ಭಾರತದ ₹2 ಕೋಟಿ ಕಾರು ಈ ದೇಶದಲ್ಲಿ ಕೇವಲ ₹30 ಲಕ್ಷ, ಶೇ.80ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ
ಭಾರತದಲ್ಲಿ 2 ಕೋಟಿ ರೂಪಾಯಿ ಬೆಲೆಯ ಕಾರು ಈ ದೇಶದಲ್ಲಿ ಕೇವಲ 30 ಲಕ್ಷ ರೂ. ಇನ್ನು ಭಾರತ ಮಾಲೀಕತ್ವದ, ಭಾರತ ಮೂಲದ 2 ಕೋಟ ರೂಪಾಯಿ ಕಾರು ಈ ದೇಶದಲ್ಲಿ ಕೇವಲ 80 ಲಕ್ಷ ರೂಗೆ ಲಭ್ಯವಿದೆ. ಏನಿದು ಹೀಗೆ?

ಭಾರತದಲ್ಲಿ ಐಷಾರಾಮಿ,ದುಬಾರಿ ಕಾರುಗಳಿಂದ ಹಿಡಿದು ಕೈಗೆಟುಕುವ ದರದಲ್ಲಿ ಕಾರುಗಳು ಲಭ್ಯವಿದೆ. 4 ಲಕ್ಷ ರೂಪಾಯಿಗೂ ಭಾರತದಲ್ಲಿ ಹೊಸ ಕಾರು ಲಭ್ಯವಿದೆ. ಒಂದೊಂದು ರಾಜ್ಯದಲ್ಲಿ ಕಾರುಗಳ ಆನ್‌ರೋಡ್ ಬೆಲೆ ಬೇರೆ ಬೇರೆ. ಆಯಾ ರಾಜ್ಯದ ತೆರಿಗೆಗೆ ಅನುಗುಣವಾಗಿ ಬದಲಾಗುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಇದೀಗ ಪ್ರಶ್ನೆ ಭಾರತ ಮಾಲೀಕತ್ವದ, ಭಾರತೀಯ ಮೂಲದ ಕಾರು ಭಾರತದಲ್ಲಿ 2 ಕೋಟಿ ರೂಪಾಯಿ ಆದರೆ ಈ ದೇಶದಲ್ಲಿ ಕೇವಲ 80 ಲಕ್ಷ ರೂಪಾಯಿಗೆ ಲಭ್ಯವಿದೆ. ಇಷ್ಟೇ ಅಲ್ಲ ಬೇರೆ 2 ಕೋಟಿ ರೂಪಾಯಿ ಕಾರುಗಳು ಈ ದೇಶದಲ್ಲಿ ಕೇವಲ 30 ಲಕ್ಷ ರೂಪಾಯಿಗೆ ಲಭ್ಯವಿದೆ. ವಿಶೇಷ ಅಂದರೆ ಹೀಗೆ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ದೇಶ ಒನ್ ಒನ್ ಒನ್ಲಿ ದುಬೈ.
ಅಲ್ಲೊಂದು ಇಲ್ಲೊಂದು ಲ್ಯಾಂಡ್ ಕ್ರೂಸರ್ ಕಾರುಗಳು ಭಾರತದ ರಸ್ತೆಯಲ್ಲಿ ಕಾಣಸಿಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಿಗೆ ತೆರಳುವಾಗ ಲ್ಯಾಂಡ್ ಕ್ರೂಸರ್ ಕಾರನ್ನೂ ಬಳಸುತ್ತಾರೆ. ಇದರ ಬೆಲೆ ಸರಿಸುಮಾರು 2 ಕೋಟಿ ರೂಪಾಯಿ. ಟೊಯೋಟಾ ಬ್ರ್ಯಾಂಡ್‌ನ ಈ ಲ್ಯಾಡ್ ಕ್ರೂಸರ್ ಕಾರು ದುಬೈನಲ್ಲಿ ಕೇವಲ 30 ಲಕ್ಷ ರೂಪಾಯಿ ಮಾತ್ರ.
ವಿಶೇಷ ಅಂದರೆ ರೇಂಜರ್ ರೋವರ್ ಕಾರುಗಳು ಭಾರತದ ಮೂಲವಾಗಿದೆ. ಅಂದರೆ ಟಾಟಾ ಮೋಟಾರ್ಸ್ ಒಡೆತನದ ಲ್ಯಾಂಡ್ ರೋವರ್ ಜಾಗ್ವಾರ್ ಕಂಪನಿಯ ಎಸ್‌ಯುವಿ ಕಾರು ರೇಂಜ್ ರೋವರ್. ಟಾಟಾ ಮಾಲೀಕತ್ವದ ಬ್ರಿಟಿಷ್ ಕಾರಾು ಇದಾಗಿದೆ. ಆದರೆ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಬೆಲೆ ಭಾರತದಲ್ಲಿ 2 ಕೋಟಿ ರೂಪಾಯಿ. ಆದರೆ ಇದೇ ಕಾರು ದುಬೈನಲ್ಲಿ 80 ಲಕ್ಷ ರೂಪಾಯಿಗೆ ಲಭ್ಯವಿದೆ.
ಇನ್ನು ಭಾರತದಲ್ಲಿ BMW X5 ಬೆಲೆ ಸರಿಸುಮಾರು 1 ಕೋಟಿ ರೂಪಾಯಿ ಆದರೆ ಇದೇ ಕಾರು ದುಬೈನಲ್ಲಿ ಶೇಕಡಾ 50 ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅಂದರೆ 55 ಲಕ್ಷ ರೂಪಾಯಿಗೆ ಲಭ್ಯವಿದೆ. ಇನ್ನು ಭಾರತದಲ್ಲಿ ಅತೀ ಹೆಚ್ಚು ಕಾಣಸಿಗುವ ಟೊಯೋಟಾ ಫಾರ್ಚುನರ್ ಕಾರಿನ ಬೆಲೆ ಸರಿಸುಮಾರು 50 ಲಕ್ಷ ರೂಪಾಯಿ. ಆದರೆ ಈ ಕಾರು ದುಬೈನಲ್ಲಿ 35 ಲಕ್ಷ ರೂಪಾಯಿಗೆ ಲಭ್ಯವಿದೆ.
ಭಾರತದಲ್ಲಿ ಐಷಾರಾಮಿ ಕಾರುಗಳ ಬೆಲೆ ಕೋಟಿ ರೂಪಾಯಿ ಮೇಲೇರಲು ಪ್ರಮುಖ ಕಾರಣ ತೆರಿಗೆ. ಲಕ್ಷುರಿ ಕಾರುಗಳಿಗೆ ಭಾರತದಲ್ಲಿ ಅಮದು ಸುಂಕ ಶೇಕಡಾ 60 ರಿಂದ 100ರಷ್ಟಿದೆ. ಇದಕ್ಕೆ ಶೇಕಡಾ 28 ರಷ್ಟು ಜಿಎಸ್‌ಟಿ ಸೇರಿಕೊಳ್ಳಲಿದೆ. ಬಳಿಕ ಸೆಸ್, ಇದಾದ ಬಳಿಕ ಆಯಾ ರಾಜ್ಯದ ರಸ್ತೆ ಸೇರಿಗೆ ಸೇರಿದಂತೆ ಇತರ ತೆರೆಗೆಗಳು ಸೇರಿಕೊಳ್ಳಲಿದೆ. ಇವೆಲ್ಲಾ ಒಟ್ಟು ಸೇರಿಸಿದರೆ ಖರೀದಿಸುವ ಲಕ್ಷುರಿ ಕಾರಿನ ಬೆಲೆಯಲ್ಲಿ ಶೇಕಡಾ 45ರಷ್ಟು ತೆರಿಗೆಯಾಗಿರುತ್ತದೆ ಎಂದು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಸಾರ್ಥಕ್ ಅಹುಜಾ ಹೇಳಿದ್ದಾರೆ.
ದುಬೈನಲ್ಲಿ ಆಮದು ಸುಂಕ ಅತೀ ಕಡಿಮೆ ಇದೆ. ಇನ್ನು ಇತರ ತೆರಿಗೆಗಳು ಅತೀ ಕಡಿಮೆ. ಹೀಗಾಗಿ ಪ್ರಮುಖವಾಗಿ ಕಾರು ಉತ್ಪಾದಕ ಕಂಪನಿಗಳು ಉತ್ಪಾದನೆ ವೆಚ್ಚ ಕಡಿಮೆ, ಇದರ ಜೊತೆಗೆ ಕಾರು ಖರೀದಿಸುವವರ ಮೇಲೆ ವಿಧಿಸುವ ತೆರಿಗೆ ಪ್ರಮಾಣವೂ ಕಡಿಮೆ. ಹೀಗಾಗಿ ದುಬೈನಲ್ಲಿ ಅತೀ ಕಡಿಮೆ ಬೆಲೆಗೆ ಲಕ್ಷುರಿ ಕಾರುಗಳು ಲಭ್ಯವಿದೆ ಎಂದು ಸಾರ್ಥಕ್ ಅಹುಜಾ ಹೇಳಿದ್ದಾರೆ.