ಈ ಸಣ್ಣ ಅಭ್ಯಾಸಗಳು ಸೈಲೆಂಟ್ ಆಗಿ ನಿಮ್ಮನ್ನ ಶ್ರೀಮಂತರನ್ನಾಗಿ ಮಾಡುತ್ತೆ
ಈ ಐದು ಸಣ್ಣ ಅಭ್ಯಾಸಗಳು ನಿಮ್ಮನ್ನು ನಿಧಾನವಾಗಿ, ಸದ್ದಿಲ್ಲದೆ ಶ್ರೀಮಂತಿಕೆಯ ಕಡೆಗೆ ನೂಕುತ್ತದೆ. ಇವುಗಳನ್ನು ಯಾವತ್ತೂ ಇಗ್ನೋರ್ ಮಾಡ್ಬೇಡಿ. ಇವತ್ತೇ ಈ ಸಣ್ಣ ಅಭ್ಯಾಸಗಳನ್ನು ಪ್ರಾರಂಭಿಸಿ ನೋಡಿ, ಇನ್ನು ಕೆಲವೇ ವರ್ಷಗಳಲ್ಲಿ ಸುಂದರ ಜೀವನ ನಿಮ್ಮದಾಗುತ್ತದೆ.

ಶ್ರೀಮಂತರಾಗುವುದು ಅಂದ್ರೆ ಏನು?
ಶ್ರೀಮಂತರಾಗುವುದು ಅಂದ್ರೆ ಯಾವಾಗಲೂ ದೊಡ್ಡ ಗೆಲುವುಗಳು, ಅದೃಷ್ಟದ ಅವಕಾಶಗಳು ಅಥವಾ ರಾತ್ರೋರಾತ್ರಿ ಯಶಸ್ಸು ಸಿಗೋದು ಅಂತ ಅಲ್ಲ. ಹೆಚ್ಚಾಗಿ, ಇದು ಕಠಿಣ ಪರಿಶ್ರಮ ಮತ್ತು ಸ್ಥಿರತೆಯೊಂದಿಗೆ ಕೆಲಸ ಮಾಡಿದರೆ, ನಮ್ಮ ಜೀವನದಲ್ಲಿ ಯಾವ ರೀತಿ ಬೆಳವಣಿಗೆ ಆಗುತ್ತದೆ ಎನ್ನುವುದರ ಕುರಿತು. ಈ ಸಣ್ಣ ಅಭ್ಯಾಸಗಳೆ ಮುಂದೆ ನಿಮಗೆ ಸಂಪತ್ತನ್ನು ತಂದುಕೊಡುತ್ತದೆ. ಅದಕ್ಕೆ ಶಿಸ್ತಿನ ಜೀವನ ತುಂಬಾನೆ ಮುಖ್ಯ.
ಆ ಸಣ್ಣ ಅಭ್ಯಾಸಗಳು ಯಾವುವು?
ನಾವು ಯಾವಾಗಲೂ "ಶ್ರೀಮಂತ" ಎಂಬ ಪದವನ್ನು ದೊಡ್ಡ ಆದಾಯ ಅಥವಾ ವ್ಯವಹಾರದಲ್ಲಿ ಹಠಾತ್ ಯಶಸ್ಸು ಸಿಗುವುದಕ್ಕೆ ಹೇಳುತ್ತೇವೆ. ಆದರೆ ವಾಸ್ತವದಲ್ಲಿ, ಸ್ವಲ್ಪ ವಿಭಿನ್ನವಾಗಿ ಬದುಕುವ ಜನರು, ಸಣ್ಣ ವಿಷಯಗಳಿಗೆ ಗಮನ ಕೊಡುವವರು, ಶಿಸ್ತಿನ ಜೀವನ ನಡೆಸುವವರು ಶಾಶ್ವತ ಆರ್ಥಿಕ ಸ್ಥಿರತೆಯನ್ನು ನಿರ್ಮಿಸುತ್ತಾರೆ. ಇದನ್ನೇ ಶ್ರೀಮಂತಿಕೆ ಎನ್ನುವುದು. ನಿಮ್ಮ ಜೀವನದಲ್ಲಿ ಯಾವ ಸಣ್ಣ ಅಭ್ಯಾಸಗಳು ಶೀಘ್ರದಲ್ಲಿ ನಿಮ್ಮನ್ನ ಶ್ರೀಮಂತರನ್ನಾಗಿ ಮಾಡುತ್ತೆ ನೋಡೋಣ.
ಪ್ರತಿದಿನದ ಈ ಸಣ್ಣ ಕೆಲಸ ಮಾಡಿ
ಸಂಪತ್ತು ಒಂದೇ ಬಾರಿಗೆ ಬರೋದಿಲ್ಲ, ಅದು ದೈನಂದಿನ ದಿನಚರಿಯಲ್ಲಿ ನೀವು ಮಾಡುವ ಕೆಲಸಗಳ ಮೂಲಕ ಒಟ್ಟಾಗುತ್ತದೆ. ನಿಮ್ಮ ಬಜೆಟ್ ಚೆಕ್ ಮಾಡಲು 10 ನಿಮಿಷ ಮೀಸಲಿಡುವುದು, ನಿಮ್ಮ ಗುರಿಗಳನ್ನು ಅಪ್ ಡೇಟ್ ಮಾಡುವುದು ಅಥವಾ ರೂ.50 ನ್ನು ಸೇವ್ ಮಾಡಿ ಇಡುವುದು ಸಣ್ಣ ಕೆಲಸವೇ ಆಗಿರಬಹುದು. ಆದರೆ ದಿನಕಳೆದಂತೆ, ಈ ಸಣ್ಣ ಅಭ್ಯಾಸಗಳು ದೊಡ್ಡ ಫಲಿತಾಂಶಗಳನ್ನು ನೀಡುತ್ತವೆ.
ಪ್ರಗತಿಗಾಗಿ ಓದು
ಯಶಸ್ವಿ ಜನರು ಜೀವಮಾನವಿಡೀ ಕಲಿಯುವವರಾಗಿರುತ್ತಾರೆ. ಹಣ, ವ್ಯವಹಾರ ಅಥವಾ ವೈಯಕ್ತಿಕ ಬೆಳವಣಿಗೆಯ ಬಗ್ಗೆ ಪ್ರತಿದಿನ ಕೆಲವು ಪುಟಗಳನ್ನು ಓದುವುದು ನಿಮ್ಮ ಮನಸ್ಥಿತಿಯನ್ನು ತೀಕ್ಷ್ಣಗೊಳಿಸುತ್ತದೆ. ಓದುವುದರಿಂದ ಎಲ್ಲವನ್ನೂ ಕಷ್ಟಪಟ್ಟು ಕಲಿಯುವ ಅಗತ್ಯವಿಲ್ಲದೆ, ಉತ್ತಮವಾಗಿ ಪ್ಲ್ಯಾನ್ ಮಾಡಲು, ಉತ್ತಮವಾಗಿ ನಿರ್ಧರಿಸಲು, ಪ್ರಗತಿ ಹೊಂದಲು ನಿಮಗೆ ಸಹಾಯ ಮಾಡುತ್ತದೆ.
ಹಣಕಾಸುಗಳನ್ನು ಟ್ರ್ಯಾಕ್ ಮಾಡುವುದು
ನೀವು ಆದಾಯ, ವೆಚ್ಚಗಳು ಮತ್ತು ಉಳಿತಾಯವನ್ನು ನಿಯಮಿತವಾಗಿ ಟ್ರ್ಯಾಕ್ ಮಾಡುವುದರಿಂದ ನಿಮ್ಮನ್ನು ನಿಯಂತ್ರಣದಲ್ಲಿಡಬಹುದು. ಸರಳವಾದ ಸ್ಪ್ರೆಡ್‌ಶೀಟ್ ಅಥವಾ ಬಜೆಟ್ ಅಪ್ಲಿಕೇಶನ್ ಸಹ ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಅದನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು ನಿಮಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ.
ಸ್ಥಿರವಾಗಿ ಹೂಡಿಕೆ ಮಾಡುವುದು
ಸ್ಥಿರವಾಗಿ ಉಳಿತಾಯ ಮಾಡುವುದು ತುಂಬಾನೆ ಮುಖ್ಯ. ಪ್ರತಿ ತಿಂಗಳು ನಿವೃತ್ತಿ ಖಾತೆಗಳಲ್ಲಿ, ಫಂಡ್ ಗಳಲ್ಲಿ, ವಿಮೆಗಳಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವುದರಿಂದ ಚಕ್ರಬಡ್ಡಿಯಿಂದಾಗಿ ಅದು ದೊಡ್ಡ ಸಂಪತ್ತಾಗಿ ಬೆಳೆಯಬಹುದು. ಹಾಗಾಗಿ ಇವತ್ತೆ ಹೂಡಿಕೆ ಮಾಡಲು ಆರಂಭಿಸಿ.
ಕಲಿಯುವುದನ್ನು ಬಿಡುವುದಿಲ್ಲ
ಸದ್ದಿಲ್ಲದೆ ಸಂಪತ್ತನ್ನು ನಿರ್ಮಿಸುವ ಜನರು ಕುತೂಹಲ ಮತ್ತು ಮುಕ್ತ ಮನಸ್ಸಿನವರಾಗಿರುತ್ತಾರೆ. ಅವರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುವುದಿಲ್ಲ. ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ಇತರರಿಂದ ಕಲಿಯುತ್ತಾರೆ ಮತ್ತು ಸ್ಥಿರವಾಗಿರುತ್ತಾರೆ, ಯಶಸ್ಸು ಬಂದಾಗ, ಅವರು ಅದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತಾರೆ ಮತ್ತು ಅಲ್ಲಿಂದ ಬೆಳೆಯುತ್ತಲೇ ಇರುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.
