಗಳೂ ಬಿಡುವಿನ ವೇಳೆ ಸಣ್ಣಪುಟ್ಟ ಕೆಲಸ ಮಾಡಿದರೆ ಸಣ್ಣಪುಟ್ಟ ಖರ್ಚಿಗಾಗುವಷ್ಟು ಹಣ ಬರುತ್ತದೆ. ಈ ಕುರಿತ ಆರು ಐಡಿಯಾಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
1. ಫ್ರೀಲ್ಯಾನ್ಸಿಂಗ್‌ ಮತ್ತು ಕಂಟೆಂಟ್‌ ತಯಾರಿ
Image Credit : AI

1. ಫ್ರೀಲ್ಯಾನ್ಸಿಂಗ್‌ ಮತ್ತು ಕಂಟೆಂಟ್‌ ತಯಾರಿ

ಅಪ್‌ವರ್ಕ್‌ ಅಥವಾ ಫಿವರ್ರ್‌ನಂಥಾ ಆ್ಯಪ್‌ಗಳ ಮೂಲಕ ಭಾಷಾಂತರ ಮಾಡುವುದು, ಲೇಖನ ಬರೆಯುವುದು, ಸೋಷಿಯಲ್‌ ಮೀಡಿಯಾ ನಿರ್ವಹಣೆಯಂಥಾ ಕೆಲಸ ಮಾಡಬಹುದು. ಇವುಗಳಲ್ಲಿ ಎಲ್ಲಾ ಕೆಲಸವನ್ನು ಮೊಬೈಲ್ ಆ್ಯಪ್‌ ಮೂಲಕವೇ ನಿರ್ವಹಿಸಬಹುದು. ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಅಂತ ಕಂಡುಕೊಂಡು ಅದಕ್ಕೆ ತಕ್ಕಂತೆ ಆನ್‌ಲೈನ್‌ನಲ್ಲಿ ಮಾಡಬಹುದಾದ ಕೆಲಸ ಪತ್ತೆ ಮಾಡಬಹುದು.

Related Articles

Related image1
Business Idea: ಕಡಿಮೆ ಬಂಡವಾಳ, ಅಧಿಕ ಆದಾಯ.. ಎಂದಿಗೂ ಲಾಸ್‌ ಆಗದ ವ್ಯವಹಾರಗಳಿವು!
Related image2
Business Idea ಹೊಸ ಬಿಸಿನೆಸ್ ಶುರು ಮಾಡುವ ಪ್ಲಾನ್ ಇದೆಯೇ? ಯಶಸ್ವಿ ಉದ್ಯಮಿಯಾಗಲು ಈ 3 ಸೂತ್ರಗಳನ್ನು ತಪ್ಪದೇ ಪಾಲಿಸಿ!
37
2. ಇನ್‌ಫ್ಲುಯೆನ್ಸರ್‌ ಮಾರ್ಕೆಟಿಂಗ್‌
Image Credit : AI

2. ಇನ್‌ಫ್ಲುಯೆನ್ಸರ್‌ ಮಾರ್ಕೆಟಿಂಗ್‌

ಫೋನ್‌ನಲ್ಲೇ ಎಡಿಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಸಾಧ್ಯವಿದ್ದಾಗಲೆಲ್ಲ ನಾಲ್ಕು ಜನರ ಗಮನಸೆಳೆಯುವಂಥಾ ವಿಷಯಗಳ ಬಗ್ಗೆ ರೀಲ್ಸ್‌ ಮಾಡುತ್ತಿರಿ. ಫಾಲೋವರ್ಸ್‌ ಸಂಖ್ಯೆ ವೃದ್ಧಿಸಿಕೊಳ್ಳಿ. ನಿಮ್ಮ ಜನಪ್ರಿಯತೆ ಹೆಚ್ಚಾದಂತೆ ಬ್ರಾಂಡ್‌ ಸ್ಪಾನ್ಸರ್‌ಶಿಪ್‌ಗಳು ಸಿಗುತ್ತವೆ. ಅವುಗಳ ಪ್ರಚಾರ ಮಾಡುವ ಮೂಲಕ ಉತ್ತಮ ಹಣ ಗಳಿಸಬಹುದು.

47
3. ಡಿಜಿಟಲ್‌ ಟೆಂಪ್ಲೇಟ್‌ಗಳ ಮಾರಾಟ
Image Credit : AI

3. ಡಿಜಿಟಲ್‌ ಟೆಂಪ್ಲೇಟ್‌ಗಳ ಮಾರಾಟ

ಕ್ಯಾಪ್‌ಕಟ್‌ ವೀಡಿಯೋ ಟೆಂಪ್ಲೇಟ್‌ಗಳು, ನೋಶನ್‌ ಪೇಜ್‌ಗಳು ಅಥವಾ ಇಮೋಜಿ ಪ್ಯಾಕ್‌ಗಳಂಥಾ ಡಿಜಿಟಲ್‌ ಉತ್ಪನ್ನಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡಬಹುದು. ಇದಕ್ಕೆ ಬೇಸಿಕ್‌ ವೀಡಿಯೋ ಎಡಿಟಿಂಗ್ ಗೊತ್ತಿದ್ದರೆ ಸಾಕಾಗುತ್ತದೆ. ಸೋಷಿಯಲ್‌ ಮೀಡಿಯಾ ಟ್ರೆಂಡ್‌ಗಳ ಬಗ್ಗೆ ಅರಿವಿರಬೇಕು. ವಿಜುವಲೀ ಒಂದೊಳ್ಳೆ ಕಥೆ ಹೇಳುವ ಕೌಶಲ್ಯ ಬೆಳೆಸಿಕೊಂಡರೆ ಇದರಲ್ಲಿ ಉತ್ತಮ ಆದಾಯ ಪಡೆಯಬಹುದು.

57
4. ರೆಫರ್ ಆಂಡ್‌ ಅರ್ನ್ ಆ್ಯಪ್‌ಗಳು
Image Credit : Asianet News

4. ರೆಫರ್ ಆಂಡ್‌ ಅರ್ನ್ ಆ್ಯಪ್‌ಗಳು

ಸದ್ಯ ಕುಳಿತಲ್ಲೇ ಕಾಸು ಮಾಡುವ ತಂತ್ರಗಳಲ್ಲೊಂದು ರೆಫ್‌ ಆಂಡ್ ಅರ್ನ್‌. ಇದರಲ್ಲಿ ವಿಶ್ವಾಸಾರ್ಹವೆನಿಸುವ ಹಣಕಾಸು, ವ್ಯಾಪಾರ ಅಥವಾ ಶಾಪಿಂಗ್ ಆಪ್ ಡೌನ್‌ಲೋಡ್ ಮಾಡಿ ಅದರಲ್ಲಿ ನಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಖಾತೆ ತೆರೆಯಬೇಕು. ಆಪ್‌ನಲ್ಲಿರುವ ‘ರೆಫರ್‌ ಆ್ಯಂಡ್‌ ಅರ್ನ್‌’ ಅಥವಾ ‘ಇನ್‌ವೈಟ್‌’ ಸೆಕ್ಷನ್‌ಗೆ ಹೋದರೆ ನಿಮಗೊಂದು ಲಿಂಕ್‌ ಸಿಗುತ್ತದೆ. ಅದನ್ನು ಕಾಪಿ ಮಾಡಿಕೊಳ್ಳಿ. ಆ ಲಿಂಕ್‌ ಅನ್ನು ಸ್ನೇಹಿತರಿಗೆ ಕಳಿಸಿ. ಅವರು ಈ ಲಿಂಕ್‌ ಬಳಸಿ ಆಪ್‌ ಡೌನ್‌ಲೋಡ್‌ ಮಾಡಿ ಮೊದಲ ವಹಿವಾಟು ನಡೆಸಿದಾಗ ನಿಮ್ಮ ಅಕೌಂಟ್‌ಗೆ ಹಣ ಬರುತ್ತದೆ.

67
5. ಟೆಸ್ಟ್ ಪಾರ್ಟಿಸಿಪೆಂಟ್
Image Credit : Asianet News

5. ಟೆಸ್ಟ್ ಪಾರ್ಟಿಸಿಪೆಂಟ್

ಯಾವುದೇ ಕಂಪನಿ ಹೊಸ ಪ್ರಾಡಕ್ಟ್ ಅಥವಾ ಸೇವೆಯನ್ನು ಮಾರುಕಟ್ಟೆಗೆ ಬಿಡುವ ಮುನ್ನ ಅದನ್ನು ಜನರಿಂದ ಬಳಸಿ ನೋಡಿ ಫೀಡ್‌ಬ್ಯಾಕ್ ಪಡೆಯಲು ಬಯಸುತ್ತದೆ. ನಿಮ್ಮ ಆಸಕ್ತಿಗೆ ತಕ್ಕಂತೆ ಇಂತಹ ಟ್ರಯಲ್‌ಗಳಲ್ಲಿ ಭಾಗವಹಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕವೂ ಹಣ ಗಳಿಸಬಹುದು.

77
6. ಆನ್‌ಲೈನ್ ಸ್ಟೋರ್ ಆರಂಭಿಸಿ
Image Credit : Asianet News

6. ಆನ್‌ಲೈನ್ ಸ್ಟೋರ್ ಆರಂಭಿಸಿ

ಸ್ವಂತ ಬಿಸಿನೆಸ್ ಮಾಡುವ ಆಲೋಚನೆ ಇದ್ದರೆ, ಮೊಬೈಲ್‌ನಲ್ಲೇ ಆನ್‌ಲೈನ್ ಶಾಪ್‌ ತೆರೆಯಬಹುದು. ಇ ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ನಿಮ್ಮ ಉತ್ಪನ್ನಗಳ ಫೋಟೋ ಹಾಕಿ, ಗ್ರಾಹಕರಿಂದ ಆರ್ಡರ್ ತಗೊಂಡು, ವಸ್ತುಗಳನ್ನು ರವಾನಿಸುವ ಎಲ್ಲ ಕೆಲಸಗಳನ್ನು ಮೊಬೈಲ್‌ನಲ್ಲೇ ನಿರ್ವಹಿಸಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವ್ಯವಹಾರ
ವ್ಯಾಪಾರ ಕಲ್ಪನೆ

Latest Videos
Recommended Stories
Recommended image1
10 ಲಕ್ಷದ FD ಅಥವಾ 10 ಸಾವಿರದ RD? ಯಾವುದು ಹೆಚ್ಚು ಆದಾಯ ನೀಡುತ್ತದೆ? ಲೆಕ್ಕಾಚಾರ ಇಲ್ಲಿದೆ!
Recommended image2
₹75 ಲಕ್ಷ ಸಂಬಳ ತೊರೆದು ಉದ್ಯಮಕ್ಕೆ ಧುಮುಕಿದ ಮಹಿಳೆ; ChatGPT ಕೊಟ್ಟ ಶಾಕ್‌ನಿಂದ ಹೊರಬಂದ ಕಥೆ!
Recommended image3
ಒಂದೇ ಎಕರೆ ಜಮೀನು, ದಿನಕ್ಕೆ ₹12 ಸಾವಿರ ಆದಾಯ; ಈ ರೈತನ ಹೊಸ ಕೃಷಿ ಮಾದರಿ ವೈರಲ್..!
Related Stories
Recommended image1
Business Idea: ಕಡಿಮೆ ಬಂಡವಾಳ, ಅಧಿಕ ಆದಾಯ.. ಎಂದಿಗೂ ಲಾಸ್‌ ಆಗದ ವ್ಯವಹಾರಗಳಿವು!
Recommended image2
Business Idea ಹೊಸ ಬಿಸಿನೆಸ್ ಶುರು ಮಾಡುವ ಪ್ಲಾನ್ ಇದೆಯೇ? ಯಶಸ್ವಿ ಉದ್ಯಮಿಯಾಗಲು ಈ 3 ಸೂತ್ರಗಳನ್ನು ತಪ್ಪದೇ ಪಾಲಿಸಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved