Asianet Suvarna News Asianet Suvarna News

ಸಂತೋಷ್‌ ಟ್ರೋಫಿ: ಇಂದು ಕರ್ನಾ​ಟಕ-ಸರ್ವಿ​ಸ​ಸ್‌ ಸೆಮೀ​ಸ್‌ ಫೈಟ್

ಸಂತೋಷ್‌ ಟ್ರೋಫಿ ಸೆಮೀಸ್‌ನಲ್ಲಿಂದು ಕರ್ನಾಟಕಕ್ಕೆ ಸರ್ವಿಸಸ್ ಎದುರಾಳಿ
ಮೊದಲ ಬಾರಿಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸೆಮೀಸ್ ಕದನ
ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 04ರಂದು ನಡೆಯಲಿದೆ

Santosh Trophy Karnataka take on Services at Riyadh kvn
Author
First Published Mar 1, 2023, 9:00 AM IST

ರಿಯಾ​ದ್‌(ಮಾ.01): ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ನಾಕೌಟ್‌ ಹಣಾ​ಹ​ಣಿಗೆ ಸೌದಿ ಅರೇ​ಬಿ​ಯಾದ ರಿಯಾ​ದ್‌​ ಕಿಂಗ್‌ ಫಹದ್‌ ಕ್ರೀಡಾಂಗ​ಣ ವೇದಿಕೆ ಸಜ್ಜು​ಗೊಂಡಿದ್ದು, ಬುಧ​ವಾರ ಸೆಮಿ​ಫೈ​ನಲ್‌ ಕರ್ನಾ​ಟಕ ತಂಡ ಸರ್ವಿ​ಸಸ್‌ ವಿರುದ್ಧ ಸೆಣ​ಸಾ​ಡ​ಲಿದೆ. ಮತ್ತೊಂದು ಸೆಮೀ​ಸ್‌​ನಲ್ಲಿ ಪಂಜಾಬ್‌ ಹಾಗೂ ಮೇಘಾ​ಲಯ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿವೆ. ಇದೇ ಮೊದಲ ಬಾರಿ ಟೂರ್ನಿಯ ಪಂದ್ಯ​ಗ​ಳಿಗೆ ವಿದೇಶಿ ಕ್ರೀಡಾಂಗಣ ಅತಿಥ್ಯ ವಹಿ​ಸಲಿದೆ.

ಟೂರ್ನಿಯ ಅಂತಿಮ ಸುತ್ತಿ​ನಲ್ಲಿ ‘ಎ’ ಗುಂಪಿ​ನ​ಲ್ಲಿದ್ದ ಕರ್ನಾಟಕ ಆಡಿದ 5 ಪಂದ್ಯ​ಗ​ಳಲ್ಲಿ 2 ಗೆಲುವು, 3 ಡ್ರಾದೊಂದಿಗೆ 9 ಅಂಕ ಪಡೆ​ದಿತ್ತು. ಅತ್ತ ಸರ್ವಿ​ಸಸ್‌ 5 ಪಂದ್ಯ​ಗ​ಳಲ್ಲಿ 4 ಗೆಲುವು, 1 ಡ್ರಾದೊಂದಿಗೆ 13 ಅಂಕ ಸಂಪಾ​ದಿ​ಸಿತ್ತು. ಟೂರ್ನಿಯ ಫೈನಲ್‌ ಪಂದ್ಯ ಮಾ.4ರಂದು ನಡೆ​ಯ​ಲಿ​ದೆ.

ಪಂದ್ಯ: ರಾತ್ರಿ 9ಕ್ಕೆ

ರಾಷ್ಟ್ರೀಯ ಬ್ಯಾಡ್ಮಿಂಟ​ನ್‌: ರಾಜ್ಯದ ಮಿಥು​ನ್‌ಗೆ ಪ್ರಶ​ಸ್ತಿ

ಪುಣೆ: 84ನೇ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಕರ್ನಾ​ಟ​ಕದ ಮಿಥುನ್‌ ಮಂಜು​ನಾಥ್‌ ಪುರು​ಷರ ಸಿಂಗ​ಲ್ಸ್‌​ನಲ್ಲಿ ಚಾಂಪಿ​ಯನ್‌ ಆಗಿ​ದ್ದಾರೆ. ಟೂರ್ನಿ​ಯಲ್ಲಿ ರೈಲ್ವೇಸ್‌ ತಂಡ​ವ​ನ್ನು ಪ್ರತಿ​ನಿ​ಧಿ​ಸಿ​ದ ಮಿಥುನ್‌ ಫೈನ​ಲ್‌​ನಲ್ಲಿ ಪ್ರಿಯಾನ್ಶು ರಾಜಾ​ವ​ತ್‌​ರನ್ನು ಸೋಲಿ​ಸಿ​ದರು. ಇನ್ನು ಮಹಿಳಾ ಸಿಂಗ​ಲ್ಸ್‌​ನಲ್ಲಿ ಅನು​ಪಮಾ ಉಪಾ​ಧ್ಯಾಯ, ಆಕರ್ಷಿ ಕಶ್ಯ​ಪ್‌​ರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಮಹಿಳಾ ಡಬ​ಲ್ಸ್‌​ನಲ್ಲಿ ಗಾಯ​ತ್ರಿ-ತ್ರೀಸಾ ಜಾಲಿ, ಮಿಶ್ರ ಡಬ​ಲ್ಸ್‌​ನಲ್ಲಿ ಹೇಮ​ನಾ​ಗೇಂದ್ರ ಬಾಬು-ಕನಿಕಾ ಕನ್ವಾಲ್‌, ಪುರು​ಷರ ಡಬ​ಲ್ಸ್‌​ನಲ್ಲಿ ಕುಶಾಲ್‌ ರಾಜ್‌-ಪ್ರಕಾಶ್‌ ರಾಜ್‌ ಚಾಂಪಿ​ಯನ್‌ ಎನಿ​ಸಿ​ಕೊಂಡ​ರು.

ಮೇ 21ಕ್ಕೆ ಬೆಂಗ್ಳೂರು 10ಕೆ ಮ್ಯಾರ​ಥಾ​ನ್‌

ಬೆಂಗ​ಳೂ​ರು: 15ನೇ ಆವೃ​ತ್ತಿಯ ಪ್ರತಿ​ಷ್ಠಿತ ಬೆಂಗ​ಳೂರು 10ಕೆ ಮ್ಯಾರ​ಥಾನ್‌ ಮೇ 21ರಂದು ನಡೆ​ಯ​ಲಿದೆ ಎಂದು ಆಯೋ​ಜ​ಕರು ಘೋಷಿ​ಸಿ​ದ್ದಾರೆ. ನಗರದ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ಆರಂಭ​ಗೊ​ಳ್ಳಲಿ​ರುವ ಮ್ಯಾರ​ಥಾ​ನ್‌​ನಲ್ಲಿ ದೇಶ ಹಾಗೂ ವಿದೇ​ಶದ ಹಲವು ಎಲೈಟ್‌ ಅಥ್ಲೀ​ಟ್‌​ಗಳು ಸೇರಿ ಸಾವಿ​ರಾರು ಮಂದಿ ಪಾಲ್ಗೊ​ಳ್ಳ​ಲಿ​ದ್ದಾರೆ. ಓಟದ ಸ್ಪರ್ಧೆ​ಯಲ್ಲಿ ಪಾಲ್ಗೊ​ಳ್ಳಲು ಮಾ.1ರಿಂದ ನೋಂದಣಿ ಆರಂಭ​ಗೊಂಡಿದ್ದು, ಏ.28ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದೆ ಎಂದು ಆಯೋ​ಜ​ಕರು ತಿಳಿ​ಸಿ​ದ್ದಾ​ರೆ.

IPL 2023 ಟೂರ್ನಿ ಆರಂಭಕ್ಕೂ ಮುನ್ನ ಮುಂಬೈಗೆ ಶಾಕ್, ಜಸ್ಪ್ರೀತ್ ಬುಮ್ರಾ ಔಟ್!

ವಿಚಾ​ರ​ಣೆಗೆ ಹಾಜ​ರಾ​ದ ಬ್ರಿಜ್‌​ಭೂ​ಷಣ್‌ ಸಿಂಗ್‌

ನವ​ದೆ​ಹ​ಲಿ: ಕುಸ್ತಿ​ಪ​ಟು​ಗ​ಳಿಂದ ಲೈಂಗಿಕ ದೌರ್ಜನ್ಯ ಸೇರಿ​ದಂತೆ ಕೆಲ ಗಂಭೀರ ಆರೋ​ಪ​ಗ​ಳನ್ನು ಹೊತ್ತು​ಕೊಂಡಿ​ರುವ ಭಾರ​ತೀಯ ಕುಸ್ತಿ ಫೆಡ​ರೇ​ಶನ್‌ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಮಂಗ​ಳ​ವಾರ ತನಿ​ಖಾ ಸಮಿತಿ ಮುಂದೆ ಹಾಜ​ರಾಗಿ, ತಮ್ಮ ಮೇಲಿನ ಎಲ್ಲಾ ಆರೋ​ಪ​ಗ​ಳನ್ನು ನಿರಾ​ಕ​ರಿ​ಸಿ​ದರು. ಸುಮಾರು 20ರಷ್ಟುಕಾರ‍್ಯ​ಕ​ರ್ತರ ಜೊತೆ ಆಗ​ಮಿ​ಸಿದ ಅವ​ರನ್ನು, ಸಮಿ​ತಿಯು 3 ಗಂಟೆ​ಗಳ ಕಾಲ ವಿಚಾ​ರಣೆ ನಡೆ​ಸಿತು.

ಅತಿ ಹೆಚ್ಚು ವಾರ ನಂ.1 ಸ್ಥಾನ: ಜೋಕೋ ದಾಖ​ಲೆ

ಲಂಡ​ನ್‌: 22 ಗ್ರ್ಯಾನ್‌ಸ್ಲಾಂ ಪ್ರಶ​ಸ್ತಿ​ಗಳ ಒಡೆಯ, ಸರ್ಬಿ​ಯಾದ ನೋವಾಕ್‌ ಜೋಕೋ​ವಿಚ್‌ ಟೆನಿಸ್‌ ವಿಶ್ವ ರಾರ‍ಯಂಕಿಂಗ್‌ನಲ್ಲಿ ನಂ.1 ಆಟಗಾರನಾಗಿ 378ನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟಾರೆ ಪುರು​ಷ, ಮಹಿಳಾ ಟೆನಿ​ಸ್‌​ನಲ್ಲಿ ಅತಿಹೆಚ್ಚು ವಾರ ನಂ.1 ಸ್ಥಾನ ಪಡೆದ ಟೆನಿ​ಸಿಗ ಎಂಬ ದಾಖಲೆ ಬರೆ​ದಿ​ದ್ದಾ​ರೆ. 

2011ರ ಜುಲೈ​ನಲ್ಲಿ ಮೊದಲ ಬಾರಿ ಅಗ್ರ​ಸ್ಥಾ​ನ​ಕ್ಕೇ​ರಿದ್ದ ಜೋಕೋ ಸದ್ಯ 6,980 ರೇಟಿಂಗ್‌ ಅಂಕ​ಗಳನ್ನು ಪಡೆ​ದಿ​ದ್ದಾ​ರೆ. ಅವರು 22 ಗ್ರ್ಯಾನ್‌ಸ್ಲಾಂ ಪ್ರಶ​ಸ್ತಿ​ಗಳ ಒಡತಿ, ಜರ್ಮ​ನಿಯ ಸ್ಟೆಫಿ ಗ್ರಾಫ್‌(377 ವಾರ) ಅವರ ದಾಖಲೆ ಮುರಿ​ದಿ​ದ್ದಾರೆ. ಮಾರ್ಟಿನಾ ನವ್ರಾ​ಟಿ​ಲೋ​ವಾ​ 332, ಸೆರೆನಾ ವಿಲಿ​ಯ​ಮ್ಸ್‌ 319, ರೋಜರ್‌ ಫೆಡ​ರರ್‌ 310 ವಾರ​ಗಳ ಕಾಲ ರಾರ‍ಯಂಕಿಂಗ್‌​ ಪಟ್ಟಿಯಲ್ಲಿ ಅಗ್ರ​ಸ್ಥಾ​ನ​ದ​ಲ್ಲಿ​ದ್ದರು.

Follow Us:
Download App:
  • android
  • ios