MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಪ್ರತಿದಿನ 100 ಕೋಟಿ ಖರ್ಚು ಮಾಡುತ್ತಿದೆ ಬೆಂಗಳೂರು: ಇಷ್ಟೆಲ್ಲಾ ಹಣ ಹೋಗ್ತಿರೋದು ಎಲ್ಲಿಗೆ?

ಪ್ರತಿದಿನ 100 ಕೋಟಿ ಖರ್ಚು ಮಾಡುತ್ತಿದೆ ಬೆಂಗಳೂರು: ಇಷ್ಟೆಲ್ಲಾ ಹಣ ಹೋಗ್ತಿರೋದು ಎಲ್ಲಿಗೆ?

ಬೆಂಗಳೂರು ಅಭಿವೃದ್ಧಿಗಾಗಿ ಪ್ರತಿದಿನ ಸುಮಾರು 100 ಕೋಟಿ ರೂ ಖರ್ಚು ಮಾಡಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಹಲವು ಸಾರ್ವಜನಿಕ ಸಂಸ್ಥೆಗಳು ಈ ಹಣವನ್ನು ಖರ್ಚು ಮಾಡುತ್ತಿದ್ದರೂ, ವ್ಯವಸ್ಥಿತ ಯೋಜನೆ ಮತ್ತು ಪಾರದರ್ಶಕತೆಯ ಕೊರತೆಯಿಂದಾಗಿ ರಸ್ತೆಗುಂಡಿ, ಟ್ರಾಫಿಕ್‌ನಂತಹ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

2 Min read
Author : Mahmad Rafik
Published : Apr 13 2026, 04:08 PM IST
Share this Photo Gallery
  • FB
  • TW
  • Linkdin
  • Whatsapp
15
ಬೆಂಗಳೂರಿಗಾಗಿ ದಿನಕ್ಕೆ 100 ಕೋಟಿ ಖರ್ಚು
Image Credit : Social Media

ಬೆಂಗಳೂರಿಗಾಗಿ ದಿನಕ್ಕೆ 100 ಕೋಟಿ ಖರ್ಚು

ಸಿಲಿಕಾನ್ ಸಿಟಿ, ದೇಶದ ಐಟಿ ಕೇಂದ್ರ ಎಂದ ಕರೆಸಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರ ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುತ್ತವೆ. ಈ ಎಲ್ಲದರ ನಡುವೆ ರಸ್ತೆಗುಂಡಿ, ಟ್ರಾಫಿಕ್, ಕುಡಿಯುವ ನೀರಿನ ಅಭಾವದಂತಹ ಸಮಸ್ಯೆಗಳು ಬೆಂಗಳೂರು ನಗರಕ್ಕೆ ಕಳಂಕವನ್ನುಂಟು ಮಾಡುತ್ತಿರುತ್ತವೆ. ವರದಿಗಳ ಪ್ರಕಾರ, ಬೆಂಗಳೂರು ನಗರಕ್ಕೆ ಪ್ರತಿದಿನ ಬರೋಬ್ಬರಿ 100 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಹಾಗಾದ್ರೆ ಈ ಹಣವೆಲ್ಲಾ ಎಲ್ಲಿ ಹೋಗುತ್ತದೆ?

25
38,455 ಕೋಟಿ ರೂಪಾಯಿ ಖರ್ಚು
Image Credit : Social Media

38,455 ಕೋಟಿ ರೂಪಾಯಿ ಖರ್ಚು

ಟೈಮ್ಸ್ ಆಫ್ ಇಂಡಿಯಾ, ಜನಾಗ್ರಹ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ, ನಗರಕ್ಕೆ ದಿನಕ್ಕೆ ಅಂದಾಜು 100 ಕೋಟಿ ರೂ. ಖರ್ಚು ಮಾಡುತ್ತೆ ಎಂದು ಹೇಳಿದೆ. ಈ ವರದಿ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ನಗರಕ್ಕೆ ಒಟ್ಟು 38,455 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ರಾಜ್ಯ ಸರ್ಕಾರ ಮತ್ತು ಹಲವು ಪಬ್ಲಿಕ್ ಏಜೆನ್ಸಿಗಳು ಜಂಟಿಯಾಗಿ ಈ ಹಣವನ್ನು ಖರ್ಚು ಮಾಡುತ್ತವೆ. ಅಭಿವೃದ್ಧಿಗಾಗಿ ದಿನಕ್ಕೆ 100 ಕೋಟಿ ಖರ್ಚು ಮಾಡುತ್ತಿದ್ರೂ ನಗರದಲ್ಲಿ ರಸ್ತೆ ಗುಂಡಿಗಳು, ಮಳೆ ಬಂದಾಗ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದು, ರಾಜಕಾಲುವೆ ನೀರು ಹೊರಕ್ಕೆ ಬರೋದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬೆಂಗಳೂರು ಹೊಂದಿದೆ.

Related Articles

Related image1
ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು!
Related image2
ಪ್ರೀತಿಸಿ ಮದುವೆಯಾದ್ರೂ ವರದಕ್ಷಿಣೆಗೆ ಕಿರುಕುಳ; ಗಂಡನ ಧನದಾಹಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಮಹಿಳೆ
35
ಯಾರಿಂದ ಎಷ್ಟು ಖರ್ಚು?
Image Credit : Social Media

ಯಾರಿಂದ ಎಷ್ಟು ಖರ್ಚು?

ಬೆಂಗಳೂರಿನ ಒಟ್ಟು ಖರ್ಚಿನಲ್ಲಿ ಮಹಾನಗರ ಪಾಲಿಕೆ ಶೇ.20 ರಷ್ಟು ಮಾತ್ರ ಭರಿಸುತ್ತದೆ. ಇನ್ನುಳಿದ ಶೇ.80 ರಷ್ಟು ಹಣವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮದಂತಹ ಹಲವಾರು ಸಂಸ್ಥೆಗಳು ನಿರ್ವಹಿಸುತ್ತವೆ. ಆದ್ರೆ ಈ ಸಂಸ್ಥೆಗಳು ನೀಡುವ ಸೇವೆಗಳು ದೋಷಪೂರಿತವಾಗಿವೆ ಎಂದು ಬೆಂಗಳೂರಿನ ಜನರು ಆರೋಪಿಸುತ್ತಾರೆ.

45
ಪರಿಸ್ಥಿತಿ ಸುಧಾರಣೆ ಆಗಿಲ್ಲವೇಕೆ?
Image Credit : Social Media

ಪರಿಸ್ಥಿತಿ ಸುಧಾರಣೆ ಆಗಿಲ್ಲವೇಕೆ?

ಇಷ್ಟು ದೊಡ್ಡಮೊತ್ತ ಅಭಿವೃದ್ಧಿಗಾಗಿ ಖರ್ಚು ಆಗ್ತಿದ್ರೂ ನಗರದ ಪರಿಸ್ಥಿತಿ ಸುಧಾರಿಸುತ್ತಿಲ್ಲ ಯಾಕೆ ಎಂಬುವುದಕ್ಕೆ ತಜ್ಞರು ಮೂರು ಪ್ರಮುಖ ಕಾರಣಗಳನ್ನು ನೀಡುತ್ತಾರೆ.

ಕಾರಣ 1: ಹಣವು ವಿವಿಧ ಏಜೆನ್ಸಿಗಳಲ್ಲಿ ಹಂಚಿಕೊಂಡಿದ್ದು, ವ್ಯವಸ್ಥಿತ ಖರ್ಚನ್ನು ತಡೆಯುತ್ತದೆ. ಹಾಗೆಯೇ ಈ ಹಣದ ನಿರ್ವಹಣೆ ಮತ್ತು ಖರ್ಚುಗಳ ಲೆಕ್ಕವನ್ನಿಡಲು ಕೇಂದ್ರೀಕೃತ ವ್ಯವಸ್ಥೆ ಇರಬೇಕು.

ಇದನ್ನೂ ಓದಿ: ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ

55
ಕಾರಣ 2 ಮತ್ತು 3
Image Credit : Social Media

ಕಾರಣ 2 ಮತ್ತು 3

ಅನೇಕ ಸಂಸ್ಥೆಗಳು ಖರ್ಚಿನ ವಿವರಗಳನ್ನು ಸಾರ್ವಜನಿಕಗೊಳಿಸಲ್ಲ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ತಜ್ಞರು ಬೇಸರ ವ್ಯಕ್ತಪಡಿಸುತ್ತಾರೆ.

ಏಜೆನ್ಸಿಗಳು ಯಾವುದೇ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡದಿರೋದು ನಗರದಲ್ಲಿನ ಸಮಸ್ಯೆಗಳಿಗೆ ಕಾರಣವಾಗಿದೆ. ವ್ಯವಸ್ಥೆಯು ದುರ್ಬಲವಾಗಿರೋದರಿಂದ ಪ್ರತಿದಿನ ₹100 ಕೋಟಿ ಖರ್ಚು ಮಾಡಿದರೂ, ಸಾರ್ವಜನಿಕರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ

ಇದನ್ನೂ ಓದಿ: ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

Latest Videos
Recommended Stories
Recommended image1
ವಾಲ್-ಮೆಟ್’ನಲ್ಲಿ ನುವಾಮಾದಿಂದ ₹200 ಕೋಟಿ ಹೂಡಿಕೆ, ಡಿಫೆನ್ಸ್‌, ಏರೋಸ್ಪೇಸ್‌ ವಲಯದ ಸ್ವಾವಲಂಬನೆಗೆ ಹೊಸ ಬೂಸ್ಟ್!
Recommended image2
Bigg Boss ಮನೆಯಲ್ಲಿ ಹೇಳಿದಂತೆ ಮಾಡಿದ ರಕ್ಷಿತಾ ಶೆಟ್ಟಿ; ಉದ್ಘಾಟನೆಗೆ ಬಂದು ಕಿತ್ತಾಡಿಕೊಂಡ ಅಣ್ಣ-ತಂಗಿ
Recommended image3
ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ
Related Stories
Recommended image1
ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು!
Recommended image2
ಪ್ರೀತಿಸಿ ಮದುವೆಯಾದ್ರೂ ವರದಕ್ಷಿಣೆಗೆ ಕಿರುಕುಳ; ಗಂಡನ ಧನದಾಹಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಮಹಿಳೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved