ಸಲ್ಮಾನ್, ಅಮೀರ್ ಖಾನ್ ಜೊತೆ ನಟಿಸಿ 100 ಕೋಟಿ ಗಳಿಕೆಯ ಸಿನ್ಮಾ ಮಾಡಿದ್ದ ನಟಿ, ದಿಢೀರ್ ಚಿತ್ರರಂಗ ತೊರೆದಿದ್ಯಾಕೆ?
ಬಾಲಿವುಡ್‌ನಲ್ಲಿ ನಟ-ನಟಿಯರಾಗಿದ್ದ ಅದೆಷ್ಟೋ ಮಂದಿ ಸದ್ಯ ನಟನೆಯನ್ನು ತೊರೆದು ಹೆಚ್ಚು ಪಬ್ಲಿಸಿಟಿ ಇಲ್ಲದೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಈಕೆ ಕೂಡಾ ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯಾಗಿದ್ದರು. ಕೋಟಿ ಕೋಟಿ ಗಳಿಕೆಯ ಸೂಪರ್‌ಹಿಟ್ ಸಿನಿಮಾ ಮಾಡಿ ದಿಢೀರ್ ಚಿತ್ರರಂಗ ತೊರೆದರು.
ಬಾಲಿವುಡ್‌ನಲ್ಲಿ ನಟ-ನಟಿಯರಾಗಿದ್ದ ಅದೆಷ್ಟೋ ಮಂದಿ ಸದ್ಯ ನಟನೆಯನ್ನು ತೊರೆದು ಹೆಚ್ಚು ಪಬ್ಲಿಸಿಟಿ ಇಲ್ಲದೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಈಕೆ ಕೂಡಾ ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯಾಗಿದ್ದರು. ದಕ್ಷಿಣಭಾರತದ ಸಿನಿಮಾಗಳಲ್ಲಿ ನಟಿಸಿ, ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ನಟನೆಯನ್ನು ತೊರೆದರು ಮತ್ತು ಬಿಲಿಯನೇರ್ ಉದ್ಯಮಿಯನ್ನು ವಿವಾಹವಾದರು.
ಬಾಲಿವುಡ್‌ನಲ್ಲಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಈ ನಟಿ ಭರ್ಜರಿ ನೂರು ಕೋಟಿ ಗಳಿಕೆಯ ಸಿನಿಮಾ ಮಾಡಿದರು. ಭಾರತೀಯ ಚಿತ್ರರಂಗದಲ್ಲಿ ಹಲವಾರು ಉನ್ನತ ನಟರೊಂದಿಗೆ ಕೆಲಸ ಮಾಡಿದ್ದಾರೆ. ಆ ನಟಿ ಮತ್ಯಾರೂ ಅಲ್ಲ ಆಸಿನ್. ಅಮೀರ್ ಖಾನ್ ಜೊತೆ ಗಜನಿ ಮತ್ತು ಸಲ್ಮಾನ್ ಖಾನ್ ಕ್ರಮ ಜೊತೆ ರೆಡಿ ಚಿತ್ರದಲ್ಲಿ ಆಸಿನ್ ನಟಿಯಾಗಿ ನಟಿಸಿದ್ದಾರೆ. ನಟಿ ಆಸಿನ್ ತೊಟ್ಟುಮ್ಕಲ್, ಆಸಿನ್ ಎಂದು ಜನಪ್ರಿಯರಾಗಿದ್ದರು.
ಅಕ್ಟೋಬರ್ 26, 1985ರಂದು ಜನಿಸಿದ ಆಸಿನ್, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ತರಬೇತಿ ಪಡೆದ ಭರತನಾಟ್ಯ ನೃತ್ಯಗಾರ್ತಿಯೂ ಹೌದು, ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆಸಿನ್ 2001ರಲ್ಲಿ ತನ್ನ 15ನೇ ವಯಸ್ಸಿನಲ್ಲಿ ಸತ್ಯನ್ ಅಂತಿಕ್ಕಾಡ್ ಅವರ ಮಲಯಾಳಂ ಚಿತ್ರ 'ನರೇಂದ್ರನ್ ಮಕನ್ ಜಯಕಾಂತನ್ ವಕಾ' ಮೂಲಕ ದಕ್ಷಿಣ ಭಾರತದ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.
2003ರಲ್ಲಿ, ಆಸಿನ್ ಫಿಲ್ಮ್‌ಫೇರ್ ಅತ್ಯುತ್ತಮ ತೆಲುಗು ನಟಿ ಪ್ರಶಸ್ತಿಯನ್ನು ಗೆದ್ದರು. ಮೂರನೇ ತಮಿಳು ಚಿತ್ರ ಗಜಿನಿ (2005) ಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ತಮಿಳು ನಟಿ ಪ್ರಶಸ್ತಿಯನ್ನು ಪಡೆದರು.
ಶಿವಕಾಶಿ (2005), ವರಲಾರು (2006), ಪೊಕ್ಕಿರಿ (2007), ವೇಲ್ (2008) ಮತ್ತು ದಶಾವತಾರಂ (2008) ನಂತಹ ಅನೇಕ ಗಮನಾರ್ಹ ಚಿತ್ರಗಳಲ್ಲಿ ಆಸಿನ್ ನಾಯಕಿಯಾಗಿ ನಟಿಸಿದ್ದಾರೆ. ಆಸಿನ್ 2008ರಲ್ಲಿ ಅಮೀರ್ ಖಾನ್ ಜೊತೆಗಿನ ಗಜಿನಿ (2008) ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
'ಗಜಿನಿ' ಚಿತ್ರ ಬ್ಲಾಕ್‌ಬಸ್ಟರ್ ಆಗುವುದರ ಜೊತೆಗೇ ಆಸಿನ್ ಅವರು ಮೈಕ್ರೋಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ ಅವರನ್ನು ಜನವರಿ 19, 2016 ರಂದು ದೆಹಲಿಯ ದುಸಿತ್ ದೇವರಾನಾ ಹೋಟೆಲ್‌ನಲ್ಲಿ ವಿವಾಹವಾದರು. ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು.
ಸೆಪ್ಟೆಂಬರ್ 14, 1975ರಂದು ಜನಿಸಿದ ರಾಹುಲ್ ಶರ್ಮಾ ಎರಡು ಪದವಿಗಳನ್ನು ಪಡೆದಿದ್ದಾರೆ. ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಕೆನಡಾದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಬ್ಯಾಚುಲರ್ ಪಡೆದುಕೊಂಡಿದ್ದರು.
ಫೋರ್ಬ್ಸ್ ಪ್ರಕಾರ, ರಾಹುಲ್ ಶರ್ಮಾ, ಹದಿಹರೆಯದಿಂದಲೂ ತಂತ್ರಜ್ಞಾನದ ಬಗ್ಗೆ ಉತ್ಸಾಹವನ್ನು ಹೊಂದಿದ್ದರು, ಇದು ಮೈಕ್ರೋಮ್ಯಾಕ್ಸ್‌ನ್ನು ಕಂಡುಹಿಡಿಯಲು ಕಾರಣವಾಯಿತು. ರಾಹುಲ್ ಶರ್ಮಾ ತನ್ನ ಸ್ನೇಹಿತರಾದ ರಾಜೇಶ್ ಅಗರ್ವಾಲ್, ವಿಕಾಸ್ ಜೈನ್ ಮತ್ತು ಸುಮೀತ್ ಅರೋರಾ ಜೊತೆಗೆ 2000 ರಲ್ಲಿ ಮೈಕ್ರೋಮ್ಯಾಕ್ಸ್ ಇನ್ಫರ್ಮ್ಯಾಟಿಕ್ಸ್‌ನ್ನು ಸ್ಥಾಪಿಸಿದರು.