ಸ್ಮಾರ್ಟ್ಫೋನ್, ಐಫೋನ್ ಅಂತ ಅದ್ರಲ್ಲಿ ಬ್ಯೂಸಿ ಇದ್ದ ಜನರು ಮತ್ತೆ ಬದಲಾಗ್ತಿದ್ದಾರೆ. ಹಳೆ ವಸ್ತುಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಅದ್ರಲ್ಲಿ ಐಪಾಡ್ ಕೂಡ ಸೇರಿದೆ. Gen Zಗಳು ಯಾಕೆ ಐಪಾಡ್ ಗೆ ಆಕರ್ಷಿತರಾಗ್ತಿದ್ದಾರೆ ಗೊತ್ತಾ?
2022 ರಲ್ಲಿ ಆಪಲ್ ಐಪಾಡ್ ಸ್ಥಗಿತಗೊಳಿಸಿದೆ. ಆದ್ರೆ Gen Zಗಳಿಗೆ ಐಪಾಡ್ ಮೇಲಿನ ಮೋಹ ಹೆಚ್ಚಾಗ್ತಿದೆ. ಐಪಾಡ್ ನಲ್ಲಿ ಮ್ಯೂಜಿಕ್ ಕೇಳುವ ಹವ್ಯಾಸ ಅವರಲ್ಲಿ ಹೆಚ್ಚಾಗಿದೆ. ಸಾಮಾನ್ಯವಾಗಿ ಸ್ಮಾರ್ಟ್ಫೋನ್, ಐಫೋನ್ ನಲ್ಲಿ ಜನ ಮ್ಯೂಜಿಕ್ ಕೇಳ್ತಿದ್ರೆ Gen Z ಗಳು ಮಾತ್ರ ಹಳೆ ಕ್ಲಾಸಿಕ್ ವಿಧಾನ ಫಾಲೋ ಮಾಡ್ತಿದ್ದಾರೆ.
ಐಪಾಡ್ ಎಂದರೇನು?
ಆಪಲ್ ಸಂಗೀತ ಕೇಳಲು ಐಪಾಡ್ ಬಿಡುಗಡೆ ಮಾಡಿತ್ತು. ಹಾಡುಗಳನ್ನು ಅದರಲ್ಲಿ ಸ್ಟೋರ್ ಮಾಡಲಾಗುತ್ತೆ. ನಂತ್ರ ನೀವು ಅದನ್ನು ಎಲ್ಲಿ ಬೇಕಾದರೂ ಕೇಳಬಹುದು. ಇದನ್ನು ಆನ್ ಮಾಡೋಕೆ ನಿಮಗೆ ಇಂಟರ್ನೆಟ್ ಅಥವಾ ಸಿಮ್ ಕಾರ್ಡ್ ಅಗತ್ಯವಿಲ್ಲ. ಆದಾಗ್ಯೂ, ಸ್ಮಾರ್ಟ್ಫೋನ್ಗಳಲ್ಲಿ ಮ್ಯೂಜಿಕ್ ಅಪ್ಲಿಕೇಶನ್ ಬರ್ತಿದ್ದಂತೆ ಐಪಾಡ್ ಬಳಕೆ ಕಡಿಮೆ ಆಯ್ತು. ಜನರು ಐಪಾಡ್ ಬದಲು ಸ್ಮಾರ್ಟ್ಫೋನ್ ಗೆ ಶಿಫ್ಟ್ ಆದ್ರು. ಇದ್ರಿಂದ ಕಂಪನಿ ಐಪಾಡ್ ತಯಾರಿಕೆ ಬಂದ್ ಮಾಡಿದೆ.
Gen Zಗಳಿಗೆ ಐಪಾಡ್ ಏಕೆ ಇಷ್ಟ?
ಇತ್ತೀಚಿನ ದಿನಗಳಲ್ಲಿ, Gen Z ಡಿಜಿಟಲ್ ಸಾಧನಗಳಿಂದ ದೂರವಿರಲು ಪ್ರಯತ್ನಿಸುತ್ತಿದೆ. ಅವರು ತಮ್ಮ ಮನಸ್ಸಿನ ಮೇಲೆ ಡಿಜಿಟಲ್ ದುನಿಯಾದಿಂದ ಆಗ್ತಿರುವ ಪರಿಣಾಮ ಕಡಿಮೆ ಮಾಡಲು, ಒತ್ತಡದಿಂದ ದೂರ ಇರಲು ಪ್ರಯತ್ನಿಸ್ತಿದ್ದಾರೆ. ಸ್ವಲ್ಪ ಸಮಯದವರೆಗೆ ಸ್ಮಾರ್ಟ್ಫೋನ್ಗಳು ಮತ್ತು ಕಂಪ್ಯೂಟರ್ಗಳಿಂದ ದೂರವಿರಲು ಇಷ್ಟಪಡ್ತಿದ್ದಾರೆ. ಈ ಟೈಮ್ ನಲ್ಲಿ ಮ್ಯೂಜಿಕ್ ಕೇಳಲು ಅವರು ಐಪಾಡ್ ಬಳಸ್ತಿದ್ದಾರೆ.
ಅಲ್ಗಾರಿದಮ್ಗಳಿಂದ ದೂರ
ಸಂಗೀತ ಅಪ್ಲಿಕೇಶನ್ಗಳು ನಿಮ್ಮ ನೆಚ್ಚಿನ ಹಾಡುಗಳನ್ನು ಮತ್ತೆ ಮತ್ತೆ ಪ್ಲೇ ಮಾಡುವ ಅಲ್ಗಾರಿದಮ್ಗಳನ್ನು ಹೊಂದಿವೆ. ಇದು ಸ್ವಲ್ಪ ಸಮಯದ ನಂತರ ನೀರಸವಾಗಬಹುದು. ಇದಕ್ಕಾಗಿಯೇ ಅನೇಕ Gen Z ಬಳಕೆದಾರರು ಮತ್ತೆ ಐಪಾಡ್ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಐಪಾಡ್ಗಳು ಹಾಡುಗಳೊಂದಿಗೆ ಮೊದಲೇ ಸಂಗ್ರಹಿಸಲ್ಪಟ್ಟಿರುತ್ತವೆ ಮತ್ತು ಯಾವುದೇ ಅಲ್ಗಾರಿದಮ್ಗಳನ್ನು ಹೊಂದಿರುವುದಿಲ್ಲ. ಇದರರ್ಥ ಕೇಳುಗರು ತಾವು ಕೇಳುವದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಇದು ಸಂಗೀತ ಕೇಳುವ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.
ಸ್ಕೂಲ್ ನಲ್ಲೂ ಬಳಕೆ
ಹೆಚ್ಚಿನ ಶಾಲೆಗಳು ಸ್ಮಾರ್ಟ್ಫೋನ್ಗಳನ್ನು ನಿಷೇಧಿಸುತ್ತವೆ. ಆದರೆ ಐಪಾಡ್ಗಳಿಗೆ ಇಂಟರ್ನೆಟ್ ಪ್ರವೇಶವಿಲ್ಲ. ಈ ಕಾರಣಕ್ಕಾಗಿ, ಅವುಗಳನ್ನು ಅನೇಕ ಶಾಲೆಗಳಲ್ಲಿ ಮ್ಯೂಜಿಕ್ ಕೇಳಲು ಬಳಸಲಾಗುತ್ತದೆ. ಅನೇಕ Gen Z ಮಕ್ಕಳು ಶಾಲೆಗೆ ಐಪಾಡ್ ತೆಗೆದುಕೊಂಡು ಹೋಗ್ತಿದ್ದಾರೆ.
ರೀಸೇಲ್ ಗೆ ಡಿಮ್ಯಾಂಡ್
Gen Z ನಲ್ಲಿ ಐಪಾಡ್ಗಳ ಜನಪ್ರಿಯತೆ ಹೆಚ್ಚಾದಂತೆ, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅದರ ಮೌಲ್ಯವೂ ಹೆಚ್ಚುತ್ತಿದೆ. ಈಗ, ಬಳಸಿದ ಐಪಾಡ್ಗಳು ಅನೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಮೊದಲಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.


