ಗಾನವಿ ನಿಧನದ ಬಳಿಕ ಆತ್ಮ*ಹತ್ಯೆಗೆ ಶರಣಾದ ಗಂಡ ಸೂರಜ್; ಅತ್ತೆ ಜಯಂತಿ ಗಂಭೀರ
ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿಯ ಸಾವಿನ ನಂತರ ಪತಿ ಸೂರಜ್ ಕೂಡ ನಾಗಪುರದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವವಿವಾಹಿತೆ ಗಾನವಿ ಆತ್ಮ*ಹತ್ಯೆ ಪ್ರಕರಣ
ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮ*ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪತ್ನಿ ಸೂಸೈ*ಡ್ ಬೆನ್ನಲ್ಲೇ ಗಂಡ ಸೂರಜ್ ಸಹ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಗನ ಜೊತೆಯಲ್ಲಿಯೇ ಆತ್ಮ*ಹತ್ಯೆಗೆ ಯತ್ನಿಸಿದ್ದ ಸೂರಜ್ ತಾಯಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸೂರಜ್ ಆತ್ಮ*ಹತ್ಯೆ
ಗಾನವಿ ನಿಧನದ ಬಳಿಕ ಅವಮಾನಿತರಾಗಿದ್ದ ಸೂರಜ್ ತಾಯಿ ಜಯಂತಿ ಮತ್ತು ಸೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಇದೀಗ ನಾಗಪುರದಲ್ಲಿಯೇ ಸೂರಜ್ ಆತ್ಮ*ಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಪತ್ನಿ ಗಾನವಿ ಸಂಬಂಧಿ ಮತ್ತು ಪೋಷಕರಿಂದ ಅವಮಾನ ತಾಳಲಾರದೇ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಗಳಿವೆ.
ಶ್ರೀಲಂಕಾದಿಂದ ಬಂದಿದ್ಯಾಕೆ?
ಆತ್ಮ*ಹತ್ಯೆಗೆ ಯತ್ನಿಸಿದ್ದ ಗಾನವಿ ಅತ್ತೆ ಜಯಂತಿ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗಾನವಿ ಮತ್ತು ಸೂರಜ್ ಮನಸ್ತಾಪಕ್ಕೆ ಕಾರಣ ಏನು? ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ಇಬ್ಬರು ಶ್ರೀಲಂಕಾದಿಂದ ಬಂದಿದ್ಯಾಕೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ಟೋಬರ್ 29 ರಂದು ಮದುವೆ
ಅಕ್ಟೋಬರ್ 29 ರಂದು ಗಾನವಿ - ಸೂರಜ್ ಮದುವೆ ಆಗಿತ್ತು. ವಿವಾಹವಾದ ಒಂದು ತಿಂಗಳ ನಂತರ ಬೀಗರ ಒತ್ತಾಯಕ್ಕೆ ಮಣಿದು ಅರಮನೆ ಮೈದಾನದಲ್ಲಿ ಮದುವೆ ಆರತಾಕ್ಷತೆಯನ್ನು ಗಾನವಿ ಕುಟುಂಬದವರು ನಡೆಸಿದ್ದರು. ಶ್ರೀಲಂಕಾಕ್ಕೆ 10 ದಿನಗಳು ಹನಿಮೂನ್‌ಗೆ ಗಾನವಿ - ಸೂರಜ್ ಇಬ್ಬರನ್ನು ಕಳುಹಿಸಿದ್ದರು. ಹೀಗಿದ್ದರೂ ಹಣಕ್ಕಾಗಿ ಗಾನವಿಗೆ ಸೂರಜ್ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಟೊರೆಂಟೋ ವಿವಿ ಆವರಣದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿಯ ಗುಂಡಿಕ್ಕಿ ಹ*ತ್ಯೆ
ಪೊಲೀಸರಿಂದ ತನಿಖೆ ಆರಂಭ
ಈ ಸಂಬಂಧ ಗಾನವಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಹಾಗೂ ಕುಟುಂಬದವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: online betting app tragedy: ಆನ್ಲೈನ್ ಬೆಟ್ಟಿಂಗ್‌ನಲ್ಲಿ ಒಂದು ಲಕ್ಷ ಕಳೆದುಕೊಂಡ ವಿದ್ಯಾರ್ಥಿ ಸಾವಿಗೆ ಶರಣು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

