ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಕ್ವಾಂಟಮ್ ಎನರ್ಜಿ ಕಂಪನಿಯು ತನ್ನ ಹೊಸ 'ಪ್ಲಾಸ್ಮಾ' ಇ-ಸ್ಕೂಟರ್ ಅನ್ನು ಪರಿಚಯಿಸಿದೆ. ₹1.25 ಲಕ್ಷ ಎಕ್ಸ್-ಶೋರೂಂ ಬೆಲೆಯ ಈ ಸ್ಕೂಟರ್, ಒಂದೇ ಚಾರ್ಜ್‌ನಲ್ಲಿ 120 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಯಾಕೆ ಈ ಬೈಕ್ ಖರೀದಿಸಬೇಕು ಎಂದರೆ..

ಭಾರತದ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಕ್ವಾಂಟಮ್ ಎನರ್ಜಿ ಕಂಪನಿಯು ತನ್ನ ಹೊಚ್ಚಹೊಸ 'ಪ್ಲಾಸ್ಮಾ' (Plasma) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಇದು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಈ ಬೈಕ್ ಬಗ್ಗೆ ಗ್ರಾಹಕರ ಕುತೂಹಲ ಹೆಚ್ಚಿಸಿದೆ.

ಪ್ಲಾಸ್ಮಾ ಸ್ಕೂಟರ್‌ನ ಎಕ್ಸ್-ಶೋರೂಂ ಬೆಲೆ ಎಷ್ಟು?

ಪ್ಲಾಸ್ಮಾ ಸ್ಕೂಟರ್‌ನ ಎಕ್ಸ್-ಶೋರೂಂ ಬೆಲೆ ₹1.25 ಲಕ್ಷ ಎಂದು ನಿಗದಿಪಡಿಸಲಾಗಿದೆ. ಈ ಸ್ಕೂಟರ್‌ನ ಪ್ರಮುಖ ಆಕರ್ಷಣೆ ಎಂದರೆ ಅದರ ಮೈಲೇಜ್ ರೇಂಜ್. ಒಮ್ಮೆ ಚಾರ್ಜ್ ಮಾಡಿದರೆ ಸಾಕು; ಇದು ಬರೋಬ್ಬರಿ 120 ಕಿಲೋಮೀಟರ್‌ಗಳವರೆಗೆ ಎಲ್ಲೂ ನಿಲ್ಲದೆ ಚಲಿಸುತ್ತದೆ ಎಂದು ಕಂಪನಿ ತಿಳಿಸಿದೆ. ನೂರು ಕಿಮೀ ವ್ಯಾಪ್ತಿಯೊಳಗಿನ ಓಡಾಟ, ಅದರಲ್ಲೂ ನಗರ ಪ್ರದೇಶಗಳಲ್ಲಿ ದೈನಂದಿನ ಓಡಾಟಕ್ಕೆ ಇದು ಅತ್ಯಂತ ಪರ್ಫೆಕ್ಟ್ ಆಯ್ಕೆಯಾಗಿದೆ.

ಬ್ಯಾಟರಿ ಸಾಮರ್ಥ್ಯ ಹೇಗಿದೆ?

ಕ್ವಾಂಟಮ್ ಪ್ಲಾಸ್ಮಾ ಸ್ಕೂಟರ್‌ನಲ್ಲಿ 1500W ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಇದು ಗಂಟೆಗೆ ಗರಿಷ್ಠ 65 ಕಿಲೋಮೀಟರ್ ವೇಗದಲ್ಲಿ ಓಡಬಲ್ಲದು. ದೈನಂದಿನ ಬಳಕೆಗೆ ಈ ವೇಗ ಸಾಕಾಗುತ್ತದೆ ಎನ್ನಬಹುದು. ಇದರಲ್ಲಿ 3 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಲು ಸುಮಾರು 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ರಾತ್ರಿ ಚಾರ್ಜ್‌ಗಿಟ್ಟು ಬೆಳಿಗ್ಗೆ ಕಚೇರಿ ಅಥವಾ ಇತರೆ ಕೆಲಸಗಳಿಗೆ ಸುಲಭವಾಗಿ ಬಳಸಬಹುದಾಗಿದೆ.

ಕ್ವಾಂಟಮ್ ಪ್ಲಾಸ್ಮಾ ಸ್ಕೂಟರ್‌ನ ಡಿಸೈನ್ ಮತ್ತು ಫೀಚರ್ಸ್ ಹೇಗಿದೆ?

ಪ್ಲಾಸ್ಮಾ ಸ್ಕೂಟರ್ ಅನ್ನು ಮೂರು ಆಕರ್ಷಕ ಬಣ್ಣಗಳಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಬಿಳಿ, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿದೆ. ಇದರ ವಿನ್ಯಾಸವು ಮಾಡರ್ನ್ ಆಗಿದ್ದು Gen-z ಯುವ ಸಮೂಹವನ್ನು ಆಕರ್ಷಿಸುವಂತಿದೆ.

ಅದರಲ್ಲೂ ಇತರೆ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದು ಬಜೆಟ್ ಸ್ನೇಹಿ, ಕಡಿಮೆ ಬೆಲೆಯ ಸ್ಕೂಟರ್ ಆದರೂ ಇದರಲ್ಲಿ ಹಲವು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಈ ಸ್ಕೂಟರ್ ಸ್ಟಾರ್ಟ್ ಮಾಡಲು ಕೀ ಬೇಕಿಲ್ಲ. ಅಂದ್ರೆ ಇದು 'ಕೀ ಲೆಸ್ ಎಂಟ್ರಿ'! ಇದು ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್ ಮತ್ತು ಸುಲಭ ಪಾರ್ಕಿಂಗ್‌ಗಾಗಿ 'ರಿವರ್ಸ್ ಗೇರ್' ಸೌಲಭ್ಯ ಕೂಡ ಇದರಲ್ಲಿವೆ!ಇನ್ನೇಕೆ ತಡ ಖರೀದಿಸಿ