ಈ ದಿನಾಂಕದಂದು ಮೊದಲ ಮಗಳು ಹುಟ್ಟಿದ್ರೆ, ತಂದೆಗಿದೆ ಕೋಟ್ಯಾಧಿಪತಿಯಾಗುವ ಯೋಗ!
ಮನೆಯಲ್ಲಿ ಮೊದಲ ಮಗು ಹೆಣ್ಣಾಗಿ ಹುಟ್ಟಿದರೆ, ಸಾಕ್ಷಾತ್ ಮಹಾಲಕ್ಷ್ಮಿಯೇ ಮನೆಗೆ ಬಂದಂತೆ ಎಂದು ಭಾವಿಸಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ. ಹಾಗಾದ್ರೆ, ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.

ಸಂಖ್ಯೆ 1 (1, 10, 19, 28)
ಸಂಖ್ಯೆ 3 (3, 12, 21, 30)
ಸಂಖ್ಯೆ 5 (5, 14, 23)
ಯಾವುದೇ ತಿಂಗಳ 5, 14, ಮತ್ತು 23ನೇ ದಿನಾಂಕದಂದು ಜನಿಸಿದವರು ಸಂಖ್ಯೆ 5ರ ಅಡಿಯಲ್ಲಿ ಬರುತ್ತಾರೆ. ನಿಮ್ಮ ಮನೆಯ ಮೊದಲ ಮಗು ಹೆಣ್ಣಾಗಿದ್ದು, ಈ ದಿನಾಂಕಗಳಲ್ಲಿ ಜನಿಸಿದ್ದರೆ, ಆ ತಂದೆಯ ಅದೃಷ್ಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ.
5 ನಂಬರ್
5 ನಂಬರ್: ಬುಧ ಈ ಸಂಖ್ಯೆಯ ಅಧಿಪತಿ. ಬುಧನು ವ್ಯಾಪಾರದ ಕಾರಕ. ತಂದೆ ವ್ಯಾಪಾರ ಕ್ಷೇತ್ರದಲ್ಲಿದ್ದರೆ, ಈ ಮಗಳು ಹುಟ್ಟಿದ ನಂತರ ಅವರ ವ್ಯಾಪಾರವು ಅದ್ಭುತವಾಗಿ ಬೆಳೆಯುತ್ತದೆ. ಹೊಸ ಒಪ್ಪಂದಗಳು ಮತ್ತು ವಿದೇಶಿ ಪ್ರಯಾಣಗಳು ಕೂಡಿಬರುತ್ತವೆ. ತಂದೆ ಕೋಟ್ಯಾಧಿಪತಿಯಾಗುವ ಯೋಗವಿದೆ.
ಸಂಖ್ಯೆ 6 (6, 15, 24)
ಯಾವುದೇ ತಿಂಗಳ 6, 15, ಮತ್ತು 24ನೇ ದಿನಾಂಕದಂದು ಜನಿಸಿದವರು ಸಂಖ್ಯೆ 6ರ ಅಡಿಯಲ್ಲಿ ಬರುತ್ತಾರೆ. ಶುಕ್ರ ಈ ಸಂಖ್ಯೆಯ ಅಧಿಪತಿ. ಹೆಣ್ಣುಮಗು ಮೊದಲ ಸಂತಾನವಾಗಿ ಜನಿಸಿದರೆ, ಆ ಮನೆಯಲ್ಲಿ ಸಂಪತ್ತಿಗೆ ಕೊರತೆಯಿರುವುದಿಲ್ಲ. ಶುಕ್ರನು ಐಷಾರಾಮಿ ಮತ್ತು ಸಂಪತ್ತಿನ ಕಾರಕ.
ಈ ಹೆಣ್ಣು ಮಕ್ಕಳಿಗೆ ತಂದೆಯ ಮೇಲೆ ಅಪಾರ ಪ್ರೀತಿ
ಈ ದಿನಾಂಕಗಳಲ್ಲಿ ಜನಿಸಿದ ಮಗಳು ಮನೆಗೆ ಬಂದ ನಂತರ, ತಂದೆಗೆ ಹೊಸ ಮನೆ ಅಥವಾ ವಾಹನ ಖರೀದಿಸುವ ಯೋಗ ಹೆಚ್ಚಾಗುತ್ತದೆ. ಮನೆಯಲ್ಲಿ ಸುಖ-ಸಂತೋಷ ತುಂಬಿರುತ್ತದೆ. ಈ ಹೆಣ್ಣುಮಕ್ಕಳಿಗೆ ತಂದೆಯ ಮೇಲೆ ಅಪಾರ ಪ್ರೀತಿ ಇರುತ್ತದೆ.

