ರಸ್ತೆಯ ಮಧ್ಯದಲ್ಲಿ ನೀತಾಗೆ ಪ್ರಪೋಸ್ ಮಾಡಿದ ಮುಕೇಶ್ ಅಂಬಾನಿ: ಇಲ್ಲಿದೆ ಕ್ರೇಜಿ ಲವ್‌ಸ್ಟೋರಿ!
ನೀತಾ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಮುಕೇಶ್ ಅಂಬಾನಿ ರಿಲಯನ್ಸ್ ಸಾಮ್ರಾಜ್ಯವನ್ನು ವಿಸ್ತರಿಸುವ ಕೆಲಸದಲ್ಲಿದ್ದರು.

ಭಾರತದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಪರಿಚಯ ಅಗತ್ಯವಿಲ್ಲ. ಉದ್ಯಮಿಯಾಗಿ, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಎಲ್ಲರಿಗೂ ಚಿರಪರಿಚಿತರು. ಅವರ ಪತ್ನಿ ನೀತಾ ಅಂಬಾನಿ ಕೂಡ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಜೋಡಿ ಮೊದಲ ಬಾರಿಗೆ ಹೇಗೆ ಭೇಟಿಯಾದರು? ಮುಕೇಶ್ ಅಂಬಾನಿ ಮೊದಲ ಬಾರಿಗೆ ಹೇಗೆ ಪ್ರಪೋಸ್ ಮಾಡಿದರು? ಅವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳೋಣ.
ನೀತಾ ಗುಜರಾತ್‌ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಬೆಳೆದರು. ಅವರು ಚಿಕ್ಕಂದಿನಿಂದಲೂ ಭರತನಾಟ್ಯದಲ್ಲಿ ತರಬೇತಿ ಪಡೆದರು. ಒಮ್ಮೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀತಾ ನೃತ್ಯ ಪ್ರದರ್ಶನ ನೀಡಿದರು. ಆ ಸಮಯದಲ್ಲಿ ವ್ಯಾಪಾರ ಉದ್ಯಮಿ ಧೀರೂಭಾಯ್ ಅಂಬಾನಿ ಅವರು ತಮ್ಮ ಪತ್ನಿ ಕೋಕಿಲಾಬೆನ್ ಅವರೊಂದಿಗೆ ಬಂದಿದ್ದರು. ನೀತಾ ಅವರ ನೃತ್ಯ ಧೀರೂಭಾಯ್ ಅಂಬಾನಿ ಮತ್ತು ಕೋಕಿಲಾಬೆನ್ ಅವರಿಗೆ ತುಂಬಾ ಇಷ್ಟವಾಯಿತು.
ತಕ್ಷಣ ತಮ್ಮ ಮಗ ಮುಕೇಶ್ ಅಂಬಾನಿಗೆ ನೀತಾ ಅವರನ್ನು ಮದುವೆ ಮಾಡಿಕೊಡಬೇಕೆಂದು ನಿರ್ಧರಿಸಿದರು. ಈ ವಿಷಯವನ್ನು ನೀತಾ ಅವರಿಗೆ ಫೋನ್ ಮಾಡಿ ತಿಳಿಸಿದರು. ಆದರೆ, ನೀತಾ ಯಾವುದೇ ಉತ್ತರ ನೀಡದೆ ಫೋನ್ ಇಟ್ಟರು. ಆಗ ನೀತಾ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಮುಖೇಶ್ ರಿಲಯನ್ಸ್ ಸಾಮ್ರಾಜ್ಯವನ್ನು ವಿಸ್ತರಿಸುವ ಕೆಲಸದಲ್ಲಿದ್ದರು. ಮೊದಲ ಬಾರಿಗೆ ಮುಕೇಶ್ ಅಂಬಾನಿ ಮತ್ತು ನೀತಾ ಭೇಟಿಯಾದಾಗಲೇ ಮುಖೇಕೇಶ್ ಅವರಿಗೆ ಪ್ರಪೋಸ್ ಮಾಡಿದರಂತೆ. ಅದು ಕೂಡ ಸಿನಿಮೀಯ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದು ವಿಶೇಷ. ಇಬ್ಬರೂ ಕಾರಿನಲ್ಲಿ ಮುಂಬೈನ ಪೆದ್ದರ್ ರಸ್ತೆಯತ್ತ ಹೋಗುತ್ತಿದ್ದಾಗ, ಅವರು ಹೋಗುತ್ತಿದ್ದ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದರು.
ಸಂಚಾರ ದಟ್ಟಣೆ ಕೂಡ ಉಂಟಾಯಿತು. ಆಗ ಮುಕೇಶ್ ತಮ್ಮ ಮನದ ಮಾತನ್ನು ಹೇಳಿದರು. ಆದರೆ, ಹಠಾತ್ ಪ್ರಪೋಸ್‌ಗೆ ನೀತಾ ಭಯಭೀತರಾದರಂತೆ. ಅವರು ಮೌನವಾಗಿದ್ದರಿಂದ, ಉತ್ತರ ಹೇಳುವವರೆಗೂ ಕಾರನ್ನು ಸ್ಟಾರ್ಟ್ ಮಾಡುವುದಿಲ್ಲ ಎಂದು ತಮಾಷೆಯಾಗಿ ಹೇಳಿದರು. ಇನ್ನು 1985ರಲ್ಲಿ, ಮುಕೇಶ್ ಮತ್ತು ನೀತಾ ವಿವಾಹವಾದರು, ಪ್ರೀತಿ, ಕುಟುಂಬ ಮತ್ತು ಸಾಮಾನ್ಯ ಆಕಾಂಕ್ಷೆಗಳ ಪ್ರಯಾಣವನ್ನು ಪ್ರಾರಂಭಿಸಿದರು. ವರ್ಷಗಳಲ್ಲಿ, ಅವರು ಯಶಸ್ವಿ ಸಾಮ್ರಾಜ್ಯವನ್ನು ಮಾತ್ರವಲ್ಲದೆ, ತಮ್ಮ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ಅವರೊಂದಿಗೆ ಬಲವಾದ ಕುಟುಂಬವನ್ನೂ ನಿರ್ಮಿಸಿದ್ದಾರೆ.
ಪ್ರತಿ ಸವಾಲಿನಲ್ಲೂ ತನ್ನ ಜೊತೆ ನಿಂತಿದ್ದಕ್ಕಾಗಿ ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ಆಗಾಗ್ಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅವರು ವಿಶ್ವದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದನ್ನು ನಡೆಸುತ್ತಿರುವಾಗ, ನೀತಾ ಅಂಬಾನಿ ದಾನ, ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ.