MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ನವರತ್ನ ಧರಿಸೋ ಮುನ್ನ ಎಚ್ಚರ, ಎಚ್ಚರ: ಶಾಕಿಂಗ್​ ಅನುಭವ ಹಂಚಿಕೊಂಡ ಖ್ಯಾತ ನಿರ್ದೇಶಕ ರೆಮೋ ಡಿಸೋಜಾ

ನವರತ್ನ ಧರಿಸೋ ಮುನ್ನ ಎಚ್ಚರ, ಎಚ್ಚರ: ಶಾಕಿಂಗ್​ ಅನುಭವ ಹಂಚಿಕೊಂಡ ಖ್ಯಾತ ನಿರ್ದೇಶಕ ರೆಮೋ ಡಿಸೋಜಾ

ನವರತ್ನಗಳು ಅದೃಷ್ಟವನ್ನು ತರಬಲ್ಲವು, ಆದರೆ ಎಲ್ಲರಿಗೂ ಎಲ್ಲ ರತ್ನಗಳು ಸರಿಹೊಂದುವುದಿಲ್ಲ. ತಜ್ಞರ ಸಲಹೆ ಇಲ್ಲದೆ ಧರಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಖ್ಯಾತ ನಿರ್ದೇಶಕ ರೆಮೋ ಡಿಸೋಜಾ ಅವರು ನೀಲಮಣಿ ಧರಿಸಿ ತಮಗಾದ ಕರಾಳ ಅನುಭವ ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Mar 29 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
17
ಅರಿತರೆ ಮಾತ್ರ ಅದೃಷ್ಟ ತರುವ ನವರತ್ನಗಳು
Image Credit : our own

ಅರಿತರೆ ಮಾತ್ರ ಅದೃಷ್ಟ ತರುವ ನವರತ್ನಗಳು

ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಢೂರ್ಯ ಎನ್ನುವ ನವರತ್ನಗಳನ್ನು ಧರಿಸುವ ಬಗ್ಗೆ ಇದಾಗಲೇ ಸಾಕಷ್ಟು ಕಡೆ ಕೇಳಿರುತ್ತೀರಿ. ಹಲವರು ಇದನ್ನು ಧರಿಸುತ್ತಿದ್ದಾರೆ ಕೂಡ. ಯಾವುದೋ ನಟ, ನಟಿ ಇದನ್ನು ಧರಿಸಿರುವುದನ್ನು ನೋಡಿಯೋ ಅಥವಾ ಸೋಷಿಯಲ್​ ಮೀಡಿಯಾಗಳಲ್ಲಿ ಲೈಕ್ಸ್​, ಕಮೆಂಟ್ಸ್​ಗಾಗಿ ಯಾರ್ಯಾರೋ ಹಾಕಿರುವ ವಿಡಿಯೋಗಳನ್ನು ನೋಡಿಯೋ ನವರತ್ನಗಳನ್ನು ಧರಿಸುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

27
ನವರತ್ನಗಳಿಗೂ, ವಿಜ್ಞಾನಕ್ಕೂ, ಮನಸ್ಸಿಗೂ ಇರೋ ಸಂಬಂಧ
Image Credit : Asianet News

ನವರತ್ನಗಳಿಗೂ, ವಿಜ್ಞಾನಕ್ಕೂ, ಮನಸ್ಸಿಗೂ ಇರೋ ಸಂಬಂಧ

ಆದರೆ ನವರತ್ನಗಳಿಗೂ, ವಿಜ್ಞಾನಕ್ಕೂ, ಮನಸ್ಸಿಗೂ ತುಂಬಾ ಆಳವಾದ ಸಂಬಂಧವಿದೆ. ಎಲ್ಲರಿಗೂ ಎಲ್ಲ ನವರತ್ನಗಳೂ ಆಗಿಬರುವುದಿಲ್ಲ. ಆದ್ದರಿಂದ ನಿಮಗೆ ತಕ್ಕ ರತ್ನ ಯಾವುದು ಎಂದು ಸೂಕ್ತ ವ್ಯಕ್ತಿಗಳಿಂದ ತಿಳಿಯದ ಹೊರತೂ ಇದನ್ನು ಧರಿಸಬೇಡಿ. ಯಾವ ರತ್ನಗಳನ್ನು ಧರಿಸದೇ ಇದ್ದರೂ ಓಕೆ, ಆದರೆ ಇನ್ನಾವುದನ್ನೋ ಧರಿಸಿ ತುಂಬಾ ಸಮಸ್ಯೆಯನ್ನು ತಂದೊಡ್ಡಿಕೊಳ್ಳಬೇಡಿ ಎನ್ನುತ್ತಾರೆ ತಜ್ಞರು.

Related Articles

Related image1
ನಿಮ್ಮ ಹುಟ್ಟಿದ ದಿನದಲ್ಲಿ ಅಡಗಿದೆ ಈ ಒಂದು ಕುತೂಹಲ: ದುರ್ಗೆಗೂ ಸಂಬಂಧ ಇರೋ ಜನ್ಮದಿನಗಳ ರಹಸ್ಯ
Related image2
ನಿಮಗಿರುವ ಮಚ್ಚೆ ಹೇಳುತ್ತೆ ನಿಮ್ಮ ವ್ಯಕ್ತಿತ್ವ: ಎಲ್ಲಿದ್ದರೆ ಏನು ನಂಟು?
37
ನಿದೇಶಕ ರೇಮೊ ಡಿಸೋಜಾ ಅನುಭವ ಕೇಳಿ
Image Credit : astro360degreebyalifya Instagram

ನಿದೇಶಕ ರೇಮೊ ಡಿಸೋಜಾ ಅನುಭವ ಕೇಳಿ

ಇದೀಗ ಅಂಥದ್ದೇ ಒಂದು ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ ಖ್ಯಾತ ನೃತ್ಯ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರೆಮೋ ಡಿಸೋಜಾ. ಪ್ರಖ್ಯಾತ ಡಾನ್ಸ್​ ರಿಯಾಲಿಟಿ ಷೋ ಝಲಕ್​ ದಿಖಲಾಜಾಯೆಯ ತೀರ್ಪುಗಾರರಾಗಿರುವ ರೆಮೋ ಅವರು, ಆ ಷೋನದಲ್ಲಿ ತಮಗಾಗಿರುವ ಕರಾಳ ಅನುಭವವನ್ನು ತೆರೆದಿಟ್ಟಿದ್ದಾರೆ. ಅದಕ್ಕೆ ಕಾರಣ ಅವರು ಧರಿಸಿದ್ದ ನೀಲಮಣಿ.

47
ಅದೃಷ್ಟ ತರುವ ನೀಲಮಣಿ ತುಂಬಾ ಡೇಂಜರ್​
Image Credit : our own

ಅದೃಷ್ಟ ತರುವ ನೀಲಮಣಿ ತುಂಬಾ ಡೇಂಜರ್​

ನೀಲಮಣಿಯು ಶನಿ ಗ್ರಹಕ್ಕೆ ಸಂಬಂಧಿಸಿದ ಅತ್ಯಂತ ಶಕ್ತಿಶಾಲಿ ಮತ್ತು ಅಮೂಲ್ಯವಾದ ರತ್ನವಾಗಿದೆ. ಇದು ಕೊರಂಡಮ್ ಖನಿಜದ ವಿಧವಾಗಿದ್ದು, ನವರತ್ನಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದ ಪ್ರಕಾರ, ಇದು ತಕ್ಷಣದ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಅದೃಷ್ಟ, ಸಂಪತ್ತು, ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಆರೋಗ್ಯ ಪ್ರಯೋಜನಗಳನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗೆಂದು ಎಲ್ಲರೂ ಧರಿಸಿಬಿಟ್ಟರೆ ಇದರಿಂದ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಅದನ್ನೇ ರೇಮೋ ಅವರು ಹೇಳಿದ್ದಾರೆ.

57
ರಿಯಾಲಿಟಿ ಷೋನಲ್ಲಿ ಭಯಾನಕ ಅನುಭವ
Image Credit : our own

ರಿಯಾಲಿಟಿ ಷೋನಲ್ಲಿ ಭಯಾನಕ ಅನುಭವ

ಝಲಕ್​ ದಿಖಲಾ ಜಾಯೇ ಕಾರ್ಯಕ್ರಮದ ಸಂದರ್ಭದಲ್ಲಿ ನೀಲಮಣಿ ನನ್ನ ಕೈಯಲ್ಲಿ ಇತ್ತು. ನಾನು ಅಂದು ಅದ್ಯಾರೋ ಹೇಳಿದರು ಎಂದು ಧರಿಸಿಕೊಂಡು ಹೋಗಿದ್ದೆ. ಆದರೆ ಅಂದು ಸುಮ್​ಸುಮ್ಮನೇ ತುಂಬಾ ಕಿರಿಕಿರಿಯಾಗುತ್ತಿತ್ತು. ಕಾರಣ ಏನೆಂದು ಗೊತ್ತೇ ಆಗಲಿಲ್ಲ. ತುಂಬಾ ಸಮಸ್ಯೆ ಎನ್ನಿಸುತ್ತಿತ್ತು. ಇನ್ನೋರ್ವ ತೀರ್ಪುಗಾರರಾಗಿದ್ದ ನಟಿ ಮಾಧುರಿ ದೀಕ್ಷಿತ್​ ಕೂಡ ಈ ಬಗ್ಗೆ ಕೇಳಿದರು. ಆದರೆ ನನಗೆ ಏನು ಆಗ್ತಿದೆ ಎಂದೇ ತಿಳಿಯುತ್ತಿರಲಿಲ್ಲ ಎಂದು astro360degreebyalifya ನೀಡಿದ ಸಂದರ್ಶನದಲ್ಲಿ ರೇಮೋ ಹೇಳಿದ್ದಾರೆ.

67
ಮಾಧುರಿ ದೀಕ್ಷಿತ್​​ ಸಲಹೆ
Image Credit : our own

ಮಾಧುರಿ ದೀಕ್ಷಿತ್​​ ಸಲಹೆ

ಬಳಿಕ ಈ ವಿಷಯವನ್ನು ಮಾಧುರಿ ಅವರಲ್ಲಿ ಹೇಳಿದೆ. ಅವರು ನನ್ನ ಕೈಯನ್ನು ನೋಡಿ ನೀಲಮಣಿಯನ್ನು ತೆಗೆಯುವಂತೆ ಹೇಳಿದರು. ನನ್ನ ಅಸಿಸ್ಟೆಂಟ್​ಗೆ ಕರೆದು, ಅವನಿಗೆ ನೀಲಮಣಿ ಕೊಟ್ಟಾಗ ತುಂಬಾ ರಿಲ್ಯಾಕ್ಸ್​ ಆಯಿತು. ಆಗಲೇ ತಿಳಿದದ್ದು ಇದೇ ನನಗೆ ಸಮಸ್ಯೆ ಉಂಟು ಮಾಡುತ್ತಿದೆ ಎಂದು ರೇಮೋ, ಆ ನೀಲಮಣಿಯನ್ನು ತನ್ನ ಬಳಿಗೆ ಇಟ್ಟುಕೊಂಡಿದ್ದ ಅಸಿಸ್ಟೆಂಟ್​ ಭಯಾನಕ ಅನುಭವವನ್ನೂ ಹಂಚಿಕೊಂಡಿದ್ದಾರೆ.

77
ಬೆದರಿದ್ದ ಅಸಿಸ್ಟೆಂಟ್​
Image Credit : our own

ಬೆದರಿದ್ದ ಅಸಿಸ್ಟೆಂಟ್​

ಕೆಲವೇ ಗಂಟೆಗಳಲ್ಲಿ ಆತ ಓಡೋಡಿ ಬಂದ. ಸಿಕ್ಕಾಪಟ್ಟೆ ಬೆವರುತ್ತಿದ್ದ. ನಾನು ಶಾಕ್​ ಆದೆ. ಆತ ನೀಲಮಣಿಯನ್ನು ನನಗೆ ವಾಪಸ್​ ಮಾಡಿ, ದಯವಿಟ್ಟು ವಾಪಸ್​ ತೆಗೆದುಕೊಳ್ಳಿ. ನನ್ನಿಂದ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬಾ ಹಿಂಸೆಯಾಗುತ್ತಿದೆ ಎಂದಾಗ, ನನಗೂ ಶಾಕ್​ ಆಯಿತು. ಆ ಬಳಿಕ, ಅದನ್ನು ನಮ್ಮ ವ್ಯಾನಿಟಿಬಸ್​ನಲ್ಲಿ ಇಡುವಂತೆ ಆತನಿಗೆ ಹೇಳಿದಾಗ ಅದನ್ನು ಆತ ಇಟ್ಟುಬಂದ. ಆ ಬಳಿಕ ಎಲ್ಲವೂ ಸುಗಮವಾಗಿ ನಡೆಯಿತು. ಈ ಘಟನೆ ಬಳಿಕ ನವರತ್ನಗಳ ಮಾಹಿತಿಯನ್ನು ನಾನು ಪಡೆದೆ ಎಂದು ಹೇಳಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜ್ಯೋತಿಷ್ಯ
ಸಂಖ್ಯಾಶಾಸ್ತ್ರ
ಬಾಲಿವುಡ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ನಿಮ್ಮ ಹುಟ್ಟಿದ ದಿನದಲ್ಲಿ ಅಡಗಿದೆ ಈ ಒಂದು ಕುತೂಹಲ: ದುರ್ಗೆಗೂ ಸಂಬಂಧ ಇರೋ ಜನ್ಮದಿನಗಳ ರಹಸ್ಯ
Recommended image2
ಮೇಷ ರಾಶಿಗೆ ಶುಕ್ರ ಪ್ರವೇಶ: ಏಪ್ರಿಲ್ 19ರವರೆಗೆ 5 ರಾಶಿಗೆ ಶುಭ ಫಲಿತಾಂಶ; ಮೂವರಿಗೆ ಎಚ್ಚರಿಕೆ
Recommended image3
ಇಂದು ಶುಕ್ರಾದಿತ್ಯ ರಾಜಯೋಗ ಈ ರಾಶಿಗೆ ಅದೃಷ್ಟ, ಬಂಪರ್‌ ಸಂಪತ್ತು
Related Stories
Recommended image1
ನಿಮ್ಮ ಹುಟ್ಟಿದ ದಿನದಲ್ಲಿ ಅಡಗಿದೆ ಈ ಒಂದು ಕುತೂಹಲ: ದುರ್ಗೆಗೂ ಸಂಬಂಧ ಇರೋ ಜನ್ಮದಿನಗಳ ರಹಸ್ಯ
Recommended image2
ನಿಮಗಿರುವ ಮಚ್ಚೆ ಹೇಳುತ್ತೆ ನಿಮ್ಮ ವ್ಯಕ್ತಿತ್ವ: ಎಲ್ಲಿದ್ದರೆ ಏನು ನಂಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved