Noise Colorfit Caliber: ದೇಹದ ಉಷ್ಣತೆಯನ್ನೂಅಳೆಯುವ ಸ್ಮಾರ್ಟ್‌ವಾಚ್ ಜನವರಿ 6ರಂದು ಬಿಡುಗಡೆ!

ದೇಹದ ಉಷ್ಣತೆಯನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿರುವ ನಾಯ್ಸ್ ವೇರೆಬಲ್ ಬ್ರಾಂಡ್ ನಾಯ್ಸ್‌ನ ಹೊಸ ಸ್ಮಾರ್ಟ್‌ವಾಚ್  ಕಲರ್‌ಫಿಟ್ ಕ್ಯಾಲಿಬರ್ ಜನವರಿ 6 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

Noise Colorfit Caliber smartwatch with body temperature measuring to launch on Jan 6 mnj

Tech Desk: ದೇಹದ ಉಷ್ಣತೆಯನ್ನು (Body Temperature) ಅಳೆಯುವ ಸಾಮರ್ಥ್ಯವನ್ನು ಹೊಂದಿರುವನಾಯ್ಸ್ ವೇರೆಬಲ್ ಬ್ರಾಂಡ್ ನಾಯ್ಸ್‌ನ (Wearable Brand Noise)ಹೊಸ ಸ್ಮಾರ್ಟ್‌ವಾಚ್  ಕಲರ್‌ಫಿಟ್ ಕ್ಯಾಲಿಬರ್ ಜನವರಿ 6 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಕೊರೋನಾ ವೈರಸ್ ಮತ್ತು‌ ಕೋವಿಡ್‌ 19ರ  ಹೊಸ ರೂಪಾಂತರಿ ಓಮಿಕ್ರಾನ್ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ತುಂಬಾ ಉಪಯುಕ್ತವಾಗಲಿದೆ.

ನಾಯ್ಸ್‌  ಕಲರ್‌ಫಿಟ್  ಕ್ಯಾಲಿಬರ್‌ನ ಬೆಲೆಯನ್ನು ಭಾರತಕ್ಕೆ  ₹3,999 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಸ್ಮಾರ್ಟ್ ವಾಚ್ ಅನ್ನು ಮುಂಗಡ ಬುಕ್ಕಿಂಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಪಟ್ಟಿ ಮಾಡಲಾಗಿದ್ದು  1,999 ರೂಗಳ ಪರಿಚಯಾತ್ಮಕ ಬೆಲೆಯಲ್ಲಿ ( Introductory Price) ಲಭ್ಯವಿರಲಿದೆ. ಇದು ಜನವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಖರೀದಿಗೆ ಲಭ್ಯವಿರುತ್ತದೆ. ನಾಯ್ಸ್ ವಾಚ್ ಕಂಪನಿಯ ಸ್ವಂತ ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುಲಿದ್ದು  ಹೊಸ ವರ್ಷದ ಪರಿಚಯಾತ್ಮಕ ಬೆಲೆಯಾಗಿ ರೂ 1,999 ದೊರೆಯಲಿದೆ.

ಇದನ್ನೂ ಓದಿ: Boult ProBass ZCharge: 40 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ನೆಕ್‌ಬ್ಯಾಂಡ್ ಇಯರ್‌ಫೋನ್‌ ಬಿಡುಗಡೆ!

ಸ್ಮಾರ್ಟ್ ವಾಚ್ 15 ದಿನಗಳ ಬ್ಯಾಟರಿ ಲೈಫ್ ಮತ್ತು ಬಣ್ಣ ಡಿಸ್ಪ್ಲೇಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ರಕ್ತದ ಆಮ್ಲಜನಕದ ಸ್ಯಾಚುರೇಶನ್ ಮಟ್ಟ (SpO2), ಹೃದಯ ಬಡಿತದ ಮಾನಿಟರಿಂಗ್, ಒತ್ತಡದ ಮಾನಿಟರಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಮಾರ್ಟ್ ವಾಚ್ 60 ಸ್ಪೋರ್ಟ್ಸ್ ಮೋಡ್‌ಗಳು ಇನ್‌ಬಿಲ್ಟ್‌ ಆಗಿ ಲಭ್ಯವಿವೆ. ಜತೆಗೆ 150 ಪ್ರಿಲೋಡೆಡ್ ವಾಚ್ ಫೇಸ್‌ಗಳನ್ನು ಹೊಂದಿದೆ. ಕೆಲವು ವಾಚ್ ಫೇಸ್‌ಗಳನ್ನು  ಸಹ ಕಸ್ಟ್‌ಮೈಸ್‌ ಮಾಡಬಹುದಾಗಿದೆ. 

ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!

ತಮ್ಮ ಹಾರ್ಮನಿ OS ನಿಂದ ನಡೆಸಲ್ಪಡುವ ಹೊಸ ಜೋಡಿ ಸ್ಮಾರ್ಟ್ ಗ್ಲಾಸ್‌ಗಳನ್ನು (Smart Glass) ಹುವಾಯ್ ಚೀನಾದಲ್ಲಿ ಬಿಡುಗಡೆ ಮಾಡಿದೆ. ವಿನ್ಯಾಸವು ಡಿಟ್ಯಾಚೇಬಲ್ ಫ್ರಂಟ್ ಫ್ರೇಮ್ ಅನ್ನು ಹೊಂದಿದೆ ಮತ್ತು ಎರಡು ಸಾಧನಗಳನ್ನು ಒಂದೇ ಬಾರಿಗೆ ಕನೆಕ್ಟ್‌  ಮಾಡಬಹುದಾಗಿದೆ.  'ಹುವಾವೇ ಸ್ಮಾರ್ಟ್ ಗ್ಲಾಸ್' ಎಂದು ಕರೆಯಲ್ಪಡುವ ಉತ್ಪನ್ನವು ಮೂರು ಫ್ರೇಮ್ ಪ್ರಕಾರಗಳಲ್ಲಿ ಬರುತ್ತದೆ. ಇದು ಕ್ಲಾಸಿಕ್ ( Classic), ಸ್ಟೈಲಿಶ್ ಪೈಲಟ್ (Stylish Pilot) ಮತ್ತು ರೆಟ್ರೊ ರೌಂಡ್ ಫ್ರೇಮ್ (Retro Round frame), ಬಣ್ಣ ಆಯ್ಕೆಗಳ ಶ್ರೇಣಿಯನ್ನು ಒಳಗೊಂಡಿದೆ. 

ಇದನ್ನೂ ಓದಿ: BlackBerry OS ಯುಗಾಂತ್ಯ: ಜನವರಿ 4 ರಿಂದ ಕ್ಲಾಸಿಕ್‌ ಫೋನ್‌ ಕಾರ್ಯನಿರ್ವಹಿಸೋದು ಡೌಟು!

ಸಂಗೀತದ ಸ್ಟ್ರೀಮಿಂಗ್ (Music Streaming) ಮತ್ತು ಹ್ಯಾಂಡ್ಸ್-ಫ್ರೀ ಕರೆಗಾಗಿ ಟೆಂಪಲ್‌ ಮೇಲೆ (ಕನ್ನಡಕವನ್ನು ಕಿವಿಯ ಮೇಲೆ ಇರಿಸಿಕೊಳ್ಳಲು ಬಳಸುವ ಫ್ರೇಮ್)  128mm "ಅಲ್ಟ್ರಾ-ತೆಳುವಾದ ಲಾರ್ಜ್-ಆಂಪ್ಲಿಟ್ಯೂಡ್" ಸ್ಟೀರಿಯೋ ಸ್ಪೀಕರ್‌ಗಳನ್ನು ಕನ್ನಡಕ ಒಳಗೊಂಡಿದೆ. ಧ್ವನಿ ಸೋರಿಕೆಯನ್ನು ಕಡಿಮೆ ಮಾಡಲು, ಇದು ವಿಲೋಮ ಸೌಂಡ್ ಫೀಲ್ಡ್ ಅಕೌಸ್ಟಿಕ್ ಸಿಸ್ಟಮ್ ಅನ್ನು ಒಳಗೊಂಡಿದೆ, ಇದು ಹೊರಗಡೆಯಿಂದ ಬರುವ ಧ್ವನಿ ಪಿಕಪ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.‌

ಕನ್ನಡಕವು  ಬೆನ್ನುಮೂಳೆಯ ಆರೋಗ್ಯವನ್ನು (Cervical Spine Health) ಪರಿಶೀಲಿಸುವ ವೈಶಿಷ್ಟ್ಯ  ಸಹ ಒಳಗೊಂಡಿದೆ. ಇದರಲ್ಲಿರುವ ಸೆನ್ಸರ್‌ಗಳು ನಿರಂತರವಾಗಿ ದೇಹದ ಭಂಗಿಯನ್ನು ಪರಿಶೀಲಿಸುತ್ತವೆ. (ಬೆನ್ನುಮೂಳೆಗೆ ಸಂಬಂಧಿಸಿದಂತೆ ತಲೆಯ ಸ್ಥಾನ). ಒಬ್ಬ ವ್ಯಕ್ತಿಯು ತನ್ನ ತಲೆ ನೇತಾಡುವ ಅವಧಿಯನ್ನು ಸಹ ಇದು ಟ್ರ್ಯಾಕ್ ಮಾಡುವ ಗ್ಲಾಸ್, ಬೆನ್ನುಮೂಳೆಯ ಆರೋಗ್ಯದ ಅಪಾಯಗಳಿದ್ದರೆ ಮುಂಯೇ ಎಚ್ಚರಿಕೆಯನ್ನು ನೀಡುತ್ತವೆ. ಇಲ್ಲಿದೆ ಸ್ಮಾರ್ಟ್ ಗ್ಲಾಸ್‌ನ ಕಂಪ್ಲೀಟ್‌ ಡಿಟೇಲ್ಸ್!

Latest Videos
Follow Us:
Download App:
  • android
  • ios