MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಮೈಕ್ರೋಮ್ಯಾಕ್ಸ್‌ ಪತನಕ್ಕೆ ಕಾರಣ ಬಹಿರಂಗ, ಸದ್ದಿಲ್ಲದೆ 6200 ಕೋಟಿ ರೂ.ಗಳ ಹೊಸ ಸಾಮ್ರಾಜ್ಯ ತೆರೆದ ನಟಿಯ ಪತಿ!

ಮೈಕ್ರೋಮ್ಯಾಕ್ಸ್‌ ಪತನಕ್ಕೆ ಕಾರಣ ಬಹಿರಂಗ, ಸದ್ದಿಲ್ಲದೆ 6200 ಕೋಟಿ ರೂ.ಗಳ ಹೊಸ ಸಾಮ್ರಾಜ್ಯ ತೆರೆದ ನಟಿಯ ಪತಿ!

ಮಾಜಿ ನಟಿ ಆಸಿನ್ ಅವರ ಪತಿ ರಾಹುಲ್ ಶರ್ಮಾ, ಮೈಕ್ರೋಮ್ಯಾಕ್ಸ್‌ನ ಸಹ-ಸಂಸ್ಥಾಪಕರು, ಕಂಪನಿಯ ಯಶಸ್ಸು ಮತ್ತು ನಂತರದ ಹಿನ್ನಡೆಯ ಬಗ್ಗೆ ಮಾತನಾಡಿದ್ದಾರೆ. ಚೀನೀ ಕಂಪನಿಗಳ ಸ್ಪರ್ಧೆ ಮತ್ತು ಸಾಂಕ್ರಾಮಿಕ ರೋಗವು ಮೈಕ್ರೋಮ್ಯಾಕ್ಸ್‌ನ ಪತನಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು. ಈಗ ಹೊಸ ಉತ್ಪಾದನಾ ವ್ಯವಹಾರದಲ್ಲಿ ಯಶಸ್ವಿಯಾಗಿರುವ ರಾಹುಲ್, ಮೈಕ್ರೋಮ್ಯಾಕ್ಸ್‌ಗಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

3 Min read
Gowthami K
Published : May 12 2025, 01:50 PM IST
Share this Photo Gallery
  • FB
  • TW
  • Linkdin
  • Whatsapp
15

ಮಾಜಿ ನಟಿ ಆಸಿನ್ ಅವರ ಪತಿ ರಾಹುಲ್ ಶರ್ಮಾ, ಮೊಬೈಲ್ ಫೋನ್ ಕ್ಷೇತ್ರದ ಅತಿದೊಡ್ಡ ಕಂಪೆನಿ ಮೈಕ್ರೋಮ್ಯಾಕ್ಸ್  ಸಹ- ಸಂಸ್ಥಾಪರಾಗಿದ್ದಾರೆ. ಅಂತರಾಷ್ಟ್ರೀಯ ಉತ್ಪನ್ನವನ್ನು ಭಾರತಕ್ಕಡ ತಂದ ಬಳಿಕ ಕೆಲವೇ ವರ್ಷಗಳಲ್ಲಿ ಈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆಯಿತು. ನೋಕಿಯಾ, ಸ್ಯಾಮ್‌ಸಂಗ್‌ ಗಳಿಗೂ ಪ್ರತಿಸ್ಪರ್ಧೆ ಒಡ್ಡಿ ಉತ್ತಮ ಮಾರಾಟ ಸಾಧಿಸಿತು. ಆಗ ವರ್ಷಕ್ಕೆ 12,000 ಕೋಟಿ ರೂ.ದಿಂದ 15,000 ಕೋಟಿ ರೂ.ಗಳವರೆಗೂ ವ್ಯವಹಾರ ಮಾಡುತ್ತಿತ್ತು. ರಾಹುಲ್ ಹೇಳುವಂತೆ, ವಿಶ್ವದ ಟಾಪ್ 10 ಮೊಬೈಲ್ ಕಂಪನಿಗಳಲ್ಲಿ ಮೈಕ್ರೋಮ್ಯಾಕ್ಸ್ ಕೂಡ ಒಂದಾಗಿತ್ತು. ಈ ಬೆಳವಣಿಗೆಯ ಅವಧಿಯಲ್ಲಿ ಅವರು ನಟಿ ಆಸಿನ್ ಅವರನ್ನು ವಿವಾಹವಾದರು, ನಂತರ ಆಸಿನ್ ಚಲನಚಿತ್ರೋದ್ಯಮದಿಂದ ಹಿಂದೆ ಸರಿದರು.
 

25

ಆದರೆ ನಂತರ ಚೀನೀ ಕಂಪನಿಗಳು ಮಾರುಕಟ್ಟೆಗೆ ಬಂದು ಪೂರೈಕೆ ಸರಪಳಿಯನ್ನು (supply chain) ತಮ್ಮ ಕಡೆಗೆ ತಿರುಗಿಸಿಕೊಂಡವು. ಮೈಕ್ರೋಮ್ಯಾಕ್ಸ್ ಹೊಸ ತಂತ್ರಜ್ಞಾನವನ್ನು ತರಲು ಹೋರಾಟ ಮಾಡುತ್ತಿತ್ತು, ಆದರೆ ಅವರಿಗೆ ಬೇಕಾದ ಪೂರೈಕೆ ಸರಕೂ ಇಲ್ಲ, ಬೆಂಬಲವೂ ಇಲ್ಲ ಇದರಿಂದಾಗಿ ಹಿನ್ನಡೆ ಎದುರಾಯಿತು. ಇದು ಮೈಕ್ರೋಮ್ಯಾಕ್ಸ್‌ನಲ್ಲಿ ಮಾತ್ರ ಸಂಭವಿಸಲಿಲ್ಲ.  ಇದು ಜಾಗತಿಕ ವಿದ್ಯಮಾನವಾಗಿತ್ತು. ಆ ಸಮಯದಲ್ಲಿ ಜಾಗತಿಕವಾಗಿ ಬಹಳಷ್ಟು ಬ್ರ್ಯಾಂಡ್‌ಗಳು  ಮಾರುಕಟ್ಟೆಯನ್ನು ಪ್ರವೇಶಿಸಿದವು, ಆದರೆ ಜನರು ನಮ್ಮ ಬಗ್ಗೆ ಮಾತನಾಡುತ್ತಿದ್ದರು ಏಕೆಂದರೆ ನಾವು ದೊಡ್ಡವರು. ಇದೇ ಸಮಯದಲ್ಲಿ ಚೀನೀ ತಯಾರಕರು ಉದಯೋನ್ಮುಖ ಚೀನೀ ಬ್ರ್ಯಾಂಡ್‌ಗಳೊಂದಿಗೆ ವಿಶೇಷ ಒಪ್ಪಂದಗಳನ್ನು ಮಾಡಿಕೊಂಡ ಕಾರಣ ಅವರಿಗೆ ಹೊಸತನವನ್ನು ನೀಡಲು ಅವಕಾಶವಿರಲಿಲ್ಲ ಎಂದು ಹೇಳಿದರು. ಕಂಪನಿಯ ತೊಂದರೆಗಳು ಕೂಡ ಇದೇ ಸಮಯದಲ್ಲಿ ಶುರುವಾಯಿತೆಂದು ಹೇಳಬಹುದು. ಆದರೆ ಎದುರಾಳಿಗೆ ಸಂಪನ್ಮೂಲಗಳ ಅಂತ್ಯವಿಲ್ಲದ ಪೂರೈಕೆ ಇದ್ದಾಗ, ಅದರಲ್ಲಿ ಅರ್ಥವಿಲ್ಲ ಎಂದರು 
 

Related Articles

Related image1
ಸಲ್ಮಾನ್, ಅಮೀರ್ ಖಾನ್ ಜೊತೆ ನಟಿಸಿ 100 ಕೋಟಿ ಗಳಿಕೆಯ ಸಿನ್ಮಾ ಮಾಡಿದ್ದ ನಟಿ, ದಿಢೀರ್ ಚಿತ್ರರಂಗ ತೊರೆದಿದ್ಯಾಕೆ?
Related image2
Micromax In 2: ಸ್ವದೇಶಿ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತೊಂದು ಫೋನ್? ಏನೆಲ್ಲ ವಿಶೇಷತೆ?
35

 ಮೈಕ್ರೋಮ್ಯಾಕ್ಸ್ ಸಂಸ್ಥಾಪಕ ರಾಹುಲ್ ಶರ್ಮಾ, ನಿಖಿಲ್ ಕಾಮತ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವ ವೇಳೆ, ತಮ್ಮ ಮೊಬೈಲ್ ಫೋನ್ ಉದ್ಯಮದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ಅವರು ಮೈಕ್ರೋಮ್ಯಾಕ್ಸ್ ಹೇಗೆ ತುಂಬಾ ಬೇಗನೆ ಬೆಳೆಯಿತು, ಹೇಗೆ ಜನಪ್ರಿಯವಾಯಿತು ಎಂಬುದನ್ನು ವಿವರಿಸಿದರು. ಆದರೆ ನಂತರ ಚೀನಾದ ಕಂಪನಿಗಳು ಮಾರುಕಟ್ಟೆಗೆ ಬಂದು ಸ್ಪರ್ಧೆ ಹೆಚ್ಚಾಯಿತು. ರಾಹುಲ್ ಶರ್ಮಾ 2014ರಲ್ಲಿ 6,500 ಕೋಟಿ ರೂಪಾಯಿಗಳ ಹೂಡಿಕೆಯನ್ನು (funding) ಒಪ್ಪಿಕೊಂಡಿರಲಿಲ್ಲ. ಮೈಕ್ರೋಮ್ಯಾಕ್ಸ್‌ ಪತನಕ್ಕೆ ಸಾಂಕ್ರಾಮಿಕ ರೋಗ (pandemic) ಕೂಡ ಒಂದು ದೊಡ್ಡ ಕಾರಣವಾಗಿತ್ತು. ಆ ಸಮಯದವರೆಗೆ ಕಂಪನಿಯು ಸುಮಾರು 50% ಮಾರುಕಟ್ಟೆ ಪಾಲು ಹೊಂದಿತ್ತು. ಆದರೆ ಕೊರೊನಾ ನಂತರ, ಭಾರತದ ನಿಜವಾದ ಬ್ರ್ಯಾಂಡ್‌ಗಳು ಮಾರುಕಟ್ಟೆಯಿಂದ ತೀರಾ ಕಳೆದುಹೋಗಿದಂತಾಗಿತ್ತು. 2020 ರಲ್ಲಿ ಅನಿವಾರ್ಯವಾಗಿ ಮುಚ್ಚಬೇಕಾಯ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

45

ನಿಖಿಲ್ ಕಾಮತ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡ ರಾಹುಲ್, 2014ರಲ್ಲಿ ಮೈಕ್ರೋಮ್ಯಾಕ್ಸ್ ಕಂಪನಿಗೆ ಚೀನಾದ ಅಲಿಬಾಬಾ ಕಂಪನಿಯಿಂದ 800 ಮಿಲಿಯನ್ ಡಾಲರ್ (ಸುಮಾರು ₹6,000 ಕೋಟಿ) ಹೂಡಿಕೆಗೆ ಅವಕಾಶವಿತ್ತು. ಆದರೆ ಮೈಕ್ರೋಮ್ಯಾಕ್ಸ್  ಆ ಹಣವನ್ನು ತೆಗೆದುಕೊಳ್ಳಲಿಲ್ಲ. ಇದು ನಾವು ತೆಗೆದುಕೊಂಡ ಒಂದು ದೊಡ್ಡ ತಪ್ಪು ನಿರ್ಧಾರವಾಗಿರಬಹುದು ಎಂದು ರಾಹುಲ್ ನಂತರ ಒಪ್ಪಿಕೊಂಡಿದ್ದಾರೆ.  ಈಗ ರಾಹುಲ್ ಶರ್ಮಾ ಉತ್ಪಾದನೆ ಸಂಬಂಧಿತ ಹೊಸ ವ್ಯವಹಾರವೊಂದನ್ನು ನಡೆಸುತ್ತಿದ್ದಾರೆ. ಅವರು ಹೇಳುವಂತೆ, ಈಗ ಮೈಕ್ರೋಮ್ಯಾಕ್ಸ್ ಕಾಲಕ್ಕಿಂತಲೂ ಹೆಚ್ಚು ಹಣ ಗಳಿಸುತ್ತಿದ್ದಾರೆ. "ಇಂದು ನಮ್ಮ ಕಂಪನಿಯ ಆದಾಯ ಮೈಕ್ರೋಮ್ಯಾಕ್ಸ್‌ನಲ್ಲಿ ಆಗಿದ್ದದ್ದಕ್ಕಿಂತ ಹೆಚ್ಚು. ಬಹಳಷ್ಟು ಜನರಿಗೆ ಇದು ತಿಳಿದಿರಲಿಲ್ಲ. ನಾವು ಹಲವಾರು ಹೊಸ ಪ್ರಯೋಗಗಳನ್ನೂ ಮಾಡಿದ್ದೇವೆ. ಆದರೆ ನಮಗೆ ಯಶಸ್ಸು ತಂದುಕೊಟ್ಟದ್ದೇನು ಎಂದರೆ ನಾವು ನಮ್ಮ ಮೂಲ ತತ್ವಕ್ಕೆ (original principles) ಸತ್ಯವಾಗಿದ್ದೇವೆ. ತಂತ್ರಜ್ಞಾನ ಜೊತೆಗೆ ಇರುವುದು ನನ್ನ ಪ್ರಮುಖ ನಂಬಿಕೆ ಎಂದು ಅವರು ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.
 

55
asin

asin

ಈ ವರ್ಷದ ಆರಂಭದಲ್ಲಿ ಬಂದ ಬಿಸಿನೆಸ್ ವರ್ಲ್ಡ್ ವರದಿಯ ಪ್ರಕಾರ, ರಾಹುಲ್ ಶರ್ಮಾ ಅವರ ಭಗವತಿ ಪ್ರಾಡಕ್ಟ್ಸ್ ಲಿಮಿಟೆಡ್ (BPL) ಕಂಪನಿಗೆ ವಿದೇಶಿ ಹೂಡಿಕೆದಾರರಿಂದ  ದೊಡ್ಡ ಮೊತ್ತದ ಹಣ ಸಿಕ್ಕಿತು. ಈ ಹೂಡಿಕೆಯಿಂದಾಗಿ ಕಂಪನಿಯ ಆದಾಯವು ಹತ್ತು ಪಟ್ಟು ಹೆಚ್ಚಾಗಿದೆ. ಈ ಕಂಪನಿಯ ಒಟ್ಟು ವ್ಯವಹಾರ (ವ್ಯಾಪಾರ) ಮೊತ್ತ 6200 ಕೋಟಿ ರೂ. ಆಗಿದೆ. ಇವತ್ತು ರಾಹುಲ್ ಶರ್ಮಾರ ಬಳಿ ಐದು ಉತ್ಪಾದನಾ ಘಟಕಗಳು (ಕಾರ್ಖಾನೆಗಳು) ಇವೆ. ಮೈಕ್ರೋಮ್ಯಾಕ್ಸ್ ಕಾಲದಲ್ಲಿ ಕೇವಲ ಎರಡು ಕಾರ್ಖಾನೆಗಳು ಮಾತ್ರ ಇದ್ದವು. ಇವತ್ತು ನಾವು  ಮೈಕ್ರೋಮ್ಯಾಕ್ಸ್‌ ಸಮಯದಲ್ಲಿ ಗಳಿಸುತ್ತಿದ್ದ ಹಣಕ್ಕಿಂತಲೂ ಹೆಚ್ಚು  ಗಳಿಸುತ್ತಿದ್ದೇವೆ. ಬಹಳಷ್ಟು ಜನರಿಗೆ ಇದು ಗೊತ್ತಿಲ್ಲ. ಆದರೆ ನಾವು ಈಗ ಹೆಚ್ಚು ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವ್ಯವಹಾರ
ವ್ಯಾಪಾರ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved