- Home
- Business
- ಕೋಟಿ ಕೋಟಿಗೆ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯುಭಾರಿಯಾದ ತಮನ್ನಾ! ಕನ್ನಡ ನಟಿಯರು ಸಿಗಲಿಲ್ವಾ ಎಂದ ನೆಟ್ಟಿಗರು!
ಕೋಟಿ ಕೋಟಿಗೆ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯುಭಾರಿಯಾದ ತಮನ್ನಾ! ಕನ್ನಡ ನಟಿಯರು ಸಿಗಲಿಲ್ವಾ ಎಂದ ನೆಟ್ಟಿಗರು!
Actress Tamannaah Bhatia: ನಟಿ ತಮನ್ನಾ ಭಾಟಿಯಾ ಅವರು ಮುಂದಿನ ಎರಡು ವರ್ಷಗಳ ಕಾಲ ಮೈಸೂರು ಸ್ಯಾಂಡಲ್ ಸೋಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಕೆಲವು ನೆಟ್ಟಿಗರು ಈ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರದ ಒಡೆತನದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಉತ್ಪನ್ನಗಳಿಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಮೈಸೂರು ಸ್ಯಾಂಡಲ್ ಸೋಪ್‌ಗೆ ಮುಖವಾಗಿ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಅನ್ನು 1916 ರಲ್ಲಿ ಮೈಸೂರಿನ ರಾಜ ಕೃಷ್ಣ ರಾಜ ಒಡೆಯರ್ IV ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಕಾರ್ಖಾನೆಯನ್ನು ಸ್ಥಾಪಿಸಿದಾಗಿನಿಂದ ತಯಾರಿಸಲಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್ ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿದೆ.
Mysuru Sandal Soap
ಎಷ್ಟು ಕೋಟಿಗೆ ಒಪ್ಪಂದ?
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿ..ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ತಮನ್ನಾ ಭಾಟಿಯ ಇವರನ್ನು 2 ವರ್ಷ ಮತ್ತು ಎರಡು ದಿನಗಳ ಅವಧಿಗೆ ರೂ.6.20 ಕೋಟಿ ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ಎರಡು ವರ್ಷಗಳ ಮೈಸೂರು ಸ್ಯಾಂಡಲ್ ಸೋಪ್ ತಮನ್ನಾ ಫೋಟೋ ಇರಲಿದೆ.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಬೆಂಗಳೂರಿನಲ್ಲಿರುವ ಕೆಎಸ್‌ಡಿಎಲ್‌ನ ಸೋಪ್ ಕಾರ್ಖಾನೆ ಭಾರತದಲ್ಲಿಯೇ ಅತಿದೊಡ್ಡ ಕಾರ್ಖಾನೆಯಾಗಿದೆ. ವರ್ಷಕ್ಕೆ 26,000 ಟನ್ ಸೋಪ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಈ ಕಾರ್ಖಾನೆಯನ್ನು ಹೊಂದಿದೆ.
ಸಾರ್ವಜನಿಕರಿಂದ ಅಸಮಾಧಾನ?
ತಮನ್ನಾ ಭಾಟಿಯಾ ಆಯ್ಕೆಗೆ ಕೆಲ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದು, ನಿಮಗೆ ಕನ್ನಡದ ನಟಿಯರು ಸಿಗಲಿಲ್ಲವಾ ಎಂದು ಕೇಳಿದ್ದಾರೆ. ಈ ಮಾತಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಉತ್ಪನ್ನಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಇಂತಹ ಸ್ಟಾರ್ ಸೆಲಿಬ್ರಿಟಿಗಳ ಅಗತ್ಯವಿರುತ್ತದೆ. ಇದು ಮಾರುಕಟ್ಟೆ ತಂತ್ರದ ಒಂದು ಭಾಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.