ಕ್ಯಾಮೆರಾ ಕಂಡ ಕೂಡಲೇ ಜೋಡಿ ಆತಂಕಕ್ಕೊಳಗಾಗಿ ಬಟ್ಟೆ ಸರಿಪಡಿಸಿಕೊಂಡು ಪರಾರಿಯಾಗುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹಲವು ವಿಡಿಯೋಗಳು ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿದ್ದ ಜೋಡಿಯ ವಿಡಿಯೋವೊಂದು ಮಿಂಚಿನಂತೆ ಹರಿದಾಡುತ್ತಿದೆ. Choudhary (@Miss_Choudhary0) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈವರೆಗೆ 85 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ರೆ, ಕೆಲವರು ಇಂದಿನ ಯುವ ಜನತೆಯ ವರ್ತನೆ ಎತ್ತ ಸಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜದ ಗೌರವ ಹಾಳಾಗ್ತಿದೆ: ನೆಟ್ಟಿಗರ ಆಕ್ರೋಶ
ಆಗಸ್ಟ್ 21ರಂದು ಬೆಳಗ್ಗೆ 6.43ಕ್ಕೆ ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ತಂದೆಯ ಮುದ್ದಿನ ಮಗಳ ಎಕ್ಷಾಟ್ರಾ ಕ್ಲಾಸ್ ನಡೆಯುತ್ತಿದೆ ಎಂಬ ಶೀರ್ಷಿಕೆಯಡಿಯಲ್ಲಿ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಪರಿಸ್ಥಿತಿ ಗಂಭೀರವಾಗಿತ್ತು. ಮಾರವಾಡಿ ಅಪಖ್ಯಾತಿಯತ್ತ ಸಾಗುತ್ತಿದೆ, ನೀವು ಅದನ್ನು ಉಳಿಸಲು ಸಾಧ್ಯವಾದರೆ ಕೆಲಸ ಮಾಡಿ. ಇಲ್ಲವಾದ್ರೆ ಹೆಣ್ಮಕ್ಕಳು ಹಾಳಾಗುತ್ತಾರೆ. ಸಮಾಜದ ಗೌರವ ಹಾಳಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕಮೆಂಟ್‌ಗೆ ಬಹುತೇಕರು ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ವಿಷಯ, ಪಬ್ಲಿಕ್ ಪ್ಲೇಸ್‌ನಲ್ಲಿ ಯಾಕೆ?
ಈ ವಿಡಿಯೋಗೆ ಕೈಲಾಶ್ ಚೌಧರಿ ಎಂಬವರು ಪ್ರತಿಕ್ರಿಯಿಸಿದ್ದು, ಇದು ಹೋಟೆಲ್ ಜಂಗಲ್.. ನೈಸರ್ಗಿಕ ಮರದ ಕೆಳಗಿನ ಹೋಟೆಲ್ ಮತ್ತು ಫ್ರೀ ಓಯೋ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇಂದಿನ ಜನರು ಎಲ್ಲೆಂದರಲ್ಲಿ ಶುರು ಮಾಡಿಕೊಳ್ಳುತ್ತಾರೆ. ಸ್ವಲ್ಪನಾದ್ರು ಖಾಸಗಿತನ ಬಗ್ಗೆ ಯೋಚಿಸಿ. ಈ ವಿಷಯದಲ್ಲಿ ಯಾರನ್ನೂ ಅಗೌರವಿಸಬಾರದು, ಅದು ಪಾಪದಂತೆ ತೋರುತ್ತದೆ. ಇದು ಅವರಿಬ್ಬರ ಖಾಸಗಿ ವಿಷಯ ಎಂದಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿದ ಒಬ್ಬರು, ಅದು ಅವರಿಬ್ಬರ ಖಾಸಗಿ ವಿಷಯವಾಗಿರಬಹುದು, ಆದ್ರೆ ನಡೆಯುತ್ತಿರೋದು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದೆ ಅಲ್ಲವಾ ಎಂದು ಕಮೆಂಟ್ ಮಾಡಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕೆರೆ ಪೊದೆಯಿಂದ ಎದ್ದು ಬಟ್ಟೆ ಸರಿ ಮಾಡಿಕೊಳ್ಳುತ್ತಾ ಓಡಿದ ಜೋಡಿ; ನಿಮ್ಮೂರಿನಲ್ಲಿ OYO ಇಲ್ವಾ ಎಂದ ನೆಟ್ಟಿಗರು!
ಹಾಗಾದ್ರೆ ವೈರಲ್ ವಿಡಿಯೋದಲ್ಲಿ ಏನಿದೆ?
ನಿರ್ಜನ ಪ್ರದೇಶದಲ್ಲಿ ಜೋಡಿಯೊಂದು ಮರದ ಕೆಳಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಿರುತ್ತಾರೆ. ಈ ವೇಳೆ ಕ್ಯಾಮೆರಾ ಹಿಡಿದುಕೊಂಡು ವ್ಯಕ್ತಿ ಅಲ್ಲಿಗೆ ಬರುತ್ತಾನೆ. ಇದನ್ನು ನೋಡಿದ ಕೂಡಲೇ ಜೋಡಿ ಆತಂಕಕ್ಕೊಳಗಾಗುತ್ತದೆ. ಕೂಡಲೇ ಯುವಕ ಪ್ಯಾಂಟ್ ಏರಿಸಿಕೊಳ್ಳುತ್ತಾ ಬೈಕ್ ಬಳಿ ಬರುತ್ತಾನೆ. ಇತ್ತ ಯುವತಿಯೂ ಸಹ ಪ್ಯಾಂಟ್ ಹಾಕಿಕೊಂಡು ಬಟ್ಟೆ ಸರಿಮಾಡಿಕೊಳ್ಳುತ್ತಾ ಅಲ್ಲಿಂದ ಹೊರಡಲು ಅವಸರದಲ್ಲಿ ರೆಡಿಯಾಗ್ತಾಳೆ. ಕ್ಯಾಮೆರಾ ಹಿಡಿದ ವ್ಯಕ್ತಿ, ಬೈಕ್ ಮೇಲೆ ಹೊರಡಲಾದ ಯುವಕನ ಬಳಿ ಹೋಗಿ ಪ್ರಶ್ನೆ ಮಾಡಲು ಆರಂಭಿಸುತ್ತಾನೆ. ಕ್ಯಾಮೆರಾ ನೋಡಿದ ಕೂಡಲೇ ಯುವಕ ಮುಚ್ಚಿಕೊಳ್ಳುತ್ತಾನೆ. ಯುವತಿ ಸಹ ಅವಸರವಾಗಿ ಬೈಕ್ ಬಳಿ ಬರುತ್ತಾಳೆ. ಈ ವಿಡಿಯೋದಲ್ಲಿ ಯುವತಿಯ ಮುಖವನ್ನು ತೋರಿಸಿಲ್ಲ.
ಜೋಡಿಗಳಿಗೆ ಸಲಹೆ ನೀಡಿದ ನೆಟ್ಟಿಗರು
ಸಾರ್ವಜನಿಕ ಸ್ಥಳದಲ್ಲಿ ಮೈಮರೆಯುವ ಮುನ್ನ ಜೋಡಿಗಳು ಎಚ್ಚರವಾಗಿರಬೇಕು. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇರುತ್ತೆ ಎಂಬ ವಿಷಯವನ್ನು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ವಿಡಿಯೋದಲ್ಲಿರುವ ಭಾಷೆಯನ್ನು ಗಮನಿಸಿದ್ರೆ ಇದು ರಾಜಸ್ಥಾನ ಅಥವಾ ಗುಜರಾತಿನ ಭಾಗದ್ದು ಎಂದು ಊಹೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಸ್ಮಶಾನದ ಪೊದೆಯಲ್ಲಿ ಕಾರ್; ಜನರನ್ನ ನೋಡ್ತಿದ್ದಂತೆ ಚಡ್ಡಿ ಸರಿ ಮಾಡಿಕೊಳ್ಳುತ್ತಾ ಬಂದ BJP ನಾಯಕ
