MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಅಪ್ಪನ ಆಸೆಯಂತೆ ಬಿಜಿನೆಸ್​ ಶುರು ಮಾಡಿದ ಅಪ್ಪು ಪುತ್ರಿ ವಂದಿತಾ: ಏನಿದು 'ನುಕಾಸ್​' ಕೆಫೆ

ಅಪ್ಪನ ಆಸೆಯಂತೆ ಬಿಜಿನೆಸ್​ ಶುರು ಮಾಡಿದ ಅಪ್ಪು ಪುತ್ರಿ ವಂದಿತಾ: ಏನಿದು 'ನುಕಾಸ್​' ಕೆಫೆ

ನಟ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ತಂದೆಯ ಆಸೆಯಂತೆ 'ನುಕಾಸ್ ಕೆಫೆ' ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ. ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ 'ನುಕ್ಕಿ' ಎಂಬ ಅಡ್ಡ ಹೆಸರನ್ನೇ ತಮ್ಮ ಬ್ರ್ಯಾಂಡ್‌ಗೆ ಇಟ್ಟಿರುವ ಅವರು, ಮನೆಯಲ್ಲಿಯೇ ಬೇಕರಿ ತಿನಿಸುಗಳನ್ನು ತಯಾರಿಸುತ್ತಿದ್ದಾರೆ.

2 Min read
Author : Suchethana D
Published : Jul 15 2026, 05:24 PM IST
Share this Photo Gallery
  • FB
  • TW
  • Linkdin
  • Whatsapp
16
ಅಪ್ಪು ಮಗಳ ಹೊಸ ಬಿಜಿನೆಸ್​
Image Credit : Social Media

ಅಪ್ಪು ಮಗಳ ಹೊಸ ಬಿಜಿನೆಸ್​

ಕನ್ನಡಿಗರ ಮನಸ್ಸನ್ನು ಗೆದ್ದು ಅಲ್ಪ ಕಾಲದಲ್ಲಿಯೇ ಕಣ್ಮರೆಯಾದ ಎಲ್ಲರ ಪ್ರೀತಿಯ ಅಪ್ಪು ಅರ್ಥಾತ್​ ನಟ ಪುನೀತ್​ ರಾಜ್​ಕುಮಾರ್​ ಅವರ ಮಕ್ಕಳು ಅಪ್ಪನಂತೆ ನಟನೆಯ ಹಾದಿ ಹಿಡಿಯಲಿಲ್ಲ. ಬದಲಿಗೆ ಚಿಕ್ಕ ಮಗಳು ವಂದಿತಾ ಪುನೀತ್​ ರಾಜ್​ (Vanditha Puneeth Rajkumar) ಅಪ್ಪನ ಆಸೆಯನ್ನು ಈಗ ಈಡೇರಿಸಿದ್ದಾರೆ. ಅಪ್ಪ ಅಪ್ಪುವಿನ ಇಚ್ಛೆಯಂತೆ ಬಿಜಿನೆಸ್​ ಶುರು ಮಾಡಿದ್ದು, ಇದರ ಇನ್ವಿಟೇಷನ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏನಿದು ಬಿಜಿನೆಸ್​?
Image Credit : Vandita Rajkumar Instagram

ಏನಿದು ಬಿಜಿನೆಸ್​?

ವಂದಿತಾ ಅವರು ಖುದ್ದು ತಯಾರಿಸುವ ಹೋಮ್​ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್​ ಕೆಫೆ' ಎಂದು ಹೆಸರು ಇಟ್ಟಿದ್ದಾರೆ. ಇದಕ್ಕಾಗಿ ಅವರು ಹೊಸ ಮಳಿಗೆ ತೆರೆದಿಲ್ಲ. ಬದಲಿಗೆ ಮನೆಯಲ್ಲಿಯೇ ಬೇಕರಿ ತಿನಿಸುವ ತಯಾರಿಸಿ ಅಗತ್ಯ ಇದ್ದವರಿಗೆ ಕಳುಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇರುವ ಮನೆಯಲ್ಲಿಯೇ ತಾವೇ ಖುದ್ದು ಹೊಸ ಹೊಸ ತಿನಿಸುಗಳನ್ನು ತಯಾರಿಸಿ ಆರ್ಡರ್​ ಪಡೆದು ಮಾರಾಟ ಮಾಡುತ್ತಿದ್ದಾರೆ ವಂದಿತಾ ಪುನೀತ್​ ರಾಜ್​.

Related Articles

Related image1
Dr. Rajkumar​ ಉರ್ಫ್​ ಮುತ್ತರಾಜ ಆದ ನಾನು: 1985ರ ಕುತೂಹಲದ ಜಾಹೀರಾತಿನಲ್ಲಿ ಏನಿದೆ ನೋಡಿ
36
ಏನಿದು ನುಕಾಸ್​?
Image Credit : Vandita Rajkumar Instagram

ಏನಿದು ನುಕಾಸ್​?

ನುಕಾಸ್​ (Nuka's Backery) ಹೆಸರು ಸ್ವಲ್ಪ ವಿಚಿತ್ರ ಎನ್ನಿಸುವುದು ಉಂಟು. ಆದರೆ ಈ ಹೆಸರಿನ ಹಿಂದೆ ಇರುವುದು ಅಪ್ಪ ಅಪ್ಪುವಿನ ನೆನಪು. ಹೌದು. ವಂದಿತಾ ಅವರನ್ನು ಅಪ್ಪ ಪುನೀತ್​ ಸೇರಿದಂತೆ ಕುಟುಂಬಸ್ಥರು ನುಕ್ಕಿ ಎಂದೇ ಕರೆಯುತ್ತಿದ್ದರು. ಇದು ಅವರ ನಿಕ್​​ ನೇಮ್​. ಇದೇ ಹೆಸರನ್ನು ತಮ್ಮ ಬೇಕರಿಗೂ ಇಟ್ಟುಕೊಂಡು ನುಕಾಸ್​ ಎಂದು ನಾಮಕರಣ ಮಾಡಿದ್ದಾರೆ ವಂದಿತಾ.

46
ಗೀತಾ ಶಿವರಾಜ್​ ಕುಮಾರ್​ ಅವರ ಪ್ರೇರಣೆ
Image Credit : Vandita Rajkumar Instagram

ಗೀತಾ ಶಿವರಾಜ್​ ಕುಮಾರ್​ ಅವರ ಪ್ರೇರಣೆ

ತಮ್ಮ ಅತ್ತಿಗೆ ಶಿವರಾಜ್​ಕುಮಾರ್​ ಅವರ ಪತ್ನಿ ಗೀತಾ ಅವರಿಗೆ ಪುನೀತ್​ ಅವರು, ಇದೇ ಬಿಜಿನೆಸ್​ ಮಾಡಲು ಪ್ರೇರೇಪಿಸಿದ್ದರಂತೆ. ಬೇಕಿಂಗ್​ ತುಂಬಾ ಚೆನ್ನಾಗಿ ಮಾಡುವ ಗೀತಾ ಅವರಿಗೆ ಇದನ್ನು ಕಮರ್ಷಿಯಲ್ ಆಗಿ ತೆಗೆದುಕೊಳ್ಳಿ ಎಂದು ಅಪ್ಪು ಸಲಹೆ ಕೊಟ್ಟಿದ್ದರಂತೆ. ಆದರೆ ಆ ಸಮಯದಲ್ಲಿ ಕಮರ್ಷಿಯಲ್​ ಆಗಿ ಮಾಡುವುದು ಹೇಗೆ ಎಂದು ತಮಗೆ ತಿಳಿದಿರಲಿಲ್ಲ ಎಂದು ಗೀತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ಆಸೆಯನ್ನು ಈಗ ಪುತ್ರಿ ವಂದಿತಾ ನೆರವೇರಿಸುತ್ತಿದ್ದಾರೆ.

56
ವೆಬ್​ಸೈಟ್​ ಆರಂಭ
Image Credit : Vandita Rajkumar Instagram

ವೆಬ್​ಸೈಟ್​ ಆರಂಭ

ನುಕಾಸ್​ಕೆಫೆ ಡಾಟ್​ ಕಾಮ್​ ವೆಬ್​ಸೈಟ್​ ಆರಂಭಿಸಲಾಗಿದ್ದು, ಇದರ ಮೂಲಕ ಆರ್ಡರ್​ ಪಡೆದುಕೊಂಡು ವಂದಿತಾ ಬೇಕರಿ ಐಟಮ್ಸ್​ ಡೆಲವರಿ ಮಾಡುತ್ತಾರೆ. ಯಾವುದಾದರೂ ಕಾರ್ಯಕ್ರಮ ಇದ್ದಲ್ಲಿ, ಅದರ ಘೋಷವಾಕ್ಯ (ಥೀಮ್​) ತಕ್ಕಂತೆ ಬೇಕರಿ ತಿನಿಸುಗಳನ್ನು ಮಾಡಿಕೊಡುವಲ್ಲಿಯೂ ವಂದಿತಾ ನಿಸ್ಸೀಮರು. ಒಬ್ಬರೇ ತಯಾರಿಸುವ ಕಾರಣ, ಆರ್ಡರ್​ ಕೊಡುವವರು ಸ್ವಲ್ಪ ಬೇಗನೇ ಕೊಡಬೇಕು ಎನ್ನುವುದು ಅವರ ಮನವಿ.

66
ಶಕ್ತಿಧಾಮದಲ್ಲಿ ಸ್ವಾವಲಂಬನೆ
Image Credit : our own

ಶಕ್ತಿಧಾಮದಲ್ಲಿ ಸ್ವಾವಲಂಬನೆ

ಅಂದಹಾಗೆ ರಾಜ್​ಕುಮಾರ್​ ಮತ್ತು ಪಾರ್ವತಮ್ಮ ಅವರು ಕಟ್ಟಿಬೆಳೆಸಿದ ಶಕ್ತಿಧಾಮದಲ್ಲಿ ಮಹಿಳೆಯರಿಗಾಗಿ ವಿವಿಧ ರೀತಿಯ ತರಬೇತಿ ನೀಡಲಾಗುತ್ತಿದೆ. ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರು ಗೀತಾ. ಗೀತಾ ಅವರು ಇಲ್ಲಿಯ ಹೆಣ್ಣುಮಕ್ಕಳನ್ನು ಸ್ವಾವಲಂಬಿ ಮಾಡಲು ಬೇಕಿಂಗ್​ ಸೇರಿದಂತೆ ವಿವಿಧ ತರಬೇತಿ ನೀಡುತ್ತಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಪುನೀತ್ ರಾಜ್‌ಕುಮಾರ್
ಸ್ಯಾಂಡಲ್‌ವುಡ್
ವ್ಯವಹಾರ
ಮಹಿಳೆಯರು

Latest Videos
Recommended Stories
Recommended image1
₹25 ಲಕ್ಷದಿಂದ ಶುರುವಾದ ಕನಸು, ಇಂದು ₹54,000 ಕೋಟಿ ಸಾಮ್ರಾಜ್ಯ ಕಟ್ಟಿದ Kalyan jewellers ನ ಟಿ.ಎಸ್. ಕಲ್ಯಾಣರಾಮನ್
Recommended image2
ದೊಡ್ಡ ಡಿಗ್ರಿನೂ ಇಲ್ಲ, ಅನುಭವನೂ ಜೀರೋ: ಮೊದಲ ವರ್ಷದ ಪದವಿಯಲ್ಲೇ 50 ಲಕ್ಷ ಆದಾಯ ಗಳಿಸ್ತಿರೋ ಯುವಕನ ಸ್ಟೋರಿ ಕೇಳಿ
Recommended image3
Bengaluru ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್, ಕನ್ನಡಿಗರು ಓಕೆ! ಹಿಂದಿಗರು ಯಾಕೆ?
Related Stories
Recommended image1
Dr. Rajkumar​ ಉರ್ಫ್​ ಮುತ್ತರಾಜ ಆದ ನಾನು: 1985ರ ಕುತೂಹಲದ ಜಾಹೀರಾತಿನಲ್ಲಿ ಏನಿದೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved