MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ರಾಜ್ಯದ ಗ್ರಾಮೀಣ ಮಹಿಳೆಯರು ತಯಾರಿಸಿದ ತೆಂಗಿನ ನಾರಿನ ಉತ್ಪನ್ನಗಳು ಜೈಪುರಕ್ಕೆ ರವಾನೆ

ರಾಜ್ಯದ ಗ್ರಾಮೀಣ ಮಹಿಳೆಯರು ತಯಾರಿಸಿದ ತೆಂಗಿನ ನಾರಿನ ಉತ್ಪನ್ನಗಳು ಜೈಪುರಕ್ಕೆ ರವಾನೆ

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು, ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ 6000 ಪರಿಸರ ಸ್ನೇಹಿ ಮ್ಯಾಟ್‌ಗಳನ್ನು ಜೈಪುರಕ್ಕೆ ರಫ್ತು ಮಾಡಿದೆ. ಈ 'ಡಚ್ ಮ್ಯಾಟ್‌ಗಳು' ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುವುದಲ್ಲದೆ, ಸುಮಾರು 700 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

1 Min read
Author : Kannadaprabha News
Published : May 03 2026, 05:29 PM IST
Share this Photo Gallery
  • FB
  • TW
  • Linkdin
  • Whatsapp
14
ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ
Image Credit : Kannada Prabha

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ

ಬೆಂಗಳೂರು: ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ 6000 ಮ್ಯಾಟ್‌ಗಳು ಹಾಗೂ ತೆಂಗಿನ ನಾರಿನ ಇತರೆ ಉತ್ಪನ್ನಗಳನ್ನು ಜೈಪುರಕ್ಕೆ ಸರಬರಾಜು ಮಾಡುವ ವಾಹನಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಶನಿವಾರ ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು.

24
ಗ್ರಾಮೀಣ ಆರ್ಥಿಕತೆಗೆ ಶಕ್ತಿ
Image Credit : AI Meta

ಗ್ರಾಮೀಣ ಆರ್ಥಿಕತೆಗೆ ಶಕ್ತಿ

ಬಳಿಕ ಮಾತನಾಡಿದ ಅವರು, ನಿಗಮವು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಂದ ಪರಿಸರ ಸ್ನೇಹಿ ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಕೆ ಮಾಡಿಸುತ್ತಿರುವುದು. ಜೊತೆಗೆ ನಿಗಮದಿಂದಲೂ ವಿಶೇಷ ಮ್ಯಾಟ್‌ಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿರುವುದು ಉತ್ತಮ ಕಾರ್ಯ. ಇದು ಗ್ರಾಮೀಣ ಆರ್ಥಿಕತೆಗೆ ಶಕ್ತಿ ನೀಡುವಂತಹ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದಿಂದ ಇಂತಹ ಪರಿಸರ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದರು. (ಸಾಂದರ್ಭಿಕ ಚಿತ್ರ)

Related Articles

Related image1
Business Idea: ಕಡಿಮೆ ಬಂಡವಾಳ, ಅಧಿಕ ಆದಾಯ.. ಎಂದಿಗೂ ಲಾಸ್‌ ಆಗದ ವ್ಯವಹಾರಗಳಿವು!
Related image2
Free Business Ads: ಜೇಬಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ; AI ಮೂಲಕ ಉಚಿತವಾಗಿ ಕ್ರಿಯೇಟ್ ಮಾಡಿ ನಿಮ್ಮ ಬಿಸಿನೆಸ್ ಜಾಹೀರಾತು!
34
ಡಚ್‌ ಮ್ಯಾಟ್‌ಗಳು ಅತ್ಯಂತ ಜನಪ್ರಿಯ
Image Credit : AI Meta

ಡಚ್‌ ಮ್ಯಾಟ್‌ಗಳು ಅತ್ಯಂತ ಜನಪ್ರಿಯ

ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ಮಾತನಾಡಿ, ನಿಗಮದ ಉತ್ಪನ್ನಗಳಲ್ಲಿ ಡಚ್‌ ಮ್ಯಾಟ್‌ಗಳು ಅತ್ಯಂತ ಜನಪ್ರಿಯ. ಅವುಗಳಿಗೆ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಬೇಡಿಕೆ ಇದೆ. ಹಾಗಾಗಿ ಹೆಚ್ಚಿನ ಮಟ್ಟದಲ್ಲಿ ತಯಾರಿಸಿ ಹೊರ ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿದೆ. 18ನೇ ಶತಮಾನದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ತಯಾರಿಸಲ್ಪಟ್ಟ ಕಯರ್ ಮ್ಯಾಟ್ ಗಳನ್ನು ಡಚ್ ವ್ಯಾಪಾರಿಗಳು ಯುರೋಪಿಗೆ ರಫ್ತು ಮಾಡುತ್ತಿದ್ದರು, ಆದ್ದರಿಂದ ಈ ಮ್ಯಾಟ್ ಗಳು ಡಚ್ ಮ್ಯಾಟ್ ಎಂದೇ ಜನಪ್ರಿಯವಾಗಿವೆ ಎಂದು ಹೇಳಿದರು. (ಸಾಂದರ್ಭಿಕ ಚಿತ್ರ)

44
700 ಗ್ರಾಮೀಣ ಉದ್ಯೋಗ
Image Credit : AI Meta

700 ಗ್ರಾಮೀಣ ಉದ್ಯೋಗ

ನಿಗಮದ ಡಚ್ ಮ್ಯಾಟ್ ಗಳು ಬಲಿಷ್ಠ, ದೀರ್ಘಕಾಲಿಕ, ಪರಿಸರ ಸ್ನೇಹಿ ಹಾಗೂ ಅಲಂಕಾರಿಕ ಗುಣಗಳನ್ನು ಹೊಂದಿರುವುದರಿಂದ ಇವುಗಳು ದೇಶಾದ್ಯಂತ ಜನಪ್ರಿಯವಾಗಿವೆ ಮತ್ತು ಉಪ ಹಿಮಾಲಯ ರಾಜ್ಯಗಳಲ್ಲಿ ಡಚ್ ಮ್ಯಾಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ, ಮುಖ್ಯಮಂತ್ರಿಗಳ ಆಶಯದಂತೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರ ಮಾರ್ಗದರ್ಶನದಲ್ಲಿ ಹಸ್ತಚಾಲಿತ ಮ್ಯಾಟ್ ಫ್ರೇಮ್ ಬಳಸಿ ಸುಮಾರು 700 ಗ್ರಾಮೀಣ ಉದ್ಯೋಗ ಸೃಷ್ಟಿಸಲು ಕ್ರಮವಹಿಸಲಾಗುತ್ತಿದೆ ಎಂದು ವಿವರಿಸಿದರು. ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. (ಸಾಂದರ್ಭಿಕ ಚಿತ್ರ)

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
ಚಿನ್ನದ ಮೇಲೆ ಸಾಲ ಪಡೆಯುವುದರಲ್ಲಿ ಈ 5 ರಾಜ್ಯಗಳೇ ಟಾಪ್! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Recommended image2
Army Canteen: ಹೊರಗಡೆ ₹1500 ಇರೋ ಬಾಟಲಿ ಆರ್ಮಿ ಕ್ಯಾಂಟೀನ್‌ನಲ್ಲಿ ₹600ಕ್ಕೆ ಸಿಗೋದು ಯಾಕೆ ಗೊತ್ತಾ?
Recommended image3
ನಮ್ಮ ಚಿನ್ನ, ನಮ್ಮ ಮನೆಯಲ್ಲಿ! ಭಾರತದಿಂದ ಅತಿದೊಡ್ಡ ನಿರ್ಧಾರ, ಅಚ್ಚರಿಯಲ್ಲಿ ಜಗತ್ತು
Related Stories
Recommended image1
Business Idea: ಕಡಿಮೆ ಬಂಡವಾಳ, ಅಧಿಕ ಆದಾಯ.. ಎಂದಿಗೂ ಲಾಸ್‌ ಆಗದ ವ್ಯವಹಾರಗಳಿವು!
Recommended image2
Free Business Ads: ಜೇಬಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ; AI ಮೂಲಕ ಉಚಿತವಾಗಿ ಕ್ರಿಯೇಟ್ ಮಾಡಿ ನಿಮ್ಮ ಬಿಸಿನೆಸ್ ಜಾಹೀರಾತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved