ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಹೂವು, ಹಣ್ಣು ಕಂಡರೆ ಏನರ್ಥ? ಈ ಕನಸುಗಳ ಬಗ್ಗೆ ಜಾಗೃತೆಯಿರಲಿ
ನಮಗೆ ಕನಸಿನಲ್ಲಿ ನಾನಾ ರೀತಿಯ ವಸ್ತುಗಳು, ಸ್ಥಳಗಳು ಕಾಣಿಸುತ್ತವೆ. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಕನಸಿನಲ್ಲಿ ಹೂವು, ಹಣ್ಣುಗಳು ಕಂಡರೆ ಅದು ಶುಭವೋ ಅಥವಾ ಅಶುಭವೋ? ಈ ಗೊಂದಲ ಅನೇಕರಲ್ಲಿ ಇರುತ್ತದೆ. ಬನ್ನಿ, ಇದರ ಬಗ್ಗೆ ತಿಳಿದುಕೊಳ್ಳೋಣ.

ಸ್ವಪ್ನಶಾಸ್ತ್ರ
ಕನಸಿನಲ್ಲಿ ಹೂವು ಬಂದರೆ ಏನರ್ಥ?
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹೂವುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಶುಭ ಸಂಕೇತ. ಹೂವುಗಳು ಸೌಂದರ್ಯ, ಪವಿತ್ರತೆ, ಪ್ರೀತಿ ಮತ್ತು ಸಂತೋಷದ ಸಂಕೇತವಾಗಿವೆ. ಕನಸಿನಲ್ಲಿ ತಾಜಾ ಹೂವುಗಳು ಕಂಡರೆ, ನಮ್ಮ ಜೀವನದಲ್ಲಿ ಶುಭ ಸುದ್ದಿ, ಸಂತೋಷದಾಯಕ ಬದಲಾವಣೆಗಳು ಮತ್ತು ಹೊಸ ಅವಕಾಶಗಳು ಬರಲಿವೆ ಎಂಬುದರ ಸೂಚನೆ. ಅದರಲ್ಲೂ ಬಿಳಿ ಹೂವುಗಳು ಮನಸ್ಸಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ತರುತ್ತವೆ.
ಕೆಂಪು ಹೂವುಗಳು ಪ್ರೀತಿ, ಆಕರ್ಷಣೆ ಮತ್ತು ದಾಂಪತ್ಯದ ಸಂತೋಷವನ್ನು ಸೂಚಿಸಿದರೆ, ಹಳದಿ ಹೂವುಗಳು ಜ್ಞಾನ, ಶಿಕ್ಷಣ ಮತ್ತು ಗೌರವವನ್ನು ಪ್ರತಿನಿಧಿಸುತ್ತವೆ. ಆದರೆ, ಬಾಡಿದ ಅಥವಾ ಉದುರಿದ ಹೂವುಗಳು ಕನಸಿನಲ್ಲಿ ಕಂಡರೆ, ಅದು ನಿರಾಸೆ, ಅವಕಾಶಗಳ ನಷ್ಟ ಅಥವಾ ಭಾವನಾತ್ಮಕ ಗೊಂದಲದ ಸಂಕೇತವೆಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.
ಕನಸಿನಲ್ಲಿ ಹಣ್ಣು ಕಾಣಿಸಿಕೊಂಡರೇ?
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಹಣ್ಣುಗಳು ಕಾಣಿಸುವುದೂ ಕೂಡ ಶುಭ ಫಲಗಳ ಸಂಕೇತವಾಗಿದೆ. ಹಣ್ಣುಗಳು ನಮ್ಮ ಶ್ರಮದ ಫಲ, ಸಂಪಾದನೆ ಮತ್ತು ಪ್ರತಿಫಲವನ್ನು ಸೂಚಿಸುತ್ತವೆ. ಕನಸಿನಲ್ಲಿ ಮಾಗಿದ ಹಣ್ಣುಗಳು ಕಂಡರೆ, ನಮ್ಮ ಕಠಿಣ ಪರಿಶ್ರಮಕ್ಕೆ ಶೀಘ್ರದಲ್ಲೇ ತಕ್ಕ ಫಲ ಸಿಗಲಿದೆ ಎಂದರ್ಥ.
ಕನಸಿನಲ್ಲಿ ಬಾಳೆಹಣ್ಣು ಕಾಣಿಸಿಕೊಂಡರೇ
ಬಾಳೆಹಣ್ಣುಗಳು ಕನಸಿನಲ್ಲಿ ಕಂಡರೆ ಶುಭಕಾರ್ಯ, ಮದುವೆ ಮಾತುಕತೆ ಅಥವಾ ಕುಟುಂಬದಲ್ಲಿ ಸಿಹಿ ಸುದ್ದಿ ಕೇಳುವ ಸಾಧ್ಯತೆ ಇದೆ. ಮಾವಿನಹಣ್ಣುಗಳು ಸಂತೋಷ, ಐಶ್ವರ್ಯ ಮತ್ತು ಹೊಸ ಸಂಬಂಧಗಳನ್ನು ಸೂಚಿಸಿದರೆ, ದ್ರಾಕ್ಷಿ ಹಣ್ಣುಗಳು ಸುಖ-ಸಂತೋಷ ಮತ್ತು ಆರ್ಥಿಕ ಲಾಭದ ಸಂಕೇತವಾಗಿವೆ.
ಹಣ್ಣುಗಳು ಕಾಯಿಯಾಗಿದ್ದರೇ?
ಕನಸುಗಳ ಜ್ಯೋತಿಷಿಗಳು ಹೇಳೋದೇನು?
ಕನಸನ್ನು ಅರ್ಥಮಾಡಿಕೊಳ್ಳಲು ಕೇವಲ ದೃಶ್ಯಗಳಷ್ಟೇ ಅಲ್ಲ, ಕನಸು ಕಂಡ ಸಮಯದ ನಮ್ಮ ಮನಸ್ಥಿತಿ ಮತ್ತು ಜೀವನದ ಸನ್ನಿವೇಶಗಳನ್ನೂ ಪರಿಗಣಿಸಬೇಕು ಎಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಕನಸುಗಳನ್ನು ಆತ್ಮಾವಲೋಕನದ ಒಂದು ಸೂಚನೆಯಾಗಿ ನೋಡಬೇಕು ಎಂದು ಅವರು ಹೇಳುತ್ತಾರೆ.

