MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Sugar Prices
AKKA Kannada Film Festival
Hubballi Pune AC Sleeper Bus
Government KPS Schools
Tomato & Coriander Price Crash
Central Government Jobs
Minister B Nagendra vs BJP
Karnataka SIR 2026
2027 State Elections India
Mangalore Railway Jurisdiction
  • Home
  • Karnataka Districts
  • Bengaluru Urban
  • 55 ವರ್ಷಕ್ಕೆ ಆಟ ನಿಲ್ಲಿಸಿದ ಡಾ.ರಾಜ್ ಕುಮಾರ್ ಉದ್ಘಾಟಿಸಿದ್ದ ಊರ್ವಶಿ ಚಿತ್ರಮಂದಿರ! ಗಟ್ಟಿಮುಟ್ಟಾಗಿದ್ದರೂ ನೆಲಸಮ!

55 ವರ್ಷಕ್ಕೆ ಆಟ ನಿಲ್ಲಿಸಿದ ಡಾ.ರಾಜ್ ಕುಮಾರ್ ಉದ್ಘಾಟಿಸಿದ್ದ ಊರ್ವಶಿ ಚಿತ್ರಮಂದಿರ! ಗಟ್ಟಿಮುಟ್ಟಾಗಿದ್ದರೂ ನೆಲಸಮ!

ಸುಮಾರು 55 ವರ್ಷಗಳ ಇತಿಹಾಸ ಹೊಂದಿದ್ದ, ಡಾ. ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಬೆಂಗಳೂರಿನ ಐತಿಹಾಸಿಕ ಊರ್ವಶಿ ಚಿತ್ರಮಂದಿರವು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೆಲಸಮಗೊಳ್ಳುತ್ತಿದೆ. ಗುತ್ತಿಗೆ ವಿವಾದದ ಹಿನ್ನೆಲೆಯಲ್ಲಿ ಈ ಐಕಾನಿಕ್ ಏಕಪರದೆ ಚಿತ್ರಮಂದಿರ ಇತಿಹಾಸದ ಪುಟ ಸೇರುತ್ತಿದೆ.

2 Min read
Author : Sathish Kumar KH
Published : Aug 24 2026, 05:51 PM IST
Share this Photo Gallery
  • FB
  • TW
  • Linkdin
  • Whatsapp
15
ಆಟ ನಿಲ್ಲಿಸಿದ ಊರ್ವಶಿ
Image Credit : Asianet News

ಆಟ ನಿಲ್ಲಿಸಿದ ಊರ್ವಶಿ

ಬೆಂಗಳೂರು (ಆ.24): ಬೆಂಗಳೂರಿನ ಸಿನಿಪ್ರಿಯರ ಪಾಲಿನ ಹೆಮ್ಮೆಯ ತಾಣ, ಅದೆಷ್ಟೋ ಸುವರ್ಣ ಕ್ಷಣಗಳಿಗೆ ಮೂಕಸಾಕ್ಷಿಯಾಗಿದ್ದ ಐತಿಹಾಸಿಕ 'ಊರ್ವಶಿ' ಚಿತ್ರಮಂದಿರ (Urvashi Theatre) ಇತಿಹಾಸದ ಪುಟ ಸೇರುತ್ತಿದೆ. ಸುಮಾರು 55 ವರ್ಷಗಳ ಭವ್ಯ ಸಿನೆಮಾ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತಿದ್ದ, ವರನಟ ಡಾ. ರಾಜ್‌ಕುಮಾರ್ ಅವರಿಂದಲೇ ಲೋಕಾರ್ಪಣೆಗೊಂಡಿದ್ದ ಈ ಐಕಾನಿಕ್ ಚಿತ್ರಮಂದಿರವನ್ನು ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶದ ಬೆನ್ನಲ್ಲೇ ನೆಲಸಮಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಡಾ. ರಾಜ್‌ಕುಮಾರ್ ಅವರಿಂದಲೇ ಉದ್ಘಾಟನೆಗೊಂಡಿದ್ದ ರಂಗು
Image Credit : Asianet News

ಡಾ. ರಾಜ್‌ಕುಮಾರ್ ಅವರಿಂದಲೇ ಉದ್ಘಾಟನೆಗೊಂಡಿದ್ದ ರಂಗು

ಬೆಂಗಳೂರಿನ ಲಾಲ್‌ಬಾಗ್ ಮುಖ್ಯ ರಸ್ತೆಯಲ್ಲಿರುವ ಊರ್ವಶಿ ಚಿತ್ರಮಂದಿರವು 1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಅಮೃತ ಹಸ್ತದಿಂದ ಅದ್ಧೂರಿಯಾಗಿ ಉದ್ಘಾಟನೆಗೊಂಡಿತ್ತು. ಸುಮಾರು 1,100 ಆಸನಗಳ ಬೃಹತ್ ಸಾಮರ್ಥ್ಯ ಹೊಂದಿದ್ದ ಈ ಏಕಪರದೆ ಚಿತ್ರಮಂದಿರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳ 5,000ಕ್ಕೂ ಹೆಚ್ಚು ಚಲನಚಿತ್ರಗಳ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಾರ್ವಕಾಲಿಕ ಹಿಟ್ ಸಿನಿಮಾ 'ಎಕೆ 47' (AK 47) ಇಲ್ಲಿ ಬರೋಬ್ಬರಿ 100 ದಿನಗಳ ಕಾಲ ಹೌಸ್‌ಫುಲ್ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತ್ತು.

Related Articles

Related image1
ಕಾಮಾಕ್ಯ ಚಿತ್ರಮಂದಿರ ಕಟ್ಟಲು ಬಂದವನು, 3 ಥಿಯೇಟರ್‌ ಮಾಲೀಕನಾದೆ: ನರಸಿಂಹಲು ಎಂ
Related image2
Shivaleela Movie: ಸದನದಲ್ಲಿ ಚರ್ಚೆಯಾದ್ರೂ ಸಿಗ್ತಿಲ್ಲ ಚಿತ್ರಮಂದಿರ! ಚಪ್ಪಾಳೆ ತಟ್ಟಿದ್ರೆ ಮಾತ್ರ ನಿಮ್ಗೆ ಖುಷಿನಾ?
35
ಅತ್ಯಾಧುನಿಕ ಸೌಂಡ್ ಸಿಸ್ಟಂ & ಸ್ಟಾರ್ ಸಿನಿಮಾಗಳ ತವರು:
Image Credit : Asianet News

ಅತ್ಯಾಧುನಿಕ ಸೌಂಡ್ ಸಿಸ್ಟಂ & ಸ್ಟಾರ್ ಸಿನಿಮಾಗಳ ತವರು:

ಭಾರತದಲ್ಲೇ ಅತ್ಯಾಧುನಿಕ ಹಾಗೂ ವಿಶ್ವದರ್ಜೆಯ ಸೌಂಡ್ ಟೆಕ್ನಾಲಜಿ ಹೊಂದಿದ್ದ ಕೇವಲ ಎರಡು ಚಿತ್ರಮಂದಿರಗಳ ಪೈಕಿ ಊರ್ವಶಿ ಕೂಡ ಒಂದಾಗಿತ್ತು. ಅತ್ಯುತ್ತಮ 3D ದೃಶ್ಯ ವೈಭವ ಮತ್ತು ಸೌಂಡ್ ಕ್ವಾಲಿಟಿಗೆ ಹೆಸರುವಾಸಿಯಾಗಿದ್ದ ಈ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದೇ ಪ್ರೇಕ್ಷಕರಿಗೆ ಒಂದು ಹಬ್ಬವಾಗಿತ್ತು.

ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್-2', ರಿಷಬ್ ಶೆಟ್ಟಿಯವರ 'ಕಾಂತಾರ', ರಾಜ್ ಬಿ ಶೆಟ್ಟಿಯವರ 'ಗರುಡ ಗಮನ ವೃಷಭ ವಾಹನ', ದುನಿಯಾ ವಿಜಯ್ ಅವರ 'ಭೀಮ', ರಜನಿಕಾಂತ್ ಅಭಿನಯದ 'ಕಬಾಲಿ', 'ಜೈಲರ್' ಹಾಗೂ 'ಬಾಹುಬಲಿ 2' ಸೇರಿದಂತೆ ನೂರಾರು ಬ್ಲಾಕ್‌ಬಸ್ಟರ್ ಸಿನಿಮಾಗಳು ಇಲ್ಲಿ ಸತತ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರವನ್ನು ಇದೇ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಈ ನೆಲಸಮದ ಸುದ್ದಿ ತೀವ್ರ ನಿರಾಸೆ ಮೂಡಿಸಿದೆ.

45
ಸುಪ್ರೀಂ ಕೋರ್ಟ್ ಆದೇಶ: ನೆಲಸಮಕ್ಕೆ ಕಾರಣವೇನು?
Image Credit : Asianet News

ಸುಪ್ರೀಂ ಕೋರ್ಟ್ ಆದೇಶ: ನೆಲಸಮಕ್ಕೆ ಕಾರಣವೇನು?

1970ರಲ್ಲಿ ಜಮೀನಿನ ಮೂಲ ಮಾಲೀಕರಾದ 'ಬಾಸೆಟ್ಟಿ ಟ್ರಸ್ಟ್' ಅವರಿಂದ ಶ್ರೀನಿವಾಸ ಎಂಟರ್‌ಪ್ರೈಸಸ್ ಸಂಸ್ಥೆಯು ಜಾಗವನ್ನು ಗುತ್ತಿಗೆಗೆ (ಲೀಸ್‌) ಪಡೆದು ಚಿತ್ರಮಂದಿರವನ್ನು ನಿರ್ಮಿಸಿತ್ತು. ಈ ಗುತ್ತಿಗೆಯ ಅವಧಿಯು 2018ರ ಏಪ್ರಿಲ್ 23ರಂದೇ ಮುಕ್ತಾಯಗೊಂಡಿತ್ತು. ಲೀಸ್ ಮುಕ್ತಾಯದ ನಂತರವೂ ಮಾಲೀಕರು ಒಪ್ಪಂದ ನವೀಕರಿಸಲು ನಿರಾಕರಿಸಿ, ಜಾಗವನ್ನು ತೆರವುಗೊಳಿಸಿಕೊಡುವಂತೆ ನ್ಯಾಯಾಲಯದ ಮೊರೆ ಹೋದರು. ಸುದೀರ್ಘ ಕಾನೂನು ಹೋರಾಟದ ಬಳಿಕ ಕೆಳ ನ್ಯಾಯಾಲಯ ಹಾಗೂ ಕರ್ನಾಟಕ ಹೈಕೋರ್ಟ್ ಜಾಗವನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದವು. ಇದನ್ನು ಪ್ರಶ್ನಿಸಿ ಚಿತ್ರಮಂದಿರದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತಾದರೂ, ಸುಪ್ರೀಂ ಕೋರ್ಟ್ ಕೂಡ ಮಾಲೀಕರ ಪರವಾಗಿಯೇ ತೀರ್ಪು ನೀಡಿತು.

55
ತೆರವು ಕಾರ್ಯ ಆರಂಭ: ಸಿನಿ ರಸಿಕರಲ್ಲಿ ಕಣ್ಣೀರು
Image Credit : Asianet News

ತೆರವು ಕಾರ್ಯ ಆರಂಭ: ಸಿನಿ ರಸಿಕರಲ್ಲಿ ಕಣ್ಣೀರು

ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಪೊಲೀಸ್ ಭದ್ರತೆಯೊಂದಿಗೆ ಚಿತ್ರಮಂದಿರದ ಆಂತರಿಕ ವಸ್ತುಗಳಾದ ಆಸನಗಳು, ವಿಶ್ವದರ್ಜೆಯ ಪ್ರೊಜೆಕ್ಟರ್, ಸೌಂಡ್ ಸ್ಪೀಕರ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಕಟ್ಟಡ ನೆಲಸಮ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಸಿನಿಮಾ ಇತಿಹಾಸದ ಗತವೈಭವವನ್ನು ಸಾರುತ್ತಿದ್ದ ಮತ್ತೊಂದು ಹೆಮ್ಮೆಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹೀಗೆ ಮಣ್ಣುಪಾಲಾಗುತ್ತಿರುವುದು ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳಲ್ಲಿ ತೀವ್ರ ಬೇಸರವನ್ನುಂಟುಮಾಡಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬೆಂಗಳೂರು ನಗರ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನಲ್ಲಿರುವ ಖಾಲಿ ನಿವೇಶನಗಳಿಗೆ ನೋಟೀಸ್ ಅಂಟಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ
Recommended image2
ವಾಹನ ಸವಾರರೇ ಗಮನಿಸಿ: ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಇಂದಿನಿಂದ 60 ದಿನ ಬಂದ್!
Recommended image3
ಟ್ರಾಫಿಕ್‌ ಸಮಸ್ಯೆಗೆ ಡಿಫರೆಂಟ್‌ ಪರಿಹಾರ, ಔಟರ್‌ ರಿಂಗ್‌ ರೋಡ್‌ನಲ್ಲಿ ಟೆಕ್‌ಪಾರ್ಕ್‌ನ ಒಳಗಡೆ ಶಿಫ್ಟ್‌ ಆಗಲಿದೆ ಬಿಎಂಟಿಸಿ ಬಸ್‌ ಸ್ಟಾಪ್‌?
Related Stories
Recommended image1
ಕಾಮಾಕ್ಯ ಚಿತ್ರಮಂದಿರ ಕಟ್ಟಲು ಬಂದವನು, 3 ಥಿಯೇಟರ್‌ ಮಾಲೀಕನಾದೆ: ನರಸಿಂಹಲು ಎಂ
Recommended image2
Shivaleela Movie: ಸದನದಲ್ಲಿ ಚರ್ಚೆಯಾದ್ರೂ ಸಿಗ್ತಿಲ್ಲ ಚಿತ್ರಮಂದಿರ! ಚಪ್ಪಾಳೆ ತಟ್ಟಿದ್ರೆ ಮಾತ್ರ ನಿಮ್ಗೆ ಖುಷಿನಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved