ಬಟ್ಟೆ ರಿಪೇರಿ ಕಷ್ಟ ಬಟ್ಟೆ ಹರಿದವರಿಗೇ ಗೊತ್ತು. ತೋಳು ಸೇರಿಸ್ಬೇಕು, ಪ್ಯಾಚ್ ವರ್ಕ್ ಮಾಡ್ಬೇಕು ಅಂದ್ರೆ ಒಬ್ಬೇ ಒಬ್ಬ ಟೈಲರ್ ಸಿಗಲ್ಲ. ಇದನ್ನೇ ಬ್ಯುಸಿನೆಸ್ ಮಾಡ್ಕೊಂಡ ವ್ಯಕ್ತಿಯೊಬ್ಬರು ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ. 

ರೆಡಿಮೇಡ್ ಕುರ್ತಾ (Readymade Kurta) ಇರಲಿ, ಡೇಲಿ ಧರಿಸುವ ನೈಟಿ ಇರಲಿ, ಹೊಲಿಗೆ (Stitching) ಬಿಚ್ಚಿದ್ರೆ ಅದ್ರ ರಿಪೇರಿಗೆ ಟೈಲರ್ (Repair Tailor) ಬಳಿ ಹೋಗ್ಬೇಕು. ಎಲ್ಲರ ಮನೆಯಲ್ಲಿ ಹೊಲಿಗೆ ಮಶಿನ್ ಇರೋಕೆ ಸಾಧ್ಯ ಇಲ್ಲ. ಎಲ್ಲರಿಗೂ ಹೊಲಿಗೆ ಬರೋದೂ ಇಲ್ಲ. ಅಲ್ಪಸ್ವಲ್ಪ ಕಲಿತಿದ್ರೂ ಸಮಯದ ಅಭಾವ ಇರುತ್ತೆ. ಹಾಗಂತ ಸಣ್ಣಪುಟ್ಟ ರಿಪೇರಿ, ಫಿಟ್ಟಿಂಗ್ ಅಂತ ಟೈಲರ್ ಬಳಿ ಹೋದ್ರೆ ಅವರು ಕತ್ತು ಅಲ್ಲಾಡಿಸ್ತಾರೆ. ನಾವು ಬ್ಲೌಸ್ (Blouse) ಹೊಲಿತೇವೆ, ನಾವು ಡ್ರೆಸ್ ಸ್ಟಿಚ್ ಮಾಡ್ತೇವೆ, ಈ ಸಣ್ಣಪುಟ್ಟ ರಿಪೇರಿ ಮಾಡಲ್ಲ ಅಂತಾರೆ. ರಿಪೇರಿ ಯಾರು ಮಾಡ್ತಾರೆ ಅಂತ ಅವರನ್ನು ಹುಡುಕಿ, ಅವರಿಗೆ ಬಟ್ಟೆ ಕೊಟ್ಟು ಬಂದ್ಮೇಲೆ ಅದೇ ದಿನ ಬಟ್ಟೆ ವಾಪಸ್ ಸಿಗೋ ಛಾನ್ಸೆ ಇಲ್ಲ. ನಾಳೆ ಬನ್ನಿ, ನಾಡಿದ್ದು ಬನ್ನಿ ಅಂತ ನಾವು ಅಲೆಯೋದು ಕಾಮನ್. ರಿಪೇರಿ ಟೈಲರ್ ಹುಡುಕೋದೆ ಕಷ್ಟವಾಗಿರುವ ಈ ಕಾಲದಲ್ಲಿ ನೀವೂ ವಿನೂತನ ಬ್ಯುಸಿನೆಸ್ ಶುರು ಮಾಡ್ಬಹುದು. ಆಂಧ್ರದ ವ್ಯಕ್ತಿಯೊಬ್ಬರು ಮಾಡ್ತಿರುವ ಮೊಬೈಲ್ ಟೈಲರಿಂಗ್ ಮಾದರಿ ಅನುಸರಿಸಿ ನೀವೂ ಹಣ ಸಂಪಾದನೆ ಮಾಡ್ಬಹುದು. ಹೊಲಿಗೆ ಅಂಗಡಿ ಬಾಡಿಗೆ ನೀಡೋದಿಲ್ಲ, ಕಸ್ಟಮರ್ ನಿಮ್ಮ ಹತ್ರ ಬರ್ಲಿ ಅಂತ ಕಾಯೋದಿಲ್ಲ. ನೀವೇ ಕಸ್ಟಮರ್ ಬಳಿ ಹೋಗ್ತೀರಿ, ಅವರ ಬಟ್ಟೆ ರಿಪೇರಿ ಮಾಡಿ ಇಲ್ಲ ಅವರು ಹೇಳಿದಂತೆ ಡಿಸೈನ್ ಸ್ಟಿಚ್ ಮಾಡಿ ಬರ್ಬಹುದು.

ಆಂಧ್ರದ ಟೈಲರ್ ಇದಕ್ಕೆ ಸ್ಫೂರ್ತಿ : ಆಂಧ್ರಪ್ರದೇಶದ ವನುಕುರು ಗ್ರಾಮದ ದರ್ಜಿ ಶೇಖ್ ಕಲೀಷಾ (Sheikh Kalisha) ಅವರಿಗೆ ಹೊಲಿಗೆಯೇ ಸರ್ವಸ್ವವಾಗಿತ್ತು. ಕಾಲ ಬದಲಾದಂತೆ ರೆಡಿಮೆಡ್ ಬಟ್ಟೆ ಮತ್ತು ಬೊಟಿಕ್ ಫ್ಯಾಷನ್ ಬಂತು. ಇದ್ರಿಂದ ಕಲೀಷಾ ಅಂಗಡಿಗೆ ಬರೋ ಗ್ರಾಹಕರ ಸಂಖ್ಯೆ ಕಡಿಮೆ ಆಯ್ತು. ಆದಾಯ ನಿಂತು ಹೋಯ್ತು. ಸಾಲ ಹೆಚ್ಚಾಗಲು ಶುರುವಾಗಿತ್ತು. ಇಂಥ ಟೈಂನಲ್ಲಿ ಅನೇಕರು ಟೈಲರಿಂಗ್ ವೃತ್ತಿ ಬಿಟ್ಟು ಬೇರೆ ಆಯ್ಕೆ ಮಾಡ್ಕೊಂಡಿದ್ರು. ಆದ್ರೆ ಕಲೀಷಾ ಹಾಗೆ ಮಾಡ್ಲಿಲ್ಲ. ತಮ್ಮ ಬ್ಯುಸಿನೆಸ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ರು.

ಜನರು ಅಂಗಡಿಗೆ ಬರ್ತಿಲ್ಲ ಅಂತ ಸುಮ್ನೆ ಕುಳಿತುಕೊಳ್ಳೋ ಬದ್ಲು ನಾನೇ ಅವರ ಬಳಿ ಹೋದ್ರೆ ಹೇಗೆ ಅಂತ ಆಲೋಚನೆ ಮಾಡಿದ್ರು. ಕಸ್ಟಮ್ ಮಾಡಿದ ಟಿವಿಎಸ್ ಎಕ್ಸ್ಎಲ್ ಮೊಪೆಡ್ನಲ್ಲಿ ಹೊಲಿಗೆ ಯಂತ್ರವನ್ನು ಅಳವಡಿಸಿಕೊಂಡು, ದೃಢಸಂಕಲ್ಪದೊಂದಿಗೆ ರಸ್ತೆಗಿಳಿದ್ರು. ಅವರ ಮೊಬೈಲ್ ಟೈಲರ್ (Mobile Tailor) ಸೇವೆಗೆ ಈಗ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಅವರು ಪೆನಾಮಲೂರು, ಪೋರಂಕಿ ಮತ್ತು ವನುಕುರು ಪ್ರದೇಶಗಳಲ್ಲಿ ಪ್ರತಿದಿನ ಸಂಚರಿಸ್ತಾರೆ. ಮನೆ ಮನೆಗೆ ಹೊಲಿಗೆ ಸೇವೆಗಳನ್ನು ಒದಗಿಸ್ತಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಶುರು ಮಾಡಿದ ಅವರ ಸೇವೆ ಯಶಸ್ವಿಯಾಗಿ ಸಾಗ್ತಿದೆ.

ಕಲೀಷ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಜನರು ಅವರಿಗೆ ಕರೆ ಮಾಡಿ ಬುಕಿಂಗ್ ಮಾಡ್ತಿದ್ದಾರೆ. ಒಂದು ಕಾಲದಲ್ಲಿ ಕಷ್ಟಪಟ್ಟಿದ್ದ ಕಲೀಷ, ಈಗ ಚೆನ್ನಾಗಿ ಸಂಪಾದಿಸುತ್ತಿದ್ದಾರೆ. ಕಲೀಷಾ ಮೇಲೆ ಜನರಿಗೆ ಭರವಸೆ ಹೆಚ್ಚಾಗಿದೆ. ಆಂಧ್ರಪ್ರದೇಶದ ಅನೇಕ ಸಣ್ಣ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಕಲೀಷ ಸ್ಪೂರ್ತಿ : ಕಳೆದ 20 ವರ್ಷಗಳ ಹಿಂದೆಯೇ ಕಲೀಷ ಈ ಬ್ಯುಸಿನೆಸ್ ಶುರು ಮಾಡಿದ್ದರೆ ಈಗ ತಿರುವನಂತಪುರಂ ಮೂಲದ ದಂಪತಿ ಅನೀಶ್ ಉನ್ನಿಕೃಷ್ಣನ್ ಮತ್ತು ಗಾಯತ್ರಿ ಕೃಷ್ಣ ತಮ್ಮ ಸೀವ್ ಆನ್ ವೀಲ್ಸ್ ಉದ್ಯಮದ ಮೂಲಕ ಗಮನ ಸೆಳೆದಿದ್ದಾರೆ. ಅವರು ಟೆಂಪೋ ಟ್ರಾವೆಲರ್ ನಲ್ಲಿ ಮನೆ ಮನೆಗೆ ಬಂದು ಸೇವೆ ನೀಡ್ತಿದ್ದಾರೆ.