ಬಿಯರ್ ಬ್ರಾಂಡ್‌ಗಳ ದರದ ಮೇಲೆ ಶೇ.75 ಇಳಿಕೆ; ಬೇಸಿಗೆಯಲ್ಲಿ ಮದ್ಯಪ್ರಿಯರಿಗೆ ತಂಪಾದ ಸುದ್ದಿ
Price Reduction: ಬ್ರಿಟಿಷ್ ಬಿಯರ್ ಬ್ರ್ಯಾಂಡ್‌ಗಳ ಮೇಲಿನ ತೆರಿಗೆ ಶೇ.75ರಷ್ಟು ಕಡಿಮೆಯಾಗಿದ್ದು, ಭಾರತದಲ್ಲಿ ಬೆಲೆ ಇಳಿಕೆಯಾಗಿದೆ. ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಈ ವಿನಾಯ್ತಿ ನೀಡಲಾಗಿದ್ದು, ವೈನ್ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಹೊರಗಿಡಲಾಗಿದೆ.

ನವದೆಹಲಿ: ಈ ಬೇಸಿಗೆಯಲ್ಲಿ ಮದ್ಯಪ್ರಿಯರಿಗೆ ತಂಪಾದ ಸುದ್ದಿಯೊಂದು ಬಂದಿದೆ. ಬ್ರಿಟಿಷ್ ಬಿಯರ್ ಬ್ರ್ಯಾಂಡ್‌ಗಳ ಬೆಲೆ ಭಾರತದಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ಬ್ರಿಟಿಷ್ ಬ್ರ್ಯಾಂಡ್ ಬಿಯರ್‌ಗಳು ಗ್ರಾಹಕರಿಗೆ ಮೊದಲಗಿಂತಲೂ ಕಡಿಮೆ ದರದಲ್ಲಿ ಸಿಗಲಿವೆ.
ಬ್ರಿಟನ್‌ನಲ್ಲಿ ತಯಾರಾದ ಬ್ರಾಂಡ್‌ಗಳ ಮೇಲೆ ಶೇ.150ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಇದೀಗ ಈ ತೆರಿಗೆಯನ್ನು ಶೇ.75ರಷ್ಟು ಕಡಿಮೆ ಮಾಡಲಾಗಿದೆ. ಹಾಗಾಗಿ ಮದ್ಯಪ್ರಿಯರಿಗೆ ಬೇಸಿಗೆಯಲ್ಲಿ ತಂಪಾದ ಸುದ್ದಿ ಸಿಕ್ಕಿದಂತಾಗಿದೆ. ಬ್ರಿಟಿಷ್ ಸ್ಕಾಚ್ ಮೇಲಿನ ತೆರಿಗೆಎ ಹಿಂದಿನಿಗಿಂತ ಕಡಿಮೆಯಾಗಿದೆ ಎಂದು ಹೇಳಬಹುದು.
ಭಾರತ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಇಂಗ್ಲೆಂಡ್‌ನ ವೈನ್ ಮೇಲೆ ಯಾವುದೇ ತೆರಿಗೆಯ ವಿನಾಯ್ತಿಯನ್ನು ನೀಡಿಲ್ಲ. ಅದ್ರೆ ಯುಕೆ ಬಿಯರ್ ಮೇಲೆ ಕೆಲವು ತೆರಿಗೆ ವಿನಾಯ್ತಿ ನೀಡಲಾಗಿದೆ. ಈ ವಿನಾಯ್ತಿಯಿಂದಾಗಿ ಇಂಗ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗುವ ಬಿಯರ್ ಬೆಲೆಯೂ ಇಳಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೇ 6ರಂದು ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆದಿತ್ತು. ಈ ವ್ಯಾಪಾರ ಒಪ್ಪಂದದಲ್ಲಿ ವೈನ್ ಜೊತೆಯಲ್ಲಿ ಹಲವು ವಸ್ತುಗಳನ್ನು ಹೊರಗಿಡಲಾಗಿದೆ. ವಿದೇಶದ ಡೈರಿ ಉತ್ಪನ್ನಗಳು, ಸೇಬುಗಳು, ಚೀಸ್, ಓಟ್ಸ್, ಪ್ರಾಣಿ ಮತ್ತು ಸಸ್ಯಜನ್ಯ ಎಣ್ಣೆಗಳಂತ ಉತ್ಪನ್ನಗಳ ಮೇಲೆ ಭಾರತ ಯಾವುದೇ ತೆರಿಗೆ ವಿನಾಯ್ತಿಯನ್ನು ನೀಡಿಲ್ಲ.
Scotch Whisky
ಭಾರತ ಕೇವಲ ಸೀಮಿತ ಬಿಯರ್ ಉತ್ಪನ್ನಗಳ ಮೇಲೆ ತೆರಿಗೆ ವಿನಾಯ್ತಿಯನ್ನು ನೀಡಿದೆ. ಹಲವು ಕೃಷಿ ಉತ್ಪನ್ನಗಳನ್ನು ತೆರಿಗೆ ವಿನಾಯ್ತಿಯಿಂದ ಹೊರಗೆ ಇಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈನ್‌ಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವಂತೆ ಭಾರತದ ಮೇಲೆ ಒತ್ತಡ ಹೇರಲಾಗಿತ್ತು. ಆದರೂ ಭಾರತ ವೈನ್‌ಗೆ ತೆರಿಗೆ ವಿನಾಯ್ತಿಯನ್ನು ನೀಡಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

