MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮನೆಯಲ್ಲಿ ಹಣ ಇದ್ರೆ 84% ಟ್ಯಾಕ್ಸ್​ ಕಟ್ಬೇಕಾ? ಬ್ಯಾಂಕ್​ನಿಂದ ಕ್ಯಾಷ್​ ಡ್ರಾ ಮಾಡಿದ್ರೆ ಏನಾಗತ್ತೆ? ಇಲ್ಲಿದೆ ಫುಲ್ ಡಿಟೇಲ್ಸ್​

ಮನೆಯಲ್ಲಿ ಹಣ ಇದ್ರೆ 84% ಟ್ಯಾಕ್ಸ್​ ಕಟ್ಬೇಕಾ? ಬ್ಯಾಂಕ್​ನಿಂದ ಕ್ಯಾಷ್​ ಡ್ರಾ ಮಾಡಿದ್ರೆ ಏನಾಗತ್ತೆ? ಇಲ್ಲಿದೆ ಫುಲ್ ಡಿಟೇಲ್ಸ್​

ಮನೆಯಲ್ಲಿ ನಗದು ಇಟ್ಟುಕೊಂಡರೆ 84% ತೆರಿಗೆ ಕಟ್ಟಬೇಕೆಂಬ ಸುದ್ದಿ ನಿಜನಾ? ಬ್ಯಾಂಕ್​ನಿಂದ ದೊಡ್ಡ ಮಟ್ಟದ ಕ್ಯಾಷ್​ ಪಡೆದರೆ ಏನಾಗುತ್ತದೆ? ಆಸ್ತಿ ಮಾರಾಟ ಮಾಡುವ ಸಮಯದಲ್ಲಿ ಏನು ಮಾಡಬೇಕು? ಎಲ್ಲಾ ಫುಲ್​ ಡಿಟೇಲ್ಸ್​ ಇದರಲ್ಲಿ ನೀಡಲಾಗಿದೆ.

3 Min read
Author : Suchethana D
Published : Feb 03 2026, 12:35 PM IST
Share this Photo Gallery
  • FB
  • TW
  • Linkdin
  • Whatsapp
17
ಬಜೆಟ್​ ಬಳಿ ಏನಿದು ಚರ್ಚೆ?
Image Credit : ANI

ಬಜೆಟ್​ ಬಳಿ ಏನಿದು ಚರ್ಚೆ?

ಮೊನ್ನೆಯಷ್ಟೇ ಕೇಂದ್ರ ಬಜೆಟ್​ ಮಂಡನೆಯಾಗಿದೆ. ಬಜೆಟ್​ ಮಂಡನೆ ಬಳಿಕ ಇನ್ನಿಲ್ಲದಂತೆ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿಯೂ ಕೆಲವು ಕೆಟ್ಟ ಮನಸ್ಥಿತಿಯರು, ಸೋಷಿಯಲ್​ ಮೀಡಿಯಾದಲ್ಲಿ ಗಾಳಿಸುದ್ದಿಯನ್ನು ಹರಡುವ ಮೂಲಕ, ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸುವುದು ಮಾಮೂಲು ಆಗಿಬಿಟ್ಟಿದೆ. ತಲೆಬುಡ ಇಲ್ಲದ ಇಂಥ ಸುದ್ದಿಗಳನ್ನು ಶೇರ್​ ಮಾಡಿ ಮಜಾ ನೋಡುವ ಇಲ್ಲವೇ ಇದೇ ನಿಜ ಎಂದು ನಂಬಿ, ಭೀತಿಗೆ ಒಳಗಾಗುವ ದೊಡ್ಡ ವರ್ಗವೇ ಇದೆ. ಆದ್ದರಿಂದ ತೆರಿಗೆ ಕುರಿತು ಸ್ಪಷ್ಟ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

27
 84% ತೆರಿಗೆ ಕಟ್ಟಬೇಕಾ?
Image Credit : Social Media

84% ತೆರಿಗೆ ಕಟ್ಟಬೇಕಾ?

ಈಗ ವೈರಲ್​ ಆಗ್ತಿರೋ ಅತಿದೊಡ್ಡ ಸುದ್ದಿ ಎಂದರೆ ಮನೆಯಲ್ಲಿ ಕ್ಯಾಷ್​ ಇಟ್ಟುಕೊಂಡರೆ, ಅದರ ಮೇಲೆ ಶೇಕಡಾ 84ರಷ್ಟು ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕೊಡಬೇಕು ಎನ್ನುವುದು. ಆದರೆ, ಇದು ಶುದ್ಧ ಸುಳ್ಳು ಸುದ್ದಿ. ಅಷ್ಟಕ್ಕೂ ಇಂಥದ್ದೊಂದು ಕಾನೂನು ಆದಾಯ ತೆರಿಗೆ ಇಲಾಖೆಯ ನಿಯಮದಲ್ಲಿ ಇದ್ದದ್ದು ಹೌದು. ಅದು ಯಾವಾಗ ಎಂದರೆ, ಮನೆಯಲ್ಲಿ ಇಟ್ಟುಕೊಳ್ಳುವ ಲಕ್ಷ ಲಕ್ಷಗಟ್ಟಲೆ ಕ್ಯಾಷ್​ಗೆ ಅರ್ಥಾತ್​ ನಗದು ಹಣಕ್ಕೆ ನಿಮ್ಮ ಬಳಿ ಸೂಕ್ತ ದಾಖಲೆ ಇಲ್ಲದೇ ಹೋದರೆ ಮಾತ್ರ. ಒಂದು ವೇಳೆ ಇಂಥ ಸಂದರ್ಭದಲ್ಲಿ ಐಟಿ ರೇಡ್​ ಆದರೆ ನಿಮ್ಮ ಮನೆಯಲ್ಲಿ ಇರುವ ಕೋಟಿಗಟ್ಟಲೆ ಇಲ್ಲವೇ ಲಕ್ಷಗಟ್ಟಲೆ ಕ್ಯಾಷ್​ಗೆ ಮೂಲ ಯಾವುದು ಎಂದು ಕೇಳುತ್ತಾರೆ. ದುಡಿದು ತಿನ್ನುವ ಮಂದಿಯ ಮನೆಯಲ್ಲಿ ಇಷ್ಟೊಂದು ಕ್ಯಾಷ್​ ಇರಲು ಸಾಧ್ಯವೇ ಇಲ್ಲ ಅಲ್ಲವೆ? ಇಷ್ಟು ಕ್ಯಾಷ್​ ಇಟ್ಟುಕೊಂಡಿದ್ದಾರೆ ಎಂದರೆ ಅದು ಅಕ್ರಮದಿಂದ ಸಂಪಾದನೆ ಮಾಡಿರೋ ಹಣ ಮಾತ್ರ. ಆದ್ದರಿಂದಲೇ, ಆಗ ಆ ಹಣದ ಶೇಕಡಾ 84ರಷ್ಟು ತೆರಿಗೆಯನ್ನು ಆದಾಯ ತೆರಿಗೆ ಇಲಾಖೆಗೆ ಕಟ್ಟಬೇಕು ಅಷ್ಟೇ. ನೀವು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ಯಾವುದೇ ರೂಪದಲ್ಲಿ ಮನೆಯಲ್ಲಿ ಇಟ್ಟುಕೊಂಡರೂ ಹೆದರುವ ಅಗತ್ಯವೇ ಇರುವುದಿಲ್ಲ. ಒಂದು ವೇಳೆ ಯಾವುದೇ ದಾಳಿ ನಡೆದರೂ ನೀವು ಆ ಆದಾಯದ ಮೂಲ ತೋರಿಸಿದ್ರೆ ಆಯ್ತು ಅಷ್ಟೇ. ಆದ್ದರಿಂದ ಸಜ್ಜನರು ಇಂಥ ಸುಳ್ಳು ಸುದ್ದಿಗೆ ಹೆದರುವ ಅಗತ್ಯವಿಲ್ಲ.

Related Articles

Related image1
BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?
Related image2
Brahmins Happalam: ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸ್ತಿದೆ ಬ್ರಾಹ್ಮಣರ ಹಪ್ಪಳ: ಏನಪ್ಪಾ ಈ ಪರಿ ಬಿಸಿಬಿಸಿ ಚರ್ಚೆ?
37
ಅಕ್ರಮ ಮಾರ್ಗದ ಹಣ
Image Credit : Getty

ಅಕ್ರಮ ಮಾರ್ಗದ ಹಣ

ಅಷ್ಟಕ್ಕೂ ಇದಾಗಲೇ ಮಾಧ್ಯಮಗಳಲ್ಲಿ ಕೆಲವು ಸುದ್ದಿಗಳನ್ನು ನೀವು ಆಗಾಗ ಕೇಳುತ್ತಲೇ ಇರುತ್ತೀರಿ. ಐಟಿ ರೇಡ್​ ಆದಾಗ ಕೋಟ್ಯಂತರ ರೂಪಾಯಿ ಕ್ಯಾಷ್​ ಸಿಗುವುದು, ಜಮೀನೇ ಇಲ್ಲದವ ತಾವು ರೈತ ಎಂದು ಹೇಳಿಕೊಂಡು ಲಕ್ಷಾಂತರ ರೂಪಾಯಿ ಕ್ಯಾಷ್​ ಮನೆಯಲ್ಲಿ ಅಡಗಿಸಿ ಇಟ್ಟುಕೊಂಡು ಕೊನೆಗೆ ಅದರ ಮೂಲವನ್ನು ತೋರಿಸಲಾಗದೇ ಇಲ್ಲಸಲ್ಲದ್ದನ್ನು ಮಾಡಿಕೊಂಡು ಆದಾಯ ತೆರಿಗೆ ಇಲಾಖೆಯ ಮೇಲೆ ಗೂಬೆ ಗೂಡಿಸುವ ಯತ್ನ. ಆದ್ದರಿಂದ ಸರಿಯಾಗಿ ಸಂಪಾದನೆ ಮಾಡಿದರೆ, ನೀವು ಬಿಲೇನಿಯರ್​ ಆಗಿದ್ದರೂ ಇದಕ್ಕೆ ಹೆದರುವ ಅಗತ್ಯವಿಲ್ಲ.

47
10 ಲಕ್ಷಕ್ಕಿಂತ ಹೆಚ್ಚು ಬ್ಯಾಂಕ್​ ವಹಿವಾಟು
Image Credit : Asianet News

10 ಲಕ್ಷಕ್ಕಿಂತ ಹೆಚ್ಚು ಬ್ಯಾಂಕ್​ ವಹಿವಾಟು

ಆದರೆ, ನೀವೇನಾದರೂ ಒಂದು ವರ್ಷಕ್ಕೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಕ್ಯಾಷ್​ ಅನ್ನು ಬ್ಯಾಂಕ್​ನಿಂದ ಡ್ರಾ ಮಾಡಿದ್ದೇ ಆದಲ್ಲಿ, ನೀವು ಎಚ್ಚರಿಕೆಯಿಂದ ಇರುವುದು ಅಗತ್ಯ. ಹಾಗೆಂದು ಹೆದರುವ ಅಗತ್ಯವಿಲ್ಲ. ಮನೆ ಕಟ್ಟಲು, ಮಕ್ಕಳ ಮದುವೆ ಮಾಡಿಸಲು, ಶಿಕ್ಷಣಕ್ಕೆ... ಹೀಗೆ ಯಾವ್ಯಾವುದೋ ಕಾರಣಕ್ಕೆ ಕ್ಯಾಷ್​ ಡ್ರಾ ಮಾಡಿರುತ್ತೀರಿ ಎಂದುಕೊಳ್ಳಿ. ಆ ಸಮಯದಲ್ಲಿ ಅದು 10 ಲಕ್ಷ ಮೀರಿ ಹೋದ್ರೆ ಬ್ಯಾಂಕ್​ನವರು ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತಾರೆ. ಆ ಸಮಯದಲ್ಲಿ ಅಧಿಕಾರಿಗಳಿಗೆ ಅಕ್ರಮದ ವಾಸನೆ ಬಂದರೆ ನಿಮ್ಮನ್ನು ಪರೀಕ್ಷೆ ಮಾಡುತ್ತಾರೆ, ಪ್ರಶ್ನೆ ಕೇಳುತ್ತಾರೆ. ನೀವು ದುಡಿದ ದುಡ್ಡೇ ಅದಾಗಿದ್ದರೆ ಅಥವಾ ಯಾರಾದರೂ ಒಳ್ಳೆಯ ಮಾರ್ಗದಿಂದ ನಿಮಗೆ ಕೊಟ್ಟಿರೋ ದುಡ್ಡು ಆಗಿದ್ದರೆ, ಭಯ ಪಡುವ ಅಗತ್ಯವೇ ಇಲ್ಲ ಬಿಡಿ.

57
20 ಲಕ್ಷ ಕ್ಯಾಷ್​ ಡ್ರಾ
Image Credit : Asianet News

20 ಲಕ್ಷ ಕ್ಯಾಷ್​ ಡ್ರಾ

ಒಂದು ವೇಳೆ ನೀವು ಬ್ಯಾಂಕ್​ನಿಂದ 20 ಲಕ್ಷಕ್ಕೂ ಅಧಿಕ ಕ್ಯಾಷ್​ ಡ್ರಾ ಮಾಡಿದರೆ, ಟಿಡಿಎಸ್​ (Tax Deducted at Source) ಕಡಿತಗೊಳ್ಳುತ್ತದೆ. ಇಷ್ಟು ದೊಡ್ಡ ಪ್ರಮಾಣದ ನಗದನ್ನು ಏಕೆ ವಿತ್​ಡ್ರಾ ಮಾಡಿದ್ದೀರಿ, ಇದರ ಮೂಲ ಏನು ಎನ್ನುವುದನ್ನು ಪತ್ತೆ ಹಚ್ಚುವ ಸಲುವಾಗಿ ಇದನ್ನು ಮಾಡಲಾಗುತ್ತದೆ. ಆ ಸಮಯದಲ್ಲಿಯೂ ಸಕ್ರಮವಾಗಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ.

67
ಆಸ್ತಿ ಮಾರುವಾಗ ಏನಿದೆ ನಿಯಮ?
Image Credit : Asianet News

ಆಸ್ತಿ ಮಾರುವಾಗ ಏನಿದೆ ನಿಯಮ?

ನೀವು ನಿಮ್ಮ ಆಸ್ತಿಯನ್ನು ಮಾರುವ ಸಂದರ್ಭದಲ್ಲಿ ಒಂದೇ ದಿನ 20 ಸಾವಿರಕ್ಕಿಂತ ಹೆಚ್ಚು ಕ್ಯಾಷ್​ ಕೊಟ್ಟರೆ ಅದರ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. 2 ಲಕ್ಷ ವ್ಯವಹಾರವನ್ನು ಕ್ಯಾಷ್​ ಮೂಲಕವೇ ಮಾಡಿದರೆ, ನೀವು ಎಷ್ಟು ಹಣವನ್ನು ಕ್ಯಾಷ್​ ಮೂಲಕ ಮಾಡುತ್ತಿರೋ ಅಷ್ಟು ದಂಡ ಕೊಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆಗಿರುವ ವ್ಯವಹಾರಕ್ಕೆ ಹಣ ಕಟ್ಟಬೇಕಾಗಿಲ್ಲ ಎನ್ನುವುದು ನೆನಪಿನಲ್ಲಿ ಇರಲಿ.

77
 ಕ್ಯಾಷ್​ ಅಂದ್ರೆ ಡೇಂಜರ್​
Image Credit : Gemini AI

ಕ್ಯಾಷ್​ ಅಂದ್ರೆ ಡೇಂಜರ್​

ಅಷ್ಟಕ್ಕೂ ಎಲ್ಲಾ ಕಡೆ ಡಿಜಿಟಲ್ ಮಾಡಿರುವ ಕಾರಣವೇ ಅಕ್ರಮ ತಡೆಗಟ್ಟುವುದು. ಆದರೆ ಸರ್ಕಾರ ಚಾಪೆಯ ಕೆಳಗೆ ನುಸುಳಿದರೆ, ಅಕ್ರಮದಿಂದ ಹಣದ ವ್ಯವಹಾರ ಮಾಡುವವರು ರಂಗೋಲಿ ಕೆಳಗೆ ನುಸುಳುತ್ತಾರೆ. ಆದ್ದರಿಂದ ನೀವು ದುಡಿದ ಹಣಕ್ಕೆ ಮೂಲ ಇರಲಿ. ಯಾರು ಏನೇ ಹೇಳಿದರೂ ಕ್ಯಾಷ್​ ವ್ಯವಹಾರ ಕಡಿಮೆ ಮಾಡಿ. ದೊಡ್ಡ ಮೊತ್ತದ ಹಣದ ವ್ಯವಹಾರ ಡಿಜಿಟಲ್​ ಮೂಲಕವೇ ಇರಲಿ. ಹೀಗೆ ಮಾಡಿದ್ರೆ ಯಾವ ರೇಡೂ ಆಗಲ್ಲ. ತೆರಿಗೆ ಇಲಾಖೆಯ ಭಯವೂ ನಿಮಗೆ ಇರಲ್ಲ. ​

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ವ್ಯವಹಾರ
ನಿರ್ಮಲಾ ಸೀತಾರಾಮನ್
ಕೇಂದ್ರ ಸರ್ಕಾರ
ಭಾರತ ಸುದ್ದಿ
ತೆರಿಗೆ
ಆದಾಯ ತೆರಿಗೆ

Latest Videos
Recommended Stories
Recommended image1
Stock Market: 20 ವರ್ಷಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು ನಿಮ್ಮ ಹಣ ಎಷ್ಟಾಗುತ್ತಿತ್ತು ಗೊತ್ತಾ?
Recommended image2
ಇಂಡಿಯಾ-ಯುಎಸ್ ಟ್ರೇಡ್ ಡೀಲ್‌ನಿಂದ ಸೆನ್ಸೆಕ್ಸ್ ಭಾರೀ ಜಿಗಿತ, ನಾಗಾಲೋಟದಲ್ಲಿ 10 ಷೇರು
Recommended image3
Jeffrey Epstein: ವಿಶ್ವದ ಶ್ರೀಮಂತರಿಗೆ 'ಚಿಕ್ಕ ಹುಡುಗಿಯರ ಸಪ್ಲೈ ಮಾಡೋ ಬ್ರೋಕರ್' ಇವನೇ ನೋಡಿ! ಕೊನೆಗೆ ದುರಂತ ಅಂತ್ಯ
Related Stories
Recommended image1
BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?
Recommended image2
Brahmins Happalam: ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸ್ತಿದೆ ಬ್ರಾಹ್ಮಣರ ಹಪ್ಪಳ: ಏನಪ್ಪಾ ಈ ಪರಿ ಬಿಸಿಬಿಸಿ ಚರ್ಚೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved