- Home
- Entertainment
- Sandalwood
- 'ಅದೃಷ್ಟವು ನಮ್ಮ ಕೈಯಲ್ಲಿಲ್ಲ' ಎನ್ನುತ್ತಲೇ ಪತಿ ಜೊತೆ ಹೊಸ ಹೆಜ್ಜೆ ಇಟ್ಟ ನಟಿ ತಾರಾ: ಫೋಟೋಗಳು ವೈರಲ್
'ಅದೃಷ್ಟವು ನಮ್ಮ ಕೈಯಲ್ಲಿಲ್ಲ' ಎನ್ನುತ್ತಲೇ ಪತಿ ಜೊತೆ ಹೊಸ ಹೆಜ್ಜೆ ಇಟ್ಟ ನಟಿ ತಾರಾ: ಫೋಟೋಗಳು ವೈರಲ್
ಹಿರಿಯ ನಟಿ ತಾರಾ ಅನುರಾಧ ಮತ್ತು ಪತಿ ಎಚ್.ಸಿ ವೇಣುಗೋಪಾಲ್ ಬೆಂಗಳೂರಿನ ಜೆಪಿ ನಗರದಲ್ಲಿ ತಮ್ಮ ಹಳೆಯ ಮನೆಯ ಜಾಗದಲ್ಲಿ ನೂತನ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಕಟ್ಟಡದ ಚಾವಣಿ ಹಾಕುವ ಮುನ್ನ ವಿಶೇಷ ಮೌಲ್ಡಿಂಗ್ ಪೂಜೆಯನ್ನು ನೆರವೇರಿಸಿದ್ದಾರೆ.

ಕಮರ್ಷಿಯಲ್ ಕಾಂಪ್ಲೆಕ್ಸ್
ಸ್ಯಾಂಡಲ್ವುಡ್ ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ ಅನುರಾಧ (Tara Anuradha) ಹಾಗೂ ಛಾಯಾಗ್ರಾಹಕ ಎಚ್.ಸಿ ವೇಣುಗೋಪಾಲ್ ದಂಪತಿ ಬೆಂಗಳೂರಿನಲ್ಲಿ, ನೂತನ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದು, ಅದರ ವಿಡಿಯೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅದೃಷ್ಟವು ನಮ್ಮ ಕೈಯಲ್ಲಿಲ್ಲ
ಅದೃಷ್ಟವು ನಮ್ಮ ಕೈಯಲ್ಲಿಲ್ಲ. ಆದರೆ ನಮ್ಮ ನಿರ್ಧಾರಗಳು ನಮ್ಮ ಕೈಯಲ್ಲಿವೆ. ನಮ್ಮ ಸರಿಯಾದ ನಿರ್ಧಾರಗಳು ನಮ್ಮ ಅದೃಷ್ಟವನ್ನು ನಿರ್ಮಿಸಬಹುದು. ಆದರೆ ಅದೃಷ್ಟವು ಎಂದಿಗೂ ನಮ್ಮೆಲ್ಲರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಶುಭೋದಯ ಎಲ್ಲರಿಗೂ ಎನ್ನುವ ಶೀರ್ಷಿಕೆ ಕೊಟ್ಟಿರುವ ನಟಿ, ಪತಿಯ ಜೊತೆ ಜೆಪಿ ನಗರದ ಹಳೆಯ ನಿವೇಶನದಲ್ಲಿನ ಈ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಮೌಲ್ಡಿಂಗ್ ಪೂಜೆಯನ್ನು ನೆರವೇರಿಸುವ ಮೂಲಕ ಕಟ್ಟಡ ನಿರ್ಮಾಣದ ಮತ್ತೊಂದು ಪ್ರಮುಖ ಘಟ್ಟಕ್ಕೆ ತಲುಪಿದ್ದಾರೆ.
ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ
2024ರಲ್ಲಿ ನಟಿ ತಾರಾ ಅವರು ಜೆಪಿ ನಗರದಲ್ಲಿದ್ದ ತಮ್ಮ ಹಳೆಯ ಮನೆಯನ್ನ ತೊರೆದು ನೂತನವಾಗಿ ನಿರ್ಮಿಸಿದ್ದ ಮನೆಗೆ ಗೃಹಪ್ರವೇಶ ಮಾಡಿ ಶಿಫ್ಟ್ ಆಗಿದ್ದರು. ಹೊಸ ಮನೆಗೆ ಕಾಲಿಟ್ಟ ನಂತರ ಇದೀಗ ಹಳೆಯ ಮನೆಯನ್ನ ಕೆಡವಿ, ಅಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಿಸಲು ತಾರಾ ದಂಪತಿ ತೀರ್ಮಾನಿಸಿದ್ದಾರೆ.
ಚಾವಣಿ ಹಾಕುವ ಶುಭ ಕಾರ್ಯ
ಕಟ್ಟಡ ನಿರ್ಮಾಣದ ಪ್ರಮುಖ ಹಂತವಾದ ಚಾವಣಿ ಹಾಕುವ ಶುಭ ಕಾರ್ಯಕ್ಕೂ ಮುನ್ನ ತಾರಾ ಅನುರಾಧ ಹಾಗೂ ವೇಣುಗೋಪಾಲ್ ದಂಪತಿ ಸ್ಥಳದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಪತಿಯ ಜೊತೆ ಮೌಲ್ಡಿಂಗ್ ಪೂಜೆ ನೆರವೇರಿಸಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನಟಿ.
ತಿರುಪತಿ ದರ್ಶನ
ಅಂದಹಾಗೆ ಈಚೆಗಷ್ಟೇ ತಾರಾ ಅವರು, ಆ್ಯಂಕರ್ ಅನುಶ್ರೀ ಹಾಗೂ ನಟಿ ದೀಪಿಕಾ ದಾಸ್ ಜೊತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ಫೋಟೋ ಶೇರ್ ಮಾಡಿಕೊಂಡಿದ್ದರು. ಸಾಮಾನ್ಯವಾಗಿ ನಟಿ ತಾರಾ ಅವರು ಆಗಾಗ್ಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ. ಅಲ್ಲದೇ, ಅನೇಕ ದೇವಸ್ಥಾನಗಳಿಗೂ ಭೇಟಿ ನೀಡುತ್ತಾರೆ. ಇದೇ ಮೊದಲ ಬಾರಿಗೆ ಕಲಾವಿದರ ಜೊತೆ ಒಟ್ಟಾಗಿ ದರ್ಶನ ಪಡೆದಿರುವುದು ವಿಶೇಷ.
ನಟಿ ಕುರಿತು
ನಟಿ ತಾರಾ ಅನುರಾಧಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿದ್ದಾರೆ. ನೂರಾರು ಯಶಸ್ವಿ ಸಿನಿಮಾಗಳನ್ನು ನೀಡಿದ್ದು, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ʻರಾಜಾ ರಾಣಿʼ ಮುಂತಾದ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

