ಟಾಟಾ ತನ್ನ ಹೊಸ ಫೈಬರ್ ಪ್ಲಾನ್‌ನಲ್ಲಿ 100Mbps ಇಂಟರ್ನೆಟ್, 6 OTT ಆಪ್ಸ್ ಮತ್ತು 200+ ಲೈವ್ ಚಾನೆಲ್‌ಗಳನ್ನು ನೀಡುತ್ತಿದೆ. ಟಾಟಾ ಫೈಬರ್ ಬ್ರಾಡ್‌ಬ್ಯಾಂಡ್ ಆಲ್-ಇನ್-ಒನ್ ಪ್ಯಾಕೇಜ್ ಮಾಹಿತಿ
ನವದೆಹಲಿ: ಡಿಜಿಟಲ್ ಇಂಡಿಯಾ ಓಟದಲ್ಲಿ ಗ್ರಾಹಕರನ್ನು ಸೆಳೆಯಲು ಟಾಟಾ ಮುಂದಾಗಿದೆ. ಒಳ್ಳೆಯ ಆಫರ್ ನೀಡುವ ಮೂಲಕ ಏರ್‌ಟೈಲ್ ಮತ್ತು ರಿಲಯನ್ಸ್ ಜಿಯೋಗೆ ಟಕ್ಕರ್ ಕೊಡಲು ಟಾಟಾ ಮುಂದಾಗಿದೆ. ಹೊಸ ಧಮಾಕಾ ಬ್ರಾಡ್‌ಬ್ಯಾಂಡ್ ಆಫರ್‌ನ್ನು ಟಾಟಾ (Tata Fiber Plan) ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 100Mbps ಸ್ಪೀಡ್ ಇಂಟರ್‌ನೆಟ್ ಗ್ರಾಹಕರಿಗೆ ನೀಡಲು ಟಾಟಾ ಮುಂದಾಗಿದೆ. ಈ ಪ್ಲಾನ್‌ನಲ್ಲಿ ಉಚಿತವಾಗಿ 6 ಪ್ರಮುಖ OTT ಆಪ್ಸ್ ಆಕ್ಸೆಸ್ ಮತ್ತು 200ಕ್ಕೂ ಅಧಿಕ ಲೈವ್ ಚಾನೆಲೆ ವೀಕ್ಷಣೆ ಮಾಡಬಹುದು. ಈ Tata Fiber Plan ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು ಎಂಬುದನ್ನು ನೋಡೋಣ ಬನ್ನಿ.
ಮನೆಯಲ್ಲಿ ಕುಳಿತು ಮನರಂಜನೆ, ವರ್ಕ್ ಫ್ರಂ ಹೋಮ್ ಮತ್ತು ವೇಗದ ಇಂಟರ್ನೆಟ್ ಪ್ರಯೋಜನಗಳನ್ನು ಪಡೆಯಲು ಬಯಸುವ ಬಳಕೆದಾರರಿಗೆ ಈ ಯೋಜನೆ ವಿಶೇಷವಾಗಿ ಆಕರ್ಷಕವಾಗಿದೆ ಎಂದು ಟಾಟಾ ಹೇಳಿದೆ.
ಟಾಟಾ ಫೈಬರ್ ಪ್ಲಾನ್ ವಿಶೇಷತೆ ಏನು?
ಟಾಟಾ ಫೈಬರ್ ಪ್ಲಾನ್‌ನ್ನು ಕೇವಲ 900 ರೂ.ಗೆ ಆಕ್ಟಿವೇಟ್ ಮಾಡಿಕೊಳ್ಳಬಹುದು. ಪ್ರತಿ ತಿಂಗಳು 900 ರೂಪಾಯಿ ಪಾವತಿಸುವ ಮೂಲಕ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಗ್ರಾಹಕರು 2700+ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ಪ್ಯಾಕ್‌ನಲ್ಲಿ 100Mbps ಇಂಟರ್‌ನೆಟ್ ಸ್ಪೀಡ್, ಅನ್‌ಲಿಮಿಟೆಡ್ ಡೇಟಾ ಮತ್ತು ಫ್ರೀ ರೌಟರ್ ನಿಮಗೆ ಸಿಗಲಿದೆ. ಇದೆಲ್ಲದರ ಜೊತೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ 200ಕ್ಕೂ ಅಧಿಕ ಲೈವ್ ಚಾನೆಲ್‌ಗಳನ್ನು ವೀಕ್ಷಿಸಬಹುದು. ಡಿಟಿಎಚ್ ಅನುಭವನ್ನು ಆನ್‌ಲೈನ್ ಪ್ಲಾಟ್‌ಫಾರಂನಲ್ಲಿಯೇ ಟಾಟಾ ನೀಡುತ್ತಿದೆ.
ಟಾಟಾದಿಂದ ಮತ್ತೊಂದು ಆಯ್ಕೆ!
ಒಟಿಟಿ ಪ್ರೇಮಿಗಳಿಗಾಗಿ ಆರು ಪ್ರಮುಖ ಪ್ಲಾಟ್‌ಫಾರಂಗಳಾದ Disney+ Hotstar, ZEE5, SonyLIV, Hungama, ShemarooMe ಮತ್ತು MX Player ಆಕ್ಸೆಸ್ ಸಿಗುತ್ತದೆ. ಒಂದು ವೇಳೆ ನೀವು ಕಡಿಮೆ ಬಜೆಟ್ ಪ್ಲಾನ್ ಸರ್ಚ್ ಮಾಡುತ್ತಿದ್ರೆ ಟಾಟಾ ಮತ್ತೊಂದು ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ. 850 ರೂಪಾಯಿ ಪ್ಲಾನ್‌ನಲ್ಲಿ 100Mbps ಸ್ಪೀಡ್ ಇಂಟರ್‌ನೆಟ್ ಜೊತೆ 4 ಒಟಿಟಿ ಪ್ಲಾಟ್‌ಫಾರಂ ಆಕ್ಸೆಸ್ ಲಭ್ಯವಾಗಲಿದೆ.
Airtel ಮತ್ತು Jioಗೆ ಶಾಕ್!
ಟಾಟಾ ಪ್ಲೇ ಬಿಡುಗಡೆ ಮಾಡಿರುವ ಫೈಬರ್ ಪ್ಲಾನ್ ಖಾಸಗಿ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋಗೆ ತೀವ್ರ ಸ್ಪರ್ಧೆಯನ್ನು ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.
Airtel Xstream Fiber ತನ್ನ ಫೈಬರ್ ಪ್ಲಾನ್‌ನಲ್ಲಿ Airtel Xstream ಆಪ್‌ನ ಆಕ್ಸೆಸ್ ಸಿಗುತ್ತದೆ. ಇದರ ಜೊತೆಯಲ್ಲಿ ಲೈವ್ ಚಾನೆಲ್ ವೀಕ್ಷಿಸುವ ಸೌಲಭ್ಯವನ್ನು ನೀಡುತ್ತದೆ.
ಜಿಯೋ ಫೈಬರ್ ಮಾಸಿಕ 899 ರೂ.ಯಲ್ಲಿ 100Mbps ಹೈಸ್ಪೀಡ್ ಆಫರ್ ನೀಡುತ್ತದೆ. ಟಾಟಾ ಪ್ಲೇಗೆ ಹೋಲಿಕೆ ಮಾಡಿದ್ರೆ ಲೈವ್ ಚಾನೆಲ್‌ಗಳ ಸಂಖ್ಯೆ ಕಡಿಮೆ. ಜಿಯೋ ಗ್ರಾಹಕರಿಗೆ OTT ಆಕ್ಸೆಸ್‌ಗಾಗಿ ಬೇರೆ ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ಸಂಪೂರ್ಣ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಇದಾಗಿದೆ ಎಂದು ಟಾಟಾ ಹೇಳಿದೆ. ಒಂದು ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಹೈ ಸ್ಪೀಡ್ ಇಂಟರ್‌ನೆಟ್, ಒಟಿಟಿ ಮತ್ತು ಟಿವಿ ಅನುಭವವನ್ನು ನೀಡುತ್ತದೆ.
ಟಾಟಾ ಪ್ಲಾನ್‌ಗೆ ಗ್ರಾಹಕರು ಹೇಳಿದ್ದೇನು?
ಟಾಟಾ ಫೈಬರ್ ಪ್ಲಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬರೆದುಕೊಂಡಿದ್ದಾರೆ. ಬಹುತೇಕ ಬಳಕೆದಾರರು ಹಣಕ್ಕೆ ತಕ್ಕ ಮೌಲ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ DTH ಜೊತೆಗೆ OTT ಅನ್ನು ಆನಂದಿಸುವ ಕುಟುಂಬಗಳಿಗೆ ಈ ಪ್ಲಾನ್ ಸಹಕಾರಿಯಾಗಲಿದೆ. ಟಿವಿ ಬೇಸರವಾದ್ರೆ, ಮನರಂಜನೆಗಾಗಿ OTT ಗೆ ಭೇಟಿ ನೀಡಬಹುದು. ಆನ್‌ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್, ಬಿಂಜ್ ವಾಚಿಂಗ್ ಸೇರಿದಂತೆ ಹಲವು ರೀತಿಯಲ್ಲಿ ಇದು ಸಹಾಯವಾಗಲಿದೆ. ಒಟ್ಟಾರೆಯಾಗಿ ಟಾಟಾ ಫೈಬರ್ ಬ್ರಾಡ್‌ಬ್ಯಾಂಡ್ ಆಲ್-ಇನ್-ಒನ್ ಪ್ಯಾಕೇಜ್ ಎಂದು ಕರೆಯಬಹುದು.
