- Home
- Karnataka Districts
- Bengaluru Urban
- ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ!
ಅಳಿಯ ಸೂರಜ್ ಸಾವು: ಗಾನವಿ ತಾಯಿ ರುಕ್ಮಿಣಿ ಬಿಚ್ಚಿಟ್ಟ ಬೀಗ್ತಿ ಜಯಂತಿ ರಹಸ್ಯ!
ಬೆಂಗಳೂರಿನ ಗಾನವಿ ನಿಧನದ ನಂತರ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯಿಸಿದ್ದಾರೆ. ಅಳಿಯನ ಸಾವಿಗೆ ತಪ್ಪಿತಸ್ಥ ಭಾವನೆಯೇ ಕಾರಣ ಎಂದಿರುವ ಅವರು, ಸೂರಜ್ ತಾಯಿಯ ಧನದಾಹವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿದ್ದಾರೆ.

ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯೆ
ಬೆಂಗಳೂರಿನ ಗಾನವಿ ನಿಧನದ ಬೆನ್ನಲ್ಲೇ ಗಂಡ ಸೂರಜ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸೂರಜ್ ತಾಯಿ ಜಯಂತಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಳಿಯ ಸೂರಜ್ ಆತ್ಮ*ಹತ್ಯೆ ಬಗ್ಗೆ ಗಾನವಿ ತಾಯಿ ರುಕ್ಮಿಣಿ ಪ್ರತಿಕ್ರಿಯಿಸಿದ್ದಾರೆ. ತಪ್ಪು ಅರಿವು ಅಗಿದ್ದು, ಹೀಗಾಗಿ ಸೂಸೈ*ಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಗಳ ಮೇಲೆ ಕಪ್ಪು ಚುಕ್ಕೆ ಇರಲಿಲ್ಲ
ನಮ್ಮ ಮಗಳ ಮೇಲೆ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆ ರೀತಿ ಇದ್ದಿದ್ದರೆ ಪೊಲೀಸರಿಗೆ ಬಂದು ಹೇಳಬಹುದಿತ್ತು. ಅವರ ಅಮ್ಮ ಮಾಡಿರೋ ತಪ್ಪಿಗೆ ಮಕ್ಕಳಿಗೆ ಶಿಕ್ಷೆಯಾಗಿದೆ. ಅವರು ಸೂಸೈ*ಡ್ ಮಾಡಿಕೊಳ್ಳಬೇಕೆಂದು ಅಂದುಕೊಂಡರಲಿಲ್ಲ. ಧನದಾಹಿ ಅಮ್ಮನಿಂದ ಈ ರೀತಿ ಆಗಿದೆ. ಸೂರಜ್ ಅಮ್ಮ ಬದುಕಬೇಕು ನನಗಾದ ನೋವು ಆಗಬೇಕು. ಮಗಳಿಗೆ ಗಂಡನ ಜೊತೆ ಬದುಕುಬೇಕೆಂಬ ಆಸೆ ಇತ್ತು ಎಂದು ರುಕ್ಮಿಣಿ ಹೇಳಿದ್ದಾರೆ.
ಪ್ರೀತಿ ಕೊಡುವಂತೆ ಮಗಳು ಕೇಳಿಕೊಂಡಿದ್ಳು!
ಮಗಳ ಬಗ್ಗೆ ಆರೋಪ ಇದ್ದಿದ್ರೆ ಪೊಲೀಸರ ಹತ್ತಿರ ಬರಬಹುದಿತ್ತು. ಮಗಳ ಮೇಲೆ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ಫ್ರೆಂಡ್ಸ್ ಜೊತೆನೂ ಮಾತಾಡ್ತಿರಲ್ಲಿಲ್ಲ. ಅಪವಾದಗಳು ಸುಳ್ಳು. ಆಕೆ ಬೇರೆಯವರನ್ನು ಲವ್ ಮಾಡಿದ್ರೆ ಅವರಿ ಜೊತೆಯಲ್ಲಿಯೇ ಮದುವೆ ಮಾಡ್ತಿದ್ದೆ. ಮಗಳನ್ನು ತುಂಬಾ ಇನೋಸೆಂಟ್ ಆಗಿ ಬೆಳೆಸಿದ್ದೀವಿ. ಮರ್ಯಾದೆ ಹೋಗುತ್ತೆ ಅಂತ ಭಯಪಡುತ್ತಿದ್ದಳು. ಸೂರಜ್ ಕಾಲಿಗೆ ಬಿದ್ದು ಪ್ರೀತಿ ಕೊಡಿ ಎಂದು ಮಗಳು ಕೇಳಿಕೊಂಡಿದ್ದಳು ಎಂದು ತಿಳಿಸಿದರು.
ಎರಡು ಮುಖದ ಕ್ರಿಮಿನಲ್ ಜನರು
ಎರಡು ತಿಂಗಳು ನಾನು ಅಳುತ್ತ ಜೀವನ ಸಾಗಿಸಿದ್ದೆ ಅಂತ ಹೇಳಿಕೊಂಡಿದ್ದಳು. ಇಂದು, ನಾಳೆ ಬರ್ತನೆ ಅಂತ ಕಾಯುತ್ತಿದ್ದಳು. ನನಗೆ ಆಪರೇಷನ್ ಆಗಿದೆ, IVFನಿಂದ ಮದುವೆ ಮಾಡಿಕೊಳ್ಳನಾ ಅಂತ ಮಗಳ ಬಳಿ ಹೇಳಿದ್ದನಂತೆ. ಅವರ ಅಮ್ಮ ಪಕ್ಕದಲ್ಲೂ ಕುಳಿತುಕೊಡಲು ಬಿಡುತ್ತಿರಲಿಲ್ಲ. ಮೋಸ ಮಾಡಿದ ಅಪರಾಧಿ ಭಾವನೆ ಅವರಲ್ಲಿ ಉಂಟಾಗಿದ್ದು, ಕ್ರಿಮಿನಲ್ ಜನರಾಗಿದ್ದು, ಎರಡು ಮುಖದ ಜನರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹನಿಮೂನ್ ಮೊಟಕುಗೊಳಿಸಿ ನವವಿವಾಹಿತೆ ನೇಣಿಗೆ ಶರಣು, ಪೊಲೀಸರು ಬರದಂತೆ ಗೇಟ್ ಗೆ ನಾಯಿ ಕಟ್ಟಿ ಲಾಕ್ ಮಾಡಿಕೊಂಡ ಆರೋಪಿಗಳು!
ಕಾನೂನು ಹೋರಾಟ ಮಾಡಬೇಕಿತ್ತು!
ಗಾನವಿ ಚಿಕ್ಕಪ್ಪ ಕಾಂತರಾಜು ಮಾತನಾಡಿ, ಭಯಪಟ್ಟು ಯಾಕೆ ಅತ್ಮ*ಹತ್ಯೆ ಮಾಡಿಕೊಳ್ಳಬೇಕು? ಕಾನೂನು ಮುಖಾಂತರ ಹೋರಾಟ ಮಾಡಬೇಕಿತ್ತು. ಯಾಕೆ ಅತ್ಮ*ಹತ್ಯೆ ಮಾಡಿಕೊಳ್ಳೋ ನಿರ್ಧಾರ ಮಾಡಬೇಕು. ನಾವು ಕೂಡ ನಮ್ಮ ಅಳಿಯ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೀವಿ. ಶ್ರೀಲಂಕಾ ಹೋದಾಗ ರೋಮಿಂಗ್ ಕೂಡ ಅಳಿಯನಿಗೆ ರಿಚಾರ್ಜ್ ಮಾಡಿಸಲಾಗಿತ್ತು. ಈಗ ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೖ ತೊಳೆಯುವಂತಾಗಿದೆ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: 'ಮದುವೆ ಆಗಿ ತಿಂಗ್ಳಾದ್ರೂ ಅವಳನ್ನ ಟಚ್ ಕೂಡ ಮಾಡಿಲ್ಲ, ಆತ ಗಂಡಸೇ ಅಲ್ಲ..' ಸೂರಜ್ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ

