ತೆಂಗಿನ ಚಿಪ್ಪಿನ ವ್ಯಾಪಾರ: ಕಡಿಮೆ ಹೂಡಿಕೆ, ಲಕ್ಷ ಲಕ್ಷ ಆದಾಯ, ಹಣದ ಹೊಳೆಯ ವ್ಯವಹಾರ
ವ್ಯಾಪಾರ ಶುರು ಮಾಡ್ಬೇಕು ಅಂತ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಗೆಲ್ಲೋದು ಕೆಲವರು ಮಾತ್ರ. ಗೆಲ್ಲಬೇಕು ಅಂದ್ರೆ ಹೊಸತನಕ್ಕೆ ಮನಸ್ಸು ಮಾಡಬೇಕು. ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ದುಡಿಯೋ ಒಂದು ಸೂಪರ್ ಐಡಿಯಾ ಇಲ್ಲಿದೆ ನೋಡಿ.

ತೆಂಗಿನ ಚಿಪ್ಪಿನ ವ್ಯಾಪಾರ
ತೆಂಗಿನ ಚಿಪ್ಪು ಅಂದ್ರೆ ತ್ಯಾಜ್ಯ ಅಂತ ತಿಳ್ಕೊಂಡಿದ್ದೀವಿ. ಆದ್ರೆ ಅದ್ರಲ್ಲೂ ದುಡ್ಡಿದೆ. ಪರಿಸರ ಸ್ನೇಹಿ ಈ ವ್ಯಾಪಾರಕ್ಕೆ ಹೆಚ್ಚು ಹೂಡಿಕೆ ಬೇಕಾಗಿಲ್ಲ. ಚಿಪ್ಪಿನಿಂದ ಏನು ಮಾಡೋದು? ಹೇಗೆ ಶುರು ಮಾಡೋದು? ಎಷ್ಟು ಲಾಭ ಬರುತ್ತೆ? ಎಲ್ಲಾ ಇಲ್ಲಿದೆ.
ಚಿಪ್ಪಿನಿಂದ ಏನು ಮಾಡೋದು?
ಚಿಪ್ಪಿನಿಂದ ಕರಕುಶಲ, ಅಲಂಕಾರಿಕ ವಸ್ತುಗಳು, ಊದಿನಕಡ್ಡಿ ಪುಡಿ, ಬಟ್ಟಲು, ಲೋಟ, ಚಮಚ ಮುಂತಾದವುಗಳನ್ನು ತಯಾರಿಸಬಹುದು. ಇವುಗಳಿಗೆ ಭಾರೀ ಬೇಡಿಕೆ ಇದೆ.
ವ್ಯಾಪಾರ ಹೇಗೆ ಶುರು ಮಾಡೋದು?
ಮೊದಲು ಬೇಡಿಕೆ ಇರೋ ವಸ್ತುಗಳ ಬಗ್ಗೆ ತಿಳ್ಕೊಳ್ಳಿ. ಹೋಟೆಲ್, ದೇವಸ್ಥಾನಗಳಲ್ಲಿ ಚಿಪ್ಪು ಸಿಗುತ್ತೆ. ಯಂತ್ರಗಳು ಬೇಕಾಗುತ್ತೆ. MSME, GST, ಪರವಾನಗಿ ಪಡೆಯಬೇಕು.
ಎಷ್ಟು ಹೂಡಿಕೆ ಬೇಕು?
ಯಂತ್ರಗಳಿಗೆ 50 ಸಾವಿರದಿಂದ 1 ಲಕ್ಷ, ಚಿಪ್ಪಿಗೆ 10 ಸಾವಿರ, ಪ್ಯಾಕಿಂಗ್ ಮತ್ತು ಸಾಗಾಣಿಕೆಗೆ 10 ಸಾವಿರ ಹೀಗೆ ಒಟ್ಟು 2 ಲಕ್ಷದ ಒಳಗೆ ವ್ಯಾಪಾರ ಶುರು ಮಾಡಬಹುದು.
ಲಾಭ ಹೇಗಿರುತ್ತೆ?
ಚಿಪ್ಪಿನ ವಸ್ತುಗಳಿಗೆ ಈಗ ಭಾರೀ ಬೇಡಿಕೆ. ಅಮೆಜಾನ್, ಇಂಡಿಯಾಮಾರ್ಟ್‌ನಲ್ಲಿ ಆನ್‌ಲೈನ್‌ನಲ್ಲೂ ಮಾರಬಹುದು. ಸೋಶಿಯಲ್ ಮೀಡಿಯಾದಲ್ಲೂ ಪ್ರಚಾರ ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

