ಸತತ ಎರಡನೇ ದಿನವೂ ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಬೆಂಗಳೂರಲ್ಲಿಂದು ಚಿನ್ನ-ಬೆಳ್ಳಿ ರೇಟ್ ಎಷ್ಟು?
ಬೆಂಗಳೂರು: ಒಂದು ಕಡೆ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ಯುದ್ದದ ಕಾವು ಜೋರಾಗುತ್ತಲೇ ಇದೆ. ಹೀಗಿರುವಾಗಲೇ ಚಿನ್ನದ ಬೆಲೆಯಲ್ಲೂ ಏರಿಳಿತಗಳು ಮುಂದುವರೆದಿದೆ. ಇದೀಗ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್
ಯುಗಾದಿ, ರಂಜಾನ್ ಹಾಗೂ ಮದುವೆ ಶುಭ ಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಕಳೆದೆರಡು ದಿನಗಳಲ್ಲಿ ಇಳಿಕೆಯಾಗಿರುವುದು ಆಭರಣ ಖರೀದಿಸುವ ಗ್ರಾಹಕರ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಕುಸಿತ
ಒಂದು ಕಡೆ ಇರಾನ್-ಇಸ್ರೇಲ್ ಯುದ್ದದ ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುವ ಸಾಧ್ಯತೆಯಿದೆ ಎಂದೆಲ್ಲಾ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಇದೀಗ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 980 ರುಪಾಯಿ ಕುಸಿತ
ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ನಿನ್ನೆ 1090 ರುಪಾಯಿ ಇಳಿಕೆ ಕಂಡಿತ್ತು. ಇದೀಗ ಇಂದು ಕೂಡಾ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು ಅಂದರೆ ಮಾರ್ಚ್ 13ರಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 980 ರುಪಾಯಿ ಇಳಿಕೆಯಾಗಿದ್ದು, ಒಂದು ಗ್ರಾಮ್‌ಗೆ 16,124 ರುಪಾಯಿಗೆ ಬಂದು ನಿಂತಿದೆ.
22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 900 ರುಪಾಯಿ ಕುಸಿತ
ಇನ್ನು ಆಭರಣ ಚಿನ್ನವಾದ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. ನಿನ್ನೆ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಒಂದು ಸಾವಿರ ರುಪಾಯಿ ಇಳಿಕೆ ಕಂಡಿತ್ತು. ಇದೀಗ ಮಾರ್ಚ್ 13ರ ಇಂದು 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 900 ರುಪಾಯಿ ಇಳಿಕೆ ಕಂಡಿದ್ದು, ಪ್ರತಿ ಗ್ರಾಮ್‌ಗೆ 14,780 ರುಪಾಯಿಗಳಾಗಿವೆ.
ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಇನ್ನು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದ್ದರೂ ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 10 ಸಾವಿರ ರುಪಾಯಿ ಇಳಿಕೆ ಕಂಡಿತ್ತು. ಇದು ಕೂಡಾ ಅದೇ ಬೆಲೆ ಸ್ಥಿರವಾಗಿದ್ದು, ಮಾರ್ಚ್ 13ರಂದು ಒಂದು ಕೆಜಿ ಬೆಳ್ಳಿ ಬೆಲೆ 2,80,000 ರುಪಾಯಿಗಳಾಗಿದೆ.
ಸಾಮಾನ್ಯ ವರ್ಗದ ಜನಕ್ಕೆ ನೆಮ್ಮದಿಯ ನಿಟ್ಟುಸಿರು
ಒಟ್ಟಿನಲ್ಲಿ ಚಿನ್ನದ ಬೆಲೆಯಲ್ಲಿ ಕಳೆದೆರಡು ದಿನಗಳಿಂದ ಇಳಿಕೆ ಕಂಡಿರುವುದು ಸಾಮಾನ್ಯ ವರ್ಗದ ಚಿನ್ನದ ಗ್ರಾಹಕರು ಕೊಂಚ ನಿರಾಳರನ್ನಾಗಿಸಿದೆ. ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಾಣಲಿದೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

