ಸಾರ್ವಕಾಲಿಕ ದಾಖಲೆ 1.40 ಲಕ್ಷ ರೂ ತಲುಪಿದ ಚಿನ್ನದ ಬೆಲೆ, ನಾಲ್ಕೇ ದಿನದಲ್ಲಿ ಹೊಸ ಇತಿಹಾಸ?
ಸಾರ್ವಕಾಲಿಕ ದಾಖಲೆ 1.40 ಲಕ್ಷ ರೂ ತಲುಪಿದ ಚಿನ್ನದ ಬೆಲೆ, ನಾಲ್ಕೇ ದಿನದಲ್ಲಿ ಹೊಸ ಇತಿಹಾಸ? ತಜ್ಞರು ಹೇಳುವುದೇನು? ಈ ವರ್ಷದ ಕೊನೆಯ ನಾಲ್ಕು ದಿನದಲ್ಲಿ ಬಂಗಾರದ ದರ ಏರಿಕೆಯಾಗುತ್ತಾ ಅಥವಾ ಇಳಿಕೆಯಾಗುತ್ತಾ?

ಬಂಗಾರ ಬಲು ದುಬಾರಿ
2025ಕ್ಕೆ ಗುಡ್ ಬೈ ಹೇಳಲು ಎಲ್ಲರು ಸಜ್ಜಾಗಿದ್ದಾರೆ. ಇದೇ ವೇಳೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ತಯಾರಿಗಳು ನಡೆಯುತ್ತಿದೆ. 2025ರಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಲೇ ಹೋಗಿದೆ. ಇದೀಗ ವರ್ಷದ ಅಂತ್ಯದ ದಿನಗಳಲ್ಲೂ ಬಂಗಾರ ಬಲು ದುಬಾರಿಯಾಗುತ್ತಿದೆ. ಇಂದು ಸಾರ್ವಕಾಲಿಕ ದಾಖಲೆ ಬರೆದಿದೆ . ಇದೀಗ ಚಿನ್ನದ ಬೆಲೆ 1.40 ಲಕ್ಷ ರೂಪಾಯಿಗೆ ತಲುಪಿದೆ.
10 ಗ್ರಾಂ ಚಿನ್ನಕ್ಕೆ 1.40 ಲಕ್ಷ ರೂ
ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಬಂಗಾರ ದಾಖಲೆ ನಿರ್ಮಿಸಿದೆ. 10 ಗ್ರಾಂ 25 ಕ್ಯಾರಟ್ ಚಿನ್ನದ ಬೆಲೆ 1,40,465 ರೂಪಾಯಿಗೆ ಏರಿಕೆಯಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಶುಕ್ರವಾರದ ಅಂತ್ಯದಲ್ಲಿನ ವಹಿವಾಟಿನಲ್ಲಿ ಇದೇ ಚಿನ್ನದ ದರ 1,39,940 ರೂಪಾಯಿ ಆಗಿತ್ತು. ಇದೀಗ ಮತ್ತಷ್ಟು ದುಬಾರಿಯಾಗಿದೆ.
ನಾಲ್ಕು ದಿನದಲ್ಲಿ ಏನಾಗಲಿದೆ ಬಂಗಾರ ದರ
2025ರ ವರ್ಷದ ಕೊನಯೆ ನಾಲ್ಕು ದಿನಗಳಲ್ಲಿ ಬಂಗಾರ ಬೆಲೆ ಏರಿಕೆಯಾಗುತ್ತಾ, ಇಳಿಕೆಯಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ. ತಜ್ಞರ ಪ್ರಕಾರ ಬಂಗಾರ ಮತ್ತಷ್ಟು ದುಬಾರಿಯಾಗಲಿದೆ. 2025ರ ಅಂತ್ಯದ ವೇಳೆಗೆ ಅಂದರೆ ನಾಲ್ಕು ದಿನಗಳಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,45,000 ರೂಪಾಯಿಗೆ ಏರಿಕೆಯಾದರೂ ಅಚ್ಚರಿಯಿಲ್ಲ ಎಂದಿದ್ದಾರೆ.
2026ರ ಆರಂಭದಲ್ಲೇ 1.50 ಲಕ್ಷಕ್ಕೆ ಏರಿಕೆ ಭವಿಷ್ಯ
2026ರ ಆರಂಭಿಕ ತಿಂಗಳುಗಳಲ್ಲಿ ಬಂಗಾರ ಮತ್ತಷ್ಟು ದುಬಾರಿಯಾಗಲಿದೆ ಎಂದಿದ್ದಾರೆ. ಭಾರತದ ಬಜೆಟ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುತ್ತಿರುವ ಬದಲಾವಣೆಗಳಿಂದ ಬಂಗಾರ ಮತ್ತಷ್ಟು ದುಬಾರಿಯಾಗಲಿದೆ. ಹೀಗಾಗಿ ಕೆಲ ತಿಂಗಳಲ್ಲೇ ಚಿನ್ನ 10 ಗ್ರಾಂಗೆ 1.50 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸೋಮವಾರ ಅಥವಾ ಮಂಗಳವಾರ ಮ್ಯಾಜಿಕ್
ಗೋಲ್ಡ್ ಟ್ರೇಡಿಂಗ್ ನಡೆಯುವ ಸೋಮವಾರ ಹಾಗೂ ಮಂಗಳವಾರ ದಾಖಲೆ ಬರೆಯುವ ಸಾಧ್ಯತೆ ಇದೆ ಎಂದು ಯಾ ವೆಲ್ತ್ ಹೂಡಿಕೆ ತಜ್ಞ ಅನೂಜ್ ಗುಪ್ತಾ ಹೇಳಿದ್ದಾರೆ. ಈ ಎರಡು ದಿನದಲ್ಲಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ 10 ಗ್ರಾಂಗೆ 1.50 ಲಕ್ಷ ರೂಪಾಯಿ ದರದಲ್ಲಿ ವ್ಯವಹಾರ ನಡೆದರೂ ಅಚ್ಚರಿಯಿಲ್ಲ ಎಂದಿದ್ದಾರೆ.
ಸೋಮವಾರ ಅಥವಾ ಮಂಗಳವಾರ ಮ್ಯಾಜಿಕ್
ಇಳಿಕೆಯಾಗಲ್ಲ, ಏರಿಕೆ ಮಾತ್ರ
ತಜ್ಞರ ಪ್ರಕಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಲ್ಲ ಎಂದಿದ್ದಾರೆ. ಸಣ್ಣ ಇಳಿಕೆ, ಮಾರುಕಟ್ಟೆ ಏರಿಳಿತಗಳು ಚಿನ್ನದ ದರದ ಮೇಲೆ ಪರಿಣಾಮ ಬೀರಬಹುದು. ಆದರೆ ಇದು ಚಿನ್ನದ ದರದಲ್ಲಿ ಬಾರಿ ಇಳಿಕೆ ಮಾಡುವುದಿಲ್ಲ. ಆದರೆ ನಿಧಾನಗತಿಯಲ್ಲಿ ಏರಿಕೆ, ಅಥವಾ ಏಕಾಏಕಿ ಏರಿಕೆ ಶಾಕ್ ನೀಡಬಹುದು ಎಂದಿದ್ದಾರೆ.
ಇಳಿಕೆಯಾಗಲ್ಲ, ಏರಿಕೆ ಮಾತ್ರ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

