MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಭಾರತದ ಈ ನಗರಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಚಿನ್ನ; ಜಾಣರು ಇಲ್ಲೇ ಖರೀದಿ ಮಾಡ್ತಾರೆ

ಭಾರತದ ಈ ನಗರಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಚಿನ್ನ; ಜಾಣರು ಇಲ್ಲೇ ಖರೀದಿ ಮಾಡ್ತಾರೆ

ಭಾರತದಲ್ಲಿ ಚಿನ್ನ ಖರೀದಿ ಒಂದು ಸಂಪ್ರದಾಯ ಮತ್ತು ಹೂಡಿಕೆಯಾಗಿದೆ. ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ ಹೋಲ್‌ಸೇಲ್ ಮಾರುಕಟ್ಟೆಗಳಿದ್ದು, ಇಲ್ಲಿ ತಯಾರಿಕಾ ಶುಲ್ಕ ಮತ್ತು ವೇಸ್ಟೇಜ್ ಕಡಿಮೆ ಇರುವುದರಿಂದ ಆಭರಣಗಳು ಅಗ್ಗವಾಗಿ ಸಿಗುತ್ತವೆ.

2 Min read
Author : Mahmad Rafik
Published : Jul 30 2026, 12:14 PM IST
Share this Photo Gallery
  • FB
  • TW
  • Linkdin
  • Whatsapp
18
ಕಡಿಮೆ ಬೆಲೆಗೆ ಚಿನ್ನ ಎಲ್ಲಿ ಸಿಗುತ್ತೆ?
Image Credit : Gemini

ಕಡಿಮೆ ಬೆಲೆಗೆ ಚಿನ್ನ ಎಲ್ಲಿ ಸಿಗುತ್ತೆ?

ಬೆಲೆ ಎಷ್ಟೇ ಏರಿಕೆಯಾದರೂ ನಮ್ಮ ದೇಶದಲ್ಲಿ ಚಿನ್ನ ಖರೀದಿ ಮಾಡುವುದು ಒಂದು ಸಂಪ್ರದಾಯವಾಗಿದೆ. ಆದ್ರೆ ಇಂದು ಬಹುತೇಕರು ಚಿನ್ನವನ್ನು ಹೂಡಿಕೆಯಾಗಿಯೂ ನೋಡುತ್ತಿರುವ ಕಾರಣ ಬೆಲೆ ಏರಿಕೆ ನಡುವೆಯೂ ಬಂಗಾರ ಬೇಡಿಕೆಯನ್ನು ಹೊಂದಿದೆ. ಆದ್ರೆ ಭಾರತದ ಕೆಲವು ಕಡೆಗಳಲ್ಲಿ ಬೇರೆಡೆಗಿಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ. ಕಡಿಮೆ ಬೆಲೆಗೆ ಚಿನ್ನ ಸಿಗುವ ಪ್ರಮುಖ ನಗರಗಳ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಮುಂಬೈ
Image Credit : Gemini

ಮುಂಬೈ

ಮುಂಬೈನ ಜವೇರಿ ಬಜಾರ್ ಭಾರತದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರ. ದೇಶದ ಬಹುತೇಕ ಚಿನ್ನ ಮತ್ತು ಬೆಳ್ಳಿ ವ್ಯಾಪಾರ ಇಲ್ಲಿಂದಲೇ ನಡೆಯುತ್ತದೆ. ಮದುವೆ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಯ ಡಿಸೈನ್‌ಗಳವರೆಗೆ ಎಲ್ಲವೂ ಇಲ್ಲಿ ಹೋಲ್‌ಸೇಲ್ ದರದಲ್ಲಿ ಲಭ್ಯವಾಗುತ್ತದೆ.

Related Articles

Related image1
ಬೆಂಗಳೂರಲ್ಲಿ ಸ್ವಿಗ್ಗಿ, ಜೊಮೊಟೋ ನಿಷೇಧ: ಸಭೆ ಬಳಿಕ ಆ.15ರವರೆಗೆ ಗಡುವು ಕೊಟ್ಟ ಹೋಟೆಲ್ ಮಾಲೀಕರು!
Related image2
ಬೆಂಗಳೂರಿನಿಂದ 10 ಗಂಟೆ ದೂರದಲ್ಲಿಯೇ ಸಿಗುತ್ತವೆ ಅತ್ಯಂತ ಕಡಿಮೆ ಬೆಲೆಗೆ ಮುತ್ತುಗಳು
38
ದೆಹಲಿ, ಜೈಪುರ, ಕೋಲ್ಕತ್ತಾ
Image Credit : Gemini

ದೆಹಲಿ, ಜೈಪುರ, ಕೋಲ್ಕತ್ತಾ

ದೆಹಲಿಯ ಚಾಂದಿನಿ ಚೌಕ್‌ನಲ್ಲಿ 'ಕೂಚಾ ಮಹಾಜನಿ' ಎಂಬ ಮಾರುಕಟ್ಟೆ ಇದೆ. ಇದು ಉತ್ತರ ಭಾರತದ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾಗುದೆ. ಇಲ್ಲಿ ಅದ್ಧೂರಿ ಬ್ರೈಡಲ್ ಆಭರಣಗಳು, ಕುಂದನ್ ಕೆಲಸದ ಒಡವೆಗಳು ಸಿಗುತ್ತವೆ. ಕೋಲ್ಕತ್ತಾದ 'ಬೋ ಬಜಾರ್' ಮತ್ತು 'ಬುರ್ರಾ ಬಜಾರ್' ಬೆಂಗಾಲಿ ಫಿಲಿಗ್ರಿ ಕೆಲಸಗಳಿಗೆ ಹೆಸರುವಾಸಿ. ರಾಜಸ್ಥಾನದ ಜೈಪುರದಲ್ಲಿರುವ 'ಜೋಹರಿ ಬಜಾರ್' ಸಾಂಪ್ರದಾಯಿಕ ಕುಂದನ್ ಮತ್ತು ಮೀನಾಕಾರಿ ಆಭರಣಗಳಿಗೆ ಪ್ರಸಿದ್ಧ.

48
ಚೆನ್ನೈ, ಹೈದರಾಬಾದ್, ಕೊಯಮೊತ್ತೂರು
Image Credit : Gemini

ಚೆನ್ನೈ, ಹೈದರಾಬಾದ್, ಕೊಯಮೊತ್ತೂರು

ದಕ್ಷಿಣ ಭಾರತದಲ್ಲಿ ಚಿನ್ನದ ಆಭರಣಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚು. ಚೆನ್ನೈನ ಜಾರ್ಜ್ ಟೌನ್, ಸಾಂಪ್ರದಾಯಿಕ ಟೆಂಪಲ್ ಮತ್ತು ಆ್ಯಂಟಿಕ್ ಆಭರಣಗಳಿಗೆ ಹೆಸರುವಾಸಿಯಾಗಿದೆ. ಹೈದರಾಬಾದ್‌ನ 'ಪಾಟ್ ಮಾರ್ಕೆಟ್' ಮತ್ತು 'ಬೇಗಂ ಬಜಾರ್' ಪ್ರದೇಶಗಳಲ್ಲೂ ಚಿನ್ನದ ಬೆಲೆ ಕಡಿಮೆ. ತಮಿಳುನಾಡಿನ ಕೊಯಮತ್ತೂರು, ಮೆಷಿನ್ ಚೈನ್‌ಗಳು ಮತ್ತು ಹಗುರವಾದ ಆಭರಣಗಳಿಗೆ ಪ್ರಮುಖ ಕೇಂದ್ರವಾಗಿದೆ.

58
ತ್ರಿಶೂರ್, ಅಹಮಾದಾಬಾದ್
Image Credit : stockPhoto

ತ್ರಿಶೂರ್, ಅಹಮಾದಾಬಾದ್

ಕೇರಳದ ತ್ರಿಶೂರ್, ದಕ್ಷಿಣ ಭಾರತದ ಆಭರಣಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ 'ಮಾನೆಕ್ ಚೌಕ್' ಭಾರತದ ಮತ್ತೊಂದು ದೊಡ್ಡ ಚಿನ್ನದ ಹೋಲ್‌ಸೇಲ್ ಕೇಂದ್ರ. ವಿಶೇಷವಾಗಿ ಬಿಸ್ಕತ್ ಚಿನ್ನ (Gold Bars/Coins) ಮತ್ತು ಹಾಲ್‌ಮಾರ್ಕ್ ಮಾಡಿದ ಶುದ್ಧ ಚಿನ್ನದ ಗಟ್ಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಇದು ಬಹಳ ಪ್ರಸಿದ್ಧವಾದ ಸ್ಥಳ.

68
ತಯಾರಿಕಾ ಶುಲ್ಕ, ವೇಸ್ಟೇಜ್ ಕಡಿಮೆ
Image Credit : Social Media

ತಯಾರಿಕಾ ಶುಲ್ಕ, ವೇಸ್ಟೇಜ್ ಕಡಿಮೆ

ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ಚಿನ್ನದ ಮೂಲ ಬೆಲೆ (Bullion Rate) ಭಾರತದಲ್ಲಿ ಹೆಚ್ಚುಕಡಿಮೆ ಒಂದೇ ರೀತಿ ಇರುತ್ತದೆ. ಆದರೆ, ಇಲ್ಲಿ ಆಭರಣಗಳ ತಯಾರಿಕಾ ಶುಲ್ಕ (Making Charges) ಮತ್ತು ವೇಸ್ಟೇಜ್ (Wastage), ರೀಟೇಲ್ ಶೋರೂಮ್‌ಗಳಿಗಿಂತ ಶೇ. 30 ರಿಂದ 50 ರಷ್ಟು ಕಡಿಮೆ ಇರುತ್ತದೆ. ಇದೇ ಕಾರಣಕ್ಕೆ ಇಲ್ಲಿ ಆಭರಣಗಳು ಅಗ್ಗವಾಗಿ ಸಿಗುತ್ತವೆ.

78
ಮುಂಬೈನ ಜವೇರಿ ಬಜಾರ್‌
Image Credit : X

ಮುಂಬೈನ ಜವೇರಿ ಬಜಾರ್‌

ಭಾರತದಲ್ಲಿ ಪ್ರತಿದಿನದ ಚಿನ್ನದ ಹೋಲ್‌ಸೇಲ್ ಬೆಲೆಯನ್ನು ನಿರ್ಧರಿಸುವಲ್ಲಿ ಮುಂಬೈನ ಜವೇರಿ ಬಜಾರ್‌ನಲ್ಲಿರುವ IBJA (India Bullion and Jewellers Association) ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಬಹುತೇಕ ಜ್ಯುವೆಲ್ಲರಿ ಮಳಿಗೆಗಳು IBJA ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆ ತಮ್ಮ ದೈನಂದಿನ ಮಾರಾಟ ದರವನ್ನು ನಿರ್ಧರಿಸುತ್ತವೆ.

88
ಹೋಲ್‌ಸೇಲ್ ಮಾರುಕಟ್ಟೆ
Image Credit : AI Meta

ಹೋಲ್‌ಸೇಲ್ ಮಾರುಕಟ್ಟೆ

ಹೋಲ್‌ಸೇಲ್ ಮಾರುಕಟ್ಟೆಗಳಲ್ಲದೆ, ರೀಟೇಲ್ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸಲು IIJS (India International Jewellery Show) ನಂತಹ ಬೃಹತ್ B2B ಪ್ರದರ್ಶನಗಳು ಮುಂಬೈ ಮತ್ತು ನಮ್ಮ ಬೆಂಗಳೂರಿನಲ್ಲಿ ವಾರ್ಷಿಕವಾಗಿ ನಡೆಯುತ್ತವೆ. ಇಲ್ಲಿ ಪ್ರಪಂಚದಾದ್ಯಂತದ ಹೊಚ್ಚಹೊಸ ಡಿಸೈನ್‌ಗಳನ್ನು ಹೋಲ್‌ಸೇಲ್ ದರದಲ್ಲಿ ಪರಿಚಯಿಸಲಾಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಿನ್ನ
ಚಿನ್ನದ ಬೆಲೆ
ವ್ಯವಹಾರ
Latest Videos
Recommended Stories
Recommended image1
ಟ್ರಕ್‌, ಬಸ್‌ ವಿಭಾಗವನ್ನು 525 ಕೋಟಿಗೆ ಮಾರಾಟ ಮಾಡಲಿರುವ ಮಹೀಂದ್ರಾ & ಮಹೀಂದ್ರಾ!
Recommended image2
ಜಾಗತಿಕ ಮಟ್ಟದಲ್ಲಿ ಯುಪಿಐ ಮತ್ತೊಂದು ಮೈಲುಗಲ್ಲು: ಭಾರತದಲ್ಲೇ ಕುಳಿತು ದುಬೈ ಬುರ್ಜ್ ಖಲೀಫಾ ಬುಕ್ ಮಾಡಬಹುದು!
Recommended image3
ಟೆಕ್ಕಿಗಳಾಗಿ ₹35 ಲಕ್ಷ ದುಡಿಯುವ ಕೆಲಸ ತೊರೆದು, ಕಂಟೆಂಟ್ ಕ್ರಿಯೇಟರ್ಸ್ ಆಗಿ ಕೋಟಿ, ಕೋಟಿ ಗಳಿಸುವ ಜೋಡಿ!
Related Stories
Recommended image1
ಬೆಂಗಳೂರಲ್ಲಿ ಸ್ವಿಗ್ಗಿ, ಜೊಮೊಟೋ ನಿಷೇಧ: ಸಭೆ ಬಳಿಕ ಆ.15ರವರೆಗೆ ಗಡುವು ಕೊಟ್ಟ ಹೋಟೆಲ್ ಮಾಲೀಕರು!
Recommended image2
ಬೆಂಗಳೂರಿನಿಂದ 10 ಗಂಟೆ ದೂರದಲ್ಲಿಯೇ ಸಿಗುತ್ತವೆ ಅತ್ಯಂತ ಕಡಿಮೆ ಬೆಲೆಗೆ ಮುತ್ತುಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved