ಶ್ರಾವಣಕ್ಕಿನ್ನೂ ಮೂರೇ ದಿನ; ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಅಂತ ಗೊತ್ತಿದೆಯಾ?
Gold And Silver Price Today: ಜಾಗತಿಕ ಮಟ್ಟದಲ್ಲಿ ಯುದ್ಧದ ವಾತಾವರಣದಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮುಂದುವರೆದಿವೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ತಿಳಿಯಿರಿ. ಬೆಳ್ಳಿ ದರದಲ್ಲೂ ಏರಿಕೆ ಕಂಡುಬಂದಿದೆ.

ಕಳೆದ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಚಿನ್ನದ ಬೆಲೆ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ ಅಂತ ಯೋಚಿಸುತ್ತಿದ್ದೀರಾ? ಹಾಗಾದ್ರೆ ಈ ಲೇಖನದಲ್ಲಿ ಇಂದಿನ ಬೆಲೆ ಎಷ್ಟು ಎಂದು ನೋಡೋಣ ಬನ್ನಿ.
ಈ ವರ್ಷದ ಆರಂಭದಿಂದಲೂ ಜಾಗತೀಕ ಮಟ್ಟದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದರಿಂದ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿತ್ತು. ಭಾರತದಲ್ಲಿಯೂ ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಿರುತ್ತದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,285 ರೂಪಾಯಿ
8 ಗ್ರಾಂ: 74,280 ರೂಪಾಯಿ
10 ಗ್ರಾಂ: 92,850 ರೂಪಾಯಿ
100 ಗ್ರಾಂ: 9,28,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,129 ರೂಪಾಯಿ
8 ಗ್ರಾಂ: 81,032 ರೂಪಾಯಿ
10 ಗ್ರಾಂ: 1,01,290 ರೂಪಾಯಿ
100 ಗ್ರಾಂ: 10,12,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 92,850 ರೂಪಾಯಿ, ಮುಂಬೈ: 92,850 ರೂಪಾಯಿ, ದೆಹಲಿ: 93,000 ರೂಪಾಯಿ, ಬೆಂಗಳೂರು: 92,850 ರೂಪಾಯಿ, ಹೈದರಾಬಾದ್: 92,850 ರೂಪಾಯಿ, ವಡೋದರಾ: 92,900 ರೂಪಾಯಿ, ಪುಣೆ: 92,850 ರೂಪಾಯಿ, ಅಹಮದಾಬಾದ್: 92,900 ರೂಪಾಯಿ
ದೇಶದಲ್ಲಿಂದು ಬೆಳ್ಳಿ ದರ
ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1,140 ರೂ.ಗಳಷ್ಟು ಏರಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ದರದಲ್ಲಿ 200 ರು.ಗಳಷ್ಟು ಏರಿಕೆಯಾಗಿದೆ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,180 ರೂಪಾಯಿ
100 ಗ್ರಾಂ: 11,800 ರೂಪಾಯಿ
1000 ಗ್ರಾಂ: 1,18,000 ರೂಪಾಯಿ