ಟಿವಿಎಸ್ ರೈಡರ್ 125 ಬೈಕ್ ಬಿಡುಗಡೆಯಾಗಿದೆ. ಡಾಕ್ಟರ್ ಡೂಮ್ ಎಡಿಶನ್ ಹೊಸ ಟಿವಿಎಸ್ ಬೈಕ್
ಟಿವಿಎಸ್ ಇದೀಗ ಹೆಚ್ಚು ಸ್ಪೋರ್ಟೀವ್ ಹಾಗೂ ಅತ್ಯಾಕರ್ಷಕ ಟಿವಿಎಸ್ ರೈಡರ್ 125 ಬೈಕ್ ಬಿಡುಗಡೆ ಮಾಡಿದೆ. ಟಿವಿಎಸ್ ಬೈಕ್ ಪೈಕಿ ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಡಾಕ್ಟರ್ ಡೂಮ್ ಎಡಿಶನ್ ಬೈಕ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.

ಮಾರ್ವಲ್ ಕಾಮಿಕ್‌ನ ವಿಲನ್ ಡಾಕ್ಟರ್ ಡೂಮ್
ಬೈಕ್ ಪ್ರಿಯರಿಗೆ ಇದೀಗ ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ನೀಡಬಲ್ಲ ಟಿವಿಎಸ್ ರೈಡರ್ 125 ಬೈಕ್ ಬಿಡುಗಡೆಯಾಗಿದೆ. ಡಾಕ್ಟರ್ ಡೂಮ್ ಎಡಿಶನ್ ಬೈಕ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಾರ್ವೆಲ್ ಕಾಮಿಕ್‌ನ ಡಾಕ್ಟರ್ ಡೂಮ್‌ನಿಂದ ಪ್ರೇರಿತವಾಗಿ ಬೈಕ್ ಇದಾಗಿದೆ.
ಹೊಸ ಟಿವಿಎಸ್ ರೈಡರ್ 125 ಬೈಕ್ ಬೆಲೆ ಎಷ್ಟು?
ಟಿವಿಎಸ್ ಅತ್ಯಾಕರ್ಷಕ ಹಾಗೂ ಸ್ಪೋರ್ಟ್ಸ ಬೈಕ್‌ಗಳ ಪೈಕಿ ಟಿವಿಎಸ್ ರೈಡರ್ 125 ಅತೀ ಕಡಿಮೆ ಬೆಲೆಯ ಬೈಕ್. ಇದರ ಎಕ್ಸ್ ಶೋ ರೂಂ ಬೆಲೆ 95,320 ರೂಪಾಯಿ ಮಾತ್ರ. ಟಿವಿಎಸ್ ಶೋ ರೂಂಗಳಲ್ಲಿ ಶೀಘ್ರದಲ್ಲೇ ಹೊಸ ಬೈಕ್ ಲಭ್ಯವಾಗಲಿದೆ. ಹೊಸ ಬೈಕ್ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆ.
ಹೊಸ ಆಕರ್ಷಕ ಬಣ್ಣದಲ್ಲಿ ಬೈಕ್
ಡಾಕ್ಟರ್ ಡೂಮ್ ಎಡಿಶನ್ ಬೈಕ್ ಸ್ಪೆಕ್ಟ್ರಲ್ ಗ್ರೀನ್' (Spectral Green) ಪೇಂಟ್ ಸ್ಕೀಮ್‌ನಲ್ಲಿ ಲಭ್ಯವಿದೆ. ವಿಶೇಷ ಅಂದರೆ ಬೆಳಕು ಬೀಳುತ್ತಿದ್ದಂತೆ ಬೈಕ್‌ನ ಬಣ್ಣ ಹಸಿರಿನಿಂದ ಕಂದು ಬಣ್ಣಕ್ಕೆ ತಿರುಗುತ್ತದೆ. ಡಾಕ್ಟರ್ ಡೂಮ್ ಪಾತ್ರದ ಲೋಹದ ಕವಚ (Metallic Armour) ಹಾಗೂ ಕಡು ಹಸಿರು ಡ್ರೆಸ್‌ನಿಂದ ಪ್ರೇರಿತಗೊಂಡು, ಫ್ಯುಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳ ಮೇಲೆ ಆಕರ್ಷಕ ಗ್ರಾಫಿಕ್ಸ್ ನೀಡಲಾಗಿದೆ.
ಎಂಜಿನ್ ಹಾಗೂ ಪರ್ಫಾಮೆನ್ಸ್
ಹೊಸ ಟಿವಿಎಸ್ ರೈಡರ್ 125 ಬೈಕ್ 124.8 ಸಿಸಿ, ಏರ್ ಮತ್ತು ಆಯಿಲ್-ಕೂಲ್ಡ್, ಸಿಂಗಲ್-ಸಿಲಿಂಡರ್, 3-ವಾಲ್ವ್ ಎಂಜಿನ್ ನೀಡಲಾಗಿದೆ.11.38 PS ಪವರ್ ಹಾಗೂ 11.75 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಕೇವಲ 5.8 ಸೆಕೆಂಡುಗಳಲ್ಲಿ 0 ರಿಂದ 60 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.
ಹೊಸ ಫೀಚರ್
ಬೈಕ್‌ನಲ್ಲಿ ಕನೆಕ್ಟೆಡ್ ರಿವರ್ಸ್ ಎಲ್‌ಸಿಡಿ ಕ್ಲಸ್ಟರ್ ಇದ್ದು, 85ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಕನೆಕ್ಟೆಡ್ ಫೀಚರ್‌ಗಳ ನೀಡಲಾಗಿದೆ. ಟರ್ನ್-ಬೈ-ಟರ್ನ್ ನೆವಿಗೇಶನ್, ಕಾಲ್ ಹಾಗೂ ಮೆಸೇಜ್ ಅಲರ್ಟ್ ಕನ್ಸೋಲ್ ಮೂಲಕ ನೋಡಲು ಸಾಧ್ಯ. ಹೊಸ iGO Assist ತಂತ್ರಜ್ಞಾನ ನೀಡಲಾಗಿದೆ.

