Oyo Room: ಓಯೋ ರೂಮ್‌ನಲ್ಲಿ ಬಾಗಿಲು ಹಾಕಲು ಮರೆತ ಜೋಡಿಯನ್ನು ಮೆಟ್ರೋ ನಿಲ್ದಾಣದಿಂದ ವ್ಯಕ್ತಿಯೊಬ್ಬ ಕೂಗಿ ಎಚ್ಚರಿಸಿದ ವಿಡಿಯೋ ವೈರಲ್ ಆಗಿದೆ. ಹೋಟೆಲ್ ರೂಮಿನಲ್ಲಿದ್ದ ಜೋಡಿಯ ನಿರ್ಲಕ್ಷ್ಯವನ್ನು ಸಾರ್ವಜನಿಕರು ಗಮನಿಸಿ ತಮಾಷೆ ಮಾಡಿದ್ದಾರೆ.
ಇಂದು ಜೋಡಿಗಳು ಜೊತೆಯಾಗಿ ಕ್ವಾಲಿಟಿ ಟೈಮ್ ಕಳೆಯಲು ಓಯೋ ರೂಮ್‌ಗೆ ಹೋಗುತ್ತಾರೆ. ಮಹಾನಗರಗಳಲ್ಲಿ ಜೋಡಿಗಳು ಕೈ ಕೈ ಹಿಡಿದುಕೊಂಡು ಓಯೋ ರೂಮ್‌ಗೆ ಹೋಗುವುದು ಬಹುತೇಕ ಸಾಮಾನ್ಯವಾಗಿದೆ. ಕೆಲವೊಮ್ಮೆ ಓಯೋ ರೂಮ್‌ಗಳಿಗೆ ಹೋಗಿ ಜೋಡಿಗಳು ಪಜೀತಿಗೆ ಒಳಗಾಗುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಷ್ಟು ಮಾತ್ರವಲ್ಲದೇ ಓಯೋ ರೂಮ್ ಕುರಿತು ಸಾಕಷ್ಟು ತಮಾಷೆ ರೀಲ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಓಯೋ ರೂಮ್‌ಗೆ ಹೋದ ಜೋಡಿ ಬಾಗಿಲು ಹಾಕಿಕೊಳ್ಳುವುದನ್ನು ಮರೆತಿದೆ. ಇದನ್ನು ಗಮನಿಸಿದ ವ್ಯಕ್ತಿಯೋರ್ವ ಮೆಟ್ರೋ ನಿಲ್ದಾಣದಿಂದಲೇ ಕೂಗಿ ಬಾಗಿಲು ಹಾಕಿಕೊಳ್ಳುವಂತೆ ಎಚ್ಚರಿಸಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋವನ್ನು ಮಹಿ (mahiiii._.17) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 3 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು 2 ಸಾವಿರಕ್ಕೂ ಅಧಿಕ ತರೇಹವಾರಿ ಕಮೆಂಟ್‌ಗಳು ಬಂದಿವೆ. ಮೊದಲು ಬಾಗಿಲು ಹಾಕಿಕೋ. ಹೇಗೂ ಹೋಟೆಲ್‌ನವರೇ ವಿಡಿಯೋ ಲೀಕ್ ಮಾಡ್ತಾರೆ. ಬಾಗಿಲು ತೆರೆದು ಸಾರ್ವಜನಿಕರಿಗೆ ಉಚಿತ ಪ್ರದರ್ಶನ ನೀಡಬೇಡ ಎಂದು ಕಮೆಂಟ್ ಮಾಡಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ನಿಂತಿರುವ ವ್ಯಕ್ತಿ ಬಾಗಿಲು ಹಾಕಿಕೊಳ್ಳುವಂತೆ ಹೇಳಿ ಇಬ್ಬರ ಮಾನ ಉಳಿಸಿ ಪುಣ್ಯದ ಕೆಲಸ ಮಾಡಿದ್ದಾನೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಈ ಘಟನೆ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಓಯೋ ರೂಮ್ ಮೇಲಿನ ಫಲಕಗಳೂ ಸಹ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಲ್ಲ. ಮೆಟ್ರೋ ನಿಲ್ದಾಣ ಇರೋದರಿಂದ ಜನರು ಮುಂಬೈ, ದೆಹಲಿ ಎಂದು ಅಂದಾಜಿಸುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಓಯೋ ದಿ ಎಲೈಟ್ ಸ್ಟೇ ಹೆಸರಿನ ಹೋಟೆಲ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿಯೇ ಇದೆ. ಹೋಟೆಲ್ ರೂಮ್ ಬಾಗಿಲು ತೆರೆದ್ರೆ ಕೋಣೆಯಲ್ಲಿನ ಎಲ್ಲಾ ದೃಶ್ಯಗಳು ಮೆಟ್ರೋ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಾಣಿಸುತ್ತದೆ. ಹೋಟೆಲ್ ಕೋಣೆಯೊಳಗಿದ್ದ ಜೋಡಿ, ಬಾಗಿಲು ಹಾಕಿಕೊಳ್ಳುವುದನ್ನು ಮರೆತಿದೆ. ಮಂಚದ ಮೇಲೆ ಓರ್ವ ಯುವಕ ಮಲಗಿರೋದನ್ನು ನೀವು ಗಮನಿಸಬಹುದು. ಇದೇ ಕೋಣೆಯಲ್ಲಿ ಯುವತಿಯೊಬ್ಬಳ ಓಡಾಡುತ್ತಿರೋದು ಸಹ ಕಾಣಿಸುತ್ತದೆ. ಈ ವೇಳೆ ಮೆಟ್ರೋ ನಿಲ್ದಾಣದಲ್ಲಿದ್ದ ವ್ಯಕ್ತಿ ಜೋರಾಗಿ, ಓಯ್ ಗೇಟ್ ಲಗಾ ಲೇ (ಓಯ್ ಬಾಗಿಲು ಹಾಕಿಕೊ) ಎಂದು ಜೋರಾಗಿ ಕೂಗಿ ಹೇಳುತ್ತಾನೆ.
ಧ್ವನಿ ಕೇಳುತ್ತಿದ್ದಂತೆ ಮಂಚದ ಮೇಲೆ ಮಲಗಿದ್ದ ಯುವಕ, ನಗುತ್ತಾ ಓಡಿ ಬಂದು ಕೋಣೆಯ ಬಾಗಿಲು ಹಾಕಿಕೊಳ್ಳುತ್ತಾನೆ. ಇತ್ತ ಕೋಣೆಯಲ್ಲಿದ್ದ ಯುವತಿ ಪಕ್ಕದಲ್ಲಿ ಸರಿಯುತ್ತಾಳೆ. ಇನ್ನು ಈ ವಿಡಿಯೋ ಮಾಡುತ್ತಿರೋದು ಸಹ ಹುಡುಗಿಯಾಗಿದ್ದು, ಆಕೆಯ ನಗು ಈ ವಿಡಿಯೋದಲ್ಲಿ ಕೇಳಿಸುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೊದಲು ಬಾಗಿಲು ಹಾಕಿಕೊಳ್ಳುವುದನ್ನು ಕಲಿಯಬೇಕು ಎಂದು ಓಯೋ ರೂಮ್‌ಗೆ ಬಂದ ಜೋಡಿಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ವಲ್‌ರಸ್‌ಗೆ ಬಿಗ್ ಬರ್ತ್‌ಡೇ ಬ್ಯಾಶ್: ಚೀನಾದ ಝೂ ವೀಡಿಯೋ ಸಖತ್ ವೈರಲ್
ಓಯೋಗೆ ಹೊಸ ಚೆಕ್-ಇನ್ ನೀತಿ
ಟ್ರಾವೆಲ್ ಬುಕಿಂಗ್ ಪಾಲುದಾರನಾದ ‘ಓಯೋ’, ತನ್ನ ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿಯನ್ನು ಪ್ರಾರಂಭಿಸಿದೆ. ಈ ಪ್ರಕಾರ ಓಯೋ ಮೂಲಕ ಇನ್ನು ಅವಿವಾಹಿತ ಜೋಡಿಗೆ ಚೆಕ್-ಇನ್ ಮಾಡಲು ಅವಕಾಶ ಇರುವುದಿಲ್ಲ. ಎಲ್ಲಾ ಜೋಡಿಗಳು ಆನ್‌ಲೈನ್ ಬುಕಿಂಗ್ ವೇಳೆ ಹಾಗೂ ಚೆಕ್-ಇನ್ ಮಾಡುವ ವೇಳೆ ತಮ್ಮ ಸಂಬಂಧದ ಮಾನ್ಯ ಪುರಾವೆಗಳನ್ನು ತೋರಿಸಬೇಕು. ಒಂದು ವೇಳೆ ತೋರಿಸದೇ ಇದ್ದರೆ ಅಂಥವರಿಗೆ ರೂಂ ಕೊಡಬಾರದು ಎಂದು ಸೂಚಿಸಲಾಗಿದೆ.
ಈ ನೀತಿ ಏಕೆ?:
ಸಮಾಜದ ಹಲವು ವರ್ಗಗಳಿಂದ, ಓಯೋ ಮೂಲಕ ನಡೆಯುವ ರೂಂ ಬುಕ್ಕಿಂಗ್‌ಗಳಿಗೆ ಆಕ್ಷೇಪ ಕೇಳಿಬಂದಿತ್ತು. ಅವಿವಾಹಿತ ಜೋಡಿಗಳು ದಂಪತಿ ಎಂದು ಸುಳ್ಳು ಹೇಳಿ ರೂಂ ಬುಕ್ ಮಾಡಿ ಅಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಾರೆ ಎಂಬ ಆರೋಪವಿತ್ತು. ಪ್ರಮುಖವಾಗಿ ಮೇರಠ್‌ನಲ್ಲಿ ಈ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಓಯೋ ಈ ಬದಲಾವಣೆ ಮಾಡಿದೆ.
ಇದನ್ನೂ ಓದಿ: UP News: ಹೆರಿಗೆ ವಾರ್ಡ್‌ನಲ್ಲಿ ಹಾಯಾಗಿ ಮಲಗಿರುವ ಬೀದಿ ನಾಯಿಗಳು, ನಂಬರ್ ಒನ್ ಆಸ್ಪತ್ರೆಯ ಅಸಲಿ ಕಥೆ ಬಯಲು!
