- Home
- Automobile
- ಕಾರು ಮಾಲೀಕರೇ, ಚಳಿಗಾಲದಲ್ಲಿ CNG ಇಂಧನ ತುಂಬಿಸುವಾಗ ಈ 5 ತಪ್ಪುಗಳನ್ನ ಮಾಡಬೇಡಿ, ನಷ್ಟ ಅನುಭವಿಸುತ್ತೀರಿ!
ಕಾರು ಮಾಲೀಕರೇ, ಚಳಿಗಾಲದಲ್ಲಿ CNG ಇಂಧನ ತುಂಬಿಸುವಾಗ ಈ 5 ತಪ್ಪುಗಳನ್ನ ಮಾಡಬೇಡಿ, ನಷ್ಟ ಅನುಭವಿಸುತ್ತೀರಿ!
Avoid these mistakes when refilling CNG during winter: ನಿಮ್ಮ ಬಳಿ ಸಿಎನ್ಜಿ ಕಾರು ಇದೆಯೇ? ಹಾಗಾದರೆ ಚಳಿಗಾಲದಲ್ಲಿ ಈ ಐದು ತಪ್ಪುಗಳು ಮಾಡುವುದನ್ನ ತಪ್ಪಿಸಿ. ನಿಮ್ಮ ಕಾರು ಸುರಕ್ಶಿತವಾಗಿರಬೇಕು, ನಿಮಗೆ ನಷ್ಟವಾಗದಿರಲು ಈ ಸಲಹೆಗಳನ್ನು ಪಾಲಿಸಿ.

ಚಳಿಗಾಲದಲ್ಲಿ CNG ತುಂಬಿಸುವಾಗ ಮಾಡಬಾರದ 5 ತಪ್ಪುಗಳು
ಕಾರು ಮಾಲೀಕರಿಗೆ ಮಳೆಗಾಲದಲ್ಲಿ ಒಂದು ಚಿಂತೆಯಾದರೆ, ಚಳಿಗಾಲದಲ್ಲೂ ಇನ್ನೊಂದು ತರಹದ್ದು. ಈಗ ಚಳಿಗಾಲ ತೀವ್ರವಾಗಿದೆ. ಸಿಎನ್ಜಿ ಕಾರು ಇರುವವರ ಚಿಂತೆಗಳು ಶುರುವಾಗಿವೆ. ಕಡಿಮೆ ತಾಪಮಾನದಲ್ಲಿ ಸಿಎನ್ಜಿ ತುಂಬಿಸುವ ಸಮಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಮಾಡುವ ಒಂದು ಸಣ್ಣ ತಪ್ಪು ಕೂಡ ನಿಮ್ಮ ಸುರಕ್ಷತೆ, ವಾಹನ ಕಾರ್ಯಕ್ಷಮತೆ, ನಿಮ್ಮ ಜೇಬಿಗೂ ನಷ್ಟ ಉಂಟುಮಾಡುತ್ತದೆ.
ಮೊದಲ ತಪ್ಪು ಎಂದರೆ ಸಿಎನ್ಜಿ ಇಂಧನ ತುಂಬಿಸುವಾಗ ಎಂಜಿನ್ ಆಫ್ ಮಾಡಲು ಮರೆಯುವುದು ಅಥವಾ ನಿರ್ಲಕ್ಷ್ಯ ಮಾಡುವುದು ಅಥವಾ ಕಾರಲ್ಲೇ ಕುಳಿತುಕೊಳ್ಳುವುದು. ಇದರಿಂದಾಗಿ ಹತ್ತಿಯ ಬಟ್ಟೆ, ಸಿಂಥೆಟಿಕ್ ಬಟ್ಟೆಗಳು ಚಳಿಯಲ್ಲಿ ಸ್ಥಿರ ಚಾರ್ಜ್ ಸಂಗ್ರಹವಾಗುವ ಅಪಾಯ(Risk of static charge accumulation)ವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಇಂಧನ ತುಂಬಿಸುವಾಗ, ಎಂಜಿನ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ, ನಿಮ್ಮ ಮೊಬೈಲ್ ಫೋನ್ ಬಳಸಬೇಡಿ,ಕಾರಿನಿಂದ ಎಲ್ಲರನ್ನೂ ಇಳಿಸಿ.
CNG ಪೂರ್ತಿ ಖಾಲಿಯಾದಾಗ ತುಂಬಿಸುವುದು
ಎರಡನೇಯ ತಪ್ಪು ಎಂದರೆ ಟ್ಯಾಂಕ್ ಪೂರ್ತಿ ಖಾಲಿಯಾದಾಗ ಅಥವಾ ಶಿಫಾರಸು ಮಾಡಲಾದ ಮಿತಿಗಿಂತ ಹೆಚ್ಚಿನ ಒತ್ತಡದಲ್ಲಿ ತುಂಬಿಸುವುದು. ಸಿಎನ್ಜಿ ಟ್ಯಾಂಕ್ ಪೂರ್ತಿ ಖಾಲಿಯಾದಾಗ ಅದರೊಳಗೆ ತಂಪಾದ ಗಾಳಿ ಹೋಗುತ್ತದೆ. ಇದರಿಂದ ಟ್ಯಾಂಕ್ ಒಳಗೆ ತೇವಾಂಶ ಹೆಚ್ಚಬಹುದು. ಇನ್ನು ಹೆಚ್ಚಿನ ಒತ್ತಡದಲ್ಲಿ ತುಂಬಿಸುವುದರಿಂದ ಸುರಕ್ಷಿತವಲ್ಲ. ಸಿಎನ್ಜಿ ಸೂಚನೆಯಂತೆ ತುಂಬಿಸುವುದು ಸುರಕ್ಷಿತ.
CNG ಗ್ಯಾಸ್ ತುಂಬಿಸುವ ಮುನ್ನ ಟ್ಯಾಂಕ್ ಪರಿಶೀಲಿಸದಿರುವುದು
ಮೂರನೇ ಪ್ರಮುಖ ತಪ್ಪು ಎಂದರೆ ಸಿಎನ್ಜಿ ಗ್ಯಾಸ್ ತುಂಬಿಸುವ ಮೊದಲು ಏನಾದರೂ ಲೀಕ್ ಆಗುತ್ತಿದೆಯೇ ಇಲ್ಲವೇ? ರಬ್ಬರ್ ಪೈಪ್ ಸರಿಯಿದೆಯೇ ಎಂಬುದನ್ನ ಪರಿಶೀಲಿಸದೆ ಇರುವುದು ಅಥವಾ ನಿರ್ಲಕ್ಷ್ಯ ಮಾಡುವುದು. ಏಕೆಂದರೆ ಚಳಿಗಾಲದಲ್ಲಿ ಶೀತ ಹೆಚ್ಚಾಗಿ ರಬ್ಬರ್ ಪ್ಲಾಸ್ಟಿಕ್ ಪೈಪ್ಗಳು ಕುಗ್ಗುತ್ತವೆ. ಇದರಿಂದ ಗ್ಯಾಸ್ ಸೋರಿಕೆಯಾದರೆ ನಷ್ಟವಾಗಬಹುದು. ಹೀಗಾಗಿ ಸಿಎನ್ಜಿ ತುಂಬಿಸುವ ಮುನ್ನ ಟ್ಯಾಂಕ್ ಪರಿಶೀಲಿಸುವುದು ಮುಖ್ಯ.
ಸಿಲಿಂಡರ್ ವ್ಯಾಲಿಡಿಟಿ, ಹೈಡ್ರೋ ಟೆಸ್ಟ್ ಮಾಡಿಸದಿರುವುದು
ಸಿಲಿಂಡರ್ ವ್ಯಾಲಿಡಿಟಿ, ಹೈಡೋ ಟೆಸ್ಟ್, ವಿಶ್ವಾಸಾರ್ಹ ಪಂಪ್ ನಿರ್ಲಕ್ಷಿಸುವುದು. ಕಡಿಮೆ ಬೆಲೆಗೆ ಸಿಗುತ್ತೆ ಅಂತಾ ಅಪರಿಚಿತರ ಪಂಪ್ನಿಂದ ಸಿಎನ್ಜಿ ತುಂಬಿಸುವುದು. ಇದರಿಂದ ಕಾರಿನ ಮೈಲೇಜ್ ಕಡಿಮೆಯಾಗುವುದಲ್ಲದೆ ಇಂಜಿನ್ ಕೂಡ ಹಾಳಾಗುತ್ತದೆ. ಇದಲ್ಲದೆ ಸಮಯಕ್ಕೆ ಸರಿಯಾಗಿ ಹೈಡೋ ಟೆಸ್ಟ್ ಮಾಡಿಸದಿದ್ರೆ ಚಳಿಗಾಲದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಹಳೆಯ ಸಿಲಿಂಡರ್ಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ.
ಕಾರನ್ನು ಡೈರೆಕ್ಟ್ ಆಗಿ CNG ಯಲ್ಲಿ ಸ್ಟಾರ್ಟ್ ಮಾಡುವುದು
ಕೊನೆಯ ತಪ್ಪು ಎಂದರೆ ಕಾರನ್ನು ಡೈರೆಕ್ಟ್ ಆಗಿ CNG ಯಲ್ಲಿ ಸ್ಟಾರ್ಟ್ ಮಾಡುವುದು ಅಥವಾ ಕೋಲ್ಡ್ ಎಂಜಿನ್ ಬಳಸಿ ಇದ್ದಕ್ಕಿದ್ದಂತೆ ಆಕ್ಸಿಲರೇಟ್ ಮಾಡುವುದು. ಇವೆರಡೂ ತಪ್ಪುಗಳನ್ನು ಬಹುತೇಕರು ಮಾಡುತ್ತಾರೆ. ಹೀಗೆ ಮಾಡುವುದ ತಪ್ಪು ಎಂಬುದು ಅವರಿಗೆ ತಿಳಿದಿಲ್ಲ. ಚಳಿಗಾಲದಲ್ಲಿ, ಎಂಜಿನ್ ಎಣ್ಣೆ ದಪ್ಪವಾಗುತ್ತದೆ. ಅಲ್ಲದೆ ಗ್ಯಾಸ್ ಆವಿಯಾಗುವಿಕೆ ನಿಧಾನವಾಗಿರುತ್ತದೆ. ಆದ್ದರಿಂದ, ಯಾವಾಗಲೂ ಕಾರನ್ನು ಪೆಟ್ರೋಲ್ನಲ್ಲಿ ಸ್ಮಾರ್ಟ್ ಮಾಡಬೇಕು ಸ್ವಲ್ಪ ಸಮಯದಲ್ಲಿ ಬೆಚ್ಚಗಾಗುತ್ತದೆ ಆಗ ಸಿಎನ್ಜಿ ಮೋಡ್ಗೆ ಬದಲಾಯಿಸಬೇಕು.
ಕಾಲ ಕಾಲಕ್ಕೆ ಸರ್ವಿಸಿಂಗ್ ಮಾಡಿಸುವುದು, ಶುದ್ಧ ಫಿಲ್ಟರ್, ಸರಿಯಾದ ಇಂಧನ ತುಂಬಿಸುವ ಅಭ್ಯಾಸಗಳಿಂದ ನಿಮ್ಮ ಕಾರು ಚಳಿಗಾಲದಲ್ಲೂ ಸುರಕ್ಷಿತವಾಗಿರುತ್ತದೆ. ನಿರ್ಲಕ್ಷ್ಯ ಮಾಡುವುದರಿಂದ ನಿಮಗೆ ನಷ್ಟವಾಗುವುದರಲ್ಲದೆ ಕೆಲವು ವೇಳೆ ಅಪಾಯಕಾರಿಯಾಗಿ ಪರಿಣಮಿಸಬಹುದು.













