ಸೌದಿ ಅರೇಬಿಯಾದ ಕಿಂಗ್ ಫಹದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ 76ನೇ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಟ್ರೋಫಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದ್ದ ಸರ್ವಿಸಸ್ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸಿದೆ. 

ರಿಯಾದ್‌ (ಮಾ.2): ಪ್ರತಿಷ್ಠಿತ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಐದು ದಶಕಗಳ ಬಳಿಕ ಫೈನಲ್‌ ಸಾಧನೆ ಮಾಡಿದೆ. ಬುಧವಾರ ಸೌದಿ ಅರೇಬಿಯಾದ ಕಿಂಗ್‌ ಫಹಾದ್‌ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ 3-1 ಗೋಲುಗಳಿಂದ ಟ್ರೋಫಿಯ ಫೇವರಿಟ್‌ ಆಗಿದ್ದ ಸರ್ವೀಸಸ್‌ ತಂಡವನ್ನು ಮಣಿಸುವ ಮೂಲಕ 47 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಫೈನಲ್‌ ಹಂತಕ್ಕೆ ಲಗ್ಗೆ ಇಟ್ಟಿದೆ. 2018-19ರಲ್ಲಿ ಕೊನೆಯ ಬಾರಿಗೆ ಸಂತೋಷ್‌ ಟ್ರೋಫಿ ಗೆದ್ದಿದ್ದ ಸರ್ವೀಸಸ್‌ ತಂಡ, 2010ರ ಬಳಿಕ ನಾಲ್ಕು ಬಾರಿ ಸಂತೋಷ್‌ ಟ್ರೋಫಿ ಚಾಂಪಿಯನ್‌ ಆಗಿದೆ. ಆದ್ದರಿಂದ ಸೆಮಿಫೈನಲ್‌ನಲ್ಲಿ ಸರ್ವೀಸಸ್‌ ತಂಡವೇ ಫೇವರಿಟ್‌ ಕೂಡ ಆಗಿತ್ತು. ಇನ್ನೊಂದೆಡೆ ಕರ್ನಾಟಕ ತಂಡ ಇತ್ತೀಚಿನ ನಾಲ್ಕು ಯತ್ನಗಳಲ್ಲಿಯೂ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ ಹಂತದಲ್ಲಿಯೇ ಸೋಲು ಕಂಡಿತ್ತು. 1968-69 ರಲ್ಲಿ ಮೈಸೂರು ರಾಜ್ಯವಾಗಿ ಕೊನೆಯ ಬಾರಿಗೆ ಸಂತೋಷ್‌ ಟ್ರೋಫಿ ಗೆದ್ದ ದಕ್ಷಿಣ ಭಾರತದ ತಂಡ, ಆರಂಭದಲ್ಲಿ ಗೋಲಿನ ಹಿನ್ನಡೆ ಕಂಡರೂ, ದೊಡ್ಡ ಮಟ್ಟದ ಹೋರಾಟ ನೀಡುವ ಮೂಲಕ ಗೆಲುವು ಕಂಡಿತು.

0-1 ರಿಂದ ಹಿನ್ನಡೆಯಲ್ಲಿದ್ದ ಕರ್ನಾಟಕ ಬಳಿಕ ಮೂರು ಗೋಲುಗಳನ್ನು ಬಾರಿಸುವ ಮೂಲಕ ಸರ್ವೀಸಸ್‌ ವಿರುದ್ಧ ಸ್ಮರಣೀಯ ಗೆಲುವು ಕಂಡಿತು. ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಇದೇ ಮೊದಲ ಬಾರಿಗೆ ಫೈನಲ್‌ಗೇರಿರುವ ಮೇಘಾಲಯ ತಂಡವನ್ನು ಪ್ರಶಸ್ತಿಗಾಗಿ ಎದುರಿಸಲಿದೆ.

40ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಮುನ್ನಡೆ ಕಂಡಿದ್ದ ಸರ್ವೀಸಸ್‌ ತಂಡ, ಆದರೆ, ಮೊದಲ ಅವಧಿಯ ಆಟ ಮುಕ್ತಾಯಗೊಳ್ಳಲು ಕೇವಲ ನಾಲ್ಕು ನಿಮಿಷಗಳಿರುವಾಗ ಎರಡು ಗೋಲು ಬಾರಿಸಿ ತಿರುಗೇಟು ನೀಡಿದ ಕರ್ನಾಟಕ 2-1 ಮುನ್ನಡೆ ಕಂಡುಕೊಂಡಿತು. 2ನೇ ಅವಧಿಯ ಆಟದಲ್ಲಿ ಸರ್ವೀಸಸ್‌ ತಂಡ ಲಯ ಕಳೆದುಕೊಂಡರೆ, ಕರ್ನಾಟಕ ಇದರ ಲಾಭ ಪಡೆದುಕೊಂಡು ಪಂದ್ಯದ ಕೊನೇ ಹಂತದಲ್ಲಿ ಇನ್ನೊಂದು ಗೋಲು ಬಾರಿಸಿತು. ಅದರೊಂದಿಗೆ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಗಿ ಫೈನಲ್‌ ಪಂದ್‌ಯದಲ್ಲಿ ಆಡಲಿದೆ

ಸರ್ವಿಸಸ್ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಮೇಲುಗೈ ಸಾಧಿಸಿತು. ಏಕೆಂದರೆ, ಆಟಗಾರರ ಉತ್ತಮ ಫಿಟ್‌ನೆಸ್‌ ಹಾಗೂ ಆಟಗಾರರ ನಡುವಿನ ಸಮನ್ವಯ ತಂಡಕ್ಕೆ ಹಲವು ಅವಕಾಶಗಳನ್ನು ಗಳಿಸಿಕೊಟ್ಟಿತು. ಆದರೆ, ಕರ್ನಾಟಕದ ರಕ್ಷಣಾ ವಿಭಾಗ ಶ್ರೇಷ್ಠ ನಿರ್ವಹಣೆ ನೀಡುವ ಮೂಲಕ ಸರ್ವೀಸಸ್‌ನ ಹೋರಾಟವನ್ನು ತಡೆದಿದ್ದರು. ಆದರೆ, ಬಿಖೇಶ್‌ ಥಾಫಾ ಗೋಲು ಬಾರಿಸುವ ಮೂಲಕ ಮುನ್ನಡೆ ನೀಡಿದರು. ಕಾರ್ನರ್‌ ಕಿಕ್‌ನಿಂದ ಬಂದ ಚೆಂಡನ್ನು ಉತ್ತಮವಾಗಿ ಪಡೆದುಕೊಂಡ ಥಾಪಾ 40ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ್ದರು.

ಸಂತೋಷ್‌ ಟ್ರೋಫಿ: ಇಂದು ಕರ್ನಾ​ಟಕ-ಸರ್ವಿ​ಸ​ಸ್‌ ಸೆಮೀ​ಸ್‌ ಫೈಟ್

ಇದಕ್ಕೆ ಕರ್ನಾಟಕ ಭರ್ಜರಿಯಾಗಿ ತಿರುಗೇಟು ನೀಡಿತು. 42ನೇ ಇಮಿಷದಲ್ಲಿ ರಾಬಿನ್‌ ಯಾದವ್‌ ಆಕಷರ್ಕ ಫ್ರೀ ಕಿಕ್‌ ಮೂಲಕ ಗೋಲು ಬಾರಿಸಿದರೆ, ಪಂದ್ಯದ ಮೊದಲ ಅವಧಿಯ ಇಂಜುರಿ ಟೈಮ್‌ ಅವಧಿಯಲ್ಲಿ ಪಿ ಅಂಕಿತ್‌ ಆಕರ್ಷಕ ಗೋಲನ್ನು ಬಾರಿಸಿ ತಂಡ್ಕೆ 2-1 ಮುನ್ನಡೆ ನೀಡಿತ್ತು. 2ನೇ ಅವಧಿಯ ಆಟದಲ್ಲಿ ಬದಲಿ ಆಟಗಾರ ಸುನೀಲ್‌ ಕುಮಾರ್‌ ಗೋಲು ಬಾರಿಸುವುದರೊಂದಿಗೆ ತಂಡದ ಗೆಲುವು ಖಚಿತವಾಯಿತು. 

Santosh Trophy: ಕರ್ನಾಟಕ ಫುಟ್ಬಾಲ್ ತಂಡ ಸೆಮಿಫೈನಲ್‌ಗೆ ಲಗ್ಗೆ

ಶನಿವಾರ ಫೈನಲ್‌: ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಮೇಘಾಲಯದ ಸವಾಲನ್ನು ಎದುರಿಸಲಿದೆ. ಮೇಘಾಲಯ ಸೆಮಿಫೈನಲ್‌ನಲ್ಲಿ ಪಂಜಾಬ್‌ ತಂಡವನ್ನು ಸೋಲಿಸಿತು. ಫೈನಲ್‌ ಪಂದ್ಯ ರಾತ್ರಿ 9 ಗಂಟೆಗೆ ಆರಂಭವಾಗಲಿದ್ದು, ರಿಯಾದ್‌ನ ಕಿಂಗ್‌ ಫಹಾದ್‌ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.