ಈ ಒಪ್ಪಂದ ಭಾರತದ ಕ್ಲೀನ್ ಎನರ್ಜಿ ಗುರಿ ಸಾಧನೆಗೆ ಹಾಗೂ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯಕವಾಗಲಿದೆ. ಇತ್ತೀಚೆಗೆ ವೈಟ್ ಗೋಲ್ಡ್‌ಗೆ ಬೇಡಿಕೆ ಹೆಚ್ಚಾಗಿದೆ.

ನವದೆಹಲಿ: ಕಳೆದ ಕೆಲವು ದಿನಗಳಿಂದ ಸರ್ಕಾರಿ ಕಂಪನಿ ಎನ್‌ಎಲ್‌ಸಿ ಇಂಡಿಯಾ (NLC India) ಆಫ್ರಿಕಾದ ಮಾಲಿಯಲ್ಲಿರುವ ಲೀಥಿಯಂ (Lithium) ಬ್ಲಾಕ್‌ನಲ್ಲಿ ಪಾಲುದಾರಿಕೆ ಪಡೆದುಕೊಳ್ಳಲು ರಷ್ಯಾ (Russia) ಕಂಪನಿಯೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದ ಯಶಸ್ವಿಯಾದ್ರೆ ಭಾರತ ಹೊಂದಿರುವ ಕ್ಲೀನ್ ಎನರ್ಜಿ ಗುರಿಯನ್ನು ಹೊಂದಲು ಸಾಧ್ಯವಾಗಲಿದೆ. ಹಾಗೆಯೇ ಚೀನಾದ (China) ಮೇಲಿನ ಭಾರಯದ ಅವಲಂಬನೆ ಕಡಿಮೆಯಾಗಲಿದೆ. ಈ ಮೂಲಕ ಭಾರತ ಹಂತ ಹಂತವಾಗಿ ಆತ್ಮನಿರ್ಭರವಾಗಲಿದೆ.

ಈ ಲೀಥಿಯಂನ್ನು ಗ್ರೀನ್ ಎನರ್ಜಿ ಜನರೇಟ್ ಮಾಡಲು ಬಳಕೆ ಮಾಡಲಾಗುತ್ತದೆ. ರೀಚಾರ್ಜೇಬಲ್ ಬ್ಯಾಟರಿ ಬಳಕೆಯಲ್ಲಿಯೂ ಲೀಥಿಯಂ ಪ್ರಾಥಮಿಕವಾಗಿ ಬಳಕೆಯಾಗುತ್ತದೆ. ಇಷ್ಟು ಮಾತ್ರ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಪ್‌ಗಳಲ್ಲಿ ಲೀಥಿಯಂ ಬಳಸಲಾಗುತ್ತದೆ. ಲೀಥಿಯಂ-ಅಯಾನ್ ಸಂಯುಕ್ತ ಬ್ಯಾಟರಿ ಬಳಕೆ ಗ್ರಿಡ್ ಸ್ಕೇಲ್ ಎನರ್ಜಿ ಸ್ಟೋರೇಜಕ್ ಸಿಸ್ಟಮ್‌, ರಿನ್ಯೂಯೇಬಲ್ ಎನರ್ಜಿ ಸ್ಟೋರೇಜ್‌ನಲ್ಲಿ(renewable energy production) ಜನರೇಟ್ ಆಗುವ ಎನರ್ಜಿ ಸ್ಟೋರ್ ಮಾಡಲು ಲೀಥಿಯಂ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಇದೇ ರೀತಿ ಹಲವು ವಲಯಗಳಲ್ಲಿ ಲೀಥಿಯಂನ ಬಳಕೆಯಾಗುತ್ತದೆ.

ಇದು ವೈಟ್ ಗೋಲ್ಡ್!

ಲೀಥಿಯಂನ್ನು ವೈಟ್ ಗೋಲ್ಡ್ ಎಂದು ಕರೆಯಲಾಗುತ್ತದೆ. ಲೀಥಿಯಂನಲ್ಲಿ ಶೇ.75ರಷ್ಟು ಚಿನ್ನ ಮತ್ತು ಶೇ.25ರಷ್ಟು ಜಿಂಕ್, ನಿಕಲ್ ಅಥವಾ ಪೈಲೆಡಿಯಮ್ ಸೇರಿದಂತೆ ಅನೇಕ ಧಾತುಗಳನ್ನು ಒಳಗೊಂಡಿರುತ್ತದೆ. ಚಿನ್ನ ಹಳದಿ ಬಣ್ಣ ಹೊಂದಿದ್ರೆ, ಲೀಥಿಯಂ ಅನೇಕ ಧಾತುಗಳ ಮಿಶ್ರಣದಿಂದಾಗಿ ಬಿಳಿಯಾಗಿ ಕಾಣಿಸುತ್ತದೆ. ಒಂದು ಬೆಳ್ಳಿಯಂತೆಯೇ ಲೀಥಿಯಂ ಕಾಣಿಸುತ್ತದೆ.

ಮಾರುಕಟ್ಟೆಯಲ್ಲಿ ಹೆಚ್ಚಾದ ಬೇಡಿಕೆ

ಭಾರತ ತನ್ನ ಲೀಥಿಯಂ ಅಗತ್ಯತೆಯನ್ನು ಪೂರೈಸಿಕೊಳ್ಳಲು ಬಹುತೇಕ ಪ್ರಮಾಣವನ್ನು ಚೀನಾ, ಅರ್ಜೈಂಟಿನಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕೆಲ ಪ್ರಮುಖ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಇಲೆಕ್ಟ್ರಾನಿಕ್ ವೆಹಿಕಲ್ ಮತ್ತು ಲೀಥಿಯಂ-ಅಯಾನ್ ಬ್ಯಾಟರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತಕ್ಕೆ ಬರುತ್ತಿರುವ ಪ್ರಮಾಣ ತಗ್ಗಿದೆ. ಈ ಹಿನ್ನೆಲೆ ಭಾರತದ ಸರ್ಕಾರಿ ಕಂಪನಿಯಾಗಿರುವ ಎನ್‌ಎಲ್‌ಸಿ ಇಂಡಿಯಾ ನೇರವಾಗಿ ರಷ್ಯಾದೊಂದಿಗೆ ಮಾತುಕತೆಯನ್ನು ನಡೆಸುತ್ತಿದೆ.

ನೆರೆಯ ಡ್ರ್ಯಾಗನ್ ದೇಶ ಚೀನಾ, ಲೀಥಿಯಂನಲ್ಲಿ ಸ್ವಾವಲಂಬಿಯಾಗಿದ್ದು, ಅಪಾರ ನಿಕ್ಷೇಪಯನ್ನು ಹೊಂದಿದೆ. ಮಾಧ್ಯಮಗಳ ವರದಿ ಪ್ರಕಾರ, 2025ರಲ್ಲಿ ಚೀನಾ ವಿಶ್ವದ ಲಿಥಿಯಂ ನಿಕ್ಷೇಪಗಳಲ್ಲಿ ಶೇ.16.5ರಷ್ಟು ಹೊಂದಿದೆ ಎಂದು ಹೇಳಿಕೊಂಡಿತ್ತು. ಶೇ.6.5ರಷ್ಟು ಲೀಥಿಯಂನ್ನು ಚೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಭಾರತ 2000-21ರಲ್ಲಿ 3500 ಕೋಟಿ ರೂ. ಮೌಲ್ಯದ ಲೀಥಿಯಂನ್ನು ಚೀನಾದಿಂದ ಖರೀದಿಸಿತ್ತು.

ಏನಿದು NLC ಇಂಡಿಯಾ?

NLC ಇಂಡಿಯಾ (Neyveli Lignite Corporation India Limited) ಲಿಗ್ನೈಟ್ ಗಣಿಗಾರಿಕೆಯೊಂದಿಗೆ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಲಿಗ್ನೈಟ್ ಅನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಇದು ಸೌರ ಮತ್ತು ಪವನದಂತಹ ನವೀಕರಿಸಬಹುದಾದ ಶಕ್ತಿಯನ್ನು ಸಹ ಉತ್ಪಾದಿಸುತ್ತದೆ. ಈ ಕಂಪನಿಯು ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳಿಗೆ (DISCOM ಗಳು) ವಿದ್ಯುತ್ ಅನ್ನು ಮಾರಾಟ ಮಾಡುತ್ತದೆ. ಈ ಮೂಲಕ ಆದಾಯವನ್ನು ಗಳಿಸುತ್ತದೆ.

ಇದು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ನೆಯ್ವೇಲಿಯಲ್ಲಿರುವ ಓಪನ್‌ಕಾಸ್ಟ್ ಗಣಿಗಳಿಂದ ಮತ್ತು ರಾಜಸ್ಥಾನ ರಾಜ್ಯದ ಬಿಕಾನೇರ್ ಜಿಲ್ಲೆಯ ಬಾರ್ಸಿಂಗ್ಸರ್‌ನಲ್ಲಿರುವ ಓಪನ್‌ಕಾಸ್ಟ್ ಗಣಿಗಳಿಂದ ವಾರ್ಷಿಕವಾಗಿ ಸುಮಾರು 30 ಮಿಲಿಯನ್ ಟನ್ ಲಿಗ್ನೈಟ್ ಅನ್ನು ಉತ್ಪಾದಿಸುತ್ತದೆ .

ಇದನ್ನೂ ಓದಿ: ನಿರೀಕ್ಷೆಗಿಂತಲೂ ಉತ್ತಮ ಸಾಧನೆ; ವ್ಯಾಪಾರ ಸಂಘರ್ಷದ ನಡುವೆಯೂ GDP ವೇಗ ಹೆಚ್ಚಿಸಿಕೊಂಡ ಚೀನಾ, ಅರ್ಥಶಾಸ್ತ್ರಜ್ಞರ ಲೆಕ್ಕ ಸುಳ್ಳಾಗಿಸಿದ ಚೀನಾ