MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಬೆಂಗಳೂರಿನ ಹೈಫೈ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪ್ರತ್ಯಕ್ಷ: 'ಯುಬಿ ಸಿಟಿ' ಒಂದು ಹೋಟೆಲ್ ಸೀಲ್‌ಡೌನ್!

ಬೆಂಗಳೂರಿನ ಹೈಫೈ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪ್ರತ್ಯಕ್ಷ: 'ಯುಬಿ ಸಿಟಿ' ಒಂದು ಹೋಟೆಲ್ ಸೀಲ್‌ಡೌನ್!

ಬೆಂಗಳೂರಿನ ಐಷಾರಾಮಿ ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಪ್ರಸಿದ್ಧ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, ಕೊಳೆತ ಮಾಂಸ, ಬಾತುಕೋಳಿ ಮಾಂಸ ಮತ್ತು ಬಳಸಿದ ಅಡುಗೆ ಎಣ್ಣೆ ಸೇರಿದಂತೆ 132 ಕೆಜಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.

2 Min read
Author : Sathish Kumar KH
Published : Aug 09 2026, 11:00 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬೆಂಗಳೂರು (ಆ.09): ರಾಜ್ಯ ರಾಜಧಾನಿ ಬೆಂಗಳೂರಿನ ವಿಐಪಿಗಳು ಹಾಗೂ ಟೆಕ್ಕಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರಸಿದ್ಧ ಯುಬಿ ಸಿಟಿ (UB City) ಹಾಗೂ ಬ್ರಿಗೇಡ್ ರಸ್ತೆಯ (Brigade Road) ಐಷಾರಾಮಿ ರೆಸ್ಟೋರೆಂಟ್‌ಗಳಲ್ಲಿ ಆಹಾರ ಪ್ರಿಯರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಸತತ 3ನೇ ದಿನ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕೊಳೆತ ಮಾಂಸ (Rotten Meat) ಹಾಗೂ ಅಪಾಯಕಾರಿ ಆಹಾರ ಪದಾರ್ಥಗಳು ಪತ್ತೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಯಾವ್ಯಾವ ಹೋಟೆಲ್‌ಗಳಲ್ಲಿ ಏನೇನು ಪತ್ತೆ?:

ಸ್ಕೈ ಕಿಚನ್ (Sky Kitchen - UB City):

ಇಲ್ಲಿ ಬರೋಬ್ಬರಿ 45 ಕೆಜಿ ಕೊಳೆತ ಚಿಕನ್ ಹಾಗೂ ಗೋಮಾಂಸ, 6 ಕೆಜಿ ವೆಜಿಟೇಬಲ್ ಕಟ್ಲೆಟ್ ಹಾಗೂ ಮರುಬಳಕೆ ಮಾಡಿದ 15 ಲೀಟರ್ ಅಪಾಯಕಾರಿ ಅಡುಗೆ ಎಣ್ಣೆ (Used Cooking Oil) ಪತ್ತೆಯಾಗಿದೆ. ಒಟ್ಟು 51 ಕೆಜಿ ಆಹಾರ ಸಂಪೂರ್ಣ ವಿಷಪೂರಿತ ಸ್ಥಿತಿಯಲ್ಲಿದ್ದುದರಿಂದ ಹೋಟೆಲ್ ಅನ್ನು ಸೀಜ್ ಮಾಡಲಾಗಿದೆ.

Related Articles

Related image1
'ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ'; ಹೊಳೆಯುವ ವಸ್ತುಗಳ ಹಿಂದಿರುವ ಅಪಾಯಗಳನ್ನು ಪರಿಶೀಲಿಸಿ!
Related image2
ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಹೊಸ ರೂಪ; ರೈಲು ಸಂಚಾರ ಇನ್ಮುಂದೆ ಮತ್ತಷ್ಟು ಸುಗಮ
36
Image Credit : Asianet News

ಯುಬಿ ಸಿಟಿಯ ಪ್ರಸಿದ್ಧ 'ಸ್ಕೈ ಕಿಚನ್' (Sky Kitchen) ಹೋಟೆಲ್‌ನಲ್ಲಿ ಸಂಪೂರ್ಣ ಕೊಳೆತುಹೋದ ಸ್ಥಿತಿಯಲ್ಲಿದ್ದ ಚಿಕನ್, ಮಟನ್ ಹಾಗೂ ಬಿಫ್ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಆ ಹೋಟೆಲ್‌ಗೆ ಸೀಲ್‌ಡೌನ್ (Sealed Down) ಮಾಡಿ ಲಾಕ್ ಮಾಡಿದ್ದಾರೆ.

46
Image Credit : Asianet News

ರಾಯಲ್ ಚೈನ್ ಹೋಟೆಲ್ :

ಇಲ್ಲಿ ಸುಮಾರು 50 ಕೆಜಿ ಬಾತುಕೋಳಿ ಮಾಂಸ (Duck Meat) ಹಾಗೂ 5 ಕೆಜಿ ಮೀನನ್ನು ಸರಿಯಾಗಿ ಫ್ರೋಜ್ ಮಾಡದೆ ಹಾಳಾದ ಸ್ಥಿತಿಯಲ್ಲಿ ಇಡಲಾಗಿತ್ತು. ಒಟ್ಟು 55 ಕೆಜಿ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ಟಸ್ಕಾನೋ ಮತ್ತು ಮಡ್ರಾಸ್ ಕಿಚನ್:

ಇಲ್ಲಿ ಬಳಕೆ ಸೂಕ್ತವಲ್ಲದ 5 ಕೆಜಿ ಮಶ್ರೂಮ್ (Mushroom) ಹಾಗೂ 5 ಕೆಜಿ ಹಸಿರು ಬಟಾಣಿಯನ್ನು ಜಪ್ತಿ ಮಾಡಲಾಗಿದೆ.

ಸೆನ್ಸೆಝ್ ಹೋಟೆಲ್ :

3 ಕೆಜಿ ಫಿಶ್, 7 ಕೆಜಿ ಕೇಕ್ ಹಾಗೂ ಆಲೂಗಡ್ಡೆ ಮತ್ತು 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸೀಜ್ ಮಾಡಲಾಗಿದೆ.

ಒಟ್ಟಾರೆಯಾಗಿ ಯುಬಿ ಸಿಟಿಯ ವಿವಿಧ ಹೋಟೆಲ್‌ಗಳಿಂದ 132 ಕೆಜಿ ಅಪಾಯಕಾರಿ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

56
Image Credit : Asianet News

ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಹೇಳಿಕೆ:

ಈ ಭರ್ಜರಿ ದಾಳಿಯ ಕುರಿತು ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಶ್ರೀನಿವಾಸ್ (Food Safety Commissioner Srinivas), ಸತತ 3ನೇ ದಿನ ರೇಡ್ ಮುಂದುವರಿದಿದ್ದು, ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದೆ. ಹಲವು ಪ್ರಸಿದ್ಧ ಹೋಟೆಲ್‌ಗಳಲ್ಲಿ ಚಿಕನ್, ಮಟನ್ ಹಾಗೂ ಮೀನನ್ನು ಸರಿಯಾಗಿ ಫ್ರೋಜ್ (Frozen) ಮಾಡಿರಲಿಲ್ಲ. 'ನಿಯಮದ ಪ್ರಕಾರ ಮಾಂಸವನ್ನು -18 ಡಿಗ್ರಿ ತಾಪಮಾನದಲ್ಲಿ ಇಟ್ಟರೆ ಒಂದು ವರ್ಷದವರೆಗೆ ಬಳಸಬಹುದು. ಮೀನನ್ನು 1 ತಿಂಗಳು ಇಡಬಹುದು. ಆದರೆ ಇಲ್ಲಿ ಅವಧಿ ಮೀರಿದರೂ ಇಡಲಾಗಿತ್ತು ಎಂದು ಮಾಹಿತಿ ನೀಡಿದರು.

66
Image Credit : Asianet News

ಇನ್ನು ಕೆಲವೆಡೆ ಎಕ್ಸ್‌ಪೈರಿ ಡೇಟ್ (Expiry Date) ಚೇಂಜ್ ಮಾಡಿ ಹೊಸ ಸ್ಟಿಕರ್ ಅಂಟಿಸಿರುವುದು ಕಂಡುಬಂದಿದೆ. ಅಂತಹ ಹೋಟೆಲ್‌ಗಳಿಗೆ ನೋಟೀಸ್ ನೀಡಲಾಗಿದ್ದು, 10 ರಿಂದ 15 ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಹೋಟೆಲ್ ಮಾಲೀಕರಿಗೆ ಸೂಕ್ತ ಅಡ್ವೈಸರಿ (Advisors) ಜಾರಿ ಮಾಡುತ್ತೇವೆ ಹಾಗೂ ಆನ್‌ಲೈನ್ ಕ್ಲೌಡ್ ಕಿಚನ್‌ಗಳನ್ನು (Cloud Kitchens) ಪರಿಶೀಲಿಸಲಿದ್ದೇವೆ ಎಂದು ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬೆಂಗಳೂರು ನಗರ
ಹೋಟೆಲ್‌ಗಳು
ಆಹಾರ
Latest Videos
Recommended Stories
Recommended image1
Bengaluru: ಕನ್ನಡದಲ್ಲೇ ಹೇಳಿ ಅಂದಿದ್ದೇ ತಪ್ಪಾ? ಬೆಂಗಳೂರಿನಲ್ಲಿ ಕನ್ನಡಿಗನ ಅಟ್ಟಾಡಿಸಿ ಹೊಡೆದ ಹಿಂದಿವಾಲಾ ಗ್ಯಾಂಗ್!
Recommended image2
'ಬೆಂಗಳೂರಿನಲ್ಲಿ ₹50 ಲಕ್ಷ ಪ್ಯಾಕೇಜ್‌ಗೂ ಬೆಲೆಯಿಲ್ವಾ?!': ಐಟಿ ಉದ್ಯೋಗಿಯ ಶಾಕಿಂಗ್ ವಿಶ್ಲೇಷಣೆ!
Recommended image3
ಹಳೆಯ ಬಟ್ಟೆ ಎಸೆಯಬೇಡಿ, ಹಣ ಪಡೆಯಿರಿ; ಬೆಂಗಳೂರಿನ ಈ ಸ್ಟಾರ್ಟ್‌ಅಪ್ ಮನೆ ಬಾಗಿಲಿಗೇ ಬಂದು ಬಟ್ಟೆ ಕೊಂಡುಕೊಳ್ಳುತ್ತದೆ
Related Stories
Recommended image1
'ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ'; ಹೊಳೆಯುವ ವಸ್ತುಗಳ ಹಿಂದಿರುವ ಅಪಾಯಗಳನ್ನು ಪರಿಶೀಲಿಸಿ!
Recommended image2
ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಹೊಸ ರೂಪ; ರೈಲು ಸಂಚಾರ ಇನ್ಮುಂದೆ ಮತ್ತಷ್ಟು ಸುಗಮ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved