ಒಂದೇ ವೇಗದ ಓಟದಲ್ಲಿ ಜಿಯೋ, ಏರ್‌ಟೆಲ್; ಇಬ್ಬರಿಗೂ ಶಾಕ್ ನೀಡಿ ಹೊಸ ಮಾರ್ಗದಲ್ಲಿ ವೊಡಾಫೋನ್ ಐಡಿಯಾ
ಜಿಯೋ, ಏರ್‌ಟೆಲ್ ಮತ್ತು ವೊಡಾಫೊನ್ ಐಡಿಯಾ (Vi) ನಡುವೆ ಅನ್‌ಲಿಮಿಟೆಡ್ ಪ್ರಿಪೇಯ್ಡ್ ಪ್ಲಾನ್‌ಗಳ ಪೈಪೋಟಿ ತೀವ್ರವಾಗಿದೆ. ಜಿಯೋ ಮತ್ತು ಏರ್‌ಟೆಲ್ ಒಂದೇ ರೀತಿಯ ಡೇಟಾ ಮತ್ತು OTT ಪ್ರಯೋಜನಗಳನ್ನು ನೀಡುತ್ತಿವೆ. ಆದರೆ ವಿಐ ವಾರಾಂತ್ಯದ ರೋಲ್‌ಓವರ್‌ನಂತಹ ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ.

5G ಸೇವೆಯಲ್ಲಿ ತೀವ್ರ ಪೈಪೋಟಿ
ಭಾರತದ ಟೆಲಿಕಾಂ ರಂಗದಲ್ಲಿ 5G ಸೇವೆಗಳ ವಿಷಯದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಭಾರತ ಟೆಲಿಕಾಂ ರಂಗದಲ್ಲಿ ಗ್ರಾಹಕರನ್ನು ಆಕರ್ಷಿಸಲು ರಿಲಯನ್ಸ್ ಜಿಯೋ, ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಪರಸ್ಪರ ಪೈಪೋಟಿ ನಡೆಸುತ್ತಿವೆ.
ಈ ಕಂಪನಿಗಳು ಕಡಿಮೆ ಬೆಲೆಯಲ್ಲಿ ಅಪರಿಮಿತ ಡೇಟಾ ಮತ್ತು ಆಕರ್ಷಕವಾದ ಹೆಚ್ಚುವರಿ ಪ್ರಯೋಜನಗಳೊಂದಿಗೆ 5G ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿವೆ.
ಜಿಯೋ, ಏರ್‌ಟೆಲ್ ಪೈಪೋಟಿ ನೀಡಲು ವಿಐ
5G ಸಂಪರ್ಕ ಮತ್ತು ಸಮಗ್ರ ಡಿಜಿಟಲ್ ಸೇವೆಗಳೊಂದಿಗೆ ಜಿಯೋ ಮತ್ತು ಏರ್‌ಟೆಲ್ ಜುಲೈ 2025 ರ ಹೊತ್ತಿಗೆ ಟೆಲಿಕಾಂ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿವೆ. ವೊಡಾಫೋನ್ ಐಡಿಯಾ ಗ್ರಾಹಕರನ್ನು ಆಕರ್ಷಿಸಲು ಅನ್‌ಲಿಮಿಟೆಡ್ ನೈಟ್ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್‌ನಂತಹ ವಿಶಿಷ್ಟ ಫೀಚರ್‌ಗಳನ್ನು ನೀಡುತ್ತಿದೆ.
ಅನ್‌ಲಿಮಿಟೆಡ್ 5G ಪ್ಲಾನ್‌ಗಳಲ್ಲಿ ಟಾಪ್ ಆಫರ್‌ಗಳು
ಜಿಯೋ ಮತ್ತು ಏರ್‌ಟೆಲ್ ₹3,599ಕ್ಕೆ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ನೀಡುತ್ತಿವೆ. ಇದು 365 ದಿನಗಳ ವ್ಯಾಲಿಡಿಟಿ, ದಿನಕ್ಕೆ 2 ರಿಂದ 2.5GB ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಒಳಗೊಂಡಿದೆ.
ಜಿಯೋ JioTV, JioCinema ಮತ್ತು JioCloud ನಂತಹ ಡಿಜಿಟಲ್ ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ಏರ್ಟೆಲ್ Wynk Music, Hellotunes ಮತ್ತು Apollo 24/7 ನಂತಹ ಸೇವೆಗಳನ್ನು ಒದಗಿಸುತ್ತದೆ.
ವಿಐ (Vi) ₹3,699ಕ್ಕೆ ವಾರ್ಷಿಕ ಪ್ಲಾನ್ ನೀಡುತ್ತಿದೆ. ಇದು ದಿನಕ್ಕೆ 2GB ಡೇಟಾ, ಅಮೆಜಾನ್ ಪ್ರೈಮ್ ಸಬ್‌ಸ್ಕ್ರಿಪ್ಶನ್, ಅನ್‌ಲಿಮಿಟೆಡ್ ರಾತ್ರಿ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್‌ನಂತಹ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.
ಮಧ್ಯಮ ಶ್ರೇಣಿಯ 5G ಪ್ಲಾನ್‌ಗಳು
ಜಿಯೋ ₹859ಕ್ಕೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಮಧ್ಯಮ ಶ್ರೇಣಿಯ ಪ್ರಿಪೇಯ್ಡ್ ಪ್ಲಾನ್ ಅನ್ನು ನೀಡುತ್ತಿದೆ. ಈ ಪ್ಲಾನ್ ದಿನಕ್ಕೆ 2GB ಡೇಟಾ, ಅನ್‌ಲಿಮಿಟೆಡ್ ಕರೆಗಳು ಮತ್ತು SMS ಗಳನ್ನು ಒಳಗೊಂಡಿದೆ.
ಏರ್ಟೆಲ್’ನ ₹979 ಪ್ಲಾನ್ ಕೂಡ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಇದರ ಜೊತೆಗೆ, RewardsMini ಮತ್ತು Xstream Play ನಂತಹ ಡಿಜಿಟಲ್ ಆಡ್-ಆನ್‌ಗಳನ್ನು ಒದಗಿಸಲಾಗುತ್ತದೆ. ಆದರೆ ಇದು ಜಿಯೋ ಪ್ಲಾನ್‌ಗಿಂತ ಸ್ವಲ್ಪ ದುಬಾರಿಯಾಗಿದೆ.
ವಿಐ (Vi) ₹859 ಪ್ಲಾನ್ ದಿನಕ್ಕೆ 1.5GB ಡೇಟಾ, ರಾತ್ರಿಯ ಅನ್‌ಲಿಮಿಟೆಡ್ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್‌ನಂತಹ ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ.
ಕಡಿಮೆ ಬೆಲೆಯ 5G ಪ್ಲಾನ್‌ಗಳು: ಏರ್‌ಟೆಲ್, Vi, ಜಿಯೋ ನಡುವೆ ಪೈಪೋಟಿ
ಕಡಿಮೆ ಬೆಲೆಯ ಡೇಟಾ ಪ್ಲಾನ್‌ಗಳನ್ನು ಬಯಸುವ ಗ್ರಾಹಕರಿಗಾಗಿ, ಟೆಲಿಕಾಂ ಕಂಪನಿಗಳು ವಿವಿಧ ಆಫರ್‌ಗಳನ್ನು ನೀಡುತ್ತಿವೆ. ಏರ್ಟೆಲ್’ನ ₹299 ಪ್ಲಾನ್ Wynk Music ಮತ್ತು Hellotunes ನಂತಹ ಡಿಜಿಟಲ್ ಪ್ರಯೋಜನಗಳೊಂದಿಗೆ 5G ಅನ್‌ಲಿಮಿಟೆಡ್ ಡೇಟಾವನ್ನು ನೀಡುತ್ತದೆ.
ವೊಡಾಫೋನ್ ಐಡಿಯಾ ₹349 ಪ್ಲಾನ್ ದಿನಕ್ಕೆ 1.5GB ಡೇಟಾವನ್ನು ನೀಡುತ್ತದೆ. ಆದರೆ ಯಾವುದೇ ಹೆಚ್ಚುವರಿ ಆ್ಯಪ್‌ಗಳನ್ನು ಒಳಗೊಂಡಿಲ್ಲ.
ರಿಲಯನ್ಸ್ ಜಿಯೋದ ₹249 ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದಿನಕ್ಕೆ 1GB ಡೇಟಾವನ್ನು ನೀಡುತ್ತದೆ.
ಈ ವಿಷಯಗಳನ್ನು ಗಮನದಲ್ಲಿಡಿ
ಸರಿಯಾದ 5G ಪ್ಲಾನ್ ಆಯ್ಕೆ ವೈಯಕ್ತಿಕ ಅಗತ್ಯಗಳನ್ನು ಅವಲಂಬಿಸಿರುತ್ತದೆ. ವಾರಾಂತ್ಯ ಅಥವಾ ರಾತ್ರಿಯಲ್ಲಿ ಹೆಚ್ಚು ಡೇಟಾವನ್ನು ಬಳಸುವವರಿಗೆ Vi’ಯ ಪ್ಲಾನ್‌ಗಳು ಉತ್ತಮವಾಗಿವೆ. ಏಕೆಂದರೆ Vi ಅನ್‌ಲಿಮಿಟೆಡ್ ರಾತ್ರಿ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್‌ನಂತಹ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.
ಉತ್ತಮ ನೆಟ್‌ವರ್ಕ್, 5G ಸಂಪರ್ಕ ಮತ್ತು ಮನರಂಜನೆಗಾಗಿ ಡಿಜಿಟಲ್ ಬಂಡಲ್‌ಗಳನ್ನು ಬಯಸುವವರಿಗೆ Jio ಮತ್ತು Airtel’ನ ಪ್ಲಾನ್‌ಗಳು ಸೂಕ್ತವಾಗಿವೆ.
5G ಪ್ಲಾನ್ ಆಯ್ಕೆ ಮಾಡುವ ಮೊದಲು, ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ಕವರೇಜ್, ಅಗತ್ಯವಿರುವ ಡೇಟಾ ಮಿತಿ ಮತ್ತು ಬಂಡಲ್ ಆಫರ್‌ಗಳನ್ನು ಪರಿಗಣಿಸಿ.