Chanakya Niti: ಈ 10 ಸ್ಥಳ/ಸಂದರ್ಭಗಳಲ್ಲಿ ಬಾಯಿ ಮುಚ್ಕೊಂಡು ಇರಿ
ಮೌನವು ನಿಮ್ಮ ಸ್ವಾಭಿಮಾನವನ್ನು ರಕ್ಷಿಸುತ್ತದೆ. ಕೆಲವು ನಿರ್ಧಾರಗಳು ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತವೆ. ಹಿರಿಯರು ಬುದ್ದಿ ಹೇಳುವಾಗ ಮಧ್ಯೆ ಮಾತನಾಡಬಾರದು. ಮಧ್ಯೆ ಮಾತಾಡಿದ್ರೆ ಅಗೌರವ ಉಂಟು ಮಾಡಿದಂತಾಗುತ್ತದೆ. ಶಾಂತಿವಾಗಿದ್ದುಕೊಂಡು ನಿಮ್ಮ ಸಾಮರ್ಥ್ಯವನ್ನು ತೋರಿಸುವ ಕೆಲಸ ಮಾಡಿ

ಆಚಾರ್ಯ ಚಾಣಕ್ಯ
ಆಚಾರ್ಯ ಚಾಣಕ್ಯ ಅವರ ಪ್ರಕಾರ, ಗೌರವ ಮತ್ತು ಯಶಸ್ಸು ಪಡೆದುಕೊಳ್ಳಲು ಯಾವುದೇ ಕಾರಣಕ್ಕೂ 10 ಸ್ಥಳಗಳಲ್ಲಿ ಮಾತನಾಡಬಾರದು. ಈ ಸ್ಥಳಗಳಲ್ಲಿ ಮೌನವೇ ಅಸ್ತ್ರವಾಗಿರುತ್ತದೆ. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತು ಇಲ್ಲಿ ಸೂಕ್ತವಾಗಿದೆ. ಆ 10 ಸ್ಥಳ ಅಥವಾ ಸಂದರ್ಭಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ.
1.ಅಜ್ಞಾನಿಗಳ ನಡುವೆ
ನಿಮ್ಮೊಂದಿಗೆ ಅತಿಯಾದ ಬುದ್ಧಿವಂತರು ಮತ್ತು ಅಜ್ಞಾನಿಗಳು ವಾದ ಮಾಡುತ್ತಿದ್ದರೆ. ಈ ಸಮಯದಲ್ಲಿ ಮೌನವಾಗಿರಬೇಕಾಗುತ್ತದೆ. ಈ ಸಮಯದಲ್ಲಿನ ಮೌನ ಅನಗತ್ಯ ವಾದಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.
2.ಕೋಪ
ಕೋಪಗೊಂಡ ವ್ಯಕ್ತಿ ನಿಮ್ಮೊಂದಿಗೆ ಜಗಳಕ್ಕೆ ಇಳಿದಿದ್ರೆ ಮೌನವಾಗಿರಿ. ಕೋಪದಲ್ಲಿರುವಾಗ ಸರಿ-ತಪ್ಪು ಯಾವುದು ಎಂದು ಅರ್ಥವಾಗಲ್ಲ. ಕೋಪ ಕಡಿಮೆಯಾದ್ಮೇಲೆ ನಿಮ್ಮ ವಾದ ಅಥವಾ ಅಭಿಪ್ರಾಯವನ್ನು ತಿಳಿಸಿ. ಇದು ಎರಡೂ ಕಡೆಯ ಶಾಂತಿಗೆ ಕಾರಣವಾಗುತ್ತದೆ. ಕೋಪದಲ್ಲಿರುವ ವ್ಯಕ್ತಿಯೊಂದಿಗೆ ಪ್ರತಿಕ್ರಿಯಿಸುವ ಬದಲು ಮೌನವಾಗಿರೋದು ಜಾಣತನವಾಗುತ್ತದೆ.
3.ಅನಗತ್ಯ ಮಾತು
ನಿಮ್ಮ ಅನುಮತಿ ಇಲ್ಲದೇ ಅನಗತ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿ ಜೊತೆಯಲ್ಲಿದ್ದಾಗ ಮೌನವಾಗಿರೋದು ಉತ್ತಮ. ಅನಗತ್ಯ ಸಲಹೆಗಳು ನಿಮ್ಮ ವ್ಯಕ್ತಿತ್ವವನ್ನು ಕುಂದಿಸುವ ಸಾಧ್ಯತೆಗಳಿರುತ್ತವೆ.
4. ರಹಸ್ಯ ಮತ್ತು ಗುರಿ
ನಿಮ್ಮ ಖಾಸಗಿ ಜೀವನದ ಕುರಿತ ಯಾವುದೇ ರಹಸ್ಯಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಎಲ್ಲರೊಂದಿಗೆ ಅಥವಾ ಗುಂಪಿನಲ್ಲಿದ್ದಾಗ ನಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಮೇಲೆ ಗಮನವಿರಬೇಕು. ಇಂತಜ ಬಹುತೇಕ ಸಂದರ್ಭಗಳಲ್ಲಿ ಮೌನವಾಗಿರೋದು ಉತ್ತಮ. ಈ ನಡವಳಿಕೆ ನಿಮ್ಮನ್ನು ಸುರಕ್ಷಿತ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತದೆ.
5.ಟೀಕೆ
ಇತರರನ್ನು ಟೀಕೆ ಮಾಡುವಾಗ ಬೇರೆಯವರ ಮುಂದೆ ನಿಮ್ಮ ವ್ಯಕ್ತಿತ್ವ ದುರ್ಬಲಗೊಳ್ಳುತ್ತದೆ. ಗೌರವ ಬಯಸುವ ಜನರು ಟೀಕೆಗಳನ್ನು ತಪ್ಪಿಸುತ್ತಾರೆ. ಟೀಕೆ ಮಾಡುವ ಬದಲು ಮೌನದಿಂದಲೇ ಸಮಸ್ಯೆಗಳನ್ನು ಎದುರಿಸಬೇಕೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
6.ಹಿರಿಯರು
ನಿಮ್ಮ ಹಿರಿಯರು ನಿಮಗೆ ಯಾವುದಾದ್ರು ವಿಷಯಗಳನ್ನು ವಿವರಿಸುತ್ತಿದ್ರೆ ತಾಳ್ಮೆಯಿಂದ ಆಲಿಸುವ ಗುಣವನ್ನು ಬೆಳೆಸಬೇಕು. ಹಿರಿಯರು ಮಾತನಾಡುವಾಗ ಅಥವಾ ಬುದ್ದಿ ಹೇಳುವಾಗ ಮಧ್ಯೆ ಮಾತನಾಡಬಾರದು. ಮಧ್ಯೆ ಮಾತಾಡಿದ್ರೆ ಅದು ಹಿರಿಯರಿಗೆ ಅಗೌರವ ಉಂಟು ಮಾಡಿದಂತಾಗುತ್ತದೆ. ಹಿರಿಯರು ಮಾತು ಮುಗಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.
7.ಸೂಕ್ತವಲ್ಲದ ವಾತಾವರಣ
ಯಾವುದೇ ವಿಷಯ ಅಥವಾ ನಿರ್ಧಾರ ಅಥವಾ ಅಭಿಪ್ರಾಯ ತಿಳಿಸೋದನ್ನು ಸೂಕ್ತವಲ್ಲದ ವಾತಾವರಣದಲ್ಲಿ ತಿಳಿಸಬಾರದು. ಅನಾರೋಗ್ಯಕರ ವಾತಾವರಣ/ಸಮಯದಲ್ಲಿ ತಿಳಿಸುವ ನಿರ್ಧಾರ ಮನಸ್ತಾಪ ಅಥವಾ ದ್ವೇಷಕ್ಕೆ ಕಾರಣವಾಗಬಹುದು.
8.ಭಾವನಾತ್ಮಕ ಸ್ಥಿತಿ
ಭಾವನಾತ್ಮಕವಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತವೆ. ಭಾವನಾತ್ಮಕವಾಗಿ ಇಕ್ಕಟ್ಟಿನಲ್ಲಿ ಸಿಲುಕಿದ್ರೆ ತಾಳ್ಮೆಯಿಂದಿರಬೇಕು ಮತ್ತು ಹೆಚ್ಚು ಮಾತನಾಡಬಾರದು. ಒಂದು ನಿರ್ಧಾರ ಹಲವರ ನೋವಿಗೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ನಿರ್ಧಾರ ಪ್ರಕಟಿಸಲು ಸಮಯ ತೆಗೆದುಕೊಂಡು ಸಂಕಷ್ಟದಿಂದ ಪಾರಾಗಬಹುದು.
9.ಇತರರ ಯಶಸ್ಸು
ಯಾರೊಬ್ಬರ ಯಶಸ್ಸು ನೋಡಿ ತಮಾಷೆಯಾಗಿ ಪ್ರತಿಕ್ರಿಯಿಸಬಾರದು. ಈ ಸಮಯದಲ್ಲಿ ಮೌನವು ನಿಮ್ಮ ಸ್ವಾಭಿಮಾನವನ್ನು ರಕ್ಷಿಸುತ್ತದೆ. ಮೌನದಿಂದಲೇ ಅವರ ಯಶಸ್ಸು ಸ್ಪೂರ್ತಿಯಾಗಿ ತೆಗೆದುಕೊಂಡ್ರೆ ಗೆಲುವು ನಿಮ್ಮದಾಗುತ್ತದೆ.
10.ಅನುಪಯುಕ್ತ ಚರ್ಚೆ
ಅನಗತ್ಯ ಚರ್ಚೆಗಳಲ್ಲಿ ನಿಮ್ಮ ಶಕ್ತಿ ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ, ಶಾಂತಿವಾಗಿದ್ದುಕೊಂಡು ನಿಮ್ಮ ಸಾಮರ್ಥ್ಯವನ್ನು ತೋರಿಸುವ ಕೆಲಸ ಮಾಡಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಳವಾಗುತ್ತದೆ.

