₹200 ರೂಪಾಯಿಗೆ ಏರ್‌ಟೆಲ್‌ನಿಂದ 30GB ಡೇಟಾ, ಹಲವು OTT ಸಬ್‌ಸ್ಕ್ರಿಪ್ಷನ್ ಫ್ರೀ!
Airtel Box Office Plan: ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲೊಂದಾದ ಏರ್‌ಟೆಲ್ ಬಳಕೆದಾರರಿಗೆ ಶುಭಸುದ್ದಿ ನೀಡಿದೆ. ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅಚ್ಚರಿಯ ಪ್ಲಾನ್ ಕೊಡುತ್ತ ಬಂದಿರವ ಏರ್‌ಟೆಲ್ ಇದೀಗ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ ಮಾಡಿದೆ.

Airtel Box Office Plan: ಕೇವಲ 200 ರೂಪಾಯಿ ರೀಚಾರ್ಜ್ ಎಷ್ಟೆಲ್ಲ ಪ್ರಯೋಜನ!
Airtel Box Office Plan: ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲೊಂದಾದ ಏರ್‌ಟೆಲ್ ಬಳಕೆದಾರರಿಗೆ ಶುಭಸುದ್ದಿ ನೀಡಿದೆ. ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅಚ್ಚರಿಯ ಪ್ಲಾನ್ ಕೊಡುತ್ತ ಬಂದಿರವ ಏರ್‌ಟೆಲ್ ಇದೀಗ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 200 ರೂಪಾಯಿಗೆ ಅಧಿಕ ಡೇಟಾ ಜೊತೆಗೆ ಎಂಟರ್‌ಟೈನ್‌ಮೆಂಟ್ ಆಯ್ಕೆಗಳನ್ನು ಬಯಸುವ ಗ್ರಾಹಕರಿಗೆ ಇದು ಹೇಳಿ ಮಾಡಿಸಿದಂತಿದೆ.
Airtel Box Office Plan: 30GB ಹೈ-ಸ್ಪೀಡ್ ಡೇಟಾ
28 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್, ಇದರಲ್ಲಿ ಬಳಕೆದಾರರಿಗೆ ಒಟ್ಟು 30GB ಹೈ-ಸ್ಪೀಡ್ ಡೇಟಾ ಸಿಗಲಿದೆ. ಅಷ್ಟೇ ಅಲ್ಲ, ನಿಮ್ಮ ಪ್ರದೇಶದಲ್ಲಿ ಏರ್‌ಟೆಲ್ 5G ನೆಟ್‌ವರ್ಕ್ ಲಭ್ಯವಿದ್ದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅನ್‌ಲಿಮಿಟೆಡ್ 5G ಡೇಟಾವನ್ನು ಬಳಸಿಕೊಳ್ಳುವ ಅವಕಾಶವೂ ಇದರಲ್ಲಿದೆ!
ಬಾಕ್ಸ್ ಆಫೀಸ್ ಪ್ಯಾಕ್‌ನ ವಿಶೇಷತೆ ಏನೆಂದರೆ
ಹೆಸರೇ ಸೂಚಿಸುವಂತೆ ಈ ಪ್ಯಾಕ್ ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಕೇವಲ ಡೇಟಾ ಮಾತ್ರವಲ್ಲದೆ, ಹಲವು ಜನಪ್ರಿಯ ಓಟಿಟಿ(OTT) ಪ್ಲಾಟ್‌ಫಾರ್ಮ್‌ಗಳ Subscriptions ಇದು ಒಳಗೊಂಡಿದೆ. ಇದರಿಂದಾಗಿ ಬಳಕೆದಾರರು ಒಂದೇ ರೀಚಾರ್ಜ್‌ನಲ್ಲಿ ಡೇಟಾ ಸಿಕ್ಕಂತಾಗುತ್ತೆ ಜೊತೆಗೆ OTT ಯಲ್ಲಿ ಸಿನಿಮಾಗಳನ್ನ ನೋಡಬಹುದು. ಏಕೆಂದರೆ ಈ ಪ್ಲಾನ್ ರೀಚಾರ್ಜ್ ಮಾಡಿಸಿದರೆ ನಿಮಗೆ ಅಮೆಜಾನ್ ಪ್ರೈಮ್ ವಿಡಿಯೋದ ಮೊಬೈಲ್ ಆವೃತ್ತಿ (Amazon Prime Video Mobile Edition) ಲಭ್ಯವಾಗಲಿದೆ. ಇದರ ಜೊತೆಗೆ ZEE5 ಪ್ರೀಮಿಯಂ ಮತ್ತು ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಪ್ರೀಮಿಯಂ (Airtel Xstream Play Premium) Subscriptions ಕೂಡ ಉಚಿತವಾಗಿ ಸಿಗಲಿವೆ.
Airtel Box Office Plan: ಕೇವಲ 200 ರೂಪಾಯಿ ರೀಚಾರ್ಜ್ ಎಷ್ಟೆಲ್ಲ ಪ್ರಯೋಜನ ಅಬ್ಬಾ!
ಇವೆಲ್ಲವೂ ಸೇರಿ ಸಿನಿಮಾ, ವೆಬ್ ಸಿರೀಸ್ ಮತ್ತು ಟಿವಿ ಶೋಗಳನ್ನು ನೋಡಲು ಅನುಕೂಲ. ಇನ್ನು ಕುತೂಹಲಕಾರಿ ಸಂಗತಿ ಎಂದರೆ, ಈ ಕೊಡುಗೆಗಳ ಪಟ್ಟಿಯಲ್ಲಿ 'ಜಿಯೋಹಾಟ್‌ಸ್ಟಾರ್' (JioHotstar) ಹೆಸರನ್ನೂ ಸೇರಿಸಲಾಗಿದೆ! ಒಟ್ಟಿನಲ್ಲಿ, 200 ರೂಪಾಯಿ ಬೆಲೆಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ನೀಡಿರುವುದು ಸದ್ಯದ ಮಾರುಕಟ್ಟೆಯಲ್ಲಿ ಏರ್‌ಟೆಲ್‌ನ ಈ ಕೊಡುಗೆ ಅದ್ಭುತ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

