3 ದಿನದಲ್ಲಿ 18 ಸಾವಿರ ಇಳಿಕೆಯಾದ ಚಿನ್ನದ ಬೆಲೆ: ಇಂದು 2700 ರೂ ಕಡಿಮೆಯಾದ ಬಂಗಾರ
ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ಮೂರು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ 18,000 ರೂ.ಗಳಷ್ಟು ಕುಸಿದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿಯಿರಿ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ಮಾರುಕಟ್ಟೆ ಮೇಲೆ ನೇರ ಪರಿಣಮ ಬೀರುತ್ತಿದೆ. ಎರಡು ದೇಶಗಳ ಸಂಘರ್ಷದಿಂದಾಗಿ ಚಿನ್ನದ ದರ ಇಳಿಕೆಯಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 18,000 ರೂ.ಗಳವರೆಗೆ ಇಳಿಕೆಯಾಗಿದೆ.
ಭಾರತದಲ್ಲಿ ಮಂಗಳವಾರ ಚಿನ್ನದ ಬೆಲೆ ಕುಸಿತವಾಗಿತ್ತು. ಸತತ ಏರಿಕೆಯಿಂದ ಆತಂಕಕ್ಕೊಳಗಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದರು. ಮಂಗಳವಾರ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 135 ರೂ. ಇಳಿಕೆ ಕಂಡು ಬಂದಿತ್ತು. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 2,700 ರೂ.ಕಡಿಮೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
- 1 ಗ್ರಾಂ: 9,895 ರೂಪಾಯಿ
- 8 ಗ್ರಾಂ: 79,160 ರೂಪಾಯಿ
- 10 ಗ್ರಾಂ: 98,950 ರೂಪಾಯಿ
- 100 ಗ್ರಾಂ: 9,89,500 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
- 1 ಗ್ರಾಂ: 9,070 ರೂಪಾಯಿ
- 8 ಗ್ರಾಂ: 72,560 ರೂಪಾಯಿ
- 10 ಗ್ರಾಂ: 90,700 ರೂಪಾಯಿ
- 100 ಗ್ರಾಂ: 9,07,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
- 1 ಗ್ರಾಂ: 7,421 ರೂಪಾಯಿ
- 8 ಗ್ರಾಂ: 59,368 ರೂಪಾಯಿ
- 10 ಗ್ರಾಂ: 74,210 ರೂಪಾಯಿ
- 100 ಗ್ರಾಂ: 7,42,100 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚನ್ನೈ: 90,700 ರೂಪಾಯಿ, ಬೆಂಗಳೂರು: 90,700 ರೂಪಾಯಿ, ಮುಂಬೈ: 90,700 ರೂಪಾಯಿ, ನವದೆಹಲಿ: 90,850 ರೂಪಾಯಿ, ಕೋಲ್ಕತ್ತಾ: 90,700 ರೂಪಾಯಿ, ವಡೋದರ: 90,750 ರೂಪಾಯಿ, ಅಹಮದಾಬಾದ್: 90,750 ರೂಪಾಯಿ, ಪುಣೆ: 90,700 ರೂಪಾಯಿ
ದೇಶದಲ್ಲಿಂದು ಬೆಳ್ಳಿ ದರ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲಿಯೂ ಏರಿಳಿತ ಕಂಡು ಬರುತ್ತಿದೆ. ದೇಶದಲ್ಲಿ ಶುದ್ಧ ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ
- 10 ಗ್ರಾಂ: 1,080 ರೂಪಾಯಿ
- 100 ಗ್ರಾಂ: 10,800 ರೂಪಾಯಿ
- 1000 ಗ್ರಾಂ: 1,08,000 ರೂಪಾಯಿ