Asianet Suvarna News Asianet Suvarna News

Boult ProBass ZCharge: 40 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ನೆಕ್‌ಬ್ಯಾಂಡ್ ಇಯರ್‌ಫೋನ್‌ ಬಿಡುಗಡೆ!

Boult Audio, ProBass ZCharge ಇನ್-ಇಯರ್ ಇಯರ್‌ಫೋನ್‌ಗಳು ಕಪ್ಪು, ಕೆಂಪು ಮತ್ತು ನೀಲಿ ಸೇರಿದಂತೆ ಮೂರು ಬಣ್ಣಗಳಲ್ಲಿ ಲಭ್ಯವಿವೆ.

Boult ProBass ZCharge Wireless Neckband Earphones 40 Hour Battery Life Launched in India mnj
Author
Bengaluru, First Published Jan 3, 2022, 7:34 PM IST

Tech Desk: ಬೌಲ್ಟ್ ಆಡಿಯೊ (Boult Audio) ಸೋಮವಾರ ತನ್ನ ಹೊಸ ಇನ್-ಇಯರ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ProBass ZCharge ಅನ್ನು ವೇಗವಾದ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಹೆಚ್ಚುವರಿ ಬಾಸ್ ಸಿಗ್ನೇಚರ್ ಸೌಂಡ್ ಮತ್ತು ನಾಯ್ಸ್‌ ಕ್ಯಾನ್ಸಲೇಷನ್ ಸೇರಿದಂತೆ 40 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ  ಬಿಡುಗಡೆ ಮಾಡಲಾಗಿದೆ. ಹೊಸ AirBass ProBass ZCharge ಅಮೆಜಾನ್‌ನಲ್ಲಿ (Amazon) ರೂ 1,299 ಕ್ಕೆ ಲಭ್ಯವಿರುತ್ತದೆ. Boult Audio ProBass ZCharge ಇನ್-ಇಯರ್‌ಗಳು ಆಕ್ಟಿವ್ ಜೀವನಶೈಲಿಯನ್ನು ಹೊಂದಿರುವ ಜನರಿಗಾಗಿ ಮಾಡಿದ ಒಂದು ಜೋಡಿ ಇಯರ್‌ಫೋನ್‌ಗಳಾಗಿವೆ ಎಂದು ಕಂಪನಿಯು ಹೇಳಿದೆ.‌

ಹೊಸ Boult ProBass ZCharge ಇಯರ್‌ಫೋನ್‌ಗಳು USB ಟೈಪ್-C ಮೂಲಕ ಚಾರ್ಜ್ ಮಾಡುವುದನ್ನು ಬೆಂಬಲಿಸುತ್ತದೆ ಮತ್ತು 10 ನಿಮಿಷಗಳ ಚಾರ್ಜ್‌ನ ನಂತರ 15 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಕಂಪನಿಯ ಪ್ರಕಾರ, ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಎರಡನ್ನೂ ಬಳಸಲು ಬಳಕೆದಾರರು ಗೆಸ್ಚರ್‌ಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಭಾರತದಲ್ಲಿ Boult ProBass ZCharge ಬೆಲೆ, ಲಭ್ಯತೆ

ಕಂಪನಿಯ ಪ್ರಕಾರ ಭಾರತದಲ್ಲಿ Boult ProBass ZCharge  ₹1,299 ಬೆಲೆಗೆ ಸಿಗಲಿದೆ. ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳು ಅಮೆಜಾನ್ ಮೂಲಕ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ. Boult Audio, Boult ProBass ZCharge ವೈರ್‌ಲೆಸ್ ಇಯರ್‌ಫೋನ್‌ಗಳ ಮೇಲೆ ಒಂದು ವರ್ಷದ ವಾರಂಟಿ ನೀಡುತ್ತದೆ.

Boult ProBass ZCharge specifications

ಕಂಪನಿಯ ಪ್ರಕಾರ, ಹೊಸ Boult ProBass ZCharge ವೈರ್‌ಲೆಸ್ ಇಯರ್‌ಫೋನ್‌ಗಳು 14.2mm ಡ್ರೈವರ್‌ಗಳೊಂದಿಗೆ ಸಜ್ಜುಗೊಂಡಿವೆ ಮತ್ತು ಕಂಪನಿಯ ಸ್ಟ್ಯಾಂಡರ್ಡ್ ಆಡಿಯೋ ಜತೆಗೆ ಹೆಚ್ಚುವರಿ ಬಾಸ್ ಅನ್ನು ನೀಡುವ 'ಏರೋಸ್ಪೇಸ್-ಗ್ರೇಡ್'  ಮೈಕ್ರೋ-ವೂಫರ್‌ಗಳನ್ನು (micro-woofers) ಹೊಂದಿದೆ. ಇಯರ್‌ಫೋನ್‌ಗಳು ಇತ್ತೀಚಿನ ಬ್ಲೂಟೂತ್ v5.2 ಕನೆಕ್ಟಿವಿಟಿಯನ್ನು ಬೆಂಬಲಿಸುತ್ತವೆ ಮತ್ತು ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ ಇಯರ್‌ಫೋನ್‌ಅನ್ನು  IPX5 ಅನ್ನು ರೇಟ್ ಮಾಡಲಾಗಿದೆ. ಹಾಗಾಗಿ ಈ  ಇಯರ್‌ಫೋನ್‌ಗನ್ನು  ವ್ಯಾಯಾಮದ ಸಮಯದಲ್ಲಿ ಕೂಡ ಬಳಸಬಹುದು.

ಇದನ್ನೂ ಓದಿ: Whatsapp Accounts Ban ಒಂದೇ ತಿಂಗಳಲ್ಲಿ 17.5 ಲಕ್ಷ ವಾಟ್ಸಾಪ್ ಖಾತೆ ನಿಷೇಧ!

Boult ProBass ZCharge 40-ಗಂಟೆಗಳ ಬ್ಯಾಟರಿ ಬ್ಯಾಕ್‌ಲೈಫ್ ನೀಡುತ್ತದೆ ಮತ್ತು 10 ನಿಮಿಷಗಳ ಕಾಲ ಇಯರ್‌ಫೋನ್‌ಗಳನ್ನು ಚಾರ್ಜ್ ಮಾಡಿದಾಗ 15 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಬೌಲ್ಟ್ ತಿಳಿಸಿದೆ. ಹೊಸ Boult ProBass ZCharge ಯುಎಸ್‌ಬಿ ಟೈಪ್-ಸಿ ಮೂಲಕ ಚಾರ್ಜ್ ಮಾಡುವುದನ್ನು ಬೆಂಬಲಿಸುತ್ತದೆ. ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳು ಸಂಗೀತ ಟ್ರ್ಯಾಕ್‌ಗಳನ್ನು ಬದಲಾಯಿಸಲು, ದಿಕ್ಕುಗಳನ್ನು ಪರಿಶೀಲಿಸಲು (directions) ಮತ್ತು ಕರೆಗಳನ್ನು ಮಾಡಲು ಗೂಗಲ್ ಅಸಿಸ್ಟೆಂಟ್ (Google Assistant) ಮತ್ತು ಸಿರಿ ವಾಯ್ಸ್‌ (Siri Voice) ಕಮಾಂಡ್ಸ್‌ಗಳಿಗೆ ಟಚ್ ಗೆಸ್ಚರ್‌ಗಳನ್ನು ಸಹ ಬೆಂಬಲಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: BlackBerry OS ಯುಗಾಂತ್ಯ: ಜನವರಿ 4 ರಿಂದ ಕ್ಲಾಸಿಕ್‌ ಫೋನ್‌ ಕಾರ್ಯನಿರ್ವಹಿಸೋದು ಡೌಟು!

Follow Us:
Download App:
  • android
  • ios